LatestSports

ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ಸಾಮ್ರಾಜ್ಯದ ಚಕ್ರವರ್ತಿ ವಿರಾಟ್ ಕೊಹ್ಲಿ ರವರ 18 ವರ್ಷದ ವನವಾಸ ಅಂತ್ಯ..

2008ರಲ್ಲಿ ಬಿ.ಸಿ.ಸಿ.ಐ. ಅನುಮತಿ ಪಡೆದು ಐಪಿಎಲ್ ಕ್ರಿಕೆಟ್ ಟೂರ್ನಿ ಪ್ರಾರಂಭ. ಯುನೈಟೆಡ್ ಬ್ರೆವರೀಸ್ ಕಂಪನಿ ವಿಜಯ್ ಮಲ್ಯ ಒಡೆತನದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಸ್ತಿತ್ವಕ್ಕೆ ಬಂದಾಗಿನಿಂದ ಇದರ ಬ್ರಾಂಡ್ ಅಂಬಾಸಿಡರ್ ಆದವರು: ಕತ್ರಿನಾಕೇಫ್, ದೀಪಿಕಾಪಡುಕೋಣೆ, ರಮ್ಯ, (ಅಪ್ಪು) ಪುನೀತ್ ರಾಜಕುಮಾರ್, ಶಿವರಾಜಕುಮಾರ್, ಉಪೇಂದ್ರ, ಗಣೇಶ್. 2008ಚೊಚ್ಚಲ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಆರ್.ಸಿ.ಬಿ. ತಂಡ ಸಿಎಸ್ ಕೆ ವಿರುದ್ಧ ಸುಲಭಜಯ ಸಾಧಿಸಿದರೂ ಟೂರ್ನಮೆಂಟ್ ಮುಕ್ತಾಯದ ವೇಳೆಗೆ 7ನೇ ಸ್ಥಾನಕ್ಕೇ ತೃಪ್ತಿ ಪಡಬೇಕಾಯಿತು.

2009ರಲ್ಲಿ ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ಫೈನಲ್ ತಲುಪಿದರೂ ಕೈಗೆ ಬಂದ ಕಪ್ ಬೆಂಗಳೂರಿಗೆ ಬರಲಿಲ್ಲ. ಇಲ್ಲಿಂದ ಶುರುವಾಯ್ತು ಆರ್ ಸಿಬಿ ವಿರುದ್ಧ ಷಡ್ಯಂತ್ರ. ಏಕೆಂದರೆ ಮ್ಯಾಚ್ ಫಿಕ್ಸಿಂಗ್ ಒಪ್ಪದ ಮತ್ತು ಎಲ್ಲ ತಂಡಕ್ಕಿಂತ ಬಲಿಷ್ಠವಾದ ಪ್ರಾಮಾಣಿಕ ತಂಡವಾದ್ದರಿಂದ! ಯಾವಾಗಲೋ ಐಪಿಎಲ್ ಕಪ್ ಗೆಲ್ಲಬೇಕಾಗಿದ್ದ ಮತ್ತು ಹ್ಯಾಟ್ರಿಕ್ ಕಪ್ ಗೆಲ್ಲುವಂಥ ಶಕ್ತಿಯುಳ್ಳ ಆರ್.ಸಿ.ಬಿ.ತಂಡದ ಅತಿರಥ-ಮಹಾರಥರು.

