LatestMysore

ಮರೂರಿನಲ್ಲಿ ಮನೆ ಮುಂದೆ ಕಟ್ಟಿ ಹಾಕಿದ್ದ ಹಸುವನ್ನು ಬಲಿ ಪಡೆದ ಚಿರತೆ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಮನೆಯ ಮುಂದೆ ಕಟ್ಟಿ ಹಾಕಿದ ಹಸುವಿನ ಮೇಲೆ ಚಿರತೆ ದಾಳಿ ಮಾಡಿ  ರಕ್ತ ಹೀರಿ ಸಾಯಿಸಿರುವ ಘಟನೆ ಹುಣಸೂರು ತಾಲೂಕಿನ ಮರೂರು ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.

ಗ್ರಾಮದ ಸ್ವಾಮಿ ಗೌಡ ಎಂಬುವವರಿಗೆ ಸೇರಿದ ಹಸು ಸಾವನ್ನಪ್ಪಿದ್ದು, ಹಸು ಕಳೆದುಕೊಂಡ ರೈತ ಸ್ವಾಮಿಗೌಡರವರು ಆತಂಕಗೊಂಡಿದ್ದಾರೆ.

ಸೋಮವಾರ  ರಾತ್ರಿ ವೇಳೆ ಮನೆಯ ಮುಂದೆ ಪ್ರತಿನಿತ್ಯ ಕಟ್ಟುವಂತೆ  ಕಟ್ಟಿದ್ದರು.  ಮಂಗಳವಾರ  ಬೆಳಗಿನ 3 ಘಂಟೆ  ಸಮಯದಲ್ಲಿ ಚಿರತೆ  ದಾಳಿ ಮಾಡಿದ್ದು, ಈ ವೇಳೆ ಹಸು ಅರಚಾಡಿದೆ. ಈ ಶಬ್ದಕೇಳಿ  ತಕ್ಷಣ ಎದ್ದು ಬಂದು ನೋಡಿದಾ ಕುತ್ತಿಗೆಯನ್ನು ಹಿಡಿದಿದ್ದು ಬೆದರಿಸಿದಾಗ ಚಿರತೆ ಹಸುವನ್ನು ಬಿಟ್ಟು ಓದಿ ಹೋಗಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ರೈತ ಸ್ವಾಮಿಗೌಡ ಅವರು,  ಕಳೆದ ವಾರದ ಹಿಂದೆ ನಮ್ಮ ಸಾಕು ನಾಯಿಯನ್ನು   ಹಾಗೂ   ನಮ್ಮ ಅಕ್ಕಪಕ್ಕದ ಮನೆಯ ಒಂದು ಕರುವನ್ನು ಹಾಗೂ ಸಾಕಿದ ನಾಯಿಗಳನ್ನು ಹೊತ್ತೊಯ್ಯುತ್ತಿದೆ. ಕೂಡಲೇ ಅರಣ್ಯ ಇಲಾಖೆಯವರು ಬೋನು ಇಟ್ಟು ಚಿರತೆ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.  ಸುದ್ದಿ ತಿಳಿದ ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಹಸುವನ್ನು  ಪರಿಶೀಲನೆ   ಮಾಡಿ ನಂತರ ಪಶು ವೈದ್ಯಾಧಿಕಾರಿಗಳಿಂದ  ಮರಣೋತ್ತರ ಪರೀಕ್ಷೆ ಮಾಡಲಾಯಿತು.

admin
the authoradmin

Leave a Reply