CinemaLatest

ರೇಬಲ್ ಸ್ಟಾರ್ ಅಂಬರೀಶ್… ಮಂಡ್ಯದ ಗಂಡು.. ಮುತ್ತಿನ ಚೆಂಡು.. ನೀ ನಮ್ಮೂರ ಬಂಧು ನಿನ್ನ ಮರೆಯೊಲ್ಲ ಎಂದು…!

ಚಂದನವನದಲ್ಲಿ ಮಿಂಚಿ ಮರೆಯಾದರೂ ಇವತ್ತಿಗೂ ನೆನಪಾಗಿ ಉಳಿದಿರುವ ನಟರ ಪೈಕಿ ರೆಬಲ್ ಸ್ಟಾರ್ ಅಂಬರೀಶ್ ಅಗ್ರಸ್ಥಾನದಲ್ಲಿದ್ದಾರೆ. ಚಿತ್ರಪ್ರೇಮಿಗಳಿಂದ ಆರಂಭವಾಗಿ ರಾಜಕೀಯದವರೆಗೂ ಎಲ್ಲರೂ ಅವರನ್ನು ನೆನಪು ಮಾಡಿಕೊಳ್ಳುತ್ತಲೇ ಇರುತ್ತಾರೆ. ಇಂತಹ ನಟನ ಬದುಕು ಮತ್ತು ಸಿನಿಮಾದ ಪಯಣವನ್ನು ಸವಿಸ್ತಾರವಾಗಿ ಹಿರಿಯಬರಹಗಾರರಾದ ಕುಮಾರಕವಿ ನಟರಾಜ್ ಅವರು ನಮ್ಮ ಮುಂದೆ ತೆರೆದಿಟ್ಟಿದ್ದಾರೆ… ಒಮ್ಮೆ ಓದಿಬಿಡಿ..

ಏಕತಂತಿ ಪಿಟೀಲು ತಯಾರಿಸಿ ಸಪ್ತಸ್ವರ ನುಡಿಸಿ ಆ ಮೂಲಕ ವಾದ್ಯಸಂಗೀತ ಲೋಕದಲ್ಲಿ ಹೊಸ ಇತಿಹಾಸ ಬರೆದ ವಿಖ್ಯಾತ ಕಲಾವಿದ ಪದ್ಮಶ್ರೀ ಟಿ. ಪಿಟೀಲು ಚೌಡಯ್ಯ ನವರ ಮಗಳಮಗ ಅಮರನಾಥ್ 29.5.1952ರಂದು ಮೈಸೂರಿನಲ್ಲಿ ಜನಿಸಿದರು. ಚಿಕ್ಕಂದಿನಿಂದ ಒರಟು ಸ್ವಭಾವದ ಆದರೆ ಬೆಣ್ಣೆಯಂಥ ಹೃದಯವಂತ. ಬುಲೆಟ್, ಜಾವಾ,ಬೇರಾವುದೆ ಬೈಕ್ ರೈಡಿಂಗ್, ಕಾರ್ ಡ್ರೈವಿಂಗ್, ರೇಸಿಂಗ್ ಎಂದರೆ ಪಂಚಪ್ರಾಣ ಶಂಕರ್‌ಸಿಂಗ್- ಪ್ರತಿಮಾದೇವಿ ಫ಼್ಯಾಮಿಲಿ ಫ಼್ರಂಡ್! ರಾಜೇಂದ್ರಸಿಂಗ್‌ಬಾಬು ರವರ ಸೋದರ ಸಂಗ್ರಾಮ್‌ಸಿಂಗ್ ಹೀರೋ ಆಗಿದ್ದ ಬಂಗಾರದಕಳ್ಳ [1973] ಚಿತ್ರದಲ್ಲಿ ಅಂಬಿ ಮೊಟ್ಟಮೊದಲು ಪುಟ್ಟಪಾತ್ರದಲ್ಲಿ ಕಾಣಿಸಿಕೊಂಡರು.

ಆದರೆ 1972ರಲ್ಲಿ ಬಿಡುಗಡೆಯಾದ ನಾಗರಹಾವು ಫಿಲಂ ಅಮರನಾಥ್@ಅಂಬರೀಶ್ ನಟಿಸಿದ ಚೊಚ್ಚಲ ಚಿತ್ರವೆನಿಸಿತು! ಏಯ್ ಮಾತಾಡಕಿಲ್ವ ಬುಲ್‌ಬುಲ್ ಅಲಮೇಲುನ್ನ ಚುಡಾಯಿಸಿದ ಮೇಲೆ ರಾಮಾಚಾರಿ ವಿರುದ್ಧ ಫ಼ೈಟ್ ಮಾಡುವಾಗ ತಲೆಕೂದಲನ್ನು ಕಚ್ಚಿಎಸೆದ ಜಲೀಲನನ್ನು ಮರೆಯುವಂತಿಲ್ಲ! ಆಗಿನ ಕಾಲದ ಚಿತ್ರಾಭಿಮಾನಿಗಳು ‘ಜೂನಿಯರ್ ಶತ್ರುಘ್ನಸಿನ್ಹ’ ಟೈಟಲ್ ನೀಡಿ ಇವರ ಪ್ರತಿಯೊಂದು ಸೀನ್, ಡೈಲಾಗ್‌ಗೆ ಶಿಳ್ಳೆ ಹೊಡೆದು ಕುಣಿದು ಅಬ್ಬರಿಸಿ ಹಬ್ಬ ಆಚರಿಸಿದ್ದರು. ಮೊದಲಿಗೆ ಜಲೀಲ್ ಪಾತ್ರಕ್ಕೆ ಫಿಕ್ಸ್ ಆಗಿದ್ದುದು ರಜನಿಕಾಂತ್! ಆದರೆ ವಿಧಿವಿಲಾಸ ಬಲ್ಲವರಾರು? ಕಡೇ ಘಳಿಗೆಯಲ್ಲಿ ಸ್ಟೈಲ್‌ ಕಿಂಗ್ ಕೈಜಾರಿ ರೆಬೆಲ್‌ಸ್ಟಾರ್‌ಗೆ ಒಲಿದಿತ್ತು ಅದೃಷ್ಟ? ಈ ಸತ್ಯಘಟನೆ ಚಂದನವನ ಇತಿಹಾಸದ ಪುಟಸೇರಿತು!

