janamanakannada > Blog > Latest > Mysore > ಬಿಳಿಗಿರಿರಂಗನ ಬೆಟ್ಟದ ಬಳಿ ಪತ್ತೆಯಾದ 10 ಅಡಿ ಉದ್ದದ ಹೆಬ್ಬಾವು ಮರಳಿ ಅರಣ್ಯಕ್ಕೆ..
ಯಳಂದೂರು(ನಾಗರಾಜ ವೈ.ಕೆ.ಮೋಳೆ): ಬಿಳಿಗಿರಿರಂಗನ ಬೆಟ್ಟದ ಪೂಜಾರಿ ರವಿ ಅವರ ಜಮೀನಿನಲ್ಲಿ ಸುಮಾರು 10 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿದ್ದು, ಸ್ಥಳೀಯರ ಸಮಯೋಚಿತ ಕಾರ್ಯಾಚರಣೆಯಿಂದ ಅದನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ.
ಜಮೀನಿನಲ್ಲಿ ಹೆಬ್ಬಾವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಿರಣ್, ವೈ.ಕೆ. ಮೋಳೆ ಹಾಗೂ ಆದಿತ್ಯ ಅವರು ಸ್ಥಳಕ್ಕೆ ತೆರಳಿ ಯಾವುದೇ ಅಪಾಯವಾಗದಂತೆ ಹೆಬ್ಬಾವನ್ನು ಹಿಡಿದಿದ್ದಾರೆ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಇಲಾಖೆಯ ಮಾರ್ಗದರ್ಶನದಂತೆ ಹೆಬ್ಬಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.

ಹೆಬ್ಬಾವು ಪತ್ತೆಯಾದ ಸುದ್ದಿ ತಿಳಿದು ಸ್ಥಳೀಯರಲ್ಲಿ ಕೆಲಕಾಲ ಆತಂಕ ಮೂಡಿದರೂ, ಅದನ್ನು ಕೊಲ್ಲದೆ ಸುರಕ್ಷಿತವಾಗಿ ರಕ್ಷಿಸಿ ಅರಣ್ಯಕ್ಕೆ ಬಿಡುವ ಮೂಲಕ ವನ್ಯಜೀವಿ ಸಂರಕ್ಷಣೆಯ ಜವಾಬ್ದಾರಿಯನ್ನು ಮೆರೆದಿದ್ದಾರೆ.
Tags:nagaraj y k mole
admin








