Mysore

ನಂಜನಗೂಡಿನ ವಿದ್ಯಾನಗರದ ಸಮೃದ್ಧಿ ಗೆಳೆಯರ ಬಳಗದ ಒಕ್ಕೂಟದಿಂದ ಸಿದ್ದಗಂಗಾಶ್ರೀಗಳ ಪುಣ್ಯಸ್ಮರಣೆ

ಮೈಸೂರು: ಶರಣರ ಕಾಯಕ ದಾಸೋಹ ತತ್ವಗಳಿಗೆ ಅನ್ವರ್ಥವಾಗಿ ಬದುಕಿದ ಸಂತ ಶ್ರೇಷ್ಠ ಸಿದ್ದಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿಗಳು ಎಂದು  ಅಖಿಲ ಭಾರತ ವೀರಶೈವ ಮಹಾಸಭಾ ಮೈಸೂರು ಜಿಲ್ಲಾ ಘಟಕದ ನಿರ್ದೇಶಕರಾದ ಕಲ್ಮಳ್ಳಿ ನಟರಾಜು ಹೇಳಿದರು.

ನಂಜನಗೂಡಿನ ವಿದ್ಯಾನಗರದ ಸಮೃದ್ಧಿ ಗೆಳೆಯರ ಬಳಗದ ಒಕ್ಕೂಟದ ವತಿಯಿಂದ ಅನುಭವ ಮಂಟಪ ಸಭಾಂಗಣದಲ್ಲಿ ನಡೆದ ಸಿದ್ದಗಂಗಾ ಮಠದ ಪೂಜ್ಯರಾದ ಡಾ.ಶಿವಕುಮಾರ ಸ್ವಾಮಿಗಳ 7ನೇ ವರ್ಷದ ಪುಣ್ಯ ಸ್ಮರಣಾ ಕಾರ್ಯಕ್ರಮವನ್ನು ಪೂಜ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ  ಅವರು 12ನೇ ಶತಮಾನದ ಕಾಲಘಟ್ಟದಲ್ಲಿ ಈ ನೆಲದಲ್ಲಿ ಹುಟ್ಟಿದ ಬಹು ದೊಡ್ಡ ಸಾಮಾಜಿಕ ಚಳುವಳಿಯ ಬಗ್ಗೆ ಇತಿಹಾಸವನ್ನು ಓದಿ ತಿಳಿದು ಕೊಂಡಿದ್ದೇವೆ ಶರಣರ ಅನುಭಾವದಿಂದ ಹುಟ್ಟಿದ ವಚನಗಳ ಪರಿಕಲ್ಪನೆಯ ಕಾಯಕ ದಾಸೋಹ ತತ್ವ ಸುಳ್ಳಲ್ಲ ಸತ್ಯ ಎನ್ನುವುದಕ್ಕೆ ಪೂಜ್ಯ ಸಿದ್ದಗಂಗಾ ಶಿವಕುಮಾರ ಶ್ರೀಗಳ ಬದುಕು ನಿದರ್ಶನ ಎಂದರು.

ಸತ್ಯ ಶುದ್ಧ ಕಾಯಕದಿಂದ ಮನುಷ್ಯ ದೇವನಾಗಬಹುದು ಎನ್ನುವುದಕ್ಕೆ ಬೇರೊಂದು ಉದಾಹರಣೆ ಬೇಕಿಲ್ಲ ಬಸವಣ್ಣ ತನ್ನದೊಂದು ವಚನದಲ್ಲಿ ಶಿವ ಶರಣರು ಇದ್ದ ಕ್ಷೇತ್ರ ಪರಮ ಪಾವನ ಎಂಬುದು ಹುಸಿಯಲ್ಲ ಈ ನುಡಿ ಅಕ್ಷರಶಃ ಸತ್ಯ. ದಿನನಿತ್ಯ ಜಾತಿ ಧರ್ಮ ಮತ ಪಂಥ ಭೇದವಿಲ್ಲದೇ ಸಿದ್ದಗಂಗಾ ಮಠಕ್ಕೆ ಬರುವ ಭಕ್ತರನ್ನು ನೋಡಿದರೆ ತಿಳಿಯುತ್ತದೆ. ಇಲ್ಲಿ ಶಿಕ್ಷಣ ಪಡೆದ ಅನೇಕ ಮಹನೀಯರು ತಾವುಗಳು ಶ್ರೀಗಳವರನ್ನು ಅವರ ಜೀವನ ಸಂದೇಶಗಳನ್ನು ವಿವಿಧ ರೀತಿಯಲ್ಲಿ ಅರ್ಥೈಸಿಕೊಂಡು ಶ್ರೀಗಳವರ ಮಹಿಮೆಯನ್ನು ಕುರಿತ ಗ್ರಂಥಗಳನ್ನು ರಚಿಸಿ ಮುಂದಿನ ಪೀಳಿಗೆಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ

ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪರ ಕವನವೊಂದರಲ್ಲಿ ಹೇಳುವಂತೆ ಜನ್ಮವಿತ್ತವರು ಯಾರೋ? ಅನ್ನವಿತ್ತವರು ಯಾರೋ? ನಿನ್ನ ಬದುಕಿನ ಸಂಭ್ರಮಕ್ಕೆ ಬೆವರ ಹರಿಸಿದವರು ಯಾರೋ? ಇದು ನಿನ್ನದಲ್ಲ ಸಮಾಜದ ಋಣ ಸಾಯುವ ಮುನ್ನ ಆದ ತಿಳಿದು ಕೃತಾರ್ಥನಾಗು ಎನ್ನುವ ನುಡಿ ತನ್ನ ಮಡಿಲಿಗೆ ಬಂದ ಎಲ್ಲರನ್ನೂ ಜ್ಯೋತಿ ತಾನು ಉರಿದು ಬೆಳಕು ನೀಡುವಂತೆ ಲಕ್ಷಾಂತರ ಜನರ ಬಾಳಿಗೆ ಬೆಳಕಾದ ಮಹಾ ಪರ0ಜ್ಯೋತಿಯಾದರು. ಅವರನ್ನು ನೋಡಿದ್ದೆ ನಮ್ಮೆಲ್ಲರ ಸೌಭಾಗ್ಯ ಅವರ ಆದರ್ಶವನ್ನು ನಾವು ಕಿಂಚಿತ್ ಆದರೂ ಅನುಸರಿಸಿ ಸಿಕ್ಕಿರುವ ಈ ನರ ಜನ್ಮವನ್ನು ಸಾರ್ಥಕ ಪಡಿಸಿ ಕೊಳ್ಳೋಣ ಶರಣರ ನೆನೆವುದೇ ಒಂದು ಸುಯೋಗ ಎಂದರು

ಕಾರ್ಯಕ್ರಮದಲ್ಲಿ ಬಳಗದ ಪದಾಧಿಕಾರಿಗಳಾದ ಮಹೇಶ್, ಮನೀಶ್ ಹೊರೆಯಾಲ ಪ್ರಕಾಶ್, ವೀರಭದ್ರಸ್ವಾಮಿ, ಕಿರಣ್ ಸಂಸ್ಕೃತ ಶಿಕ್ಷಕರಾದ ಶಿವಲಿಂಗಸ್ವಾಮಿ ದೇವನೂರು ಸದಾನಂದ,  ರಘು ಸೇರಿದಂತೆ ಹಲವರು ಉಪಸ್ಥಿತರಿದ್ದರು

admin
the authoradmin

Leave a Reply

Translate to any language you want