LatestMysore

ಕೆ.ಆರ್.ನಗರಕ್ಕೆ ಪ್ರಯಾಣಿಕರ ಅನುಕೂಲಕ್ಕೆ ಹೆಚ್ಚುವರಿ 11 ಬಸ್ ಗಳು ಮಂಜೂರು: ಡಿ.ರವಿಶಂಕರ್

ಕೆ.ಆರ್.ನಗರ(ಜಿಟೆಕ್ ಶಂಕರ್): ತಾಲೂಕಿನ ಸಾರ್ವಜನಿಕರ ಉಪಯೋಗಕ್ಕಾಗಿ ಸರ್ಕಾರದಿಂದ 11 ಸಾರಿಗೆ ಬಸ್ ಗಳನ್ನು ಕೆ.ಆರ್‌.ನಗರ ಘಟಕಕ್ಕೆ ಮಂಜೂರು ಮಾಡಿಸಲಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ  ನೂತನ ಬಸ್ ಗಳಿಗೆ ಚಾಲನೆ ನೀಡಿ‌ ಮಾತನಾಡಿದ ಅವರು ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಭರವಸೆಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ ಎಂದರು.

ಪ್ರತಿನಿತ್ಯ ಪಟ್ಟಣದಿಂದ ಮೈಸೂರಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದ್ದು ಬಸ್ ಗಳ ಕೊರತೆಯಿಂದ ಅವರುಗಳಿಗೆ ತೊಂದರೆಯಾಗುತ್ತಿತ್ತು ಇದನ್ನು ಮನಗಂಡು ಮೈಸೂರಿಗೆ 2 ಹೆಚ್ಚುವರಿ ಬಸ್ ಗಳನ್ನು ಬಿಡಲಾಗಿದೆ ಎಂದು ಮಾಹಿತಿ ನೀಡಿದರು.

ಕರೋನಾ ಸಂದರ್ಭದಲ್ಲಿ ಕೆಲ ಮಾರ್ಗಗಳನ್ನು ನಿಲ್ಲಿಸಲಾಗಿತ್ತು. ಅದನ್ನು ಮರು ಚಾಲನೆ ನೀಡಲಾಗಿರುವುದರಿಂದ ಬಸ್ ಗಳ ಕೊರತೆ ಉಂಟಾಗಿತ್ತು ಅದನ್ನು ಅರಿತು ಹಿಂದಿನ ಸಾರಿಗೆ ಸಚಿವರಾಗಿದ್ದ ರಾಮಲಿಂಗಾರೆಡ್ಡಿ, ಮತ್ತು ಪ್ರಸ್ತುತ ಸಚಿವರಾದ ಭೈರತಿಸುರೇಶ್ ಅವರಿಗೆ ಹೆಚ್ಚುವರಿ ಬಸ್ ನೀಡುವಂತೆ ಮನವಿ ಸಲ್ಲಿಸಿದ್ದು ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿ 11 ಬಸ್ ಗಳನ್ನು ಮಂಜೂರು ಮಾಡಿದ್ದರು ಅದರಲ್ಲಿ ಇಂದು 2 ಬಸ್ ಗಳಿಗೆ ಸಂಕೇತವಾಗಿ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ 100 ದಿನ‌ ಪೂರೈಸಿದ ಹಿನ್ನಲೆಯಲ್ಲಿ ಸಾರಿಗೆ ಇಲಾಖೆಯಿಂದ ಹೊಸ ಆಪ್ ಬಿಡುಗಡೆ ಗೊಳಿಸಿದ್ದು ಅದರಲ್ಲಿ ಬಸ್ ಗಳು ಎಲ್ಲಿ ಮತ್ತು ಯಾವ ಮಾರ್ಗದಲ್ಲಿ ಸಂಚರಿಸುತ್ತಿದೆ ಎಂಬ ಮಾಹಿತಿಯೊಳಗೊಂಡಂತೆ ಸಾರ್ವಜನಿಕರ ಅನುಕೂಲಕ್ಕಾಗಿ ಮುಂಗಡ ಬುಕಿಂಗ್ ವ್ಯವಸ್ಥೆಯನ್ನು ಆಪ್ ನಲ್ಲಿ ಅಳವಡಿಸಲಾಗಿದ್ದು ಇದನ್ನು ಸಾರ್ವಜನಿಕರು  ಮತ್ತು ಪ್ರಯಾಣಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಮೈಸೂರಿಗೆ ಹೋಗುವವ ಪ್ರಯಾಣಿಕರ ಅನುಕೂಲಕ್ಕಾಗಿ 40 ಲಕ್ಷ ರೂಗಳಲ್ಲಿ ತಂಗುದಾಣಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದ ಶಾಸಕರು ಬೆಂಗಳೂರಿನ ವೈಟ್ ಟ್ಯಾಪಿಂಗ್ ಮಾದರಿಯಲ್ಲಿ ಬಸ್ ನಿಲ್ದಾಣದ ಎರಡು ಬದಿಗಳಲ್ಲಿ ಕಾಂಕ್ರೀಟ್ ರಸ್ತೆ ಮಾಡಲಾಗಿದೆ ಎಂದು ನುಡಿದರು.

