LatestMysore

ಗೆಲ್ಲುವನ್ನೇ ಮೂಲ ಗುರಿಯಾಗಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ  ನೇಮಕ: ಬೀರಿಹುಂಡಿ‌ ಬಸವಣ್ಣ

ಕೆ.ಆರ್‌.ನಗರ(ಜಿಟೆಕ್ ಶಂಕರ್): ಪಕ್ಷ ಸಂಘಟನೆಯನ್ನು ಬಲಪಡಿಸಿ 2029ರ ಲೋಕಸಭೆ ಮತ್ತು 2028ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವನ್ನೇ ಮೂಲ ಗುರಿಯನ್ನಾಗಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತದೆ ಎಂದು  ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಬೀರಿಹುಂಡಿ‌ ಬಸವಣ್ಣ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸಂಘಟನಾ ಸೃಜನ್ 2 ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷ ಸ್ಥಾನಕ್ಕೆ 35  ರಿಂದ 40 ವರ್ಷಗಳು ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳಿಗೆ 40 ರಿಂದ 60 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ ಎಂದರು.

ಇದರ ಜತೆಗೆ ಮುಂಚೂಣಿ ಘಟಕದ ಪದಾಧಿಕಾರಿಗಳನ್ನು ನೇಮಕಕ್ಕೆ ವಯೋಮಿತಿಯ ಸಡಲಿಕೆ ಇದ್ದು ಪಕ್ಷ ಸಂಘಟನೆಯ ಚಾತುರ್ಯದ ಮಾನದಂಡ‌ವನ್ನು ಅನುಸರಿಸಲಾಗುತ್ತದೆ ಎಂದು ತಿಳಿಸಿದ ಅಧ್ಯಕ್ಷರು ಪಕ್ಷ ಯಾರೊಬ್ಬರ ಶಿಫಾರಸ್ಸುಗೆ ಮನ್ನಣೆ ನೀಡದೆ ಕಟ್ಟ ಕಡೆಯ ಕಾರ್ಯಕರ್ತರಿಗೆ ಜವಬ್ದಾರಿ ನೀಡಲು ಎಐಸಿಸಿ‌ಯಿಂದ ಸೂಚನೆ ನೀಡಿರುವುರಿಂದ ಆಕಾಂಕ್ಷಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು ಎಂದು ತಿಳಿಸಿದರು.

ತಾವುಗಳು ನೀಡಿದ ಅರ್ಜಿಗಳನ್ನು ಕೆಪಿಸಿಸಿಯ ವೀಕ್ಷಕರು  ಕೆಪಿಸಿಸಿ ಸಮಿತಿಯ ಮುಂದಿಟ್ಟು ಪಕ್ಷದ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಪಕ್ಷ ಸಂಘಟನೆಯ  ಜವಾಬ್ದಾರಿ ವಹಿಸುತ್ತದೆ ಎಂದು ಮಾಹಿತಿ ನೀಡಿದ ಅಧ್ಯಕ್ಷರು ಇದರಲ್ಲಿ ಯಾವುದೇ ವೈಮನಸ್ಯು ಇಟ್ಟುಕೊಳ್ಳದೆ ಜವಬ್ದಾರಿ ಇರಲಿ ಇರದಿರಲಿ ಪಕ್ಷದ ಜತೆಗೆ ಸದಾ ಕಾರ್ಯಕತರು ಇರಬೇಕು ಎಂದು ಮನವಿ ಮಾಡಿದರು.

