ಹೊಸೂರು (ಸಂಘಟನೆ ಮಂಜುನಾಥ್): ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ನ ಸಾಲಿಗ್ರಾಮ ತಾಲೂಕು ಚುಂಚನಕಟ್ಟೆ ವಲಯದ ಪ್ರಗತಿಬಂಧು ಸ್ವಸಹಾಯ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹೊಸೂರು ಗ್ರಾಮದಲ್ಲಿ ನಡೆದಿದ್ದು ಜಿಲ್ಲಾ ನಿರ್ದೇಶಕರಾದ ಮಮತ ರಾವ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದ ಅವರು ಕೆರೆಯ ಅಭಿವೃದ್ಧಿ ವಾತ್ಸಲ್ಯ ಕಾರ್ಯಕ್ರಮ ಸುಜ್ಞಾನ ನಿಧಿ ಮತ್ತು ಇತರೆ ಅನೇಕ ಕಾರ್ಯಕ್ರಮಗಳ ಬಗ್ಗೆ ಮತ್ತು ಒಕ್ಕೂಟದ ಜವಾಬ್ದಾರಿಗಳ ಬಗ್ಗೆ ಮತ್ತು ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಸದಸ್ಯರು ಜಾಲತಾಣಗಳ ಮಾಹಿತಿಗಳನ್ನು ಮತ್ತು ವದಂತಿಗಳನ್ನು ನಂಬಬಾರದು ಅದರಲ್ಲಿ ಬರುವ ಎಲ್ಲಾ ವಿಷಯಗಳು ನಿಜ ಎಂದು ತಿಳಿಯಬಾರದು, ಸಂಘದ ಸದಸ್ಯರಿಗೆ ನೀಡಿ ಸಂಘಗಳ ಗುಣಮಟ್ಟ ಕಾಯ್ದಿರಿಸಿಕೊಳ್ಳುವುದು ಮತ್ತು ವ್ಯವಹಾರಗಳನ್ನು ಪಾರದರ್ಶಕತೆಯಿಂದ ಮಾಡುವುದು ನಮ್ಮೆಲ್ಲರ ಹೊಣೆ ಎಂದು ಹೇಳಿದರು.

ಯೋಜನೆಯ ಧ್ಯೇಯಗೀತೆಯ ಸಾರಾಂಶವನ್ನು ಸದಸ್ಯರಿಗೆ ಮನಮುಟ್ಟುವಂತೆ ತಿಳಿಸಿದರು. ನಾಯಕತ್ವದ ಬಗ್ಗೆ ಅದರ ಗುಣಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳುವುದು ಬಹಳ ಅಗತ್ಯವಾಗಿದೆ ನಮ್ಮ ಅಭಿವೃದ್ಧಿಗೆ ಪಣತೊಟ್ಟಲ್ಲಿ ಯಶಸ್ಸು ಖಂಡಿತ ಎಂದು ಹೇಳುವ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಜನಜಾಗೃತಿ ವೇದಿಕೆ ಸದಸ್ಯರಾದ ಬಾಲ ಮನೋಹರ್ ಅವರು ಮಾಹಿತಿ ನೀಡಿ ಸಂಘದ ಎಲ್ಲ ಸದಸ್ಯರು ಪಾರದರ್ಶಕವಾಗಿ ವ್ಯವಹಾರ ಮತ್ತು ವಾರದ ಸಭೆಯನ್ನು ಮಾಡಿ ಸಭೆ ಮೂಲಕ ವ್ಯವಹಾರಗಳನ್ನು ಮಾಡಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಂಘದ ಎಲ್ಲರ ಜವಾಬ್ದಾರಿ ಮತ್ತು ಇತರ ನಿರ್ವಹಣೆಯನ್ನು ಒಕ್ಕೂಟದವರು ಮಾಡಿದಲ್ಲಿ ಒಳ್ಳೆಯ ಗುಣಮಟ್ಟ ಮತ್ತು ಸಂಘಗಳು ಬಲವರ್ಧನೆ ಆಗುತ್ತದೆ ಎಂದು ಸಲಹೆ ನೀಡಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಯೋಜನಾಧಿಕಾರಿಗಳಾದ ಉಮೇಶ್ ಪೂಜಾರಿ ಹಳಿಯೂರು ಗ್ರಾಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಹೆಚ್. ಆರ್ ಮಹೇಶ್, ನವ ಜೀವನ ಸಮಿತಿ ಸದಸ್ಯರಾದ ಎಸ್. ಜೆ ಮಹೇಶ್, ಜನಜಾಗೃತಿ ಸದಸ್ಯರಾದ ಬಾಲ ಮನೋಹರ್, ಶ್ರೀರಾಂಪುರ ಗ್ರಾಮದ ಮುಖಂಡರಾದ ಎಸ್ ಟಿ ಸದಾಶಿವ, ಒಕ್ಕೂಟದ ಅಧ್ಯಕ್ಷರಾದ ಉಮೇಶ್, ವಲಯ ಮೇಲ್ವಿಚಾರಕರದ ಅವಿನಾಶ್, ಕೃಷಿ ಮೇಲ್ವಿಚಾರಕರಾದ ಚಂದ್ರಶೇಖರ್, ಹಳೆಯೂರು ಮಾರುತಿ, ಬಿ ಕೆ ಸೇವಾ ಪ್ರತಿನಿಧಿಗಳಾದ ಕರುಣಾಮಾಲ, ದಿವ್ಯ, ವೀಣಾ, ರಾಜೇಶ್ವರಿ ಮತ್ತು ಸಂಘದ ಎಲ್ಲ ಸದಸ್ಯರು ಮತ್ತು ಒಕ್ಕೂಟ ಪದಾಧಿಕರಿಗಳು ಉಪಸ್ಥಿತರಿದ್ದರು.