ಚುಂಚನಕಟ್ಟೆ ಬಳಿ ನಡೆದ ಬಸ್ ಪಲ್ಪಿ ವಿಷಯ ಸಂಬಂಧ ಪಟ್ಟ ಇಲಾಖೆಯಿಂದ ಗಾಯಗಳುಗಳಿಗೆ ಚಿಕಿತ್ಸಾ ವೆಚ್ಚ ಭರಸುವುದರ ಜತೆಗೆ ವೈಯಕ್ತಿಕ ವಾಗಿಯೂ ಸಹಾಯ ಮಾಡಲಾಗಿದೆ ಎಂದು ಮಾಹಿತಿ ನೀಡಿದ ಅವರು ಬಸ್ ಗಳು ಘಟಕ ಬಿಡುವ ಮುನ್ನ ಸಂಪೂರ್ಣ ಪರೀಕ್ಣೆಗೆ ಒಳಪಡಿಸಿ ನಂತರ ನಿಲ್ದಾಣಕ್ಕೆ ಬರುವಂತೆ ನೋಡಿಕೊಳ್ಳುವಂತೆ ಕೆಎಸ್ ಆರ್ ಟಿಸಿ ಜಿಲ್ಲಾಧಿಕಾರಿಗಳು ಮತ್ತು ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ ಎಂದರು.

ಪ್ರಯಾಣಿಕರಿಗಾಗಿ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಕ್ಕೆ ಮತ್ತು ಸ್ವಚ್ಚತೆಗಾಗಿ ಅನುದಾನ ನೀಡುವುದಾಗಿ‌ ಭರವಸೆ ನೀಡಿದ ಡಿ.ರವಿಶಂಕರ್ ವಿಶೇಷವಾಗಿ ಪ್ರತಿ ಸೋಮವಾರ ಕೆ.ಆರ್.ನಗರದಿಂದ ಮೈಸೂರಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿರುವುದರಿಂದ ಅಂದು ಹೆಚ್ಚುವರಿ ಬಸ್ ವ್ಯವಸ್ಥೆಗೆ ಇಲಾಖೆ ಮುಂದಾಗುವಂತೆ ಆದೇಶಿಸಿದರು.

ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್,  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ವಕ್ತಾರ ಸೈಯದ್ ಜಾಬೀರ್, ಪುರಸಭೆ ಮಾಜಿ ಅಧ್ಯಕ್ಷ ಕೋಳಿಪ್ರಕಾಶ್, ಮಾಜಿ ಸದಸ್ಯರಾದ ನಟರಾಜು ಕೆ.ವಿನಯ್, ಮುಖಂಡರಾದ ಕೆಂಚಿಮಂಜು, ನಟಬುದ್ದಿ, ಶಿವಕುಮಾರ್, ಸೇರಿದಂತೆ ಇನ್ನಿತರರು ಹಾಜರಿದ್ದರು.

admin
the authoradmin

Leave a Reply