LatestMysore

ಸಾಮಾಜಿಕ ಸೇವಾ ಕಾರ್ಯಗಳಿಗೆ ಕೈಜೋಡಿಸಲು ಮನವಿ ಮಾಡಿದ ಶ್ರೀ ರಾಮಾನುಜ ಜೀಯರ್ ಸ್ವಾಮೀಜಿ

ಸಾಲಿಗ್ರಾಮ(ಕೆ.ಟಿ.ಮೋಹನ್ ಕುಮಾರ್): ಪ್ರತಿಯೊಬ್ಬರೂ ಸಾಮಾಜಿಕ ಸೇವಾ ಕಾರ್ಯಗಳಿಗೆ ಕೈಜೋಡಿಸಬೇಕೆಂದು ಪಟ್ಟಣದ ಶ್ರೀ ಭಾಷ್ಯಕಾರ ಸ್ವಾಮಿ ದೇವಸ್ಥಾನ ಪೀಠದ ಧನುರ್ದಾಸೆ ಶ್ರೀ ರಾಮಾನುಜ ಜೀಯರ್ ಸ್ವಾಮೀಜಿ ಹೇಳಿದರು.

ಸಾಲಿಗ್ರಾಮ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡಕ್ಕೆ ಹೊಸದಾಗಿ ಬಣ್ಣ ಲೇಪನ ಮಾಡಿಸಲು ಸುಮಾರು 80,000 ರೂಗಳ ವೆಚ್ಚದ ಬಣ್ಣದ ಬಾಕ್ಸ್ ಗಳನ್ನು ಕೊಡುಗೆಯಾಗಿ ನೀಡಿ ಮಾತನಾಡಿ, ಯಾರೇ, ಯಾರಿಗಾದರೂ ಸಹಾಯ ಮಾಡಿದರೂ ಅದನ್ನು ಪ್ರಚಾರಕ್ಕಾಗಿ ಮಾಡುವುದಲ್ಲ. ಪ್ರಾಮಾಣಿಕವಾಗಿ ಸೇವಾ ಮನೋಭಾವನೆಯಿಂದ ಮಾಡಿದಾಗ ಮಾತ್ರ ಅದಕ್ಕೆ ಅರ್ಥ ಬರುತ್ತದೆ. ಭಗವಂತನು ಕೂಡ ಅಂತಹ ಸೇವಾ ಕಾರ್ಯವನ್ನು ಮೆಚ್ಚುತ್ತಾನೆ ಎಂದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯನ್ನು ದತ್ತು ಪಡೆದು ಅದರ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು. ಆ ಮೂಲಕ ಈ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರುಗಳಿಗೆ ಹೆಚ್ಚಿನ ಶೈಕ್ಷಣಿಕ ಚಟುವಟಿಕೆಗೆ ಅನುಕೂಲವಾಗುವಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಡಲಾಗುವುದು. ಶಾಲೆಗಳೆಂದರೆ ಅವುಗಳು ಸುಂದರ ದೇವಾಲಯಗಳಂತಿರಬೇಕು. ಅಲ್ಲಿ ಕಲಿಯಲು ಬರುವ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ಕಲ್ಪಿಸಿ ಕೊಡಬೇಕು ಆ ಮೂಲಕ ವಿದ್ಯಾರ್ಥಿಗಳನ್ನು ಶಾಲೆಯುತ್ತ ಸೆಳೆಯುವ ಕೆಲಸವಾಗಬೇಕು ಎಂದರು.

ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಕಲಿಕೆಯ ಸಂದರ್ಭದಲ್ಲಿ ಶ್ರದ್ಧೆ ಭಕ್ತಿಯಿಂದ ವಿದ್ಯಾಭ್ಯಾಸವನ್ನು ಮಾಡಿ ಉನ್ನತ ಸ್ಥಾನಮಾನಗಳನ್ನು ಅಲಂಕರಿಸಬೇಕು. ಆ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕೆಂದು ಕರೆ ನೀಡಿದ ಅವರು ವಿದ್ಯಾರ್ಥಿಗಳು ತಮಗೆ ಅಕ್ಷರ ಕಲಿಸಿದ ಗುರುಗಳು, ಓದಿದ ಶಾಲೆ, ಹೆತ್ತವರು ಹಾಗೂ ಹುಟ್ಟಿದ ಊರಿಗೆ ಕೀರ್ತಿಯನ್ನು ತರಬೇಕು ಎಂದರಲ್ಲದೆ, ಶಿಕ್ಷಕ ವೃಂದದವರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನ ಕಲಿಸುವುದರ ಜೊತೆಗೆ ಸಂಸ್ಕಾರವನ್ನು ಕಲಿಸಬೇಕು ಆ ಮೂಲಕ ಒಳ್ಳೆಯ ವ್ಯಕ್ತಿಗಳನ್ನು ರೂಪಿಸಿ ಸಮಾಜಕ್ಕೆ ನೀಡಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಕೆ.ಟಿ.ಕುಮಾರ್, ಉಪ ಪ್ರಾಂಶುಪಾಲೆ ಎಸ್.ಕೆ.ವತ್ಸಲ, ಉಪನ್ಯಾಸಕರುಗಳಾದ ಅಶೋಕ್, ಸುರೇಶ, ವಿಜಯನಾಯಕ್, ನಾಗರಾಜು, ಶಿಕ್ಷಕರಾದ ಮಧುಕುಮಾರ್, ನಾರಾಯಣ, ಶಶಿಕುಮಾರ್, ಜಯಕುಮಾರ್, ಮಮತ, ಕುಮುದ, ಮುಖಂಡರುಗಳಾದ ಪುಟ್ಟಪ್ಪ, ಮಹದೇವ, ಸಂತೋಷ, ಪ್ರಶಾಂತ್, ಅನಿಲ್ ಸೇರಿದಂತೆ ಹಲವರು ಇದ್ದರು.

ಚನ್ನಂಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಕ್ಯಾಲೆಂಡರ್ ಬಿಡುಗಡೆ

ಸಾಲಿಗ್ರಾಮ: ತಾಲೂಕಿನ ಚನ್ನಂಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2026ನೇ ಸಾಲಿನ ದಿನದರ್ಶಿಕೆಯನ್ನು ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ಡಾ.ಎಸ್.ರಾಮಪ್ಪರವರು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸಿ.ವೈ.ಅಭಿಲಾಶ್, ಉಪಾಧ್ಯಕ್ಷ ಶಂಕರನಾಯಕ, ನಿರ್ದೇಶಕರಾದ ತಮ್ಮೇಗೌಡ, ರಘುನಾಥ್, ಸೈಯದ್ ಇಸ್ರಾದ್, ಮಲ್ಲಿಕಾರ್ಜುನ, ಸಂಜಯ್ ಕುಮಾರ್, ಚಲುವಯ್ಯ ಇದ್ದರು.

admin
the authoradmin

Leave a Reply

Translate to any language you want