ಅನಿಲ್ ಕುಂಬ್ಳೆ(ಕ್ಯಾ), ರಾಹುಲ್ ದ್ರಾವಿಡ್(ಕ್ಯಾ), ವಿನಯ್ ಕುಮಾರ್, ಭುವನೇಶ್ವರಕುಮಾರ್, ಯುವರಾಜ್ ಸಿಂಗ್, ಜಹೀರ್ಖಾನ್, ಮಹಮದ್ ಕೈಫ್, ಮಿಸ್ಬಾಉಲ್ ಹಖ್, ಮಯಾಂಕ್ ಅಗರ್ವಾಲ್, ಸುನಿಲ್ ಜೋಶಿ, ರಾಬಿನ್ ಉತ್ತಪ್ಪ, ಕೆ.ಎಲ್.ರಾಹುಲ್, ದೇವದತ್ ಪಡಿಕ್ಕಲ್, ಸೌರಬ್ ತಿವಾರಿ, ಚೇತೇಶ್ವರ್ ಪೂಜಾರ, ಆರ್.ಪಿ.ಸಿಂಗ್, ತಿಲಕರತ್ನೆ ದಿಲ್ಷನ್,ಜಾಕ್ ಕಾಲಿಸ್, ಮಾರ್ಕ್ ಬೂಚರ್,  ಡೇಲ್ ಸ್ಟೇನ್, ಕ್ಯಾಮರನ್ ವೈಟ್, ರಾಸ್ ಟೇಲರ್, ಕೆವಿನ್ ಪೀಟರ್ಸನ್, ಕ್ರಿಸ್ ಗೇಲ್, ಎ.ಬಿ.ಡಿವಿಲಿಯರ್ಸ್, ಶೇನ್ ವಾಟ್ಸನ್, ಡೇನಿಯಲ್ ವೆಟ್ಟೋರಿ, ಮಿಚೆಲ್ ಸ್ಟಾರ್ಕ್, ಮುಂತಾದ ದಿಗ್ಗಜರು.

17 ವರ್ಷದಲ್ಲಿ ಆರ್ ಸಿಬಿ 3 ಬಾರಿ ಫೈನಲ್ ತಲುಪಿದರೂ ರನ್ನರ್ ಅಪ್ ತಂಡ ಆಗಿಯೇ ಉಳಿಯಬೇಕಾಯ್ತು. 4 ಬಾರಿ ಫೈನಲ್ ಗೆ ಕೊಂಡೊಯ್ದ ಬೆಸ್ಟ್ ಕ್ಯಾಪ್ಟನ್: ಅನಿಲ್ ಕುಂಬ್ಳೆ(2009), ಡೇನಿಯಲ್ ವೆಟ್ಟೊರಿ(2011), ವಿರಾಟ್ ಕೊಹ್ಲಿ(2016)ಹಾಗೂ ರಜತ್ ಪಟೀದಾರ್(2025). ಆರ್ಸಿಬಿ ತಂಡ 2010, 2015, 2022ರಲ್ಲಿ ಮೂರನೇ ಸ್ಥಾನ ಪಡೆವಲ್ಲಿ ಯಶಸ್ವಿಯಾದರೂ 2020, 2021, 2024ರಲ್ಲಿ 4ನೇ ಸ್ಥಾನ, 2012, 2013ರಲ್ಲಿ 5ನೇ ಸ್ಥಾನ, 2008, 2014ರಲ್ಲಿ 7ನೇ ಸ್ಥಾನವನ್ನೂ, 2017, 2019ರಲ್ಲಿ 8ನೇ ಸ್ಥಾನವನ್ನೂ ಗಳಿಸಲಷ್ಟೇ ಸಾಧ್ಯವಾಯ್ತು! ಏಕೆ…?

ಮ್ಯಾಚ್ ಫಿಕ್ಸಿಂಗ್ ಪೆಡಂಭೂತ ಮತ್ತು ಗ್ಯಾಂಬ್ಲಿಂಗ್ ಗುಮ್ಮಾ ಇದ್ದಾನೆ ಎಂಬುದಕ್ಕೆ ಜ್ವಲಂತ ಸಾಕ್ಷಿ-ಪುರಾವೆ ಸಹಿತ, ಕೆಲವು ಕಳ್ಳಮಳ್ಳರ ಸುಳ್ಳುಕಪಟ ಭಂಡತನ ಮೊಂಡತನ, ಬೆಟ್ಟಿಂಗ್ ದಂಧೆ, ಕಪ್ಪುಹಣ, ಇತ್ಯಾದಿ ರುಜುವಾತು ಪಡಿಸುವಂಥ ಗುರುನಾಥ್ ಮೇಯಪ್ಪನ್ ಸೇರಿದಂತೆ ಅನೇಕರ (ಅ)ನೇರ ಜೂಜಾಟ ಬಹಿರಂಗವಾಯ್ತು. ತತ್ಪರಿಣಾಮ ಸಿಎಸ್ ಕೆ 2 ವರ್ಷ ಬ್ಯಾನ್ ತಂಡವಾಗಿ ತೆರೆಮರೆ ಸೇರಿದ್ದು ಜಗಜ್ಜಾಹೀರಾಯ್ತು. ಪ್ರಪಂಚದಾದ್ಯಂತ ಪ್ರತಿಯೊಬ್ಬ ಕ್ರಿಕಟ್ ಪ್ರೇಮಿಗೂ, ಐಪಿಎಲ್ ಅಭಿಮಾನಿಗೂ ಶಂಕೆ ಶುರುವಾಗಿ, ಟೂರ್ನಿಯ ಮತ್ತು ಆಟಗಾರರ ಬಗ್ಗೆ ಗೌರವ ಮತ್ತು ಆಸಕ್ತಿ ಕಡಿಮೆಯಾಯಿತು. ಇದಕ್ಕೆ ಕಾರಣ: ಒಂದೇ ಟೀಮ್ ಐದೈದು ಬಾರಿ ಗೆದ್ದಿದ್ದಾದ್ರೂ ಹೇಗೆ? ಅಥವಾ ಗೆಲ್ಲಬೇಕಾದ್ದು ಹೀಗೆಯೇ? ಎಂಬ ಅನುಮಾನ ಕಾಡಿತು! ಏಕೆಂದರೆ…..

