Mysore

ಸರಗೂರಿನಲ್ಲಿ “ಮನುಸ್ಮೃತಿ ಅಳಿಸಲಿ, ಸಂವಿಧಾನ ಉಳಿಯಲಿ’ ಘೋಷವಾಕ್ಯದಡಿ ಮನುಸ್ಮೃತಿ ದಹನ

ಸರಗೂರು: “ಮನುಸ್ಮೃತಿ ಅಳಿಸಲಿ, ಸಂವಿಧಾನ ಉಳಿಯಲಿ” ಎಂಬ ಘೋಷವಾಕ್ಯದಡಿ, ದೇಶದಲ್ಲಿ ವ್ಯಕ್ತಿ ಗೌರವಕ್ಕೆ ಧಕ್ಕೆ ತಂದ ಹಾಗೂ ಅಸಮಾನತೆಯನ್ನು ಸಾರುತ್ತಿದ್ದ ಮನುಸ್ಮೃತಿ ವಿರುದ್ಧವಾಗಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು 1927ರ ಡಿಸೆಂಬರ್ 25 ರಂದು ಮನುಸ್ಮೃತಿಯನ್ನು ದಹನಗೊಳಿಸಿದ್ದನ್ನು ಸ್ಮರಿಸಿ, ಸರಗೂರಿನಲ್ಲಿ ಮನುಸ್ಮೃತಿ ಪ್ರತಿಕೃತಿ ದಹನ ಸಾಂಕೇತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಸರಗೂರು ಆದಿ ಕರ್ನಾಟಕ ಮಹಾಸಭೆಯ ಅಧ್ಯಕ್ಷರಾದ ಇಟ್ನಾ ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾರ್ಯಕ್ರಮ ನಡೆಯಿತು. ಸಂವಿಧಾನಾತ್ಮಕ ಮೌಲ್ಯಗಳು, ಸಮಾನತೆ ಮತ್ತು ಮಾನವ ಗೌರವವನ್ನು ಕಾಪಾಡುವ ಅಗತ್ಯವಿದೆ ಎಂದು ಈ ಸಂದರ್ಭದಲ್ಲಿ ಅಧ್ಯಕ್ಷರು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮೀಣ ಮಹೇಶ್, ಹೂವಿನಕೊಳ ಸಿದ್ದರಾಜು, ಬಿಡಗಲು ಶಿವಣ್ಣ, ಲೋಕೇಶ್ ಜೆ, ಶಿವಚೆನ್ನಪ್ಪ ಮುಳ್ಳೂರು, ಮಸಹಳ್ಳಿ ಸೂರ್ಯಕುಮಾರ್, ಲಂಕೆ ಸೋಮಶೇಖರ್, ಬಿಲ್ಲಯ್ಯ, ದೇವಲಾಪುರ ನಾಗೇಂದ್ರ, ಲಂಕೆ ಶ್ರೀನಿವಾಸ್, ಅಣ್ಣಯ್ಯಸ್ವಾಮಿ, ಚಿನ್ನಣ್ಣ ಹಳೆಯೂರು, ಚಕ್ಕೂರು ಕಾಳಸ್ವಾಮಿ, ದೇವರಾಜು, ಕೃಷ್ಣ, ಶಿವಕುಮಾರ್, ದಯಾನಂದ, ಚಿನ್ನಸ್ವಾಮಿ, ಎಸ್.ಬಿ., ಭೀಮಯ್ಯ ಸೇರಿದಂತೆ ಅನೇಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಈ ಕಾರ್ಯಕ್ರಮವು ಸಮಾಜದಲ್ಲಿ ಸಮಾನತೆ, ನ್ಯಾಯ ಮತ್ತು ಸಂವಿಧಾನಾತ್ಮಕ ಚಿಂತನೆಗಳ ಜಾಗೃತಿಗೆ ಸಹಕಾರಿಯಾಗಲಿದೆ ಎಂದು ಸಂಘಟನೆ ತಿಳಿಸಿದೆ.

admin
the authoradmin

Leave a Reply

Translate to any language you want