ಗಣರಾಜ್ಯೋತ್ಸವದ ಸಂಭ್ರಮ… ಸ್ವಾತಂತ್ರ್ಯ ಭಾರತದ ಪ್ರಜಾಪ್ರಭುತ್ವದ ಇತಿಹಾಸ… ಅವತ್ತು ಆಗಿದ್ದೇನು?
ಮೊಟ್ಟಮೊದಲ ಪ್ರಧಾನಿ ಆಗ ಬಹುದಾಗಿತ್ತು, ಆದರೆ ಕಿಂಗ್‌ಮೇಕರ್ ಗಾಂಧಿ ಕಿಂಗ್ ಆಗಲೇ ಇಲ್ಲ...!

ನಾವು ಇವತ್ತು ಗಣರಾಜ್ಯೋತ್ಸವವನ್ನು ಹೆಮ್ಮೆಯಿಂದ, ಸಂಭ್ರಮದಿಂದ ಅದ್ಧೂರಿಯಾಗಿ ಆಚರಿಸುತ್ತಿದ್ದೇವೆ ಎಂದರೆ ಅದಕ್ಕೆ ಅವತ್ತು ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಪ್ರತಿಯೊಬ್ಬ ಹೋರಾಟಗಾರನಿಂದ ಆರಂಭವಾಗಿ ನಾಯಕರ ತನಕ ಎಲ್ಲರ ನಿಸ್ವಾರ್ಥತನವೇ ಕಾರಣವಾಗಿದೆ. ಆದರೆ ಸ್ವಾತಂತ್ರ್ಯ ಲಭಿಸಿದ ಬಳಿಕದ ಕೆಲವು ನಾಯಕರಲ್ಲಿನ ಸ್ವಾರ್ಥ ಇವತ್ತಿಗೂ ಮುಂದುವರೆದಿದೆ.. ಹೀಗಾಗಿಯೇ ಬೃಹತ್ ಪ್ರಜಾಪ್ರಭುತ್ವದ ರಾಷ್ಟ್ರ ಹಲವು ಸಮಸ್ಯೆಗಳನ್ನು ಹೊತ್ತುಕೊಂಡು ಮುನ್ನಡೆಯ ಬೇಕಾದ ಅನಿವಾರ್ಯತೆಯಲ್ಲಿದೆ.

ಪ್ರಜಾಪ್ರಭುತ್ವ ಭಾರತದ ಬಗ್ಗೆ ಮಾತನಾಡುವಾಗಲೆಲ್ಲ ಸ್ವತಂತ್ರ ಭಾರತದ ಮೊಟ್ಟಮೊದಲ ಪ್ರಧಾನಮಂತ್ರಿ ಆಗಬೇಕಾಗಿದ್ದವರು, ಡಾ.ಬಿ.ಆರ್.ಅಂಬೇಡ್ಕರ್, ಸರ್ದಾರ್‌ಪಟೇಲ್, ರಾಜೇಂದ್ರಪ್ರಸಾದ್ ಈ ಮೂವರಲ್ಲೊಬ್ಬರು.. ಉತ್ತಮ ಅರ್ಹರೂ ಅನುಭವಿ ಆಡಳಿತಗಾರರೂ ಆಗಿದ್ದ ಇಂಥ ಮಹನೀಯರಿಗೆ ಪ್ರಧಾನಿ ಗದ್ದುಗೆ ಲಭಿಸಲಿಲ್ಲ ಎಂಬ ಪ್ರಶ್ನೆಗಳು ಪ್ರಶ್ನೆಯಾಗಿಯೇ ಉಳಿದು ಬಿಡುತ್ತದೆ.. ಒಟ್ಟಾರೆ ಅವತ್ತಿನಿಂದ ಇವತ್ತಿನವರೆಗಿನ ಇತಿಹಾಸವನ್ನು ತೆರೆದಿಡುವ, ಹೋರಾಟವನ್ನು ನೆನಪಿಸುವ ಕೆಲಸವನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ತಮ್ಮ ಬರವಣಿಗೆಯ ಮೂಲಕ ಮಾಡಿದ್ದಾರೆ..

