LatestMysore

ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ದಿನಾಚರಣೆ

ಮೈಸೂರು: ನಗರದ ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ 11ನೇ ಸಾಂಸ್ಕೃತಿಕ ದಿನವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಈ ಸಂಬಂಧ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಫೋಟೋ ಜರ್ನಲಿಸ್ಟ್ ನಾಣಿ ಹೆಬ್ಬಾಳ್ (ನಾರಾಯಣ ಹೆಬ್ಬಾಳ್) ಅವರು ವಿದ್ಯಾರ್ಥಿಗಳು ಮಾಧ್ಯಮಗಳಲ್ಲಿ ಬರುವ ವಿಚಾರಗಳತ್ತ ಗಮನಹರಿಸಿ ಅವುಗಳನ್ನು ಸಂಗ್ರಹಿಸಿ ವಿಮರ್ಶಿಸುವುದನ್ನು ಕಲಿಯಬೇಕು. ಇದು ಭವಿಷ್ಯದಲ್ಲಿ ಅನುಕೂಲವಾಗಲಿದೆ ಎಂದು ಹೇಳಿದರಲ್ಲದೆ, ಇಂದಿನ ಪತ್ರಿಕೋದ್ಯಮದ ಸವಾಲ್ ಮತ್ತು ಸುದ್ದಿ ಸಂಗ್ರಹ, ಫೋಟೋ ಜರ್ನಲಿಸಂ ಬಗ್ಗೆಯೂ ಮಾಹಿತಿ ನೀಡಿದರು.

ಇದೇ ವೇಳೆ ಕಾಲೇಜು ವತಿಯಿಂದ ಆಯೋಜಿಸಿದ್ದ ಕಲರವದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ, ಅತ್ಯುತ್ತಮ ಗ್ರಂಥಾಲಯ ಪೋಷಕ, ಶ್ರಮದಾನದ ಅತ್ಯುತ್ತಮ ಎನ್ ಎಸ್ ಎಸ್, ಅತ್ಯುತ್ತಮ ಸ್ವಯಂಸೇವಕ  ಮತ್ತು ಶೇ.100ರಷ್ಟು ಹಾಜರಾತಿ ಹೊಂದಿರುವ ವಿದ್ಯಾರ್ಥಿ, ಪೋಸ್ಟರ್ ತಯಾರಿಕೆ ಸ್ಪರ್ಧೆಯ ವಿಜೇತರು, ವಿಡಿಯೋ ತಯಾರಿಕೆ, ಭಾಷಣ ಮತ್ತು ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಅರ್ಚನಾ ಸ್ವಾಮಿ, ಎನ್ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

admin
the authoradmin

Leave a Reply

Translate to any language you want