Mysore

ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ರಾಜಯೋಗ ಶಿಕ್ಷಣದ ಸಲಹೆ ನೀಡಿದ ಡಾ. ದಯಾನಂದ ಬಾಬು

ತಿ.ನರಸೀಪುರ: ಇಂದು ಸಂಘ. ಸಂಸ್ಥೆಗಳು ದೇಶಾದ್ಯಂತ ವ್ಯಸನ ಮುಕ್ತ ಸಮಾಜ ನಿರ್ಮಾಣ  ಮಾಡಲು ಅನೇಕ ಕಾರ್ಯಕ್ರಮ ಮಾಡುತ್ತಿವೆ.ಇದರಲ್ಲಿ ಸಫಲರಾಗಲು ರಾಜಯೋಗ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಕೀಲು ಮತ್ತು ಮೂಳೆ ತಜ್ಞರಾದ ಡಾ.ದಯಾನಂದ ಬಾಬುರವರು ಅಭಿಪ್ರಾಯ ಪಟ್ಟರು.

ಅವರು ಪಟ್ಟಣದ ವಿದ್ಯಾನಗರದಲ್ಲಿರುವ ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಶಿವ ಜ್ಞಾನ ದರ್ಶನ ಭವನದಲ್ಲಿ ಏರ್ಪಡಿಸಲಾಗಿದ್ದ ವ್ಯಸನ ಮುಕ್ತ ಸಮಾಜ ನಿರ್ಮಾಣದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮನೋವೖದ್ಯರಾದ ಡಾ.ಕಿಶೋರ್ ಎಂ. ಆರ್.ಮಾತನಾಡಿ ವ್ಯಸನಗಳಿಗೆ ಮೂಲ ಕಾರಣ ಮಾನಸಿಕ ಒತ್ತಡ. ಮಾನಸಿಕ ಒತ್ತಡದಿಂದ ಮುಕ್ತರಾಗಲು ದ್ಯಾನ ಬಹಳ ಅವಶ್ಯಕ ಎಂದರು.

ಗುಂಡ್ಲುಪೇಟೆ ಸೇವಾ ಕೇಂದ್ರದ ರಾಜಯೋಗ ಪ್ರವಾಚಕಿ ರಾಜಯೋಗಿನಿ ಬ್ರಹ್ಮಾಕುಮಾರಿ ವೀಣಾಜೀ ಮಾತನಾಡಿ ವರ್ತಮಾನ ಸಮಯದಲ್ಲಿ ನಮಗೆ ಬರುವ ಖಾಯಿಲೆಗಳಲ್ಲಿ ಶೇಕಡ 75ರಷ್ಟು ಮನೋದೈಹಿಕ ಕಾರಣಗಳಿಂದ ಬರುವಂತಹದ್ದು ಎಂದು ವೈದ್ಯರು ಮತ್ತು ಮನೋಚಿ ಕಿತ್ಸಕರು ಅಭಿಪ್ರಾಯಪಟ್ಟಿದ್ದಾರೆ ಎಂದರು.

ಮನೋಬಲ ತರಬೇತುದಾರರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಧಾನೇಶ್ವರೀಜೀ ಮಾತನಾಡಿ ಇಂದು ವಿದ್ಯಾರ್ಥಿಗಳು ಸಂಘ ದೋಷದಿಂದ ವ್ಯಸನಗಳಿಗೆ ಬಲಿಯಾಗುತ್ತಿರುವುದು ಶೋಚನೀಯ. ಯುವಕರು ಸಹ ಡ್ರಗ್ಸ್ ಮಾದಕ ವಸ್ತುಗಳ ಸೇವನೆಯಿಂದ ಚಿಕ್ಕ ವಯಸ್ಸಿನಲ್ಲೇ ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆಯಿಂದ ಬ್ರೈನ್ ಡ್ಯಾಮೇಜ್ ಆಗುವ ಸಾಧ್ಯತೆ ಇದೆ.

ಆಲ್ಕೋಹಾಲ್ ಸೇವನೆ ಮಾಡುವವರು ಸಮಸ್ಯೆಗಳನ್ನು ಎದುರಿಸಲು ಸಮರ್ಥರಾಗಿರುವುದಿಲ್ಲ ಮತ್ತು ಅವರು ತಮಗರಿವಿಲ್ಲದೇ ಉತ್ತಮ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಕುಟುಂಬದಲ್ಲಿ ನಿರಾಶೆ, ಭಯ, ಖಿನ್ನತೆ, ದುಃಖ, ಎಲ್ಲಡೆ ಕಾಣತೊಡಗಿದೆ. ಈಗಾಗಿ ಮನುಷ್ಯನ ಜೀವನದಿಂದ ಶಾಂತಿ ನೆಮ್ಮದಿಗಳು ಮಾಯವಾಗುತ್ತದೆ. ಅತೃಪ್ತಿ, ಭಯ, ಅಸಹಾಯಕತೆ ಮತ್ತು ಕ್ರೋಧ ಮಾನವೀಯ ಸಂಭಂದಗಳನ್ನು ಕದಡುತ್ತಿವೆ ಎಂದು ಪ್ರತಿ ಪಾದಿಸಿದರು.

ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂಸ್ ಸರ್ವಿಸ್ ನ ಬಿ ಕೆ ಆರಾಧ್ಯ, ಸ್ವಾಮಿ, ಮಹೇಶ, ನಾಗಣ್ಣ, ಮಹಾಲಕ್ಷ್ಮಿ, ಪುಟ್ಟೇಗೌಡ, ನಂಜಪ್ಪ ಜಾನಕಮ್ಮ, ಸುಬ್ಬಲಕ್ಷ್ಮಿ ಪದ್ಮ, ನರಾಯಣ, ನಾಗಮಣಿ, ಸಂಜೀವ್, ಸಿದ್ದೇಗೌಡ, ಶಾಂಭವಿ, ಶಿವಮ್ಮ, ಮುಂತಾದವರು ಹಾಜರಿದ್ದರು.

admin
the authoradmin

Leave a Reply

Translate to any language you want