LatestLife style

ಅಪೋಲೊ ಸಂಸ್ಥೆಯ ಟೋಟಲ್ ಹೆಲ್ತ್ ಗ್ರಾಮೀಣ ಆರೋಗ್ಯ ಸೇವೆಯು ಬದುಕಿನಲ್ಲಿ ಪರಿಣಾಮ ತಂದ ವಿಶಿಷ್ಟ ಮಾದರಿ

ಅರಗೊಂಡ, ಆಂಧ್ರಪ್ರದೇಶ:  ಆರೋಗ್ಯ ಸೇವೆಯು ಸಮುದಾಯದ ಬದಲಾವಣೆಗೆ ಹೇಗೆ ಶಕ್ತಿಯಾಗಬಲ್ಲದು ಎಂಬುದನ್ನು ಅಪೋಲೊ ಹಾಸ್ಪಿಟಲ್ಸ್ ಎಂಟರ್‌ಪ್ರೈಸ್ ಲಿಮಿಟೆಡ್ (ಎ.ಎಚ್.ಇ.ಎಲ್) ಮತ್ತು ಅಪೋಲೊ ಫೌಂಡೇಶನ್ ಇಂದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಅರಗೊಂಡದಲ್ಲಿ ಟೋಟಲ್ ಹೆಲ್ತ್ ಮಾದರಿಯ ಪ್ರಭಾವವನ್ನು ನಿರೂಪಿಸಿದೆ.

ಒಂದು ಗ್ರಾಮೀಣ ಆಸ್ಪತ್ರೆಯೊಂದಿಗೆ ಪ್ರಾರಂಭವಾದ ಈ ಯೋಜನೆ, ಇಂದು ಸಮುದಾಯದ ಸಮಗ್ರ ಅಭಿವೃದ್ಧಿಯ ಮಾದರಿಯಾಗಿ ಬೆಳೆದಿದೆ. ಇದು ಆರೋಗ್ಯ ಸೇವೆ, ರೋಗತಡೆಯ ಶಿಕ್ಷಣ, ಪೋಷಕಾಂಶಯುಕ್ತ ಆಹಾರ, ಸುರಕ್ಷಿತ ಕುಡಿಯುವ ನೀರು, ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯದ ಅವಕಾಶಗಳನ್ನು ಒಂದೆಡೆ ತಂದು 483 ಮಿಲಿಯನ್‌ ಗೂ ಹೆಚ್ಚು ಜನರಿಗೆ ತಲುಪಿದೆ.

2013 ರಲ್ಲಿ ಅರಗೊಂಡದಲ್ಲಿ ಎ.ಎಚ್.ಇ.ಎಲ್.ನ ಸಿಎಸ್ಆರ್ ಉಪಕ್ರಮ ಅಪೋಲೊ ಫೌಂಡೇಶನ್ ಪ್ರಾರಂಭಿಸಿದ ಟೋಟಲ್ ಹೆಲ್ತ್ ವೈದ್ಯಕೀಯ ಚಿಕಿತ್ಸೆಯನ್ನೂ ಮೀರಿದ ಜೀವನಪರ್ಯಂತ ಆರೋಗ್ಯ ಮತ್ತು ಯೋಗಕ್ಷೇಮದ ಅಪೋಲೊ ದೂರದೃಷ್ಟಿಯನ್ನು ವಿಸ್ತರಿಸುತ್ತದೆ.

ಈ ಕಾರ್ಯಕ್ರಮವು ಪ್ರಾರಂಭವಾದ 13 ವರ್ಷಗಳಲ್ಲಿ 23 ಕ್ಕೂ ಹೆಚ್ಚು ಪ್ರದೇಶಗಳಿಗೆ ವಿಸ್ತರಿಸಿದ್ದು, 2 ಲಕ್ಷಕ್ಕೂ ಹೆಚ್ಚು ಯೋಗ ತರಬೇತಿ ಅವಧಿಗಳನ್ನು ನಡೆಸಿದೆ ಮತ್ತು ತನ್ನ ಪೌಷ್ಟಿಕ ಆಹಾರ ಯೋಜನೆಯ ಮೂಲಕ 10.89 ಲಕ್ಷಕ್ಕೂ ಹೆಚ್ಚು ಭೋಜನಗಳನ್ನು ಒದಗಿಸಿದೆ. ಜೊತೆಗೆ, ಜವಳಿ ಮತ್ತು ಸೆಣಬಿನ ಉತ್ಪಾದನಾ ಘಟಕಗಳ ಮೂಲಕ 300 ಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಟ್ಟಿದೆ.