ರಾಜಣ್ಣನ ವ್ರತಭಂಗ ಮಾಡಿದ ಮೈಸೂರುಜಾಣ

ಒಡಹುಟ್ಟಿದವರು ಚಿತ್ರೀಕರಣ ಸಂದರ್ಭದಲ್ಲಿ ಜೋಕ್ಸ್ ಹೇಳುವ ಮೂಲಕ ರಾಜ್ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದರು ಮಂಡ್ಯದಗಂಡು! ಆಗ ನಡೆದ ಘಟನೆಯೊಂದು ಹೀಗಿದೆ..  ಊಟದ ಸಮಯ ಬಂತು, ಎಂದಿನಂತೆ ಅಂಬಿಯು ಪಲಾವ್ ಚಾಪ್ಸ್ ಕೈಮಾ ತಲೆ ಮಾಂಸ ಕಾಲ್‌ ಸೂಪ್ ಪಾರ್ಸಲ್ ತರಿಸಿ ರಾಜ್ ಎದುರು ಕುಳಿತು ಕೈ-ಬಾಯಿ ಚಪ್ಪರಿಸಿಕೊಂಡು ಊಟ ಮಾಡುವಾಗ ಅಣ್ಣಾವ್ರ ಬಾಯಲ್ಲಿ ನೀರೂರುವಂತೆ ಮಾಡಿದರು. ಮಾತ್‌ ಮಾತಲ್ಲಿ ರಾಜಣ್ಣಂಗೂ ಮಾಂಸಾಹಾರಿ ಐಟಮ್‌ಗಳ ಊಟ ತರಿಸೇ ಬಿಟ್ಟರು. ವಾಸನೆ, ರುಚಿ ಬೊಂಬಾಟ್ ಆಗಿತ್ತು!

ಗುರುವಾರವಾದ್ದರಿಂದ ಅಣ್ಣಾವ್ರು ಉಣ್ಣುವಂತಿಲ್ಲ ಬಿಡುವಂತಿಲ್ಲ! ಒಲ್ಲೆ ಎಂದರೂ ಬಿಡದೆ ಏನೇನೊ ಸಮಜಾಯಿಶಿ ನೀಡಿ ಕಡೆಗೂ ಒಪ್ಪಿಸಿ ‘ಪಲಾವ್-ಚಾಪ್ಸ್ ತರಾವರಿ ಸ್ವಾದಿಷ್ಟ ಭೋಜನದಿಂದ ತೃಪ್ತಿ ಗೊಳಿಸಿ ಪ್ರಥಮ ಬಾರಿಗೆ ಅಣ್ಣಾವ್ರ ‘ಗುರುವಾರದ ವ್ರತಭಂಗ’ ಮಾಡಿಸಿದ ಏಕೈಕ ನಟ! ಅಲ್ಲಿಂದ ಶುರುವಾಯ್ತು ಇವರಿಬ್ಬರ ಬಾಡೂಟ ಬಂಧನ. ರಾಜ್ ಸಿಕ್ಕಾಗಲೆಲ್ಲ ಊಟ ಆಯ್ತಾ…ಣ್ಣ ಎಂದುಕೇಳಿ ಕೂಡಲೆ ಬಾಡೂಟ ತರಿಸಿ ತಾವೆ ಖುದ್ದು ಮುತುವರ್ಜಿಯಿಂದ ಅಣ್ಣಾವ್ರಿಗೆ ತೃಪ್ತಿ ಆಗುವಂತೆ ಬಡಿಸುತ್ತಿದ್ದ ಮಹಾಮಾನವ ಅಂಬರೀಶ್?!

ಆ ಹೊತ್ತಿನಿಂದ ಇವರಿಬ್ಬರ ಸಿನಿಮಾ ಶೂಟಿಂಗ್ ಒಂದೇ ಊರು, ಸ್ಥಳ, ಸ್ಟುಡಿಯೋ ದಲ್ಲಿದ್ದಾಗಲೆಲ್ಲ ಅಂಬಿ ಮತ್ತು ನಾನ್‌ವೆಜ್ ಊಟ ಅಲ್ಲಿಗೇ ಹಾಜರ್! ಇಬ್ಬರೂ ನಗುನಗುತ್ತಲೆ ಬಿಸಿಬಿಸಿ ಐಟಮ್ಸ್ ಗುಳುಂ ಮಾಡುವುದು ಸಾಮಾನ್ಯವಾಯ್ತು. ಇಂಥ ಘಟನೆಗಳನ್ನು ರಾಜ್‌ಕುಮಾರ್ ಅಂಬರೀಷ್ ಆಗಾಗ್ಗೆ ನೆನಪಿಸಿಕೊಂಡು ಖುಷಿ ಯಿಂದ ಬೇರೆಯವರೊಂದಿಗೂ ಹಂಚಿಕೊಳ್ಳುತ್ತಿದ್ದರು!  ಅಂದಿನಿಂದ ಸಿನಿಮಾಜೀವನದಲ್ಲಿ ಮಾತ್ರ ವಲ್ಲದೆ ನಿಜಜೀವನದಲ್ಲು ರಾಜ್ ಬಾಯಿಂದ ‘ಒಡಹುಟ್ಟಿದವನು’ ಎನಿಸಿಕೊಂಡು ರಾಜಣ್ಣನ ಅಂತ್ಯಕಾಲದವರೆಗು ಅಚ್ಚುಮೆಚ್ಚಿನ ತಮ್ಮ ಆಗಿದ್ದರು!

ಯಾವಾಗಲೂ ಅಂಬರೀಷ್ ತಮ್ಮ ಮನಸ್ಸು ಮಾತು ಊಟ ಜೋಕ್ಸ್ ನಗು ಕೀಟಲೆ ಗತ್ತು  ದಾನಧರ್ಮ ಬಿಂದಾಸ್‌ ಧಾರಾಳತೆ ಮುಂತಾದವುಗಳನ್ನು ಹಂಚಿಕೊಳ್ಳುವ ಅಭ್ಯಾಸವನ್ನು ಕೇವಲ ಡಾ.ರಾಜ್, ವಿಷ್ಣು, ಶ್ರೀನಾಥ್, ಜೈಜಗದೀಶ್, ಶಂಕರನಾಗ್, ಮುಂತಾದ ಹೀರೋಗಳ ಜತೆಗೆ ಮಾತ್ರ ಮೀಸಲಿಟ್ಟಿರಲಿಲ್ಲ, ಎಲ್ಲ ಸಹ ನಟರೊಡನೆ, ತಾಂತ್ರಿಕವರ್ಗದವರೊಡನೆ, ಲೈಟ್‌ಬಾಯ್ಸ್ ಜತೆಗೆ ಇಟ್ಟುಕೊಂಡಿದ್ದರು ಎಂಬುದೆ ಗ್ರೇಟ್‌ನೆಸ್, ಗ್ರೇಟ್‌ನ್ಯೂಸ್! ಅಂಬಿ ಚಂದನವನದ ಏಕೈಕ ಕರ್ಣ! ಇಂತಹ ಅಜಾತಶತ್ರು ಅಂಬರೀಷ್ ಗೆ ಸರಿಸಾಟಿ

