Latest

ಸ್ಯಾಮ್ ಸಂಗ್ ಮಾರುಕಟ್ಟೆಗೆ ಬಿಡುತ್ತಿರುತ್ತಿರುವ ಗ್ಯಾಲಕ್ಸಿ ಎ07 5ಜಿ ಮೊಬೈಲ್ ನಲ್ಲಿ ಏನಿದೆ ವಿಶೇಷತೆ?

ಬೆಂಗಳೂರು: ಭಾರತದ ಮುಂಚೂಣಿಯ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಆಗಿರುವ ಸ್ಯಾಮ್‌ಸಂಗ್, ‘ಐಕಾನಿಕ್ ಟ್ರ್ಯಾಕ್ ಕ್ಯಾಮೆರಾ ಡೆಕೊ’ ವಿನ್ಯಾಸವನ್ನು ಹೊಂದಿರುವ  ‘ಗ್ಯಾಲಕ್ಸಿ ಎ07 5ಜಿ’  ಮೊಬೈಲ್ ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ. ಫೆಬ್ರವರಿ ಮೊದಲ ವಾರದಲ್ಲಿ  ಗ್ರಾಹಕರ ಕೈಗೆ ಈ ಮೊಬೈಲ್ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ,

ಆನ್‌ಲೈನ್ ಮನರಂಜನೆ, ಸೋಷಿಯಲ್ ಮೀಡಿಯಾ ಮೂಲಕ ದೃಶ್ಯ ರೂಪದ ಕಥೆ ಹೇಳುವಿಕೆ ಮತ್ತು ಇಡೀ ದಿನ ಬಾಳಿಕೆ ಬರುವ ಬ್ಯಾಟರಿಯನ್ನು ಕೈಗೆಟುಕುವ ದರದಲ್ಲಿ ನೀಡಲು ಎ- ಸೀರೀಸ್ ನ ಈ ಹೊಸ ಫೋನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಗ್ಯಾಲಕ್ಸಿ ಎ07 5ಜಿ ಫೋನ್ ‘ಐಕಾನಿಕ್ ಟ್ರ್ಯಾಕ್ ಕ್ಯಾಮೆರಾ ಡೆಕೊ’ ವಿನ್ಯಾಸವನ್ನು ಹೊಂದಿದ್ದು, ಹೈ-ರೆಸಲ್ಯೂಶನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದರಲ್ಲಿ ಉತ್ತಮ ಗುಣಮಟ್ಟದ ಚಿತ್ರಗಳಿಗಾಗಿ 50ಎಂಪಿ ಆಟೋಫೋಕಸ್ ಕ್ಯಾಮೆರಾ ಮತ್ತು ಹೆಚ್ಚಿನ ಗಾಢ ಚಿತ್ರಕ್ಕಾಗಿ 2ಎಂಪಿ ಡೆಪ್ತ್ ಕ್ಯಾಮೆರಾವನ್ನು ಹೊಂದಿದೆ.

ಮೇನ್ ಕ್ಯಾಮೆರಾದ ಎಫ್1.8 ಅಪಾರ್ಚರ್, 2ಎಂಪಿ ಡೆಪ್ತ್ ಕ್ಯಾಮೆರಾದ ನೆರವಿನೊಂದಿಗೆ ವಸ್ತುಗಳ ಮೇಲೆ ಫೋಕಸ್ ಮಾಡಿ ಹಿನ್ನೆಲೆಯನ್ನು ಅಸ್ಪಷ್ಟಗೊಳಿಸುವ ಮೂಲಕ ಅದ್ಭುತವಾದ ‘ಬೊಕೆ ಎಫೆಕ್ಟ್’ ಪೋರ್ಟ್ರೇಟ್‌ಗಳನ್ನು ಸೃಷ್ಟಿಸುತ್ತದೆ. ಇದರ ವೈಡ್-ಆಂಗಲ್ ಸೆಟಪ್ ಆಕರ್ಷಕ ಬಣ್ಣಗಳು ಮತ್ತು ಸ್ಪಷ್ಟ ವಿವರಗಳ ಫೋಟೋಗಳಿಗಾಗಿ ಸಿದ್ಧಗೊಂಡಿದ್ದು, ಸೂರ್ಯಾಸ್ತ, ಬೀದಿಯ ಚಿತ್ರಗಳು ಅಥವಾ ಅನಿರೀಕ್ಷಿತ ಕ್ಷಣಗಳನ್ನು ಸೆರೆಹಿಡಿಯಲು ಸೂಕ್ತವಾಗಿದೆ. ಇನ್ನು ಇದರ 8 ಎಂಪಿ ಫ್ರಂಟ್ ಕ್ಯಾಮೆರಾ ಕನಿಷ್ಠ ಶಬ್ದದೊಂದಿಗೆ ಅತ್ಯಂತ ಸ್ಪಷ್ಟವಾದ ಸೆಲ್ಫಿ ಮತ್ತು ವಿಡಿಯೋಗಳನ್ನು ತೆಗೆಯಲು ಅನುವು ಮಾಡಿಕೊಡುತ್ತದೆ.