ಅವರ ಈ ಪಯಣದ ಕುರಿತು ಮಾತನಾಡುತ್ತಾ, ಅಪೋಲೊ ಹಾಸ್ಪಿಟಲ್ಸ್ ಗ್ರೂಪ್‌ ನ ಸಂಸ್ಥಾಪಕ ಅಧ್ಯಕ್ಷ ಡಾ. ಪ್ರತಾಪ್ ಸಿ. ರೆಡ್ಡಿ ಅವರು, “ಅರಗೊಂಡ ಎಂಬುದು ನನ್ನ ಪಯಣ ಪ್ರಾರಂಭವಾದ ಸ್ಥಳ. ಗುಣಮಟ್ಟದ ಮತ್ತು ಕೈಗೆಟುಕುವ ಆರೋಗ್ಯ ಸೇವೆಯು ಭಾರತದ ಪ್ರತಿಯೊಬ್ಬ ಪ್ರಜೆಗೂ, ಅವರು ಎಲ್ಲೇ ವಾಸಿಸುತ್ತಿದ್ದರೂ ತಲುಪಬೇಕು ಎಂಬ ನನ್ನ ನಂಬಿಕೆಯನ್ನು ಇದು ಸದಾ ಬಲಪಡಿಸಿದೆ.

ನಾವು ಈ ಗ್ರಾಮಕ್ಕೆ ಆಧುನಿಕ ವೈದ್ಯಕೀಯ ಸೇವೆಯನ್ನು ತರುವ ಮೂಲಕ ನಮ್ಮ ಪ್ರಯಾಣವನ್ನು ಪ್ರಾರಂಭಿಸಿದೆವು. ಆದರೆ ಆರೋಗ್ಯ ಸೇವೆಯ ನೈಜ ಉದ್ದೇಶವು ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವುದರಲ್ಲಿ ಮಾತ್ರವಲ್ಲ – ಜನರು ಅತ್ಯುತ್ತಮವಾಗಿ ಜೀವಿಸಲು ಸೂಕ್ತ ವಾತಾವರಣವನ್ನು ನಿರ್ಮಿಸಿಕೊಡುವುದರಲ್ಲಿದೆ. ವೈದ್ಯಕೀಯ ಚಿಕಿತ್ಸೆಯು ಜೀವಗಳನ್ನು ಉಳಿಸಬಹುದು, ಆದರೆ ಒಂದು ತಲೆಮಾರಿನ ಆರೋಗ್ಯವನ್ನೇ ಬದಲಾಯಿಸಬೇಕಾದರೆ, ನಾವು ಜೀವನ ನಡೆಸುವ ಪರಿಸ್ಥಿತಿಗಳನ್ನು ಸಹ ಬದಲಾಯಿಸಬೇಕು.

ಅರಗೊಂಡವು ತನ್ನ ವ್ಯಾಪ್ತಿಗಿಂತಲೂ ದೊಡ್ಡದಾದ ಒಂದು ಚಿಂತನೆಗೆ ಸಾಕ್ಷಿಯಾಗಿ ನಿಲ್ಲುತ್ತದೆ ಎಂದು ನಾನು ನಂಬುತ್ತೇನೆ: ಅದು ಸಮೃದ್ಧ ಹಾಗೂ ಆರೋಗ್ಯಕರ ಭಾರತವು ಕೇವಲ ದೊಡ್ಡ ನಗರಗಳಲ್ಲಿ ಮಾತ್ರವಲ್ಲ, ಅದರ ಅತ್ಯಂತ ಸಣ್ಣ ಹಳ್ಳಿಗಳಲ್ಲೂ ನಿರ್ಮಾಣಗೊಳ್ಳುತ್ತದೆ ಎಂದು ತೋರಿಸಿದೆ” ಎಂದು ಹೇಳಿದರು.