ಚಾಂಪಿಯನ್ ಪಟ್ಟಕ್ಕೇರಿದ ಅದೃಷ್ಟವಂತ ಟೀಂ: # ಮುಂಬೈ ಇಂಡಿಯನ್ಸ್ 5 ಬಾರಿ  (2013, 2015, 2017, 2019, 2020),

# ಚೆನ್ನೈ ಸೂಪರ್ ಕಿಂಗ್ಸ್ 5 ಬಾರಿ (2010, 2011, 2018, 2021, 2023), # ಕೋಲ್ಕತ್ತ ನೈಟ್ ರೈಡರ್ಸ್ 3 ಬಾರಿ (2012, 2014,2024) ಆದರೆ….. ಅದೃಷ್ಟವಿಲ್ಲದೆ ಪ್ರತಿಭಾವಂತರಿಂದ ಗೆದ್ದ ಟೀಮ್: ಆರ್.ಸಿ.ಬಿ.-2025, ಜಿ.ಟಿ.-2022, ಎಸ್.ಆರ್.ಹೆಚ್.2016, ಡೆಕ್ಕನ್ ಚಾರ್ಜರ್ಸ್-2009, ಆರ್.ಆರ್.-2008

ಕಪ್ ನಮ್ದೇ ಆಗಿದ್ದು ಹೇಗೇ?!   ಮ್ಯಾಜಿಕ್ ನಂಬರ್ ನಂಟು ಇತ್ತಾ?

ಮ್ಯಾಜಿಕ್ ನಂಬರ್ 18ನಂಟು:  18ನೇ ಐಪಿಎಲ್ ಟೂರ್ನಿಯ ಕಪ್ ಗೆದ್ದ ಫೈನಲ್ ಮ್ಯಾಚ್ ನಡೆದ ದಿನಾಂಕ 3.6.2025 (3+6+2+0+2+5=)18, *ವಿರಾಟಕೊಹ್ಲಿಯವರ ಜರ್ಸಿನಂಬರ್-18, ಸತತ 17 ವರ್ಷದಿಂದಲೂ ಒಂದೇತಂಡದಲ್ಲಿ ಕಿಂಗ್ ಕೊಹ್ಲಿ ಆಡಿದ ಟೂರ್ನಿ-18, ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿ ಗಳಿಸಿದ ಒಟ್ಟು ಬ್ಯಾಟಿಂಗ್ ರನ್ಸ್ 657(6+5+7=)18, ಒಟ್ಟಾರೆ ಆಡಿದ ಆಟಗಾರರ ಸಂಖ್ಯೆ-18,  ಒಟ್ಟಾರೆ 9 ಆಟಗಾರರು ಎರಡೆರಡು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ (9×2=)18, ಒಟ್ಟಾರೆ ಗೆದ್ದಿರುವ ಪಂದ್ಯ 63(6×3=)18, ಒಟ್ಟಾರೆ ಗಳಿಸಿರುವ 6000ರನ್ ಪೈಕಿ 63 ಅರ್ಧಶತಕ 1ಸಲ ಮುಕ್ಕಾಲುಶತಕ 8ಸೆಂಚುರಿ   (6+3+1+8=)18,  ಬೆಂಗಳೂರಿನ ಅತ್ತೆಮನೆಗೆ ಭೇಟಿ=18 ಬಾರಿ

