ವಿಶೇಷ ಚೇತನ ಮಕ್ಕಳಿಗೆ ಶೈಕ್ಷಣಿಕ – ತಾಂತ್ರಿಕ ಕೌಶಲ್ಯತೆ ಕಲ್ಪಿಸಿಕೊಡಿ: ಬಿ.ಬಸವರಾಜ್
ಜೆಎಸ್ಎಸ್ ಸಹನ ಶಾಲಾ ವಾರ್ಷಿಕೋತ್ಸವ

ಮೈಸೂರು: ವಿಶೇಷ ಚೇತನ ಮಕ್ಕಳಿಗೆ ಅವರ ಪಠ್ಯಕ್ರಮದ ಅನುಗುಣವಾಗಿ ಶೈಕ್ಷಣಿಕ ಹಾಗೂ ತಾಂತ್ರಿಕ ಕೌಶಲ್ಯತೆಗಳನ್ನು ಕಲಿಸಿಕೊಟ್ಟಲ್ಲಿ ಸಮಾಜದಲ್ಲಿ ಅವರು ಸಮಾಜದ ಭಾಗವಾಗಿ ಜೀವನ ನಡೆಸುತ್ತಾರೆ. ಪೋಷಕರು ಹಾಗೂ ಶಿಕ್ಷಕರು ಅವರಿಗೆ ಬೆಂಬಲವಾಗಿ ನಿಂತರೆ ಅವರ ಜೀವನವು ಹಸನಾಗುತ್ತದೆ ಎಂದು ಮೈಸೂರು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಇಲಾಖೆಯ ಉಪನಿರ್ದೇಶಕ ಬಿ ಬಸವರಾಜ್ ಅವರು ಹೇಳಿದರು.

ನಗರದ ಸರಸ್ವತಿಪುರಂನಲ್ಲಿ ಜೆಎಸ್ಎಸ್ ವಿದ್ಯಾಪೀಠದ ವತಿಯಿಂದ ನಡೆಯುತ್ತಿರುವ ಸಹನ ಶ್ರವಣದೋಷ ಹಾಗೂ ಬುದ್ಧಿಮಾಂದ್ಯ ಮಕ್ಕಳ ವಿಶೇಷ ಶಿಕ್ಷಣ ಶಾಲೆಯ ಶ್ರೀ ಮಂತ್ರ ಮಹರ್ಷಿ ಸಭಾಂಗಣದಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿ ವಿಶೇಷ ಚೇತನರ ಪೋಷಕರು ಯಾವುದೇ ರೀತಿ ಹಿಂಜರಿಕೆ ಇಲ್ಲದೆ ಮಕ್ಕಳಿಗೆ ಹೆಚ್ಚು ಪ್ರೀತಿ, ಸಮಯ ನೀಡಬೇಕೆಂದು ಹೇಳಿದರು.

ಇದೇ ಸಂದರ್ಭ ಅವರು ರಾಜ್ಯಮಟ್ಟದ ವಿಶೇಷ ಚೇತನರ ಕ್ರೀಡಾಕೂಟ ಹಾಗೂ ಶೈಕ್ಷಣಿಕ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹನ ಶಾಲೆಯ ಮುಖ್ಯೋಪಾಧ್ಯಾಯನಿ ಸರ್ವಮಂಗಳ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೆಎಸ್ಎಸ್ ವಾಕ್ ಮತ್ತು ಶ್ರವಣ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಸುಮಾ ಅವರು ಉಪಸ್ಥಿತರಿದ್ದರು.

ವೇದಿಕೆಯಲ್ಲಿ ವಿಶೇಷ ಚೇತನ ಮಕ್ಕಳಿಂದ ವಿವಿಧ ರೀತಿಯ ಸಂಸ್ಕೃತಿಕ ಹಾಗೂ ನೃತ್ಯಗಳು ಪ್ರೇಕ್ಷಕರಿಗೆ ಮುಧ ನೀಡಿದವು.

ಕಾರ್ಯಕ್ರಮದಲ್ಲಿ ಶಾಲೆ ವಿಶೇಷ ಶಿಕ್ಷಕರಾದ ತೇಜೋವತಿ, ಚೆನ್ನವ್ವ ಬೂದಿಹಾಳ, ವಿದ್ಯಾ, ಜ್ಯೋತಿ, ಗೀತಾ, ಶಿವರಾಮಯ್ಯ, ಮಕ್ಕಳ ಪೋಷಕರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.