ಅಂದು ಪ್ರಥಮ ಪ್ರಧಾನಿ ಗದ್ದುಗೆ ಏರಲು ಹಾತೊರೆಯುತ್ತಿದ್ದವರು ನೆಹರು ಮತ್ತು ಮಹಮದಲಿ ಜಿನ್ನ. ತತ್ಪರಿಣಾಮ, ಸರ್ದಾರ್ ಪಟೇಲ್, ಬಾಬಾಸಾಹೇಬ್ ಬಿ.ಆರ್.ಅಂಬೇಡ್ಕರ್, ರಾಜೇಂದ್ರಪ್ರಸಾದ್, ಈ ಮೂವರು ಮಹನೀಯರು ಸ್ವಯಂ ಪ್ರೇರಿತರಾಗಿ ಪ್ರಧಾನಿ ಆಕಾಂಕ್ಷೆಯಿಂದ ಹಿಂದೆ ಸರಿದು ದೇಶಾಭಿಮಾನದ ತ್ಯಾಗಮೂರ್ತಿಗಳಾದರು! 1947ರಲ್ಲಿ ಇಂಗ್ಲೆಂಡಲ್ಲಿ ಜರುಗಿದ ಹಲವಾರು ಸುತ್ತಿನ ಸಭೆಯಲ್ಲೂ ಭಾರತ-ವಿಭಜನೆ ಸಮಸ್ಯೆ ಬಗೆಹರಿಯಲಿಲ್ಲ. ಹಠ ಬಿಡದ ಜಿನ್ನಾ ಪಾಕಿಸ್ತಾನ್ ಪ್ರತ್ಯೇಕ ವಿಭಜನೆ ಬೇಕೇಬೇಕು ಅಥವಾ ಪ್ರಧಾನಿ ಪದವಿ ನನಗೇ ಬೇಕು ಎಂಬ ಷರತ್ತನ್ನು ಗಾಂಧೀಜಿ ಮತ್ತು ಬ್ರಿಟಿಷ್ ಅಧಿಪತ್ಯದ ಮುಂದಿಟ್ಟಾಗ ಚರ್ಚೆಯು ಗಂಭೀರ ಸ್ವರೂಪ ತಾಳಿತು…

ಬ್ರಿಟಿಷ್ ದೊರೆ ಮತ್ತು ರಾಣಿ ಚಕ್ರಾಧಿಪತ್ಯವು ಗಾಂಧೀಜಿ ಮತ್ತು ಮಿತ್ರರಿಗೆ ಕಟ್ಟಾಜ್ಞೆ ಮಾಡಿ; ನೀವೆಲ್ಲರೂ ಒಮ್ಮತದ ನಿರ್ಧಾರಕ್ಕೆ ಬಂದ ನಂತರವೆ ಭಾರತವನ್ನು ಸ್ವತಂತ್ರ ಗೊಳಿಸುವ ಬ್ರಿಟಿಷ್ ಒಪ್ಪಂದವನ್ನು ಪೂರ್ಣ ಗೊಳಿಸಲಾಗುವುದು ಎಂಬ ವಾರ್ನಿಂಗ್ ನೀಡಿತು! ತೀರಾ ಹದಗೆಟ್ಟ ಆ ಸಂದಿಗ್ಧ ಸಂದರ್ಭದಲ್ಲಿ ಗಾಂಧೀಜಿಯು ಸಿಟ್ಟಿನಿಂದ: “ನೆಹರೂ ಬೇಡ, ಜಿನ್ನಾ ಬೇಡ, ಸರ್ದಾರ್ ಪಟೇಲ್ ಪ್ರಧಾನಿಯಾಗಲಿ” ಎಂದು ಗುಡುಗಿದರು. ಆಗ ಅಲ್ಲಿದ್ದ ಎಲ್ಲರೂ ಒಕ್ಕೊರಲಿಂದ ನಾವ್ಯಾರು ಬೇಡವೇ ಬೇಡ ನೀವೇ ಬೇಕಾದರೆ ಪ್ರಧಾನಿಯಾಗಿ ಎಂದು ಬಾಪೂಜೀಯನ್ನು ಒತ್ತಾಯ ಮಾಡಿದರು.
