Sports

ಅಂತರ ರಾಷ್ಟ್ರೀಯ ಮಟ್ಟದ ಯೋಗಾ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಸಾಧನೆ ಮಾಡಿದ ಗೀತಾಂಜಲಿಮಣಿಕಂಠ

ಕೆ.ಆರ್.ನಗರ(ಜಿಟೆಕ್ ಶಂಕರ್): ಮಲೇಷಿಯಾದ ಕೌಲಾಲಂಪುರದಲ್ಲಿ ಜನವರಿ 17 ರಿಂದ 20 ರವರೆಗೆ ನಡೆದ 2026ನೇ‌ಸಾಲಿನ ಇಂಡೋ ಮಲೇಷಿಯಾ ಅಂತರ ರಾಷ್ಟ್ರೀಯ ಮಟ್ಟದ ಯೋಗಾ ಚಾಂಪಿಯನ್ ಶಿಪ್ ನಲ್ಲಿ ಪಟ್ಟಣದ ಆಂಜನೇಯ ಬಡಾವಣೆಯ ನಿವಾಸಿ ಗೀತಾಂಜಲಿಮಣಿಕಂಠ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

ಪಟ್ಟಣದ ಸಂತ ಜೋಸೇಫರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 20  ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇವರು ತಮ್ಮ ನಿರಂತರ ಸಾಧನೆಯಿಂದ‌ ಈ ವರೆಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹಲವು ಪ್ರಶಸ್ತಿ ಮತ್ತು ಪದಕವನ್ನು ಗಳಿಸಿದ್ದಾರೆ. ಈಗ ಅಂತರ ರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ 35 ರಿಂದ  40 ವರ್ಷ ವಯೋಮಿತಿಯ ಮಹಿಳಾ ಯೋಗಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸುವುದರೊಂದಿಗೆ ದೇಶದ ಕೀರ್ತಿಯನ್ನು ಮುಗಿಲ್ಲೇತ್ತರಕ್ಕೆ ಏರಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಗೀತಾಂಜಲಿಯವರು ಕೆ.ಆರ್.ನಗರದ ಸುಮುಖ ಯೋಗಾ ಕೇಂದ್ರದ ಶಿಕ್ಷಕರಾದ ರೇವಣ್ಣ ಮತ್ತು ಯೋಗಮಣಿಯವರ ಮಾರ್ಗದರ್ಶನದಲ್ಲಿ‌ ಯೋಗಾಭ್ಯಾಸ ಮಾಡಿ ಈಗ ಭಾರತದ ಕೀರ್ತಿ ಪತ್ತಾಕೆ ಆರಿಸಿದ್ದು ಈಗ ಇತರರಿಗೆ ಮಾದರಿಯಾಗಿದ್ದಾರೆ. ಅಂತರ ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯುವ ಮೂಲಕ ಗೀತಾಂಜಲಿ ಮಣಿಕಂಠ ಅವರು ಮಾಡಿರುವ ಸಾಧನೆಯನ್ನು ಜನತೆ ಕೊಂಡಾಡಿದ್ದಾರೆ.

ಚಿಲಿಯಲ್ಲಿ ಭಾರತದ ಪತಾಕೆ ಹಾರಿಸಿದ ಕೊಡಗಿನ ತೆಕ್ಕಡ ಭವಾನಿ… ಸ್ಕೀಯಿಂಗ್ ನಲ್ಲಿ ಕಂಚಿನ ಪದಕ!

ಕಿಕ್ ಬಾಕ್ಸಿಂಗ್-ಬಾಕ್ಸಿಂಗ್ ನಲ್ಲಿ ಮಿಂಚುತ್ತಿರುವ ಸಿ.ಹೆಚ್.ಸ್ಪೂರ್ತಿಗೆ ವಿಶ್ವಚಾಂಪಿಯನ್ ಆಗುವ ಬಯಕೆ… ಇವರ ಸಾಧನೆಗಳೇನು?

 

 

 

admin
the authoradmin

Leave a Reply

Translate to any language you want