ಅವರಿಗವರೇ ಹೊರತು ಬೇರಾರೂಇರಲಿಲ್ಲ

ಹಲವಾರು ಫ಼ಿಲಂಗಳಲ್ಲಿ ನಟಿಸಿದ್ದರೂ ರಾಜೇಂದ್ರಸಿಂಗ್‌ಬಾಬು ತಯಾರಿಸಿದ ‘ಅಂತ’ ಚಿತ್ರದಿಂದ ಕಂಪ್ಲೀಟ್ ಕ್ಲಿಕ್‌ಆಗಿ ಅವರ ಸಿನಿ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಪಡೆದು ಮತ್ತೆಂದೂ ಹಿಂದಿರುಗಿ ನೋಡದಂತೆ ಮುನ್ನುಗ್ಗಿದರು! ಸೆನ್ಸಾರ್ ಬೋರ್ಡ್ ಮತ್ತು ಮಾಧ್ಯಮದ ಕೆಂಗಣ್ಣಿಗೆ ಗುರಿಯಾದ ‘ಅಂತ’ ಚಿತ್ರವು ಬ್ಯಾನ್‌ಆಗುವ ಹಂತತಲುಪಿ ಕೆಲವು ದೃಶ್ಯಗಳನ್ನು ತೆಗೆದು, ಸೇರಿಸಿ ರೀ-ಸೆನ್ಸಾರ್‌ಗೆ ಗುರಿಯಾಗಿ ಬಿಡುಗಡೆ ಆಯ್ತು. ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲೆ ಸುನಾಮಿ ಎಬ್ಬಿಸಿತ್ತು! ಫಿಲಂ ನೋಡಿದ ಎಲ್ಲರೂ ಬೆರಗಾಗಿ ಧಂಗಾದರು! ಆ ಕಾಲಕ್ಕೆ ಭಾರತದ 8 ಭಾಷೆಗೆ ಮತ್ತು ವಿದೇಶದ 5 ಭಾಷೆಗೆ ಡಬ್ಬಾಗಿ ಸಬ್‌ಟೈಟಲ್‌ಗೊಂಡು ಚಲನಚಿತ್ರ ಇತಿಹಾಸದಲ್ಲೆ ನೂತನ ದಾಖಲೆ ಸ್ಥಾಪಿಸಿತು.

ಅಂದಿನಿಂದ ದೇಶದ ಏಕೈಕ ರೆಬೆಲ್‌ಸ್ಟಾರ್ ಎನಿಸಿ ಆಚಂದ್ರಾರ್ಕ ವಿಶ್ವದ ರೆಬೆಲ್‌ಸ್ಟಾರ್ ಆಗಿಯೆ ಉಳಿಯುತ್ತಾರೆ! ನ್ಯೂಡೆಲ್ಲಿ ಫಿಲಂ ಹಿಂದಿ ತಮಿಳು ಕನ್ನಡ ಭಾಷೆಗಳಲ್ಲಿ ಹಾಗೂ ಇಂಗ್ಲಿಷ್ ಸಬ್‌ ಟೈಟಲ್‌ನೊಡನೆ ಏಕಕಾಲಕ್ಕೆ ಬಿಡುಗಡೆಯಾದ ಕನ್ನಡದ ಮೊಟ್ಟಮೊದಲ ಜರ್ನಲಿಸ್ಟ್ ಸಿನಿಮಾ! ಈ ಫ಼ಿಲಂ ರಾಜ್ಯ, ರಾಷ್ಟ್ರ ಅಂತರ್‌ರಾಷ್ಟ್ರಮಟ್ಟದ ಹಿರಿಮೆ ಗರಿಮೆ ಗಳಿಸಿದ್ದು ಮಾತ್ರವಲ್ಲ ಹಲವಾರು ರಾಷ್ಟ್ರ, ಅಂತಾರಾಷ್ಟ್ರ ಫಿಲ್ಮೋತ್ಸವದಲ್ಲು ಪಾಲ್ಗೊಂಡು ಉತ್ತಮ ಚಿತ್ರವೆಂದು ಅನೇಕ ಪ್ರಶಸ್ತಿ, ಬಹುಮಾನ ಬಾಚಿಕೊಂಡಿತು! ಚಂದನವನ ಚರಿತ್ರೆಯಲ್ಲೆ ಅತಿಹೆಚ್ಚು 3ಭಾಷೆಗಳ 300ಸಿನಿಮಾಗಳಲ್ಲಿ ನಟಿಸಿದ ಏಕೈಕ ಕನ್ನಡದ ಹೀರೊ! ಮೈಸೂರು ಜಾಣನಾಗಿ ಸಾಮಾಜಿಕ, ರಾಜಕೀಯ ಹಾಗೂ ಸಿನಿಮಾ ರಂಗಗಳಲ್ಲಿ ಕ್ರಾಂತಿ ಎಬ್ಬಿಸಿದ ಮಂಡ್ಯದಗಂಡು ಅನೇಕ ರಾಜ್ಯ, ರಾಷ್ಟ್ರ ಪ್ರಶಸ್ತಿ, ಬಹುಮಾನ, ಬಿರುದು, ಸನ್ಮಾನ ಪಡೆದ ಧೀಮಂತ ಕಲಾವಿದ.