ಆಗ ಗಾಂಧೀಜಿ ಒಂದ್ಸಲ ತಮ್ಮ ಕತ್ತನ್ನು ಗೋಣಾಡಿಸಿದ್ದರೆ ಸಾಕಾಗಿತ್ತು? ಆತನೇ ದೇಶದ ಮೊಟ್ಟಮೊದಲ ಪ್ರಧಾನಿ ಆಗ ಬಹುದಾಗಿತ್ತು, ಆದರೆ ಕಿಂಗ್‌ಮೇಕರ್ ಗಾಂಧಿ ಕಿಂಗ್ ಆಗಲೇ ಇಲ್ಲ? ಅನಗತ್ಯವಾಗಿ ನೆಹರು ಮತ್ತು ಜಿನ್ನ ಸೃಷ್ಟಿಸಿದ ಕೆಟ್ಟಹಠದಿಂದ ದೇಶವು ವಿಭಜನೆಯಾದ ನಂತರವೇ ಸ್ವಾತಂತ್ರ್ಯದೊರಕಿತು ಎನ್ನುವುದು ಇತಿಹಾಸದ ಸತ್ಯ. ಆದರೆ ಸ್ವತಂತ್ರ ಭಾರತಕ್ಕೆ ನಿಜವಾದ ಸಮಸ್ಯೆ ಶುರುವಾಗಿದ್ದು, ಆ ನಂತರವೇ ಅವತ್ತು ಗೃಹಮಂತ್ರಿಯಾಗಿದ್ದ ಸರ್ದಾರ್ ಪಟೇಲ್ ಅವರ ದಿಟ್ಟ ನಿರ್ಧಾರ ಹಂಚಿ ಹೋಗಿದ್ದ ಪ್ರಾಂತ್ಯಗಳನ್ನು ಸೇರಿಸಿ ಅಖಂಡ ಭಾರತ ನಿರ್ಮಿಸುವಲ್ಲಿ ಸಹಕಾರಿಯಾಯಿತು ಎನ್ನುವುದನ್ನು ಮರೆಯುವಂತಿಲ್ಲ.

ಹಾಗೆನೋಡಿದರೆ ಸ್ವಾತಂತ್ರ್ಯಗೊಂಡ ಮೊದಲ ದಿನದಿಂದಲೆ ಭಾರತದೊಳಗೆ ನೂರಾರು ಸಮಸ್ಯೆಗಳಿದ್ದವು. ಆಪೈಕಿ ಮೊದಲನೇದು, ಹರಿದು ಹಂಚಿ ಹೋಗಿದ್ದ ಇಂಡಿಯವನ್ನು ಒಂದುಗೂಡಿಸುವ ಬೃಹತ್ ಕಾರ್ಯ. ಈ ನಿಟ್ಟಿನಲ್ಲಿ ದೇಶದ ಪ್ರಥಮ ಉಪಪ್ರಧಾನಿ ಹಾಗೂ ಗೃಹಮಂತ್ರಿ ಸರ್ದಾರ್ ಪಟೇಲ್ ಪ್ರಾರಂಭಿಸಿದ ಕ್ರಾಂತಿ ಕಾರ್ಯವೇ ಆಪರೇಶನ್ ಪೋಲೊ! ಪರಂಗಿಯವರನ್ನು ಗಾಂಧಿಗಿರಿಯಿಂದ ಗೆದ್ದಿದ್ದ ಗಾಂಧೀಜಿ ರಾಷ್ಟ್ರದ ಒಳಗಿನ ಪ್ರಾಂತ್ಯ-ರಾಜ್ಯ, ಭೂತುಕ್ಡ- ತುಂಡುಗಳನ್ನು ಒಂದುಗೂಡಿಸಲು ಅನಿವಾರ್ಯ ಆಗಿದ್ದ ಸಣ್ಣಪುಟ್ಟ ಪಾಳೇಗಾರ, ಸಾಮಂತ, ಮಹಾರಾಜ, ನವಾಬರ, ಮನವೊಲಿಸಲು ಸತ್ಯಾಗ್ರಹ ಕೈಗೊಳ್ಳುವಂತಾಯ್ತು.