ಅಂತಿಮ(ಫೈನಲ್)ಪಂದ್ಯದ ಸಂಕ್ಷಿಪ್ತವಿವರ: ಗುಜರಾತಿನ ಅಹಮದಾಬಾದಿನ ಪ್ರಪಂಚದ ಅತಿ ದೊಡ್ಡದಾದ (ಕ್ರಿಕೆಟ್ ಸ್ಟೇಡಿಯಂ) ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 2025 ನೇ ಇಸವಿಯ ಜೂನ್ 3ನೇ ತಾರೀಖು ಮಂಗಳವಾರ ಸಂಜೆ 7.56 ಕ್ಕೆ ಪ್ರಾರಂಭ ಐಪಿಎಲ್ 20-20(T.20) 18ನೇ ಆವೃತ್ತಿಯ ಕ್ರಿಕೆಟ್ ಮ್ಯಾಚ್ ಫೈನಲ್ಸ್ (ಅಂತಿಮ ಹಣಾಹಣಿಯ ಪಂದ್ಯ). ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್.ಸಿ.ಬಿ.ತಂಡ 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿ, ಎದುರಾಳಿ ತಂಡ ಗೆಲ್ಲಲು ನೀಡಿದ ಟಾರ್ಗೆಟ್ 191. ಆದರೆ ಪಂಜಾಬ್ ಕಿಂಗ್ಸ್ 7 ವಿಕೆಟ್ ನಷ್ಟಕ್ಕೆ 184 ರನ್ ಮಾತ್ರ ಗಳಿಸಿದ ಕಾರಣ ಆರ್.ಸಿ.ಬಿ.ತಂಡವು ಕೇವಲ 6 ರನ್ ಗಳ ರೋಮಾಂಚಕ ಗೆಲುವಿಂದ ಹೊಸ ಇತಿಹಾಸ ಬರೆದು ನೂತನ ದಾಖಲೆ ಸೃಷ್ಟಿಸಿತು.

ಸ್ಕೋರ್ ವಿವರ: ರಾಯಲ್ ಚಾಲೆಂಜರ್ಸ್ ಬೆಂಗಳೂರು

ಫಿಲ್ ಸಾಲ್ಟ್=16, ವಿರಾಟ್ ಕೊಹ್ಲಿ=43, ಮಯಾಂಕ್ ಅಗರ್ವಾಲ್=24, ರಜತ್ ಪಟೀದಾರ್ =26, ಲಿವಿಂಗ್ ಸ್ಟೋನ್ 25, ಜಿತೇಶ್ ಶರ್ಮ =24, ಶೆಫರ್ಡ್=17, ಕೃನಾಲ್=4, ಭುವನೇಶ್ವರ್=1, ಹ್ಯಸಲ್ವುಡ್=1, ಎಕ್ಸ್ಟ್ರಾ=9 ಒಟ್ಟು190ರನ್

ನಂತರ ಪಂಜಾಬ್ ಕಿಂಗ್ಸ್

ಪ್ರಿಯಾಂಶ್=24, ಪ್ರಭ್ ಸಿಮ್ರನ್=26, ಇಂಗ್ಲಿಸ್=39, ಶ್ರೇಯಸ್ಅಯ್ಯರ್=1, ವಧೇರ =15, ಶಶಾಂಕ್=61, ಸ್ಟೋಯಿನಸ್=6, ಒಮರ್ಜಾಯಿ=1,ಎಕ್ಸ್ಟ್ರ=11 ಒಟ್ಟು 184 ರನ್  ಫಲಿತಾಂಶ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್.ಸಿ.ಬಿ.)ತಂಡವು ಅರ್ಹ 6 ರನ್ಗಳ ರೋಮಾಂಚಕ ಗೆಲುವಿನ ಹಬ್ಬ ಆಚರಿಸಿತು. ವಿರಾಟಕೊಹ್ಲಿಯವರ ಕಣ್ಣಿನಲ್ಲಿ ಆನಂದಬಾಷ್ಪ ಹರಿಯಿತು. ಹಬ್ಬದಾಚರಣೆ ಹೀಗಿತ್ತು: ಪ್ರಪಂಚದಾದ್ಯಂತ ವೀಕ್ಷಿಸುತ್ತಿದ್ದ ಆರ್.ಸಿ.ಬಿ. ಅಭಿಮಾನಿಗಳು, ಪಟಾಕಿ ಬಾಣಬಿರುಸು ಅಬ್ಬರದ ಕೂಗಾಟ ಕಿರುಚಾಟ ಬ್ಯಾಂಡ್ ಭಜಂತ್ರಿ ಮುಂತಾದವುಗಳಿಂದ ಕುಣಿದು ಕುಪ್ಪಳಿಸಿ ನಲಿದು ನರ್ತಿಸಿ ಕೇಕೆ ಹಾಕುತ್ತ ಬೃಹತ್ ಹಬ್ಬ ಆಚರಿಸಿದರು.