35 ವರ್ಷಕಾಲ ರಾಜಕೀಯದಲ್ಲಿದ್ದು ಕರ್ನಾಟಕ ವಿಧಾನಸಭೆ ಸದಸ್ಯರಾಗಿ, ರಾಜ್ಯದ ಕ್ಯಾಬಿನೆಟ್ ಮಂತ್ರಿಯಾಗಿ, ಪಾರ್ಲಿಮೆಂಟ್ ಸದಸ್ಯರಾಗಿ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇಷ್ಟಾದರೂ ಹಲವಾರು ಏಳುಬೀಳು, ಸೋಲುಗೆಲುವು ಕಂಡ ಧೀಮಂತ ಮೌಲ್ಯಾಧಾರಿತ ರಾಜಕಾರಣಿ. ಕಾವೇರಿ ನೀರು ಸಮಸ್ಯೆ ಬಗ್ಗೆ ದಿಲ್ಲಿ ಪಾರ್ಲಿಮೆಂಟಲ್ಲಿ ಧ್ವನಿ ಎತ್ತಿದ ಮಂಡ್ಯದ ಗಂಡು. ಕರ್ನಾಟಕಕ್ಕೆ ಕುಡಿಯಲು ನೀರು ಇಲ್ಲದಿರುವಾಗ ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಯಾವ ಕಾರಣಕ್ಕು ನೀರು ಬಿಡೊಲ್ಲ ಎಂದು ವಾದಿಸಿ ಪ್ರತಿಪಾದಿಸಿದರು. ಇದಕ್ಕೆ ಮಾನ್ಯ ಪ್ರಧಾನಿಯವರು ಸಹಕಾರ ನೀಡಲಿಲ್ಲವೆಂಬ ಒಂದೆ ಕಾರಣಕ್ಕೆ ಮಿನಿಸ್ಟರ್ ಪದವಿ ಹಾಗೂ ಎಂ.ಪಿ.ಸ್ಥಾನಕ್ಕೆ ರಾಜೀನಾಮೆ ನೀಡಿ ಜಿಲ್ಲೆಗೆ ರಾಜ್ಯಕ್ಕೆ ನ್ಯಾಯ ಒದಗಿಸಿದರು. ಯಾವುದೆ ಆಸೆ ಆಮಿಷಕ್ಕೆ, ಧಮ್ಕಿ ದಾಕ್ಷಿಣ್ಯಕ್ಕೆ ಬಗ್ಗದೆ, ರೈತರ ಕಾವೇರಿ ನೀರಿನ ಪರವಾಗಿ ಉಗ್ರ ಹೋರಾಟ ಮಾಡಿದರು. ನಿಸ್ವಾರ್ಥದಿಂದ ಮಂಡ್ಯ ಜಿಲ್ಲೆಯ ಸರ್ವ ತೋಮುಖ ಬೆಳವಣಿಗೆಗೆ ಮುಖ್ಯ ಪಾತ್ರ ವಹಿಸಿದರು, ನಂಬರ್-1 ರಾಜಕಾರಣಿ ಎನಿಸಿ ಮಾದರಿಯಾದರು!

ಸಿನಿಮಾ ಮತ್ತು ರಾಜಕೀಯ ಎರಡೂ ರಂಗದಲ್ಲಿ ‘ಸೈ’ ಎನಿಸಿಕೊಂಡ ಕನ್ನಡ ಚಿತ್ರರಂಗದ ಪ್ರಪ್ರಥಮ ನಟ! ತಮ್ಮಲ್ಲಿದ್ದ ಅಧಿಕಾರ, ಪ್ರತಿಭೆ ಹಾಗೂ ದಕ್ಷತೆಗಳನ್ನು ಉತ್ತಮವಾಗಿ ಉಪಯೋಗಿಸಿಕೊಂಡು ರೈತರ, ಅಭಿಮಾನಿಗಳ ಹಾಗೂ ಕಲಾಸರಸ್ವತಿ ವರಪುತ್ರನಾಗಿ ಮೆರೆದರು! ತಾವು ಬೆಳೆಯುವುದರ ಜತೆಗೇ ನಾಡು ನುಡಿಯ ಕೀರ್ತಿ ಪತಾಕೆಯನ್ನು ದೇಶದಾದ್ಯಂತ ಪಸರಿಸಿ ತಮ್ಮ ತಾತಾ ಪಿಟೀಲು ಚೌಡಯ್ಯ ನವರ ಗೌರವ ಘನತೆ ಹೆಚ್ಚಿಸಿದರು! ಮುಖ್ಯಮಂತ್ರಿ ಆಗುವ ಎಲ್ಲ ಅವಕಾಶ, ಅನುಭವ ಹಾಗೂ ಸಾಧ್ಯತೆ ಇದ್ದರೂ ತಮ್ಮ ಪವರನ್ನು ಎಂದೂ ದುರುಪಯೋಗ ಪಡಿಸಿಕೊಳ್ಳದ ಸಾಚಾ ರಾಜಕಾರಣಿ. ತನ್ನ ಸೋಲು ಗ್ಯಾರೆಂಟಿ ಎಂದು ತಿಳಿದು ಸಹಾಯಕ್ಕೆ ಗೋಗರೆದ ಅಭ್ಯರ್ಥಿಯೊಬ್ಬ ಅಲವತ್ತುಕೊಂಡಾಗ ಆತನ ಕೈ ಹಿಡಿದು ಗೆಲ್ಲಿಸಿದ ಪವರ್ಫುಲ್ ಪೊಲಿಟಿಶಿಯನ್!

ದೇವರ ದಯೆಯಿಂದಲೊ ಹಿರಿಯರ ಆಶೀರ್ವಾದ ದಿಂದಲೊ ತಾ ಮಾಡಿದ ದಾನ ಧರ್ಮ ದಿಂದಲೊ ಅನಾರೋಗ್ಯ ಪೀಡಿತರಾಗಿ ಸಾವಿನ ಮನೆಯ ಬಾಗಿಲು ತಟ್ಟಿ ಹಿಂದಿರುಗಿದ ಅದೃಷ್ಟವಂತ! ಎಂಥ ಸಸಂದರ್ಭದಲ್ಲೂ ಯಾರೊಡನೆಯೂ ಕಾಂಪ್ರಮೈಸ್‌ಗೆ ಒಪ್ಪದ ಧೀರ! ಕೆಟ್ಟದ್ದಕ್ಕೆ ಮಾತ್ರ ಯೋಚಿಸಬೇಕು, ಒಳ್ಳೆಯದನ್ನು ತಕ್ಷಣವೆ ಮಾಡಿಬಿಡಬೇಕು, ಬಲಗೈಲಿ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು, ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂಬೆಲ್ಲ ಸಲಹೆ ನೀಡುತ್ತ ಎಲ್ಲರೊಡನೆ ಸ್ನೇಹದಿಂದ ಬೆರೆತು ಪರಿಹಾಸ್ಯ ಮಾಡುತ್ತಿದ್ದರು.ಮಾನವ ಎಂಬುದಕ್ಕೆ ಅನ್ವರ್ಥ ನಾಮವೆ ಅಂಬರೀಷ್ @ ಅಮರನಾಥ್!