ಆಜಾದ್ ನಂತರವೂ ದೇಶಾದ್ಯಂತ ದರ್ಬಾರ್ ನಡೆಸುತ್ತಿದ್ದ 25ಕ್ಕೂ ಹೆಚ್ಚು ದೊರೆಗಳ ಪೈಕಿ ಬಹುತೇಕರು ಸಹಕಾರ ನೀಡಲೊಪ್ಪಿದರು. ಆದರೆ ಹೈದ್ರಾಬಾದ್ ನಿಜಾಮ ಮತ್ತು ಪಾಂಡಿಚೇರಿ- ಗೋವ ಆಳುತ್ತಿದ್ದ ಫ್ರೆಂಚರು ತಮ್ಮ ಸರ್ವಾಧಿಕಾರದ ಉದ್ಧಟತನದಿಂದ ಅಂತರ್ ಯುದ್ಧಕ್ಕೂ ಸೈ ಎಂದು ಭಂಡಾಟದ ಅಸಹಕಾರ ತೋರಿದರು. ಇವರನ್ನೆಲ್ಲ ಬಗ್ಗುಬಡಿಯಲು ಗಾಂಧಿ-ನೆಹರು ತಿಣುಕಾಡ ಬೇಕಾಯ್ತು!

ಇಂಥ ಸಂಧಿಗ್ಧ ಪರಿಸ್ಥಿತಿಯಲ್ಲಿ ಗಾಂಧಿ-ನೆಹರು ಮಿತ್ರಮಂಡಲಿಗೆ ಆಪತ್ಭಾಂಧವರಾದ ಸರ್ದಾರ್ ಪಟೇಲ್ ತಮ್ಮದೇ ಆದ ದಾದಾಗಿರಿ ಅಸ್ತ್ರದಿಂದ ಒಳಶತ್ರುಗಳ ಹೆಡೆಮುರಿ ಕಟ್ಟಿ ದೇಶವನ್ನು ಒಂದೇ ಅಸ್ಮಿತೆ ಆಗಿಸಲು ಹಗಲು ರಾತ್ರಿ ಶ್ರಮಪಟ್ಟು ಯಶಸ್ವಿಯೂ ಆದರು. ಗಾಂಧಿ-ನೆಹರು ಆದಿಯಾಗಿ ಪ್ರತಿಯೊಬ್ಬರು ಪಟೇಲರನ್ನು ಉಕ್ಕಿನ ಮನುಷ್ಯ ಎಂದು ಕೊಂಡಾಡಿದರು! 1947ರಲ್ಲಿ ಭಾರತದ ಪ್ರಥಮ ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್ ಅಧ್ಯಕ್ಷತೆಯಲ್ಲಿ ಕಾನೂನು ಸಚಿವರಾಗಿದ್ದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ನೇತೃತ್ವದಲ್ಲಿ ಸಂವಿಧಾನ ಸಮಿತಿ ರಚಿಸಲಾಯಿತು.
