LatestMysore

ಗಾವಡಗೆರೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜನಾರ್ದನ್ ರವರಿಗೆ ಆತ್ಮೀಯ ಬೀಳ್ಕೊಡುಗೆ

ಹುಣಸೂರು(ಹಿರೀಕ್ಯಾತನಹಳ್ಳಿಸ್ವಾಮಿಗೌಡ): ತಾಲೂಕಿನ ಗಾವಡಗೆರೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜನಾರ್ದನ್ ಅವರು ವಯೋ ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪನ್ಯಾಸಕರು ವಿದ್ಯಾರ್ಥಿಗಳು ಹಳೆ ವಿದ್ಯಾರ್ಥಿಗಳು ಸ್ನೇಹಿತರು ಆತ್ಮೀಯವಾಗಿ ಬೀಳ್ಕೊಟ್ಟರು.

ಈ ವೇಳೆ ಸಿಡಿಸಿ ಉಪಾಧ್ಯಕ್ಷ ಹೊನ್ನಪ್ಪರಾವ್ ಕಾಳಿಂಗೆ ಮಾತನಾಡಿ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದಾಗ ಮೇಲಾಧಿಕಾರಿಗಳು ಅವರನ್ನು ಗೌರವದಿಂದ ಕಾಣುವುದರ ಜೊತೆಗೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸುವ  ಉಪನ್ಯಾಸಕರನ್ನು ಪ್ರಶಂಸಿಸಲಾಗುತ್ತದೆ. ಕಾಲೇಜಿನ ಫಲಿತಾಂಶವನ್ನು ಉತ್ತಮ ಮಟ್ಟಕ್ಕೆ ತೆಗೆದುಕೊಂಡು ಹೋದಾಗ ನಿವೃತ್ತಿಯಾದ ಉಪನ್ಯಾಸಕರನ್ನು ಎಲ್ಲೇ ಇದ್ದರೂ ನೆನೆಸಿಕೊಳ್ಳುವುದರ ಜೊತೆಗೆ ಅವರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ ಎಂದರು.

ಕಾಲೇಜಿನ ಹಿರಿಯ ಉಪನ್ಯಾಸಕ ಡಾ. ಚಂದ್ರು ಮಾತನಾಡಿ ಕಳೆದ 6 ವರ್ಷಗಳಿಂದ ಸರ್ಕಾರಿ ಕಾಲೇಜುಗಳ ಫಲಿತಾಂಶದಲ್ಲಿ ನಮ್ಮ ಕಾಲೇಜು 6 ವರ್ಷಗಳಿಂದ ಪ್ರಥಮ ಸ್ಥಾನ ಪಡೆಯುತ್ತಿರುವುದಕ್ಕೆಪ್ರಾಂಶುಪಾಲರ ಕರ್ತವ್ಯ ನಿಷ್ಠೆ ಶ್ರಮದಿಂದ ಸಾಧ್ಯವಾಗಿದೆ. ಸ್ವಾರ್ಥವನ್ನು ತ್ಯಾಗ ಮಾಡಿ ಕಾಲೇಜಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ.

ಯಾವುದೇ ವ್ಯಕ್ತಿಗೆ ಪದವಿ ಪ್ರಶಸ್ತಿ ಮುಖ್ಯವಲ್ಲ ಅರ್ಥಪೂರ್ಣ ಬದುಕು ಮುಖ್ಯ.  ಸಮಾಜಮುಖಿಯಾಗಿ ಸಿಕ್ಕ ಅಧಿಕಾರವನ್ನು ಸಮರ್ಪಕವಾಗಿ ಬಳಸಿಕೊಂಡಾಗ ಜನಮನದಲ್ಲಿ ಉಳಿಯಬಹುದು. ಪ್ರಾಂಶುಪಾಲರಾದ ಜನಾರ್ದನ್ ಕೇವಲ ಹೆಸರಿಗಾಗಿ ಕೀರ್ತಿಗಾಗಿ ಕೆಲಸ ಮಾಡಿದವರಲ್ಲ ಕಾಲೇಜು ಅಭಿವೃದ್ಧಿ ಕೆಲಸ ಮಾಡಿ ಮನದಲ್ಲಿ ನಿಲ್ಲುವ ಕಾಯಕ ಮಾಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಿಡಿಸಿ ಸದಸ್ಯರಾದ ಹಿರೀಕ್ಯಾತನಹಳ್ಳಿ ಸ್ವಾಮಿ ಗೌಡ, ಶ್ರೀಕಂಠ, ನಟರಾಜು, ಉಷಾ, ಮಹದೇವ್, ಪುಷ್ಪ ಲತಾ, ಜಯರಾಮ್,  ಉಪನ್ಯಾಸಕರ ವೃಂದ, ಹಳೆಯ ವಿದ್ಯಾರ್ಥಿಗಳು ಸ್ನೇಹಿತರು ಹಾಜರಿದ್ದು ಆತ್ಮೀಯವಾಗಿ ಬೀಳ್ಕೊಟ್ಟರು.

admin
the authoradmin

Leave a Reply