ಕಪ್ ನಮ್ದೇ ಆಗಿದ್ದು ಹೇಗೇ..? ಇದು ಬಲು ರೋಚಕ

 ಸತ್ಯಮೇವ ಜಯತೇ: ಮ್ಯಾಚ್ ಫಿಕ್ಸಿಂಗ್ ಭೂತದ ಹಿಡಿತದಿಂದ ತಪ್ಪಿಸಿಕೊಂಡ ಆರ್.ಸಿ.ಬಿ.ತಂಡ ಅರ್ಹತೆಯಿಂದ ಪಂಜಾಬ್ ಕಿಂಗ್ಸ್ ವಿರುದ್ಧ  ಫೈನಲ್ಸ್ ಗೆದ್ದು ಚಿನ್ನದ ಕಪ್ ಜತೆಗೆ 20 ಕೋಟಿ ರೂಪಾಯಿಯ ನಗದು ಬಹುಮಾನ ಗಳಿಸಿತು. ತನ್ಮೂಲಕ ತನ್ನಲ್ಲಿದ್ದ ನೈಜಪ್ರತಿಭೆಯನ್ನ ಕ್ರಿಕೆಟ್  ಜಗತ್ತಿಗೆ ತೋರ್ಪಡಿಸಿ, ತನ್ನೊಳಗಿನ ನಿತ್ಯಸತ್ಯ ಯೋಗ್ಯತೆಯನ್ನೂ ಸಾಬೀತುಪಡಿಸಿತು.

ಕೊಹ್ಲಿ ಈ ಜನ್ಮದಲ್ಲಿ ಕಪ್ ಗೆಲ್ಲಲ್ಲ, ಆರ್.ಸಿ.ಬಿ.ತಂಡ  ಕಲಿಯುಗದಲ್ಲಂತು ಚಾಂಪಿಯನ್ಸ್ ಆಗೋಲ್ಲ” ಎಂದೆಲ್ಲಾ ಹೀಯಾಳಿಸುತ್ತ ಕ್ರೀಡಾ ರಾಜಕೀಯ ಮಾಡಿ ಒಳಗೊಳಗೇ ಬತ್ತಿ ಇಟ್ಟವರಿಗೆ, ಜೂಜು ಕೋರ ಬೆಟ್ಟಿಂಗ್ ದೆವ್ವಗಳಿಗೆ, ಬಾಯಿ (ನವರಂಧ್ರಗಳನ್ನೂ) ಮುಚ್ಚಿಕೊಳ್ವಂತೆ ತನ್ನ ರಿಯಲ್ ಸ್ಪೋರ್ಟ್ಸ್ ಸ್ಪಿರಿಟ್ ವಿನ್ ಮೂಲಕ ವಿಜೃಂಭಿಸಿತು ಆರ್ ಸಿಬಿ ವಿರಾಟ್ ಸೇನೆ! ಈ ವಿಜಯದ ಘಳಿಗೆಯಲ್ಲಿ ಅಸೂಯೆಪಟ್ಟ ಗಾಂಧಾರಿ ಸೋದರರೂ ಬಹಳ ಇದ್ದದ್ದುಂಟು.