ಸಂವಿಧಾನದ ರಚನೆಗೂ, ಗಣರಾಜ್ಯ ಸ್ಥಾಪನೆಗೂ ಮುನ್ನ ಭಾರತ ಒಂದೇ ದೇಶವಾಗಿ ರೂಪುಗೊಳ್ಳಬೇಕಿತ್ತು. ಸಂವಿಧಾನದ ಬರವಣಿಗೆ ಮುಗಿಯುವ ಅವಧಿಯೊಳಗೆ ಸಮಗ್ರ ಭಾರತದ ನಿರ್ಮಾಣ ಅಗತ್ಯವಾಗಿತ್ತು? ಆದ್ದರಿಂದ ಸರ್ದಾರ್ ಪಟೇಲ್ 16.8.1947ರಿಂದಲೇ ದೇಶದ್ರೋಹಿ ಮತ್ತು ಆಂತರ್ದೇಶಿ ಶತ್ರುಗಳ ವಿರುದ್ಧ ಯುದ್ಧಕ್ಕೆ ನಾಂದಿ ಹಾಡಿ ಪ್ರಚಂಡ ಗೆಲುವು ಸಾಧಿಸಿದರು! ಈ ಐತಿಹಾಸಿಕ ಕಾರಣಕ್ಕೆ ಬಾಬಾಸಾಹೇಬರಿಗೂ ಮತ್ತು ಸರ್ದಾರ್ ಪಟೇಲರಿಗೂ ಪ್ರತಿಯೊಬ್ಬ ಭಾರತೀಯನೂ ಪ್ರತಿಘಳಿಗೆ ಕೃತಜ್ಞತೆ ಸಲ್ಲಿಸಬೇಕಾದ್ದು ನಮ್ಮ ಕರ್ತವ್ಯ.

ಭಾರತದ ಸಂವಿಧಾನ ರಚನೆಯು 26.11.1949ರಂದು ಸಿದ್ಧಗೊಂಡು ಸಂವಿಧಾನ ಸಮಿತಿ, ಮಂತ್ರಿಮಂಡಲ ಹಾಗೂ ರಾಷ್ಟ್ರಪತಿಗಳ ಅನುಮೋದನೆ ಪಡೆಯಿತು. 26.1.1950ರಿಂದ ಜಾರಿಗೆ ಬಂದು ಇದೇ ದಿನ ದೇಶದ ಚೊಚ್ಚಲ ಗಣರಾಜ್ಯೋತ್ಸವ ಆಚರಣೆ ಪ್ರಾರಂಭಿಸಲಾಯ್ತು. ಆಗ ದೇಶದಲ್ಲಿ ಒಟ್ಟು 14 ರಾಜ್ಯ ಮತ್ತು 6 ಕೇಂದ್ರಾಡಳಿತ ಪ್ರದೇಶ ಅಸ್ತಿತ್ವಕ್ಕೆ ಬಂದವು! ಒಂದು ವೇಳೆ ಸರ್ದಾರ್‌ಪಟೇಲ್ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅಂದು ಮನಸ್ಸು ಮಾಡದಿದ್ದರೆ ಇಂದಿನ ಅಖಂಡ ಭಾರತ, ಶ್ರೇಷ್ಠ ಸಂವಿಧಾನ, ಇವೆರಡನ್ನೂ ಕಾಣಲು ಸಾಧ್ಯವಾಗುತ್ತಿರಲಿಲ್ಲ?! (ONE United India, ONE Constitution, ONE Republic) ಒಂದೇ ದೇಶ, ಒಂದೇ ಸಂವಿಧಾನ, ಒಂದೇ ಗಣರಾಜ್ಯ, ಕನಸಾಗೆ ಉಳಿಯುತ್ತಿತ್ತು? ಪ್ರತಿದಿನ ಕಚ್ಚಾಟ ಕಾದಾಟ ಸಾಮಾನ್ಯಆಗಿ ಗಳಿಸಿದ್ದ ಸ್ವತಂತ್ರ ಕಳೆದು ಕೊಂಡು ಮತ್ತೆ ಪರಕೀಯರ ಆಡಳಿತದಾಸ್ಯಕ್ಕೆ ಒಳಗಾಗುವ ದುಸ್ಥಿತಿ ತಲುಪುತ್ತಿತ್ತೇನೋ..?!