ಈ ಕುರಿತು ಅಪೋಲೊ ಹಾಸ್ಪಿಟಲ್ಸ್ ಎಂಟರ್‌ಪ್ರೈಸ್ ಲಿಮಿಟೆಡ್‌ನ ಎಕ್ಸಿಕ್ಯೂಟಿವ್ ವೈಸ್ ಚೇರ್ ಪರ್ಸನ್ ಶ್ರೀಮತಿ ಪ್ರೀತಾ ರೆಡ್ಡಿ ಅವರು, “ಕಳೆದ ಎರಡು ದಶಕಗಳಲ್ಲಿ, ಅಪೋಲೊ ಹಾಸ್ಪಿಟಲ್ಸ್ ಅರಗೊಂಡವು ಆರೋಗ್ಯ ಸೇವೆಯ ಪ್ರಭಾವವು ಕೇವಲ ವೈದ್ಯಕೀಯ ಚಿಕಿತ್ಸೆಗೆ ಮಾತ್ರ ಸೀಮಿತವಾಗಿರದೆ ಅದನ್ನೂ ಮೀರಿದ್ದಾಗಿದೆ ಎಂಬುದನ್ನು ನಿರೂಪಿಸಿದೆ. ತನ್ನ ನೂತನ ಮತ್ತು ಪ್ರಗತಿಪರ ಮಾದರಿಯ ಮೂಲಕ, ಈ ಆಸ್ಪತ್ರೆಯು ಜನರ ಆರೋಗ್ಯ ಮಟ್ಟವನ್ನು ಸುಧಾರಿಸುವುದು ಮಾತ್ರವಲ್ಲದೆ, ಮಹಿಳೆಯರಿಗೆ ಜೀವನೋಪಾಯದ ಮಾರ್ಗಗಳನ್ನು ಕಂಡುಕೊಳ್ಳಲು ನೆರವಾಗಿದೆ, ಕುಟುಂಬಗಳನ್ನು ಸಬಲಗೊಳಿಸಿದೆ ಮತ್ತು ಸಮುದಾಯಗಳು ತಮ್ಮದೇ ಆದ ಯೋಗಕ್ಷೇಮದ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವಂತೆ ಮಾಡಿದೆ” ಎಂದರು.

ಅಪೋಲೊ ಹಾಸ್ಪಿಟಲ್ಸ್ ಎಂಟರ್‌ಪ್ರೈಸ್ ಲಿಮಿಟೆಡ್‌ನ ಸಿಎಸ್‌ಆರ್ ವೈಸ್ ಚೇರ್ ಪರ್ಸನ್ ಹಾಗೂ ಪ್ರಾಜೆಕ್ಟ್ಸ್ ಡೈರೆಕ್ಟರ್ ಶ್ರೀಮತಿ ಉಪಾಸನಾ ಕಾಮಿನೇನಿ ಕೊನಿದೇಲ ಅವರು, “ದೀರ್ಘಕಾಲೀನ ಆರೋಗ್ಯಕರ ಬದಲಾವಣೆಗಳು ಆಸ್ಪತ್ರೆಯ ನಾಲ್ಕು ಗೋಡೆಗಳನ್ನು ಮೀರಿಯೂ ನಿರ್ಮಾಣಗೊಳ್ಳುತ್ತವೆ ಎಂಬುದನ್ನು ಅರಗೊಂಡ ತೋರಿಸಿಕೊಟ್ಟಿದೆ. ನಾವಿಲ್ಲಿ ಕಾಣುತ್ತಿರುವ ಈ ಬದಲಾವಣೆಯು, ಸಮಗ್ರ ಹಾಗೂ ಸಮುದಾಯದ ನೇತೃತ್ವದ ಆರೋಗ್ಯ ಮಾದರಿಗಳು ಹೇಗೆ ಸುಸ್ಥಿರ ಬದಲಾವಣೆಯನ್ನು ತರಬಲ್ಲವು ಮತ್ತು ಇತರ ರಾಜ್ಯಗಳು ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಮರುಸೃಷ್ಟಿಸಲು ಒಂದು ಅತ್ಯುತ್ತಮ ಮಾದರಿಯಾಗಿ ಹೇಗೆ ಸೇವೆಯನ್ನು ಒದಗಿಸಬಲ್ಲವು ಎಂಬುದನ್ನು ನಿರೂಪಿಸುತ್ತದೆ” ಎಂದರು.

ಮನೆಬಾಗಿಲಿಗೆ ತಲುಪಿದ ಆರ್ಥೋಪೆಡಿಕ್ ಸೇವೆ

ವಿಶ್ವದರ್ಜೆಯ ವೈದ್ಯಕೀಯ ಸೇವೆಯು ಕೇವಲ ದೊಡ್ಡ ನಗರಗಳಿಗಷ್ಟೇ ಸೀಮಿತವಾಗಿರಬಾರದು ಎಂಬ ತಮ್ಮ ದೃಢ ನಂಬಿಕೆಯಿಂದ ಪ್ರೇರಿತರಾಗಿ, ಅಪೋಲೊ ಹಾಸ್ಪಿಟಲ್ಸ್ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷರಾದ ಡಾ. ಪ್ರತಾಪ್ ಸಿ. ರೆಡ್ಡಿ ಅವರು 2000 ನೇ ಇಸವಿಯಲ್ಲಿ ತಮ್ಮ ಜನ್ಮಸ್ಥಳವಾದ ಅರಗೊಂಡದಲ್ಲಿ 50 ಹಾಸಿಗೆಗಳ ದ್ವಿತೀಯ ಹಂತದ ಆಸ್ಪತ್ರೆಯನ್ನು ಸ್ಥಾಪಿಸಿದರು.

