Mysore

ಪ್ರಭು ಲಿಂಗ ಲೀಲೆ ನಾಟಕದ ಕಲಾವಿದರನ್ನು ಅಭಿನಂದಿಸಿ ಆಶೀರ್ವದಿಸಿದ  ಸುತ್ತೂರು ಶ್ರೀಗಳು

ಮೈಸೂರು: ಮೈಸೂರಿನ ಶ್ರೀ ಶಿವರಾತ್ರಿ ರಾಜೇಂದ್ರ ಕಲಾ ಬಳಗ ವತಿಯಿಂದ ಪ್ರದರ್ಶನಗೊಂಡು ವ್ಯಾಪಕ ಜನ ಮನ್ನಣೆಗೆ ಪಾತ್ರವಾಗಿರುವ ಪ್ರಭು ಲಿಂಗ ಲೀಲೆ ನಾಟಕದ ಕಲಾವಿದರನ್ನು ಸುತ್ತೂರು ಮಠದ ಪರಮ ಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳವರು ಅಭಿನಂದಿಸಿ ಸ್ಮರಣ ಫಲಕ ನೀಡಿ ಆಶೀರ್ವದಿಸಿದರು

ಗುಂಡ್ಲುಪೇಟೆ ಪಟ್ಟಣದಲ್ಲಿ ಸಮಾಜ ಸೇವಕ ಮಲ್ಲುರವರು ರಾಜೇಂದ್ರ ಬಡಾವಣೆಯಲ್ಲಿ ನಿರ್ಮಿಸಿರುವ ಶ್ರೀ ಶಿವರಾತ್ರಿ ದೇಶಿಕೇಂದ್ರ ನಿಲಯದ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಹಾಲಹಳ್ಳಿಯಲ್ಲಿ  ಶ್ರೀ ಶಿವರಾತ್ರಿ ರಾಜೇಂದ್ರ ಕಲಾ ಬಳಗ ಮೈಸೂರು ವತಿಯಿಂದ ಪ್ರದರ್ಶನಗೊಂಡು ವ್ಯಾಪಕ ಜನ ಮನ್ನಣೆಗೆ ಪಾತ್ರವಾಗಿರುವ ಪ್ರಭುಲಿಂಗ ಲೀಲೆ ನಾಟಕದ ಕಲಾವಿದರು ಶ್ರೀಗಳಿಂದ ಪ್ರಶಂಸೆಗೊಳಗಾಗಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಕಲಾ ಬಳಗದ ಸಂಸ್ಥಾಪಕ ಅಧ್ಯಕ್ಷರಾದ  ಕಲ್ಮಳ್ಳಿ ನಟರಾಜು, ಬೆಳಚಲವಾಡಿ ಬಿ ಆರ್ ಶಿವಕುಮಾರ್, ಹಿರಿಯ ರಂಗ ಕಲಾವಿದ ಪಾರ್ವತಪ್ಪ ಮುಳ್ಳೂರು, ಕೊತ್ತಲವಾಡಿ ಸಿದ್ದರಾಮೇಶ್, ಬಾನಳ್ಳಿ ಸಂತೋಷ್, ಬಾಗಲಿ ಮಹೇಶ್, ಗೌಡಗೆರೆ ಮಹೇಶ್, ಸಮಾಜ ಸೇವಕ ಮಲ್ಲು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸುತ್ತೂರು ಶ್ರೀಗಳ ಭೇಟಿ ಮಾಡಿ ಆಶೀರ್ವಾದ ಪಡೆದ  ಬೆಳಚಲವಾಡಿ ಬಿ.ಆರ್.ಶಿವಕುಮಾರ್

admin
the authoradmin

Leave a Reply

Translate to any language you want