ಇವತ್ತಿನ ಅದೆಷ್ಟು ರಾಜಕಾರಣಿಗಳು ಅಂದಿನ ನೇತಾರರ ತ್ಯಾಗ ಬಲಿದಾನದ ಇತಿಹಾಸ ನೆನಪಿಸಿಕೊಳ್ಳುತ್ತಾರೆ? ಕೇವಲ ಜಾತಿ-ಮತ, ನೆಲ-ಜಲ, ಭಾಷೆ-ಸಿನಿಮ, ವೋಟ್ ಬ್ಯಾಂಕ್, ಮುಂತಾದ ಕ್ಷುಲ್ಲಕ ಕಾರಣಕ್ಕೆ ಅಧಿಕಾರದ ಕುರ್ಚಿಗೆ ರಕ್ತದೋಕುಳಿ ಆಡು[ಆಡಿಸು]ತ್ತಾರೆ? ಇನ್ನಾದರೂ ಇಂದಿನ ಪ್ರಭುಗಳು-ಪ್ರಜೆಗಳು ಡಾಂಭಿಕ-ಯಾಂತ್ರಿಕ ಆಚರಣೆ ಕೈಬಿಟ್ಟು ಚರಿತ್ರೆಯನ್ನು ಪೂರ್ಣ ಓದಿ ಸರಿಯಾಗಿ ತಿಳಿದುಕೊಂಡು ಗಣರಾಜ್ಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರೆ ಮಾತ್ರ ಸಾರ್ಥಕ…! ಬನ್ನಿರಿ ಎಲ್ಲರೂ ಇದೇ 26.1.2026ರಂದು ಭಾರತದ 77ನೇ ಗಣರಾಜ್ಯ ದಿನಾಚರಣೆಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸೋಣ.









ಧನ್ಯವಾದಗಳು ಲವ ಸರ್
77th REPUBLIC DAY(2026) of India 🇮🇳 ♥ written by NATRAJ 👏 is the best way of presenting the history before today’s youth group and tomorrow’s generations 😀. Thanksgiving useful article 👍. Hearty congratulations to you Mr NATRAJ 👏 NARASIMHA MURTHY, 88 years old retired PROFESSOR & HEAD, DEPT. OF INDOLOGY (ANCIENT HISTORY AND ARCHAEOLOGY), UOM, MGM
77th REPUBLIC DAY(2026) of India 🇮🇳 ♥ news article written by NATRAJ 👏 is the best way of presenting the history before our youth group and today’s younger generations 😀.Very much useful and Thanksgiving article 👍. Hearty congratulations to Mr NATRAJ 👏 NARASIMHA MURTHY, 88 years old retired PROFESSOR & HEAD, DEPT. OF INDOLOGY (ANCIENT HISTORY AND ARCHAEOLOGY), UOM, MGM
26.o1.2026 ರಂದು ಜರುಗಲಿರುವ ನಮ್ಮ ಭಾರತ ದೇಶದ 77ನೇ ಗಣರಾಜ್ಯೋತ್ಸವ ಬಗ್ಗೆ ಕುಮಾರಕವಿಯವರ ನಟರಾಜರವರ ಲೇಖನ ಓದಿ ನನಗಂತೂ ಬಹಳ ಸಂತೋಷವಾಯಿತು. ಇತ್ತೀಚೆಗಿನ ನಾನು ಓದಿದ ಲೇಖನಗಳಲ್ಲೆ ಅತಿ ಉತ್ತಮ ಲೇಖನ ಇದು ಎಂದರೆ ಉತ್ಪ್ರೇಕ್ಷೆ ಅಲ್ಲವೇಅಲ್ಲ.