ಪದಾಧಿಕಾರಿಗಳಾದವರು ಅಧಿಕಾರ ಎಂದು ತಿಳಿಯದೆ ಅದನ್ನು  ಜವಾಬ್ದಾರಿ ಎಂದು ಭಾವಿಸಿ ಮುಂಬರುವ ಜಿ.ಪಂ, ತಾ.ಪಂ ಮತ್ತು ಸ್ಥಳೀಯ ಸಂಸ್ಥೆಗಳ‌ ಚುನಾವಣೆಗಳಲ್ಲಿ ಗೆಲ್ಲವಿನ ನಗೆ ಬೀರಿ ಅಧಿಕಾರದ ಗದ್ದುಗೆ ಏರಲು ಶ್ರಮಿಸಬೇಕು ಎಂದು ಸೂಚಿಸಿದ ಬೀರಿಹುಂಡಿಬಸವಣ್ಣ ಪಕ್ಷ ಇದರೇ ಮಾತ್ರ ನಾವು ಆಗಾಗಿ‌ ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಕ್ಕೆ‌ ಹೋಗಬಾರದು ಎಂದು ಹೇಳಿದರು.

ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಮಾತನಾಡಿ ಪದಾಧಿಕಾರಿಗಳ ಆಯ್ಕೆ ಅಧಿಕಾರ ಅಲ್ಲ ಅದರು ಜವಬ್ದಾರಿ ಆದರಿಂದ ಪಕ್ಷ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಅದು ದೊರೆಯಲಿದೆ.         ಮುಂಬರುವ‌ ಜಿ.ಪಂ.ಮತ್ತು ತಾ.ಪಂ. ಚುನಾವಣೆಯಲ್ಲಿ ಗೆಲುವ ಅಭ್ಯರ್ಥಿಗಳಿಗಷ್ಟೇ ಪಕ್ಷ ಟಿಕೇಟ್ ನೀಡುವುದು ಆದರಿಂದ ಆಕಾಂಕ್ಷಿಗಳು‌ ಟಿಕೇಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಪಕ್ಷಾಂತರ ಮಾಡದೆ ನಮ್ಮ ಅಭ್ಯರ್ಥಿ ಗೆಲುವಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ ಅವರು  ಪಕ್ಷವನ್ನು ನಂಬಿದವರಿಗೆ ಮುಂದಿನ ದಿನಗಳಲ್ಲಿ‌ ಉತ್ತಮ ಸ್ಥಾನಮಾನ ಕಲ್ಪಿಸಲಾಗುತ್ತದೆ ಎಂದು ಭರವಸೆ‌ ನೀಡಿದರು.

ಕೆಪಿಸಿಸಿ  ಉಸ್ತುವಾರಿ  ವೀಕ್ಷಕರಾದ ಮುದ್ದಹನುಮೇಗೌಡ, ಹೆಚ್.ಸಿ.ಬಸವರಾಜು, ತ್ಯಾಗರಾಜು ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ಯೋಗೀಶ್, ಕೆಪಿಸಿಸಿ ಕಾರ್ಯಕಾರಿ‌ಸಮಿತಿ ಸದಸ್ಯ ಸಿ.ಪಿ.ರಮೇಶ್, ಕಾಂಗ್ರೆಸ್ ಮುಖಂಡರಾದ ಜಿ.ಎಸ್.ವೆಂಕಟೇಶ್, ಚೇತನ್, ಬಸಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ವಕ್ತಾರ ಸೈಯದ್ ಜಾಬೀರ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವ್ಯಾನ್ ಸುರೇಶ್, ಪುರಸಭೆ ಮಾಜಿ ಅಧ್ಯಕ್ಷ ಕೋಳಿಪ್ರಕಾಶ್, ಮುಖಂಡರಾದ ಕಲ್ಲಹಳ್ಳಿಶ್ರೀನಿವಾಸ್, ತಿಪ್ಪೂರು ಮಹದೇವನಾಯಕ, ವಕೀಲ ಕಾಂತರಾಜು,  ಸುಧಾಕರ್, ದೆಗ್ಗನಹಳ್ಳಿಆನಂದ್, ಕೆ.ಪಿ.ಜಗದೀಶ್, ಮುಂಜನಹಳ್ಳಿಮಹದೇವನಾಯಕ ಸೇರಿದಂತೆ ಇನ್ನಿತರರು ಹಾಜರಿದ್ದರು.

 

admin
the authoradmin

Leave a Reply