Mysore

ವೃದ್ಧೆ ಜಯಮ್ಮಗೆ ಪಡಿತರ ಪಡೆಯಲು ಹೆಬ್ಬೆಟ್ಟು ವಿನಾಯಿತಿ ಕೊಡಿಸಿದ ದಸಂಸ… ನಿಂಗರಾಜ್ ಮಲ್ಲಾಡಿ ಹೇಳಿದ್ದೇನು?

ಮೈಸೂರು: ಮೈಸೂರಿನ ಏಕಲವ್ಯ ನಗರದ ವಾಸಿಯಾದ ವಯೋವೃದ್ಧೆ 80 ವರ್ಷ ವಯಸ್ಸಿನ ಜಯಮ್ಮಳಿಗೆ ದಸಂಸದ ವತಿಯಿಂದ ಬಿಪಿಎಲ್. ಕಾರ್ಡಿನ ಆಹಾರ ಪದಾರ್ಥ ಪಡೆಯಲು ಹೆಬ್ಬೆಟ್ಟು ವಿನಾಯಿತಿಯನ್ನು ಮೈಸೂರಿನ ಆಹಾರ ಮತ್ತು ನಾಗರೀಕ ಇಲಾಖೆಯ ಅಧಿಕಾರಿಗಳಿಂದ ಕೊಡಿಸುವಲ್ಲಿ ದಸಂಸ ಯಶಸ್ವಿಯಾಗಿದ್ದು, ಆ ಮೂಲಕ ಸಾಮಾಜಿಕ ಕಳಕಳಿಯನ್ನು ಮೆರೆದಿದೆ.

ಈ ವೇಳೆ ದಸಂಸದ ರಾಜ್ಯ ಸಂಘಟನಾ ಸಂಚಾಲಕರಾದ ನಿಂಗರಾಜ್ ಮಲ್ಲಾಡಿ ರವರು ಮಾತನಾಡಿ ಜಯಮ್ಮ ಏಕಲವ್ಯ ನಗರದಲ್ಲಿ ವಾಸವಿದ್ದು, ಒಕ್ಕಲಿಗ ಗೌಡ ಸಮುದಾಯಕ್ಕೆ ಸೇರಿದವರಾಗಿದ್ದು, ಇವರಿಗೆ 80 ವರ್ಷ ವಯಸ್ಸಾಗಿದ್ದು, ಇವರು ಬಿ.ಪಿ.ಎಲ್ ಕಾರ್ಡ್ ಹೊಂದಿದ್ದು, ವಯೋವೃದ್ಧರಾಗಿರುವುದರಿಂದ  ತಿರುಗಾಡಲು ಸಾಧ್ಯವಾಗದೆ ಆಹಾರ ಪದಾರ್ಥ ಪಡೆಯಲು ಹೆಬ್ಬೆಟ್ಟು ಕೊಟ್ಟರೂ ಹೆಬ್ಬೆಟ್ಟು ಮುದ್ರಿತವಾಗದೆ ಹಲವಾರು ತಿಂಗಳುಗಳಿಂದ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಪದಾರ್ಥಗಳನ್ನು ಪಡೆಯದೆ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಗಂಡ ನಿಂಗೇಗೌಡರು ಕೆಲವು ದಿನಗಳ ಹಿಂದೆ ಮರಣ ಹೊಂದಿದ್ದರು. ಗಂಡನ ಸಾವಿನಿಂದಲೂ ಬಳಲುತ್ತಿದ್ದ ಇವರು ಆಹಾರ ಪದಾರ್ಥಗಳು ಸಿಗದಿದ್ದ ಕಾರಣ ದಿನನಿತ್ಯದ ಆಹಾರಕ್ಕೂ ಪರಿತಪಿಸುತ್ತಿದ್ದರು.  ಜಯಮ್ಮರ ಈ ಸ್ಥಿತಿಯನ್ನು ಅಲ್ಲಿಯ ಸ್ಥಳೀಕರು ದಸಂಸ ದ ಗಮನಕ್ಕೆ ತಂದು ಇವರಿಗೆ ಸಹಾಯ ಮಾಡುವಂತೆ ತಿಳಿಸಿದ್ದರು. ದಸಂಸ ಮುಖಂಡರು ವೃದ್ಧೆ ಜಯಮ್ಮಳ ಮನೆಗೆ ಹೋಗಿ ಇವರ ಪರಿಸ್ಥಿತಿಯನ್ನು ತಿಳಿದುಕೊಂಡು ಕೂಡಲೇ ಮೈಸೂರಿನ ಆಹಾರ ಶಿರಸ್ತೆದಾರರಾದ ಮಹೇಶ್ ರವರಿಗೆ ಮತ್ತು ಆಹಾರ ನಿರೀಕ್ಷಕರಾದ ಕಿರಣ್ ಕುಮಾರ್ ರವರಿಗೆ ದಸಂಸ ವು ಮನವಿ ಸಲ್ಲಿಸಿ ವೃದ್ದೆ ಜಯಮ್ಮಳಿಗೆ ಆಹಾರ ಪದಾರ್ಥಗಳನ್ನು ಪಡೆಯಲು ಹೆಬ್ಬೆಟ್ಟು ವಿನಾಯಿತಿ ಕೊಡಿಸಿಕೊಡುವಂತೆ ಕೆಲವು ದಿನಗಳ ಹಿಂದೆ ಮನವಿ ಸಲ್ಲಿಸಲಾಗಿತ್ತು.

