Mysore

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಿಂಚಣಿದಾರರ ಸಂಘಟನೆಗಳಿಂದ ಪ್ರತಿಭಟನೆ

ಮೈಸೂರು: ಪೆನ್ಷನ್ ಕಾಯ್ದೆಗಳ ಕ್ರಮಬದ್ಧಗೊಳಿಸುವಿಕೆಯನ್ನು ತಕ್ಷಣ ಹಿಂಪಡೆಯಬೇಕು ಎಂಬ ಒತ್ತಾಯವೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಪಿಂಚಣಿದಾರರ ಸಂಘಟನೆಗಳಿಂದ ಜಯಲಕ್ಷ್ಮೀಪುರಂನ ಬಿಎಸ್‌ಎನ್‌ಎಲ್ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.

ಪೆನ್ಷನ್ ಕಾಯ್ದೆಗಳ ಕ್ರಮಬದ್ಧಗೊಳಿಸುವಿಕೆಯನ್ನು ತಕ್ಷಣ ಹಿಂಪಡೆಯಬೇಕು, 8ನೇ ವೇತನ ಆಯೋಗದ ಉಲ್ಲೇಖಕ್ಕೆ ತಿದ್ದುಪಡಿ ತರುವ ಮೂಲಕ ಪಿಂಚಣಿ ಪರಿಷ್ಕರಣೆಗೆ 2026ಕ್ಕಿಂತಲೂ ಹಿಂದಿನ ಪಿಂಚಣಿದಾರರನ್ನು ಸೇರಿಸಬೇಕು, 8ನೇ ವೇತನ ಆಯೋಗದ ಉಲ್ಲೇಖದಲ್ಲಿ ಜಾರಿ ದಿನಾಂಕವನ್ನು 1-1-2026ರಿಂದ ಬಾಕಿ ಸಮೇತ ಅನ್ವಯವಾಗುವಂತೆ ಸೇರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಈ ವೇಳೆ ಎಸ್‌ಎನ್‌ಪಿಡಬ್ಲುಎ ಜಿಲ್ಲಾ ಕಾರ್ಯದರ್ಶಿ ಎಸ್.ವಿಷಕಂಠಮೂರ್ತಿ, ಎಐಬಿಡಿಪಿಐ ಜಿಲ್ಲಾ ಕಾರ್ಯದರ್ಶಿ ಬಸವರಾಜು, ಎಸ್‌ಎನ್‌ಪಿಡಬ್ಲ್ಯುಎ ಜಿಲ್ಲಾಧ್ಯಕ್ಷ ಎಂ.ಎನ್.ರಾಮಕೃಷ್ಣ ಹಲವರು ಭಾಗವಹಿಸಿದ್ದರು.

admin
the authoradmin

Leave a Reply

Translate to any language you want