LatestMysore

ಭಗವಾನ್ ಬುದ್ಧರ ರಾಷ್ಟ್ರೀಯ ಫಿಲೋಶಿಪ್ ಪ್ರಶಸ್ತಿಗೆ ನಿಂಗರಾಜ್ ಮಲ್ಲಾಡಿ ಆಯ್ಕೆ

ಮೈಸೂರು: ಜಿಲ್ಲೆಯ ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದ ವಾಸವಿದ್ದ ಕಳೆದ 30 ವರ್ಷಗಳಿಂದ ದೀನ ದಲಿತರ, ಅಸಹಾಯಕರ, ದಿಕ್ಕು ದನಿಯಿಲ್ಲದ ಜನರ ಸೇವೆ ಮಾಡುತ್ತಾ ಬರುತ್ತಿರುವ ದಸಂಸ ದ ರಾಜ್ಯ ಸಂಘಟನಾ ಸಂಚಾಲಕರಾದ ನಿಂಗರಾಜ್‌ ಮಲ್ಲಾಡಿ ರವರಿಗೆ ನವದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ಭಗವಾನ್ ಬುದ್ಧರ ರಾಷ್ಟ್ರೀಯ ಫೆಲೋಶಿಪ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಎಸ್. ಪಿ. ಸುಮನಾಕ್ಷರ ಹಾಗೂ ಕರ್ನಾಟಕ ರಾಜ್ಯದ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ರಾಷ್ಟ್ರೀಯ ಜನರಲ್ ಸೆಕ್ರೆಟರಿ ಹೆಚ್.ಬಿ ಸಂಪತ್ ರವರು ತಿಳಿಸಿದ್ದಾರೆ.

ಇವರ ಬಗ್ಗೆ  ಜನರಲ್ ಸೆಕ್ರೆಟರಿ ರವರಾದ ಹೆಚ್.ಬಿ. ಸಂಪತ್ ರವರು ಮಾತನಾಡಿ ಹಲವಾರು ವರ್ಷಗಳಿಂದ ನಿಂಗರಾಜ್ ಮಲ್ಲಾಡಿ ರವರು ಯಾವುದೇ ಜಾತಿ, ಧರ್ಮದ ಬೇದವಿಲ್ಲದೆ ಬಡ ಜನರ ನೋವು ಕಷ್ಟಗಳಿಗೆ ಸ್ಪಂದಿಸುತ್ತಾ ಅವರಿಗೆ ರಕ್ಷಣೆ ಮತ್ತು ನ್ಯಾಯ ಕೊಡಿಸುವಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ.

ಜಾತಿ ಜಾತಿಗಳ ನಡುವೆ ಸಂಘರ್ಷ ಉಂಟಾದಾಗ ಇವರು ಯಾವುದೇ ಉದ್ವೇಗಕ್ಕೊಳಗಾಗದೆ ಗೌತಮ ಬುದ್ಧರ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ರವರ ಸಿದ್ಧಾಂತದಂತೆ ಪ್ರೀತಿ, ಸಾಮರಸ್ಯದಲ್ಲಿ ಸಮಸ್ಯೆಗಳನ್ನು ಬಗೆಹರಿಸುತ್ತಾ ಸಮಾಜದಲ್ಲಿ ಶಾಂತಿಯ ಸಮಾಜವನ್ನು ನಿರ್ಮಾಣ ಮಾಡಲು ಶ್ರಮಿಸುತ್ತಿದ್ದಾರೆ. ಸಮಾಜದಲ್ಲಿ ದಿಕ್ಕು ದನಿಯಿಲ್ಲದ ನಿರ್ಗತಿಕ ಅಲೆಮಾರಿ ಸಮುದಾಯಗಳಿಗೆ ಶಾಶ್ವತ ಬದುಕು ಕಟ್ಟಿಕೊಡಲು ಅವಿರತವಾಗಿ ಶ್ರಮಿಸುತ್ತಿದ್ದಾರೆ.

ಕೋಪ, ದ್ವೇಷಗಳಿಂದ ಶಾಂತಿಯ ಸಮಾಜವನ್ನು ಕಟ್ಟಲು ಸಾಧ್ಯವಿಲ್ಲ ಎಂದು ಅರಿತಿರುವ ಇವರು ಪ್ರೀತಿ, ಕರುಣೆ, ಮೈತ್ರಿ, ತಾಳ್ಮೆಯನ್ನು ಮೈಗೂಡಿಸಿಕೊಂಡು ಸಮಾಜದ ಬದಲಾವಣೆಯ ಕನಸನ್ನು ಕಂಡಿದ್ದಾರೆ. ಯಾರೊಂದಿಗೂ ದ್ವೇಷ, ಅಸೂಯೆ, ಕ್ರೋಧವನ್ನು ಕಟ್ಟಿಕೊಳ್ಳದೇ ಎಲ್ಲರೊಂದಿಗೂ ಪ್ರೀತಿಯಿಂದ ನಡೆದುಕೊಳ್ಳುವ ಮನಸ್ಥಿತಿಯನ್ನು ಹೊಂದಿದ್ದಾರೆ.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ನಿಂಗರಾಜ್ ಮಲ್ಲಾಡಿ ರವರಿಗೆ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ಭಗವಾನ್ ಬುದ್ದರ ರಾಷ್ಟ್ರೀಯ ಫಿಲೋಶಿಪ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಈ ಪ್ರಶಸ್ತಿಯನ್ನು 2026 ರ ಡಿಸೆಂಬರ್ 12 ಮತ್ತು 13 ರಂದು ಹೊರ ವರ್ತುಲ ರಸ್ತೆ (Outer Ring Road), ಜರೋಡಾ ಗ್ರಾಮ (ಬುರಾರಿ-ಬೈಪಾಸ್), ದೆಹಲಿ-84 ರಲ್ಲಿರುವ ಪಂಚಶೀಲ ಆಶ್ರಮದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ದಸಂಸ ದ ರಾಜ್ಯ ಸಂಘಟನಾ ಸಂಚಾಲಕರಾದ ನಿಂಗರಾಜ್‌ ಮಲ್ಲಾಡಿ ರವರು ಮಾತನಾಡಿ ಭಗವಾನ್ ಬುದ್ದರ ರಾಷ್ಟ್ರೀಯ ಫಿಲೋಶಿಪ್ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿರುವುದು  ಸಂತಸ ತಂದಿದ್ದು, ಈ ಪ್ರಶಸ್ತಿಯು ಸಮಾಜದ ಎಲ್ಲಾ ಜಾತಿ, ಧರ್ಮದ   ಬಡವರಿಗೆ ಸಲ್ಲಬೇಕಾಗಿದ್ದು, ನನ್ನ ಜೀವಿತ ಅವಧಿಯವರೆಗೂ ನಾನು ಬಡವರ, ನೊಂದವರ ಸೇವೆಯನ್ನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದರು.

admin
the authoradmin

Leave a Reply