LatestNews

ಯಳಂದೂರು ಭೂ ಲಕ್ಷ್ಮೀ ವರಾಹಸ್ವಾಮಿ ದೇವಾಲಯದ ಅದ್ಧೂರಿ ವಾರ್ಷಿಕೋತ್ಸವ

ಯಳಂದೂರು(ನಾಗರಾಜ ವೈ.ಕೆ,ಮೊಳೆ): ಯಳಂದೂರು ಪಟ್ಟಣದ ಶ್ರೀ ಭೂಲಕ್ಷ್ಮೀ ವರಾಹಸ್ವಾಮಿ ದೇವಾಲಯದ ಪ್ರಥಮ ವಾರ್ಷಿಕೋತ್ಸವ, ಧ್ವಜಸ್ತಂಭ ಲೋಕಾರ್ಪಣೆ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮವು ವಿಜೃಂಭಣೆಯಿಂದ ಯಶಸ್ವಿಯಾಗಿ ಜರುಗಿತು.

ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಅನುಪಸ್ಥಿತಿಯಲ್ಲಿ ಮಾಜಿ ಸಚಿವ ಎನ್ ಮಹೇಶ್ ಹಾಗೂ ನಾಯಕ ಸಮಾಜದ ಮುಖಂಡರಾದ ಎಂ. ರಾಮಚಂದ್ರ ಹಾಗೂ ವೈದ್ಯ ಅಶ್ವಿನಿ ಕುಟುಂಬದವರ ಅಮೃತ ಹಸ್ತದಿಂದ ಗರುಡಗಂಬ ಲೋಕಾರ್ಪಣೆಗೊಂಡಿದ್ದು, ನಂತರ ಜಹಾಂಗೀರ್ ದಾರ್ ಬಂಗಲೆ ಮೈದಾನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಗಣ್ಯರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ, ಭಕ್ತಿ-ಪೂರ್ಣ ವಾತಾವರಣದಲ್ಲಿ ಆಯೋಜಿಸಿದ್ದ ದೇವಾಲಯದ ಜೀರ್ಣೋದ್ಧಾರದ ಧರ್ಮಕರ್ತರು ಹಾಗೂ ಅಶ್ವಿನಿ ಸಂಸ್ಥೆಯ ಮಾಲೀಕರಾದ ವೈದ್ಯ ದಂಪತಿ ಡಾ. ಶಶಿಕಲಾ ರಮೇಶ್ ಹಾಗೂ ಡಾ. ರಮೇಶ್ ಉಡುಪ ಮತ್ತು ಕುಟುಂಬದವರಿಗೆ ವೇದಿಕೆಯಲ್ಲಿದ್ದ ಗಣ್ಯರು ಹಾಗೂ ನೆರೆದಿದ್ದ ಸಾವಿರಾರು ಭಕ್ತರು ಹೃತ್ಪೂರ್ವಕ ಧನ್ಯವಾದ ತಿಳಿಸಿದರು.

ದೇವಾಲಯದ ಪುನರುಜ್ಜೀವನಕ್ಕೆ ವೈದ್ಯ ದಂಪತಿ ಸಲ್ಲಿಸಿದ ಸೇವೆ, ತೋರಿದ ಭಕ್ತಿ ಮತ್ತು ಸಮಾಜಮುಖಿ ಕಾರ್ಯವನ್ನು ಈ ಸಂದರ್ಭದಲ್ಲಿ ಗಣ್ಯರು ಮುಕ್ತಕಂಠದಿಂದ ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಹಾಗೂ ದೇವಸ್ಥಾನ ಧರ್ಮಕರ್ತರಾದ ವೈದ್ಯ ದಂಪತಿಗಳಾದ ಡಾ. ಶಶಿಕಲಾ ರಮೇಶ್ ಹಾಗೂ ಡಾ.ರಮೇಶ್ ಉಡುಪ ಕುಟುಂಬ ವರ್ಗ ಮತ್ತು ಮಾಜಿ ಸಚಿವರು ಎನ್. ಮಹೇಶ್, ಮಾಜಿ ಶಾಸಕ ಎಸ್. ಬಾಲರಾಜು, ಡಾ. ಲಕ್ಷ್ಮಣ ತೆಲಗಾವಿ,ಕೇಂದ್ರ ಬರಪರಿಹಾರ ಸಮಿತಿ ಮಾಜಿ ಅಧ್ಯಕ್ಷರು ಹಾಗೂ ನಾಯಕ ಸಮಾಜದ ಅಧ್ಯಕ್ಷರು ಎಂ. ರಾಮಚಂದ್ರ,ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷರು ಹೊಂಗನೂರು ಚಂದ್ರು,ಜಿ

ಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಜೆ. ಯೋಗೇಶ್,ತಾಲ್ಲೂಕು ನಾಯಕ ಮಂಡಳಿ ಅಧ್ಯಕ್ಷರು ಮುರಳಿಕೃಷ್ಣ,ಮುಖಂಡರು ಕೂಡ್ಲುರು ಶ್ರೀಧರಮೂರ್ತಿ, ಶಿವು ವಿರಾಟ್,ಸಂತೋಷ,ನಾಗೇಂದ್ರ,ಮಹೇಶ್, ರಾಮನಾಯಕ,ಸೂರ್ಯನಾರಾಯಣ,ಬಂಕ್ ಅನಿಲ್, ಭೀಮಪ್ಪ,ರಘು,ಕಿಟ್ಟಿ, ಪ್ರೊ. ರೋಹಿಣಿ, ದೀಪಕ್ ಪಾಳೇಗಾರ್ ಸೇರಿದಂತೆ ಹಲವು ಗಣ್ಯರು, ಸೇವಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.

admin
the authoradmin

Leave a Reply