ಧೂಳೆಬ್ಬಿಸಿದ ಅಂಬಿ-ಅಂಬಿಕಾ ತಾರಾಜೋಡಿ

ಚಳಿ ಚಳಿ ತಾಳೆನು ಈ ಛಳಿಯಾ.. ಅಂಬಿ-ಅಂಬಿಕಾ ತಾರಾಜೋಡಿ ದಂಪತಿಯಾಗುವ ಲಕ್ಷಣಕ್ಕೆ ತೆರೆಬಿತ್ತು: ಒಂದುಕಾಲಕ್ಕೆ ಅಂಬಿಕ-ಅಂಬರೀಶ್ ಕೆಮಿಸ್ಟ್ರಿ ಎಷ್ಟು ಅನ್ಯೋನ್ಯವಾಗಿತ್ತು ಎಂದರೆ ಇಬ್ಬರ ಮದುವೆ ಗ್ಯಾರೆಂಟಿ ಎಂಬ (ಗಾಳಿ)ಸುದ್ಧಿ ೯೯%ರಷ್ಟು ಸತ್ಯದಮಟ್ಟ ತಲುಪಿತ್ತು? ದೈವಲೀಲೆ ಎಂಬಂತೆ ಅಂಥ (ಅವ)ಲಕ್ಷಣಕ್ಕೆ ಯಾರಿಂದಲೊ ತೆರೆಬಿದ್ದು ಎಲ್ಲವೂ ಸುಖಾಂತ್ಯ ಕಂಡಿತು! ಕಾಲಕ್ರಮೇಣ ಒಂದೊಳ್ಳೆದಿನ ಚೆಲುವೆನಟಿ ಸುಮಲತಾ ಕೈಹಿಡಿದು ಏಕೈಕ ಪುತ್ರರತ್ನ ಅಭಿಶೇಕ್‌ ಗೌಡನ ತಂದೆಯಾಗಿ ಸಾರ್ಥಕ ಜೀವನ ನಡೆಸಿ ಸಿನಿಲೋಕದ ಆದರ್ಶ ತಾರಾದಂಪತಿ ಸಾಲಿನಲ್ಲಿ ಅಗ್ರಗಣ್ಯರಾದರು!

ಜಗ್ಗೇಶ್ ದರ್ಶನ್ ಯಶ್ ಐಂದ್ರಿತಾರಾಯ್ ರಾಧಿಕಾಪಂಡಿತ್ ಮುಂತಾದ ಅನೇಕ ಹೊಸ ಪ್ರತಿಭಾವಂತ ನಟನಟಿಯರಿಗೆ ಗಾಡ್‌ಫ಼ಾದರ್ ಎನಿಸಿದರು. ನೊಂದುಬೆಂದು ಆಸರೆ ಕೋರಿ ಬಂದ ಕಲಾವಿದರಿಗೆ ಕೈಲಾದಷ್ಟು ಸಹಾಯ ಮಾಡುತ್ತಿದ್ದ ಕಲಿಯುಗದಕರ್ಣ. ಚಂದನವನದ ಆಗುಹೋಗುಗಳಲ್ಲಿ ನ್ಯಾಯ-ಪಂಚಾಯ್ತಿ-ರಾಜೀ ಮಾಡುತ್ತ ಎಂಥದೆ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಿ ತೀರ್ಮಾನ ಕೊಡುತ್ತಿದ್ದ ಯಜಮಾನ. ಕನ್ನಡ ಚಿತ್ರರಂಗದ ಕಲಾವಿದರೆಲ್ಲ ಒಂದೆ ಕುಟುಂಬದವರಂತೆ ಇರಬೇಕು. ಯಾರೂ ಯಾರ ವಿರುದ್ಧವೂ ಸೆಡ್ಡು ಹೊಡೆದು ದ್ವೇಷಾಸೂಯೆ ಸಾಧಿಸಬಾರದು.

ಅನಾವಶ್ಯಕವಾಗಿ ಸಣ್ಣಪುಟ್ಟದ್ದಕ್ಕೆ, ಕ್ಷುಲ್ಲಕಕಾರಣಕ್ಕೆ, ಕೋರ್‍ಟು, ಕಚೇರಿ, ಶಿಕ್ಷೆ, ದಂಡ ಮುಂತಾದವುಗಳಿಗೆ ಅವಕಾಶ ಮಾಡಿಕೊಡಬಾರದೆಂದು ಎಲ್ಲರಿಗೂ ತಿಳುವಳಿಕೆ ಸಲಹೆ ಸಹಕಾರ ನೀಡುತ್ತಿದ್ದ ಮಾರ್ಗದರ್ಶಿ. ಕನ್ನಡ ಕಲಾವಿದರ ಮನೆಯ ಒಳಗೆ-ಹೊರಗೆ ಯಾವುದೆ ಒಡಕು-ಕೆಡಕು ಹುಟ್ಟಿಕೊಳ್ಳದಂತೆ ಎಚ್ಚರಿಕೆಯಿಂದ ನೋಡಿಕೊಂಡು ಎಲ್ಲರನ್ನು ಕಾಪಾಡುತ್ತಿದ್ದ ಚಂದನವನದ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದ ಪರೋಪಕಾರಿ.

ಭಾರತದ ಪಾರ್ಲಿಮೆಂಟ್ ಸದಸ್ಯನಾಗಿ ಮತ್ತು ಕರ್ನಾಟಕ ರಾಜ್ಯದ ಕ್ಯಾಬಿನೆಟ್ ಸಚಿವರಾಗಿ ದಕ್ಷ ಕಾರ್ಯನಿರ್ವಹಿಸಿದ ಪ್ರಪ್ರಥಮ ಕನ್ನಡ ನಟ. 275ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರೂ ಯಾವುದೆ ಹಗರಣವಿಲ್ಲದ ಕನ್ನಡದ ಏಕೈಕ ನಟ. ಸಹೃದಯವಂತ ನಟನ ಇನ್ನೊಂದು ದಾಖಲೆ ಎಂದರೆ ಹಿಂದಿ ಸೀರಿಯಲ್ ರಾಮಾಯಣ್‌ನ ಸೀತಾ ಪಾತ್ರಧಾರಿ ದೀಪಿಕಾ ಹಾಗೂ ಮಹಾಭಾರತ್‌ನ ದ್ರೌಪದಿ ಪಾತ್ರಧಾರಿ ರೂಪಾಗಂಗೂಲಿ ನಟಿಯರೊಡನೆ ನಟಿಸಿದ ಪ್ರಪ್ರಥಮ ನಟ! ತಮ್ಮ ಯಾವುದೇ ಒಂದು ಚಿತ್ರವು ಫ಼್ಲಾಫ಼್[ತೋಪ್]ಆಗಿ, ನಿರ್ಮಾಪಕ ಬೀದಿಗೆ ಬಂದು, ಕಣ್ಣೀರಿಡುವಾಗ ಆತನನ್ನು ಸಂತೈಸಿ ಅವನಿಗೆ ಲಾಭ ಬ(ತ)ರುವವರೆಗೂ ಒಂದೋ ಎರಡೋ ಮೂರೋ ಸಿನಿಮಾಕ್ಕೆ ಫ್ರೀ-ಆಫ಼್-ಕಾಸ್ಟ್ ಕಾಲ್ ಶೀಟ್ ನೀಡಿ ಪುಕ್ಕಟೆ ಅಭಿನಯಿಸುವ ಮೂಲಕ ಆ ನಿರ್ಮಾಪಕನನ್ನು ಉದ್ಧಾರ ಮಾಡುತ್ತಿದ್ದ ಚಿತ್ರರಂಗದ ಪುಣ್ಯಾತ್ಮ! ತಾನು ಮಾತ್ರ ಬೆಳೆ[ಉಳಿ]ದರೆ ನ್ಯಾಯವಲ್ಲ ತನ್ನನ್ನು ನಂಬಿರುವ, ತನ್ನೊಡನಿರುವ ಕಲಾವಿದ-ನಿರ್ಮಾಪಕ-ನಿರ್ದೇಶಕ ಎಲ್ಲರೂ ಬೆಳೆ[ಉಳಿ]ಯಬೇಕು ಎನ್ನುತ್ತಿದ್ದ ಮಹಾನುಭಾವನನ್ನು ಪ್ರತಿಯೊಬ್ಬರು ಒಪ್ಪಿ ಅಪ್ಪಿಕೊಂಡಿದ್ದರು ಎಂಬುದು ಚಿತ್ರಜಗತ್ತಿನ ೮ನೇ ಅದ್ಭುತವೆ ಸರಿ!