ಬರೆದ ಮಹನೀಯರಿಗೆ ಮತ್ತು ಜನಮನ ಪತ್ರಿಕೆಯವರಿಗೆ ಮನದಾಳದ ಧನ್ಯವಾದಗಳು. ನಂಜಪ್ಪ, ಅನುಭವ ನಗರ, ಮೂಡಲಪಾಳ್ಯ ಬೆಂಗಳೂರು
26.o1.2026 ರಂದು ಜರುಗಲಿರುವ ನಮ್ಮ ಭಾರತ ದೇಶದ 77ನೇ ಗಣರಾಜ್ಯೋತ್ಸವ ಬಗ್ಗೆ ಕುಮಾರಕವಿಯವರ ನಟರಾಜರವರ ಲೇಖನ ಓದಿ ನನಗಂತೂ ಬಹಳ ಸಂತೋಷವಾಯಿತು. ಇತ್ತೀಚೆಗಿನ ನಾನು ಓದಿದ ಲೇಖನಗಳಲ್ಲೆ ಅತಿ ಉತ್ತಮ ಲೇಖನ ಇದು ಎಂದರೆ ಉತ್ಪ್ರೇಕ್ಷೆ ಅಲ್ಲವೇಅಲ್ಲ. ಈ ಭರ್ಜರಿ ಪ್ರಯೋಜನಪೂರ್ಣ ಮಾಹಿತಿ ಬರೆದ ಮಹನೀಯರಿಗೆ ಮತ್ತು ಜನಮನ ಪತ್ರಿಕೆಯವರಿಗೆ ಮನದಾಳದ ಧನ್ಯವಾದಗಳು. ನಂಜಪ್ಪ, ಅನುಭವ ನಗರ, ಮೂಡಲಪಾಳ್ಯ ಬೆಂಗಳೂರು
my dear NATARAJ, 77th REPUBLIC DAY Article is very nice and impressive 👏. Please continue to write forever……, good luck and best wishes.
Dr.KC.BELLIYAPPA, rtd. Professor of English, UOM, MGM
my dear NATARAJ, 77th REPUBLIC DAY Article is very nice and impressive 👏. Please continue to write forever……, good luck and best wishes.Dr.KC.BELLIYAPPA, rtd.Professor of English, University of Mysore, Manasagangotri Mysore
my dear NATARAJ, 77th REPUBLIC DAY Article is very nice and impressive 👏. Please continue to write forever……, good luck and best wishes. Dr.KC.BELLIYAPPA, rtd.Professor of English, University of Mysore, Manasagangotri Mysore
ಇತ್ತೀಚೆಗೆ ನಾನು ಮತ್ತು ನನ್ನ ಮಡದಿ ಇಬ್ಬರೂ ಇಷ್ಟಪಟ್ಟ ಕೆಲವೇ ಕೆಲವು ಲೇಖನಗಳಲ್ಲಿ ಇದೂ ಸಹ ಒಂದು ಎಂಬ ವಿಷಯವನ್ನು ಹೆಮ್ಮೆಯಿಂದ ತಿಳಿಸಲು ಇಚ್ಛಿಸುತ್ತೇನೆ. ಪ್ರೊ.ಬಾಲಸುಬ್ರಹ್ಮಣ್ಯಂ, ಕರಾಮುವಿ. ಮೈಸೂರು.
ಲೇಖಕ ಕುಮಾರಕವಿಯವರಿಗೆ ಹಾಗೂ ಪ್ರಕಟಿಸಿದ ಜನಮನ ಪತ್ರಿಕೆಯವರಿಗೆ ಧನ್ಯವಾದಗಳು.
