Mysore

ಯಶಸ್ವಿನಿ ಯೋಜನೆಯ ಸದಸ್ಯತ್ವ ನವೀಕರಣ ಹಾಗೂ ಹೊಸದಾಗಿ ನೊಂದಣಿಗೆ ಅವಕಾಶ

ಕೆ.ಆರ್.ನಗರ(ಕೆ.ಟಿ.ಮೋಹನ್ ಕುಮಾರ್): ಪಟ್ಟಣದ ಗ್ರಾಮೀಣ ನಿಧಿ  ಸೌಹಾರ್ದ ಕೋ ಆಪರೇಟಿವ್  ಸೊಸೈಟಿ ವತಿಯಿಂದ 2025 – 26 ನೇ ಸಾಲಿನ ಯಶಸ್ವಿನಿ ಯೋಜನೆಯ ಸದಸ್ಯತ್ವ ನವೀಕರಣ ಹಾಗೂ ಹೊಸದಾಗಿ ನೊಂದಣಿ ಮಾಡಲಾಗುತ್ತಿದೆ ಎಂದು ಸೊಸೈಟಿಯ ಅಧ್ಯಕ್ಷ ಕೆ.ಆರ್.ಶ್ಯಾಮಸುಂದರ್ ತಿಳಿಸಿದ್ದಾರೆ.

ಅವರು ಈ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿ ಹೊಸದಾಗಿ ಹೆಸರನ್ನು ನೋಂದಾಯಿಸಲು ಹಾಗೂ ನವೀಕರಿಸಲು 500ರೂ ಶುಲ್ಕವನ್ನು ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಉಚಿತವಾಗಿರುತ್ತದೆ. ಸೊಸೈಟಿಯ ಸದಸ್ಯರುಗಳು ತಮ್ಮ ಷೇರು ಪಾಸ್ ಪುಸ್ತಕ, ಆಧಾರ್ ಕಾರ್ಡ್ ಹಾಗೂ ತಮ್ಮ ಇತ್ತೀಚಿನ ಭಾವಚಿತ್ರವನ್ನು ತಂದು ಸೊಸೈಟಿಯಲ್ಲಿ ನೋಂದಾವಣೆ ಮಾಡಿಕೊಳ್ಳಬಹುದಾಗಿದೆ.

ಈ ಯೋಜನೆಯನ್ನು ಸೊಸೈಟಿಯ ಎಲ್ಲಾ ಸದಸ್ಯರುಗಳು  ಸದುಪಯೋಗ ಪಡಿಸಿಕೊಳ್ಳಬೇಕೆಂದು  ಸೊಸೈಟಿಯ ಅಧ್ಯಕ್ಷ ಕೆ.ಆರ್.ಶ್ಯಾಮಸುಂದರ್ ಮನವಿ ಮಾಡಿದ್ದಾರೆ. ಹೆಚ್ಚಿನ  ಮಾಹಿತಿಗಾಗಿ ಮೊ: 9986615961 ನ್ನು ಸಂಪರ್ಕಿಸಬಹುದಾಗಿದೆ.

admin
the authoradmin

Leave a Reply

Translate to any language you want