ಗ್ಯಾಂಬ್ಲಿಂಗ್ ಚಕ್ರವ್ಯೂಹ ಭೇಧಿಸಿ ಗೋಲ್ಮಾಲ್: ರಣರಂಗ ಛೇಧಿಸಿ ಯುದ್ಧಗೆದ್ದು ಗದ್ದುಗೆಏರಿ ಐಪಿಎಲ್ ಸಾಮ್ರಾಜ್ಯದ ಚಕ್ರವರ್ತಿಯಾದರು ಆರ್.ಸಿ.ಬಿ ಕಲಿಗಳು. ಇದಕ್ಕೆಲ್ಲ ಮುಖ್ಯಕಾರಣ ಕನ್ನಡಿಗರ ಘೋಷವಾಕ್ಯ ” ಈಸಲ ಕಪ್ ನಮ್ದೇ ” ಮತ್ತು “ಗಾಡ್-ಫಾದರ್” ನಂಬದೇ  “ಗಾಡ್” ಮಾತ್ರ ನಂಬಿದ್ದರ ಪರಿಣಾಮ ಹಾಗೂ 17 ವರ್ಷದ ಧೀರ್ಘ ತಪಸ್ಸಿನ ಪ್ರತಿಫಲವಾಗಿ ದೊರೆತ ದೇವರ ವರವೇ “ಸತ್ಯಮೇವಜಯತೇ”. ಇದಂತೂ ಪ್ರಪಂಚದ ಕ್ರಿಕೆಟ್ ಚರಿತ್ರೆಯ ಪುಸ್ತಕದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವ ಇತಿಹಾಸ ನಿರ್ಮಿಸಿದ್ದಲ್ಲದೇ ಆಚಂದ್ರಾರ್ಕ ಅಜರಾಮರ ದಾಖಲೆಯನ್ನೂ ಸ್ಥಾಪಿಸಿತು!

ಕಡೇ ಓವರಿನ 2 ಬಾಲ್ ಇರುವಾಗ:  2008ರಿಂದಲೂ ಆರ್.ಸಿ.ಬಿ.ತಂಡದ ಗೆಲುವಿಗೆ ತನ್ನೆಲ್ಲವನ್ನು ಸಮರ್ಪಿಸಿದ್ದ ಕಿಂಗ್ ಕೊಹ್ಲಿ ಕಡೇ ಓವರ್ ಮುಗಿಯಲು ಎರಡೇ ಎಸೆತ ಇರುವಾಗ ಅತಿ ಭಾವುಕರಾಗಿ ತಮ್ಮ ಕಣ್ಣಿಂದ ಆನಂದಬಾಷ್ಪ ಸುರಿಸಿದರು. ಬೆಂಗಳೂರನ್ನೂ, ಚಿನ್ನಸ್ವಾಮಿ ಕ್ರೀಡಾಂಗಣ ಮತ್ತು ಪ್ರೇಕ್ಷಕರನ್ನೂ, ಆರ್.ಸಿ.ಬಿ. ಅಭಿಮಾನಿಗಳನ್ನೂ ಎಲ್ಲ ಕನ್ನಡಿಗರನ್ನೂ ಮನಸಾರೆ ಹೊಗಳಿದರು.  ಆರ್.ಸಿ.ಬಿ.ತಂಡದ ಪ್ರತಿಯೊಬ್ಬ ಆಟಗಾರ ಮೈದಾನಕ್ಕೆ ಓಡಿಬಂದು ಕೊಹ್ಲಿಯನ್ನ ತಬ್ಬಿ ತಲೆ-ಮೈ ಸವರಿ ಸಾಂತ್ವನ ಪಡಿಸಿದರು.  ವಿರಾಟ್ ಪತ್ನಿಯು ಬಳಿಬಂದು ಬಾಚಿತಬ್ಬಿ ಮುತ್ತಿಟ್ಟು ಮುದ್ದಿಸಿ ಪತಿಯನ್ನ ಸಮಾಧಾನ ಪಡಿಸಿದರು.