“ನಾನು ಸಿನಿಮಾ-ರಾಜಕೀಯ ಕ್ಷೇತ್ರ ಬಿಟ್ಟರೂ, ಅವೆರಡೂ ಕ್ಷೇತ್ರ ನನ್ನನು ಬಿಡುವುದಿಲ್ಲ” ಎನ್ನುತ್ತಿದ್ದರು. ಏನೇಬಂದರೂ- ಏನೇಆದರೂ ಯಾರೇನೆ ಅಂದರೂ-ಅನ್ನದಿದ್ದರೂ ತಲೆ ಕೆಡಿಸಿಕೊಳ್ಳದೆ ತಮ್ಮದೇ ಆದ ‘ವಿಲ್ ಪವರ್’ ನಿಂದ ಘರ್ಜಿಸುತ್ತಲೇ ಇದ್ದರು. ತಮ್ಮ ಉಸಿರಿನ ಕಡೇ ಘಳಿಗೆವರೆಗೂ ಅಭಿನಯಿಸಿದ ಮೇರು ಕಲಾವಿದ ಅಂಬರೀಷ್ ಉರುಫ಼್ ಹೆಚ್.ಅಮರನಾಥ್ ಅಲಿಯಾಸ್ ರೆಬೆಲ್‌ಸ್ಟಾರ್ ನಟಿಸಿದ ಕಟ್ಟ ಕಡೆಯ ಚಲನಚಿತ್ರ:ಕುರುಕ್ಷೇತ್ರ! ಈ ಸಿನಿಮಾದಲ್ಲಿ ಅವರು ಕುರು ಪಿತಾಮಹ ಕೌರವ-ಪಾಂಡವರ ಮುದ್ದಿನ ತಾತಾಚಾರ್ಯ ಭೀಷ್ಮ ಪಾತ್ರವನ್ನು ಬೊಂಬಾಟ್ ಆಗಿ ನಿರ್ವಹಿಸಿ ಪ್ರತಿಯೊಬ್ಬ್ಲರಿಂದಲೂ ಭೇಷ್ ಎನಿಸಿಕೊಂಡರು! ಇದೊಂದು ಸ್ಮರಣೀಯ ಚರಿತ್ರೆ !

ಸ್ಯಾಂಡಲ್‌ವುಡ್ ಸಾಮ್ರಾಜ್ಯದಲ್ಲಿ ಡಾ||ರಾಜ್, ಡಾ||ವಿಷ್ಣು ನಂತರ ಪ್ರಥಮಸ್ಥಾನ ಗಳಿಸಿದ್ದ ನಟವಿಕ್ರಮಾದಿತ್ಯ ಡಾ||ಅಂಬರೀಷ್! ಅನಾರೋಗ್ಯದ ಕಾರಣ ವಿಕ್ರಂ ಆಸ್ಪತ್ರೆ ಸೇರಿದ ಗಂಡುಗಲಿ ಅಂಬಿ, ಕಡೆಗೂ ಹಠಮಾರಿ ಜವರಾಯ ನೀಡಿದ ಆಹ್ವಾನಕ್ಕೆ ಒಲ್ಲೆ ಎನ್ನಲಾಗದೆ ದಿ.24.11.2018ರಂದು ತಮ್ಮ 66ನೆ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ದೈವಾಧೀನರಾದರು. ರೆಬೆಲ್‌ಸ್ಟಾರ್ ಅಂಬರೀಷ್ ಬಾರದಲೋಕದ ಪಯಣದಿಂದಾಗಿ ಕರ್ನಾಟಕ ರಾಜ್ಯಕ್ಕೆ ಮಾತ್ರವಲ್ಲ ಇಡೀ ಭಾರತದೇಶಕ್ಕೆ ತುಂಬಲಾರದ ನಷ್ಟಕಷ್ಟ ಉಂಟಾಯಿತು! ಭಾರತೀಯ ಚಿತ್ರರಂಗದ ಇತಿಹಾಸದಲ್ಲೆ ಮೊಟ್ಟ ಮೊದಲ ಬಾರಿಗೆ ತಾರಾ-ಜೋಡಿಯಾಗಿದ್ದು ನಂತರ ಮದುವೆಯಾಗಿ ನಿಜವಾದ ದಂಪತಿಗಳಾದ ಮೇಲೆ ಗಂಡ-ಹೆಂಡತಿ ಇಬ್ಬರೂ ಒಂದೇ [ಮಂಡ್ಯ] ಕ್ಷೇತ್ರದಿಂದ ಮತದಾರ ಪ್ರಭುಗಳಿಂದ ಚುನಾಯಿತರಾಗಿ ಎಂ.ಪಿ. ಆದರು! ಮೊದಲಿಗೆ ಅಂಬರೀಷ್ ಮಂಡ್ಯ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿದ್ದು ಅಂಬರೀಷ್ ನಿಧನದ ನಂತರ ಶ್ರೀಮತಿ ಸುಮಲತಾ ಅಂಬರೀಷ್ ಮಂಡ್ಯ ಕ್ಷೇತ್ರದಿಂದಲೆ ಗೆದ್ದು ಪಾರ್ಲಿಮೆಂಟ್ ಮೆಂಬರ್ ಆಗಿ ಸೇವೆ ಸಲ್ಲಿಸಿದ್ದೂ ಸಹ ಆಲ್ ಇಂಡಿಯಾ ರೆಕಾರ್ಡ್!