ಇಪ್ಪತ್ತಾರೂ ವರ್ಷಗಳ ನಂತರ, ಅಪೋಲೊ ಹಾಸ್ಪಿಟಲ್ಸ್ ಅರಗೊಂಡವು 1.67 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಸೇವೆ ಸಲ್ಲಿಸಿದೆ ಮತ್ತು 1,000 ಸಂಪೂರ್ಣ ಮೊಣಕಾಲು ಕೀಲು ಬದಲಿ ಶಸ್ತ್ರಚಿಕಿತ್ಸೆಗಳು ಸೇರಿದಂತೆ ಒಟ್ಟು 12,000 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಸಾಧನೆಯು ಸುಧಾರಿತ ವೈದ್ಯಕೀಯ ಸೇವೆಯನ್ನು ಗ್ರಾಮೀಣ ಸಮುದಾಯಗಳಿಗೆ ಹೇಗೆ ತಲುಪಿಸಬಹುದು ಮತ್ತು ವಿಶೇಷ ಚಿಕಿತ್ಸೆಗಾಗಿ ರೋಗಿಗಳು ದೂರದ ನಗರಗಳಿಗೆ ಪ್ರಯಾಣಿಸಬೇಕಾದ ಅಗತ್ಯವನ್ನು ಹೇಗೆ ಕಡಿಮೆ ಮಾಡಬಹುದು ಎಂಬುದನ್ನು ಎತ್ತಿಹಿಡಿಯುತ್ತದೆ.

ಕ್ಯಾಲಿಫೋರ್ನಿಯಾ ಯುನಿವರ್ಸಿಟಿ ಆಫ್ ಸೈನ್ಸ್ ಅಂಡ್ ಮೆಡಿಸಿನ್‌ ನ ಕಾರ್ಡಿಯಾಲಜಿ ವಿಭಾಗದ ಕ್ಲಿನಿಕಲ್ ಅಸೋಸಿಯೇಟ್ ಪ್ರೊಫೆಸರ್ ಆದ ಡಾ. ಜಯಪಾಲ್ (ಅನಿಲ್) ರೆಡ್ಡಿ ಅವರು, “ಹೀಲ್ ಇನ್ ಇಂಡಿಯಾ’ ದೃಷ್ಟಿಕೋನಕ್ಕೆ ಅಪೋಲೊ ಹಾಸ್ಪಿಟಲ್ಸ್ ಅರಗೊಂಡ ಅತ್ಯುತ್ತಮ ಉದಾಹರಣೆಯಾಗಿದೆ. ವಿಶ್ವದರ್ಜೆಯ ವೈದ್ಯಕೀಯ ಸೇವೆಯು ಭೌಗೋಳಿಕ ಗಡಿಗಳಿಗೆ ಸೀಮಿತವಾಗಿರಬೇಕಾಗಿಲ್ಲ ಎಂಬುದನ್ನು ಇದು ಸಾಬೀತುಪಡಿಸಿದೆ. ಅಮೆರಿಕದಲ್ಲಿ ವೈದ್ಯ ವೃತ್ತಿ ಮಾಡುತ್ತಿರುವ ಹಾಗೂ ಅರಗೊಂಡದ ನಿವಾಸಿಯಾಗಿ, ನನ್ನ ಸ್ವಂತ ಗ್ರಾಮದಲ್ಲೇ ಅತ್ಯಾಧುನಿಕ ಶಸ್ತ್ರಚಿಕಿತ್ಸೆ, ತುರ್ತು ನಿಗಾ, ಆಪತ್ಕಾಲೀನ ಸೇವೆಗಳು ಮತ್ತು ರೋಗನಿರ್ಣಯ ಸೌಲಭ್ಯಗಳು ಲಭ್ಯವಿರುವುದನ್ನು ಕಂಡು ನನಗೆ ಹೆಮ್ಮೆಯೆನಿಸುತ್ತದೆ. ಡಾ. ಪ್ರತಾಪ್ ಸಿ. ರೆಡ್ಡಿ ಅವರ ದೂರದೃಷ್ಟಿಯು ಕೇವಲ ಒಂದು ಆಸ್ಪತ್ರೆಯನ್ನು ಮಾತ್ರವಲ್ಲದೆ, ಮುಂದಿನ ತಲೆಮಾರುಗಳಿಗಾಗಿ ಶಾಶ್ವತವಾದ ಆರೋಗ್ಯ ಸೇವೆಯ ಪರಂಪರೆಯನ್ನು ನಿರ್ಮಿಸಿದೆ.” ಎಂದರು

admin
the authoradmin

Leave a Reply