ಗ್ಯಾಲಕ್ಸಿ ಎ07 5ಜಿ ಫೋನ್ ಗ್ರಾಹಕರು ಫೋಟೋಗಳನ್ನು ಸೆರೆಹಿಡಿಯುವ, ಎಡಿಟ್ ಮಾಡುವ ಮತ್ತು ಹಂಚಿಕೊಳ್ಳುವ ಅನುಭವವನ್ನು ಸಂಪೂರ್ಣವಾಗಿ ಆನಂದಿಸಲು ಅನುವಾಗುವಂತೆ, 120 ಹರ್ಟ್ಜ್ ರಿಫ್ರೆಶ್ ರೇಟ್ ಹೊಂದಿರುವ 6.7-ಇಂಚಿನ ಎಚ್ ಡಿ+ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಇದು ವಿಡಿಯೋ ವೀಕ್ಷಣೆ ಮತ್ತು ವೆಬ್ ಬ್ರೌಸಿಂಗ್ ಸಮಯದಲ್ಲಿ ಸುಗಮವಾಗಿ ಸ್ಕ್ರೋಲಿಂಗ್ ಮಾಡಲು ನೆರವಾಗುತ್ತದೆ. ಡಿಸ್‌ಪ್ಲೇಯ ಹೈ-ಬ್ರೈಟ್‌ನೆಸ್ ಮೋಡ್ (ಎಚ್ ಬಿ ಎಂ) 800 ನಿಟ್ಸ್‌ ತಲುಪಬಲ್ಲದ್ದಾಗಿದ್ದು, ಬಿಸಿಲಿನಲ್ಲಿಯೂ ಸ್ಪಷ್ಟವಾಗಿ ಕಾಣಿಸುತ್ತದೆ. ಹೆಚ್ಚಿನ ಬಾಳಿಕೆಗಾಗಿ ಸ್ಕ್ರೀನ್‌ಗೆ ‘2-ಸ್ಟೆಪ್ ಟೆಂಪರ್ಡ್ ಗ್ಲಾಸ್’ ಸುರಕ್ಷತೆ ನೀಡಲಾಗಿದೆ.

ಗ್ಯಾಲಕ್ಸಿ ಎ07 5ಜಿ ಫೋನ್ 6000 ಎಂಎಎಚ್ ಬ್ಯಾಟರಿಯನ್ನು ಹೊಂದಿದ್ದು, ಇದು ತನ್ನ ಹಿಂದಿನ ಮಾದರಿಗಿಂತ 20% ದೊಡ್ಡದಾಗಿದೆ. ಈ ಶಕ್ತಿಯುತ ಬ್ಯಾಟರಿಯು 25 ವಾರ್ಪ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಬರುತ್ತದೆ. ನೀವು ಯೂಟ್ಯೂಬ್‌ ನಲ್ಲಿ ವಿಡಿಯೋ ವೀಕ್ಷಿಸುತ್ತಿರಲಿ ಅಥವಾ ಸೋಷಿಯಲ್ ಮೀಡಿಯಾ ಬಳಸುತ್ತಿರಲಿ, ಇದು ದಿನವಿಡೀ ಸಾಥ್ ನೀಡುತ್ತದೆ. ಗ್ಯಾಲಕ್ಸಿ ಎ07 5ಜಿಯ ಆಪ್ಟಿಮೈಸ್ಡ್ ಪವರ್ ಮ್ಯಾನೇಜ್‌ಮೆಂಟ್ ಸಾಮರ್ಥ್ಯವು ಕೆಲಸ ಮತ್ತು ಮನರಂಜನೆ ಎರಡಕ್ಕೂ ಉತ್ಯುತ್ತಮ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ.  ಕೈಗೆಟುಕುವ ದರದಲ್ಲಿ ಈ ಮೊಬೈಲ್ ಸಿಗಲಿದೆ ಎಂದು ಹೇಳಲಾಗುತ್ತಿದೆ.

admin
the authoradmin

Leave a Reply

Translate to any language you want