Mysore

ಸರಗೂರು ತಾಲ್ಲೂಕು ಹಳೆಯೂರು ಗ್ರಾಮದಲ್ಲಿ ಜನಪ್ರಿಯ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರಿಂದ ಸನ್ಮಾನ

ಸರಗೂರು: ಸರಗೂರು ತಾಲ್ಲೂಕಿನ ಹಳೆಯೂರು ಗ್ರಾಮದಲ್ಲಿ ರೈತರೊಂದಿಗೆ ಸದಾ ನಿಕಟ ಸಂಪರ್ಕ ಹೊಂದಿ ಜನಪರ ಸೇವೆ ಸಲ್ಲಿಸಿರುವ ಮೈಸೂರು ವಿಭಾಗದ ಅರಣ್ಯ ಇಲಾಖೆಯ ಸಿ.ಎಫ್ ಪರಮೇಶ್ ಬಿ (ಮೈಸೂರು) ಇವರಿಗೆ ಗ್ರಾಮಸ್ಥರು ಜನಪ್ರಿಯ ಅಧಿಕಾರಿ ಎಂಬ ಗೌರವ ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸರಗೂರಿನ ಆರ್‌.ಎಫ್.ಓ ಅಕ್ಷಯ್ ಕುಮಾರ್ ಹಾಗೂ ಹೆಚ್.ಡಿ.ಕೋಟೆ ಆರ್‌.ಎಫ್.ಓ ರವಿ ಅವರಿಗೂ ಜನಸೇವೆಗಾಗಿ ಗ್ರಾಮಸ್ಥರಿಂದ ಸನ್ಮಾನಿಸಿ ಜನಪ್ರಿಯ ಅಧಿಕಾರಿ ಎಂಬ ಹೆಗ್ಗಳಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸರಗೂರು ತಾಲ್ಲೂಕು ನಾಮಧಾರಿಗೌಡ ಸಮಾಜದ ಅಧ್ಯಕ್ಷರಾದ ಹೆಚ್.ಡಿ.ರತ್ನಯ್ಯ, ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷರಾದ ಹಳೆಯೂರು ಗಣೇಶ್, ಈ ಸಂದರ್ಭದಲ್ಲಿ ಅಶೋಕ್, ನಾಗರಾಜಪ್ಪ, ಸತೀಶ್, ಕೆಂಡಗಂಡಸ್ವಾಮಿ, ಎಚ್.ಎನ್. ಮಹೇಶ್, ಮಾದೇವ, ಪಾರ್ಶಿನಾಥ್, ಎಚ್.ಎಂ. ಗಣೇಶ್ ಸೇರಿದಂತೆ ಅನೇಕ ಮುಖಂಡರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತ  ಹಾಜರಿದ್ದರು.

ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಅಧಿಕಾರಿಗಳ ಕಾರ್ಯವನ್ನು ಗ್ರಾಮಸ್ಥರು ಶ್ಲಾಘಿಸಿ, ಇಂತಹ ಸೇವಾ ಮನೋಭಾವ ಮುಂದುವರಿಯಲಿ ಎಂದು ಆಶಿಸಿದರು

admin
the authoradmin

Leave a Reply

Translate to any language you want