ಹೊಸೂರು(ಸಂಘಟನೆ ಮಂಜುನಾಥ್): ಸಾಲಿಗ್ರಾಮ ತಾಲೂಕಿನ ಹಳಿಯೂರು ಬಡಾವಣೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 2025-26 ನೇ ಸಾಲಿನಲ್ಲಿ 18 ಸಾವಿರ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಹೆಚ್. ಬಿ ಜಯಣ್ಣ ಹೇಳಿದರು.

ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂಘದ ಸದಸ್ಯರು, ರೈತರು ಉತ್ತಮ ಗುಣಮಟ್ಟದ ಹಾಲನ್ನು ಹಾಕಿ ಸಂಘ ಬೆಳೆಯಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು. ಸಮಾಲೋಚನಾ ವಿಸ್ತಾರಣಧಿಕಾರಿ ಅಭಿಷೇಕ್ ಪಶು ಆಹಾರದ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಸಂಘದ ಸಿಇಒ ಎಚ್ ಪಿ ರಾಜೇಶ್ 2025 -26ನೇ ಸಾಲಿಗೆ ಮಂಜೂರಾದ ಆಯವ್ಯಯ, ಲೆಕ್ಕಪರಿಶೋಧನೆ ಹಾಗೂ ವಾರ್ಷಿಕ ವರದಿಯನ್ನು ಮಂಡನೆ ಮಾಡಿದರು.

ಸಭೆಯಲ್ಲಿ ಗ್ರಾಹಕ ಮಂಡಳಿ ಮಾಜಿ ನಿರ್ದೇಶಕ ಎಸ್ ಟಿ ಕೀರ್ತಿ, ತಾಲೂಕು ಒಕ್ಕಲಿಗ ಸಂಘದ ಉಪಾಧ್ಯಕ್ಷ ಏ ಕುಚೇಲ್, ಸಂಘದ ಉಪಾಧ್ಯಕ್ಷ ಚಂದ್ರು ನಿರ್ದೇಶಕರಾದ ಎಚ್ ಆರ್ ಕೃಷ್ಣಮೂರ್ತಿ, ಮಧುಚಂದ್ರ, ಡಿ ಜೆ ಕೃಷ್ಣ ಎಚ್ ಕೆ ವಿಕ್ರಂ ಗೌಡ, ಅಜಯ್ ಕುಮಾರ್, ಹೆಚ್. ಟಿ ಪ್ರಮೋದ್, ಲೀಲಾವತಿ ರೇವಣ್ಣ, ಸುಭದ್ರಮ್ಮ ಪಾಪಯ್ಯ, ಲಕ್ಷ್ಮಿ ನಾಗರಾಜ್, ಹೇಮಾ ಹಾಲು ಪರೀಕ್ಷಕ ಹೆಚ್ ಆರ್ ಕೀರ್ತಿ, ಗುತ್ತಿಗೆದಾರ ಹೆಚ್ ಆರ್ ರಾಘವೇಂದ್ರ, ದಿನೇಶ್, ರಾಹುಲ್, ನದ್ದು ಸಂಘದ ಸದಸ್ಯರು ಊರಿನ ಗ್ರಾಮಸ್ಥರು ಹಾಜರಿದ್ದರು.