ಅಂಬರೀಷ್ ನಟಿಸಿದ ಚಿತ್ರಗಳು ಹೀಗಿವೆ…

ನಾಗರಹಾವು/1972 , ಬಂಗಾರದಕಳ್ಳ, ಪ್ರತಿಮಾ, ಸ್ನೇಹಸೇಡು, ಸೀತೆಯಲ್ಲಸಾವಿತ್ರಿ, ಕಿಲಾಡಿಜೋಡಿ,  ಶ್ರೀಚಾಮುಂಡೇಶ್ವರಿಮಹಿಮೆ, ಪ್ರಿಯಾ/1979,  ಶ್ರೀಮಹದೇಶ್ವರ ಪೂಜಾಫಲ,   ಸೀತಾರಾಮು, ಶುಭಮಂಗಳ, ಅಮರ್‍ನಾಥ್ , ಭಾಗ್ಯಜ್ಯೋತಿ,  ಪಕ್ಕಾಕಳ್ಳ,  ನಾಗಕನ್ಯೆ,  ಪುಟಾಣಿಏಜೆಂಟ್ 1,2,3, ಒಂದೇ ರೂಪ ಎರಡು ಗುಣ,  ಸವತಿಯ ನೆರಳು, ಬಿಳೀಹೆಂಡ್ತಿ,  ಧೈರ್ಯಲಕ್ಷ್ಮಿ/1980, ದೇವರಕಣ್ಣು, ವಜ್ರದಜಲಪಾತ,   ಹುಡುಗಾಟದ ಹುಡುಗಿ, ಒಂದು ಹೆಣ್ಣು ಆರು ಕಣ್ಣು,  ಕಥಾಸಂಗಮ,   ಸುಬ್ಬಿ ಸುಬ್ಬಕ್ಕ ಸುವ್ವಲಾಲಿ, ಹೊಸಿಲು ಮೆಟ್ಟಿದ ಹೆಣ್ಣು, ನ್ಯಾಯನೀತಿಧರ್ಮ, ಬಂಗಾರದಗುಡಿ, ಮಿಥುನ, ಕನಸುನನಸು, ಡ್ರೈವರ್ ‍ಹನುಮಂತು,  ಧನಲಕ್ಷ್ಮಿ, ಅಂತ/1981

ನಾಗರಹೊಳೆ, ಲೀಡರ್‍ವಿಶ್ವನಾಥ್,  ಮಾಗಿಯಕನಸು,   ರಂಗನಾಯಕಿ,  ಕಾಡ್ಗಿಚ್ಚು, ಸ್ನೇಹಿತರಸವಾಲ್, ಮನಸ್ಸಿನಂತೆಮಾಂಗಲ್ಯ, ಮಹಾಪ್ರಚಂಡರು,  ಮುಗ್ಧಮಾನವ,  ಭರ್ಜರಿಬೇಟೆ,  ಚಿನ್ನಾನಿನ್ನಮುದ್ದಾಡುವೆ, ಅವಳಹೆಜ್ಜೆ, ಶ್ರೀಮಂತನ ಮಗಳು, ಖದೀಮಕಳ್ಳರು/1982,  ಕುಂಕುಮರಕ್ಷೆ, ರುದ್ರಿ,  ಬನಶಂಕರಿ, ,ಶಂಕರ್‍ಸುಂದರ್,  ಕುದುರೆಮುಖ, ಮಾವಸೊಸೆಸವಾಲ್,  ಹಳ್ಳೀಹೈದ, ಪ್ರೇಮಮತ್ಸರ,  ಹಾವಿನಹೆಜ್ಜೆ, ಸ್ನೇಹದಸಂಕೋಲೆ, ಮುಯ್ಯಿಗೆಮುಯ್ಯಿ, ಅಜಿತ್,  ಸಿರಿತನಕ್ಕೆಸವಾಲ್,  ಟೋನಿ, ಬಲುಅಪರೂಪ ನಮ್‍ಜೋಡಿ, ಚಕ್ರವ್ಯೂಹ/1983, ಪಡುವಾರಳ್ಳಿ ಪಾಂಡವರು, ಜಗ್ಗು,  ಅನುರಾಗಬಂಧನ, ತಿರುಗುಬಾಣ , ಆಶಾ, ಅಂತಿಮತೀರ್ಪು,  ಹೊಸತೀರ್ಪು.

ದಿಗ್ವಿಜಯ, ಅವಳನೆರಳು,  ಇನ್ಸ್‍ಪೆಕ್ಟರ್ ಕ್ರಾಂತಿಕುಮಾರ್ , ಮತ್ತೆ ವಸಂತ, ಬೇಡಿ, ಮನೇಲಿ ರಾಮಣ್ಣ ಬೀದೀಲಿ ಕಾಮಣ್ಣ, ಬಂಧಮುಕ್ತ,  ಗೆಲುವುನನ್ನದೇ,  ಆಪತ್ಭಾಂಧವ, ಹಸಿದ ಹೆಬ್ಬುಲಿ/1983, ಬ್ರಹ್ಮವಿಷ್ಣುಮಹೇಶ್ವರ, ಧರ್ಮಯುದ್ಧ, ಪ್ರಜಾಪ್ರಭುತ್ವ,  ದೇವರಗುಡಿ, ನವಭಾರತ, ಮಸಣದಹೂವು, ಏಳುಸುತ್ತಿನಕೋಟೆ, ಗಂಡುಭೇರುಂಡ , ವಿಜಯಖಡ್ಗ, ಮೂರುಜನ್ಮ, ನ್ಯೂಡೆಲ್ಲಿ, ಗಜೇಂದ್ರ,  ಸಾಂಗ್ಲಿಯಾನ, ನಾನೇರಾಜ, ರಾಮಣ್ಣಶಾಮಣ್ಣ, ಒಂಟಿಧ್ವನಿ, ತಾಯಿಗೊಬ್ಬ ಕರ್ಣ, ಗುರುಭಕ್ತಿ, ಅರ್ಜುನ್, ಸಿಡಿಲು, ಕಲಾಭಿಮಾನಿ, ಕಾಳಿಂಗಸರ್ಪ, ಹಾಂಕಾಂಗ್‍ನಲ್ಲಿ ಏಜೆಂಟ್‍ಅಮರ್, ರೌಡಿರಾಜ, ಜಾಕಿ, ಶಪಥ, ಗುರು, ಒಂದೇರಕ್ತ,  ರಂಜಿತಾ, ಗೂಂಡಾಗುರು/1985, ಅಜಿತ್, ಧರ್ಮ, ಗಂಡಂದ್ರೆಗಂಡು.