ಇತ್ತೀಚೆಗೆ ನಾನು ಮತ್ತು ನನ್ನ ಮಡದಿ ಇಬ್ಬರೂ ಇಷ್ಟಪಟ್ಟ ಕೆಲವೇ ಕೆಲವು ಲೇಖನಗಳಲ್ಲಿ 77ನೇ ಗಣರಾಜ್ಯೋತ್ಸವದ ಈ ಲೇಖನವೂ ಸಹ ಒಂದು, ಎಂಬ ವಿಷಯವನ್ನು ಹೆಮ್ಮೆಯಿಂದ ತಿಳಿಸಲು ಇಚ್ಛಿಸುತ್ತೇವೆ. ಪ್ರೊ.ಬಾಲಸುಬ್ರಹ್ಮಣ್ಯಂ, ಕರಾಮುವಿ. ಮೈಸೂರು. ಹೀಗಾಗಿ, ಇದರ ಲೇಖಕ ಕುಮಾರಕವಿಯವರಿಗೆ ಹಾಗೂ ಇದನ್ನು ಪ್ರಕಟಿಸಿದ ಜನಮನ ಪತ್ರಿಕೆಯವರಿಗೆ ಧನ್ಯವಾದಗಳು.
ಎಂದಿನಂತೆ ಕುಮಾರಕವಿಯವರು ಬರೆದಿರುವ ನಮ್ಮ ಭಾರತ ದೇಶದ 77ನೇ ಗಣರಾಜ್ಯೋತ್ಸವ ಲೇಖನವು ಸೂಪರ್……
ಎಂದಿನಂತೆ ಕುಮಾರಕವಿಯವರು ಬರೆದಿರುವ ನಮ್ಮ ಭಾರತ ದೇಶದ 77ನೇ ಗಣರಾಜ್ಯೋತ್ಸವ ಲೇಖನವು ಸೂಪರ್……ಧನ್ಯವಾದ ನಮಸ್ಕಾರ
ನಮ್ಮ ದೇಶದ 77ನೇ ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ನಟರಾಜ ಕವಿಯವರ ಲೇಖನ ಅರ್ಥಪೂರ್ಣ ಹಾಗೂ ಉಪಯುಕ್ತ, ಧನ್ಯವಾದ
ನಮ್ಮ ದೇಶದ 77ನೇ ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ನಟರಾಜ ಕವಿಯವರ ಲೇಖನ ಅರ್ಥಪೂರ್ಣ ಹಾಗೂ ಉಪಯುಕ್ತ,ಧನ್ಯವಾದಗಳು ಸರ್
77th REPUBLIC DAY Article by NATRAJ sir 🙏 is superb and informative, thank you very much sir
77th REPUBLIC DAY Article by NATRAJ sir 🙏 is superb and informative, thank you very much sir ಗಣರಾಜ್ಯೋತ್ಸವ ಲೇಖನ ತುಂಬ ಚೆನ್ನಾಗಿದೆ, ಪೃಥ್ವಿ, ಶಿರ್ಕೆ, ಬೆಂಗಳೂರು
ಕುಮಾರಕವಿಯವರ ಮಹಾನ್ ಕೊಡುಗೆಯ ಲೇಖನ ನಮ್ಮ ಭಾರತ ದೇಶದ ಗಣರಾಜ್ಯೋತ್ಸವ ಲೇಖನ. ದೇವರು ಇವರಿಗೆ ಆಯುಷ್ಯ ಆರೋಗ್ಯ ಸುಖ ಸಂತೋಷ ಹೆಚ್ಚಾಗಿ ದಯಪಾಲಿಸಲಿ ಎಂದು ಹಾರೈಸೋಣ.
ಶ್ರೀಕಂಠಯ್ಯ, ನಿವೃತ್ತ ಬೆಂಚ್ ಕ್ಲಾರ್ಕ್, ಕರ್ನಾಟಕ ಸರ್ಕಾರ ನ್ಯಾಯಾಲಯ ಇಲಾಖೆ, ಬೆಂಗಳೂರು.