ಕ್ರಿಸ್ ಗೇಲ್, ಎಬಿಡಿವಿಲಿಯರ್, ಸಾಲ್ಟ್ ಧಾವಿಸಿ ಇವರ ಜತೆಗೂಡಿದಾಗ ಎಂದಿನಂತೆ ಗೇಲ್-ಕೊಹ್ಲಿ ಡ್ಯಾನ್ಸ್ ಮಾಡಿದರು.ಎಲ್ಲರೂ ಸ್ಟೆಪ್ ಹಾಕಿ ಕುಣಿದು ಸಂಭ್ರಮಿಸಿದರು.  ಮಯಾಂಕ್ ಅಗರ್ವಾಲ್, ವಿನಯ್ ಕುಮಾರ್, ಭರತ್ ಚಿಪ್ಲಿ, ಮೂವರು ಕನ್ನಡಿಗರು ಮೈದಾನದ ಮೈಕ್ನಲ್ಲಿ ಕನ್ನಡದಲ್ಲೇ ಮಾತನಾಡಿ “ಈ ಸಲ ಕಪ್ ನಮ್ದು” ಎಂದು ಘೋಷಿಸಿ ನಕ್ಕುನಲಿದರು.  ಎ.ಬಿ.ಡಿವಿಲಿಯರ್ಸ್, ಕ್ರಿಸ್ ಗೇಲ್, ಕಿಂಗ್ ಕೊಹ್ಲಿ, “ಈಸಲ ಕಪ್ ನಮ್ದು” ಎಂದು ತಂಡದ ಎಲ್ಲ ಆಟಗಾರರಿಂದ ಕಿರುಚಿಸಿ ತಾವೂ ಘರ್ಜಿಸಿ ಹರ್ಷೋದ್ಘಾರದಿಂದ ಪ್ರಪಂಚದಾದ್ಯಂತ ಇರುವ ಆರ್.ಸಿ.ಬಿ. ಅಭಿಮಾನಿಗಳಿಗೆ ವಂದನೆ ಅಭಿನಂದನೆ ಸಲ್ಲಿಸಿ ಕನ್ನಡಿಗರನ್ನು, ಕನ್ನಡ ನಾಡು ನುಡಿ ಧ್ವಜವನ್ನು, ಹಾಡಿ ಕೊಂಡಾಡಿದರು.

ಮಂಗಳವಾರ ಜೂನ್ 3, 2025 ರಂದು ಜರುಗಿದ ಈ ಐಪಿಎಲ್ ಟಿ-20 ಕ್ರಿಕೆಟ್ ಚಾಂಪಿಯನ್ ಶಿಪ್ 18ನೇ ಆವೃತ್ತಿಯ ಚಿನ್ನದ ಕಪ್ ಗೆದ್ದ ಆರ್.ಸಿ.ಬಿ.ತಂಡದ ವಿಜಯೋತ್ಸವ ಕ್ಷಣಗಳು ಭೂಮಿ-ಗಗನ ಇರುವವರೆಗೂ ಒಂದು ಅವಿಸ್ಮರಣೀಯ ಇತಿಹಾಸವಾಗಿ ಉಳಿದು ಬೆಳಗುತ್ತಿರುತ್ತದೆ!

 

admin
the authoradmin

7 Comments

  • ನನ್ನ 50 ವರ್ಷದ ಜೀವನದಲ್ಲಿ ಅತ್ಯಂತ ಉತ್ತಮ ಕ್ರೀಡಾ ಲೇಖನ ಮತ್ತು ಹೃದಯ ತುಂಬಿ ಬರುವಂತೆ ಅತ್ಯುತ್ತಮ ಮಾಹಿತಿ ಮತ್ತು ಸತ್ಯ ವಿಷಯ ಹೇಳುವಂತಹ ಸಾಹಸದ ಬರಹ. ಆನಂತ ಧನ್ಯವಾದಗಳು ನಿಮಗೂ ಹಾಗೂ ಬರೆದ ಮಾನ್ಯ ಲೇಖಕರಿಗೂ varigoo

  • Excellent and extraordinary article uncle keep on publish this kind of very very useful Sports articles also and once again thanks sir . I shared this beautiful article to my friends and relatives

  • ಅಮೋಘ ಕ್ರಿಕಟ್ ಆಟದ ಬಗ್ಗೆ ಅಭೂತಪೂರ್ವ ಲೇಖನ ಬರೆದಂಥ ಕುಮಾರಕವಿಯವರಿಗೆ ಪ್ರಣಾಮಗಳು, ಜನಮನ ಪತ್ರಿಕೆಗೂ ಧನ್ಯವಾದ…

  • ಅಮೋಘ ಕ್ರಿಕಟ್ ಆಟದ ಬಗ್ಗೆ ಅಭೂತಪೂರ್ವ ಲೇಖನ ಬರೆದಂಥ ಕುಮಾರಕವಿಯವರಿಗೆ ಪ್ರಣಾಮಗಳು, ಜನಮನ ಪತ್ರಿಕೆಗೂ ಧನ್ಯವಾದ. ನಮಸ್ಕಾರ ಸರ್

Leave a Reply

Translate to any language you want