ಗುರು-ಜಗದ್ಗುರು, ಅವತಾರಪುರುಷ, ಆಹುತಿ, ಇಂದ್ರಜಿತ್ (ದೀಪಿಕಾಚಕಾಲಿಯ- ರಾಮಾಯಣ್ ಸೀತ), ಶಭಾಸ್‍ವಿಕ್ರಂ,  ಸಂಸಾರನೌಕೆ, ದೇವರಮನೆ, ತಾಳಿಗಾಗಿ, ಸ್ನೇಹಸಂಬಂಧ,  ಅಂತಿಂಥ ಗಂಡುನಾನಲ್ಲ,  ಗಿರಿಬಾಲೆ, ನ್ಯಾಯಕ್ಕಾಗಿ ನಾನು,  ಚದುರಂಗ, ಒಂಟಿಸಲಗ(ಖುಷ್ಬೂ),  ದೇವರೆಲ್ಲಿದ್ದಾನೆ, ಜೈಕರ್ನಾಟಕ, ಮಸಣದಹೂವು,  ರಾಜಮಹಾರಾಜ, ಮಮತೆಯ ಮಡಿಲು,  ಜಯಭೇರಿ, ಕದನ (ಮಹಾಭಾರತ್ ದ್ರೌಪದಿ- ರೂಪಾಗಂಗೂಲಿ), ಮತ್ಸರ,  ಕಲ್ಲರಳಿ ಹೂವಾಗಿ,  ನಮ್ಮೂರಹಮ್ಮೀರ, ಅಮರಜ್ಯೋತಿ, ರಣಭೇರಿ, ಹಿಡಂಬಿ ಹಳ್ಳಿ ಪ್ರವೇಶ[ಗೌರವನಟ], ಆಸೆಗೊಬ್ಬ ಮೀಸೆಗೊಬ್ಬ, ಮಧುರಬಾಂಧವ್ಯ/1986, ಕೆಂಪುಸೂರ್ಯ, ಸತ್ಕಾರ,  ರಾಮರಾಜ್ಯದಲ್ಲಿ ರಾಕ್ಷಸರು,  ಮೃಗಾಲಯ, ಕೆಂಪುಗುಲಾಬಿ, ಬ್ರಹ್ಮಾಸ್ತ್ರ.

ತ್ರಿನೇತ್ರ,  ಪ್ರೀತಿ, ಚಕ್ರವರ್ತಿ, ಮತ್ತೊಂದುಚರಿತ್ರೆ,  ಏಕಲವ್ಯ,  ಬೇಟೆ,  ರಾಣಿಮಹಾರಾಣಿ, ವಿಶ್ವರೂಪ, ಉತ್ಕರ್ಷ/1990 [ಗೌರವನಟ], ಪ್ರೇಮಲೋಕ, ಅನಂತಪ್ರೇಮ, ಬಜಾರ್ ಭೀಮ, ಹೃದಯಹಾಡಿತು, ಒಲವಿನಉಡುಗೊರೆ, ಗಗನ, ಪ್ರೇಮಕಾದಂಬರಿ,  ನೀನುನಕ್ಕರೆ ಹಾಲುಸಕ್ಕರೆ,  ಮಿಸ್ಟರ್‍ರಾಜ, ಗರುಡಧ್ವಜ,  ಪೂರ್ಣಚಂದ್ರ, ಕಾಲಚಕ್ರ, ಪುಕ್ಸಟ್ಟೆಗಂಡ ಹೊಟ್ಟೆ ತುಂಬ ಉಂಡ, ಏಪ್ರಿಲ್‍ಫೂಲ್ ,  ಗಂಡು-ಸಿಡಿಗುಂಡು, ಪ್ರೇಮಗೀತೆ,  ರೌಡಿ & ಎಂ.ಎಲ್.ಎ,  ಹಬ್ಬ,  ಅರಣ್ಯದಲ್ಲಿ ಅಭಿಮನ್ಯು, ದೇವರ ಮಗ, ಎಂಟೆದೆಯ ಭಂಟ, ಈ ಪ್ರೀತಿ ಏಕೆ ಭೂಮಿ ಮೇಲಿದೆ, ಮೈಸೂರುಜಾಣ,  ವಂದೇಮಾತರಂ, ಸೋಲಿಲ್ಲದಸರದಾರ,   ದಿಗ್ಗಜರು,  ಸಪ್ತಪದಿ,  ಶ್ರೀಮಂಜುನಾಥ,  ಭಂಡ ನನ್ನ ಗಂಡ, ಪ್ರೇಮರಾಜ್ಯ, ಪ್ರೇಮ ಸಂಗಮ, ಮುತ್ತು,  ಮೇಘಮಂದಾರ, ಅಣ್ಣಾವ್ರು, ಮಣ್ಣಿನದೋಣಿ, ಗೌಡ್ರು, ಮಲ್ಲಿಗೆಹೂವೆ, ಕರ್ಣನ ಸಂಪತ್ತು.

ಸೂರ್ಯೋದಯ, ತಂದೆಗೆತಕ್ಕಮಗ, ಒಲವಿನಕಾಣಿಕೆ, ಪಾಂಡವರು, ವಸಂತಪೂರ್ಣಿಮ, ನಾಗರಹಾವು, ಮಿಡಿದಹೃದಯಗಳು, ಕಠಾರಿವೀರ ಸುರಸುಂದರಾಂಗಿ, ಹೃದಯಬಂಧನ, ಆನೆಪಟಾಕಿ, ಮುಂಜಾನೆಯ ಮಂಜು, ಅರಣ್ಯದಲ್ಲಿಅಭಿಮನ್ಯು, ಮುಸುಕು, ಬುಲ್‍ಬುಲ್, ಡಹುಟ್ಟಿದವರು[ರಾಜ್ ಜತೆ],  ರಣ, ಗೋಲ್ಡ್‍ಮೆಡಲ್, ತಿಪ್ಪಾರಳ್ಳಿತರ್ಲೆಗಳು, ಮಂಡ್ಯದಗಂಡು, ವಾಯುಪುತ್ರ, ವಿಜಯಕಂಕಣ, ವೀರಪರಂಪರೆ, ಪ್ರೊಫೆಸರ್, ಶ್ರೀಕ್ಷೇತ್ರಆದಿಚುಂಚನಗಿರಿ, ಕಲ್ಯಾಣೋತ್ಸವ, ಡ್ರಾಮಾ, ಬೇಟೆಗಾರ, ವರದನಾಯಕ, ಬಾಳೊಂದುಚದುರಂಗ, ಅಂಬರೀಷ, ಕರುಳಿನಕುಡಿ, ಹ್ಯಾಪಿಬರ್ತಡೇ, ಆಪರೇಷನ್ ಅಂತ, ದೊಡ್ಮನೆಹುಡ್ಗ, ರಂಗೇನಹಳ್ಳಿಯಾಗೆ ರಂಗಾದರಂಗೇಗೌಡ, ರಾಜಾಸಿಂಹ, ಮೌನರಾಗ, ಅಂಬಿ ನಿಂಗ್ ವಯಸ್ಸಾಯ್ತೊ,  ಪಾಳೇಗಾರ, ಕುರುಕ್ಷೇತ್ರ/2019  ಬಾಳಿದಮನೆ,  ಪ್ರೊಡಕ್ಷನ್ ನಂ.1.

 

admin
the authoradmin

Leave a Reply

Translate to any language you want