ಈ ಅಧಿಕಾರಿಗಳ ಶಿಫಾರಸ್ಸಿನಂತೆ ಮೈಸೂರಿನ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀ ಮಂಟೇಸ್ವಾಮಿ ರವರಿಂದ ಆದೇಶ ಮಾಡಿಸಿ ವೃದ್ಧೆ ಜಯಮ್ಮಳಿಗೆ ಆಹಾರ ಪದಾರ್ಥಗಳನ್ನು ಪಡೆಯಲು ಹೆಬ್ಬೆಟ್ಟಿನ ವಿನಾಯಿತಿ ಆದೇಶ ಪತ್ರವನ್ನು ಕೊಟ್ಟಿರುತ್ತಾರೆ. ಇದರಿಂದ ದಿನನಿತ್ಯದ ಆಹಾರಕ್ಕೂ ಪರದಾಡುತ್ತಿದ್ದ ವೃದ್ಧೆ ಜಯಮ್ಮಳಿಗೆ ಅನುಕೂಲವಾಗಿದೆ. ದಸಂಸದ ಮನವಿಯನ್ನು ಪರಿಗಣಿಸಿ ವೃದ್ಧೆ ಜಯಮ್ಮಳಿಗೆ ಹೆಬ್ಬೆಟ್ಟು ವಿನಾಯಿತಿ ನೀಡಿದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ದಸಂಸ ವು ಅಭಿನಂದಿಸುತ್ತದೆ ಎಂದರು.

ನಿಂಗರಾಜ್ ಮಲ್ಲಾಡಿ ರವರಿಂದ ತನ್ನ ಮನೆ ಬಾಗಿಲಿನಲ್ಲಿಯೇ ಹೆಬ್ಬೆಟ್ಟಿನ ವಿನಾಯಿತಿ ಆದೇಶ ಪತ್ರವನ್ನು ವೃದ್ಧೆ ಜಯಮ್ಮ ಪಡೆದುಕೊಂಡು ಮಾತನಾಡಿ ನಾನು ಹಲವು ತಿಂಗಳುಗಳಿಂದ ಹೆಬ್ಬೆಟ್ಟು ಬಾರದೆ ರೇಷನ್ ಪಡೆದುಕೊಳ್ಳದೆ ಊಟಕ್ಕೂ ತುಂಬಾ ತೊಂದರೆ ಪಡುತ್ತಿದ್ದೆ. ನನ್ನ ಸಂಕಷ್ಟವನ್ನು ಅರಿತ ನೀವು ಹೆಬ್ಬೆಟ್ಟು ಕೊಡದೆ ಆಹಾರ ಪಡಿತರ ಪಡೆಯಲು ಸಹಾಯ ಮಾಡಿರುತ್ತೀರಿ. ನಿಮಗೆ ಆ ಭಗವಂತ ಒಳ್ಳೇದು ಮಾಡ್ಲಪ್ಪಾ ಎಂದು ಮನದುಂಬಿ ಹಾರೈಸಿದರು.

admin
the authoradmin

Leave a Reply

Translate to any language you want