ದೊಡ್ಡ ಸ್ವಾಮೇಗೌಡರ ಹುಟ್ಟುಹಬ್ಬಕ್ಕೆ ಹೊಸೂರು ಪತ್ತಿನ ಸಂಘದಿಂದ ಹಣ ನೀಡಿಲ್ಲ
ದಾಖಲೆ ಬಿಡುಗಡೆ ಮಾಡಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್ ಸವಾಲ್

ಸಾಲಿಗ್ರಾಮ(ಸಂಘಟನೆ ಮಂಜುನಾಥ್): ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡ ಸ್ವಾಮೇಗೌಡರ ಹುಟ್ಟುಹಬ್ಬಕ್ಕೆ ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದಿಂದ ಹಣ ನೀಡಿರುವ ವಿಚಾರವೇ ಶುದ್ಧ ಸುಳ್ಳು, ಒಂದು ವೇಳೆ ಹಣ ನೀಡಿದ್ದರೆ ದಾಖಲೆ ಬಿಡುಗಡೆ ಮಾಡಲಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್ ಸವಾಲ್ ಹಾಕಿದ್ದಾರೆ.
ಚುಂಚನಕಟ್ಟೆಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನಿರ್ದೇಶಕ ಹುಚ್ಚೇಗೌಡ ಎಂಬುವವರು ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡ ಸ್ವಾಮೇಗೌಡರ ಹುಟ್ಟುಹಬ್ಬಕ್ಕೆ ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದಿಂದ ಹಣ ನೀಡಿದ್ದೇವೆ ಎಂದು ಆರೋಪ ಮಾಡಿದ್ದಾರೆ. ಇದು ಗಾಳಿಯಲ್ಲಿ ಗುಂಡು ಹಾರಿಸಿದ ಹಾಗಿದೆ ಎಂದು ವ್ಯಂಗ್ಯವಾಡಿದರು.
ಮೊದಲು ವಾರ್ಷಿಕ ಮಹಾಸಭೆಯಲ್ಲಿ ಲೆಕ್ಕ ಪತ್ರಗಳನ್ನು ಪರಿಶೀಲಿಸಿ ಅದರಲ್ಲಿ ಹಣ ನೀಡಿರುವ ಮಾಹಿತಿ ಇದ್ದರೆ ಅವರು ಹೇಳಿರುವುದು ಮಾತು ಸತ್ಯ ಎಂದು ಒಪ್ಪಬಹುದಿತ್ತು. ಆದರೆ ಹಣ ನೀಡಿರುವ ಮಾಹಿತಿಯೇ ಇಲ್ಲದೆ ಆರೋಪ ಮಾಡುತ್ತಿರುವುದು ವೈಯಕ್ತಿಕ ದ್ವೇಷವೇ ಇಲ್ಲ ತಮ್ಮ ಪಕ್ಷಕ್ಕೆ ಅಧಿಕಾರ ಇಲ್ಲ ಎಂಬ ಹತಾಶೆಯೋ ಎಂಬುದು ಅರ್ಥವಾಗುತ್ತಿಲ್ಲ ಎಂದು ಹೇಳಿದರು.

ನಮ್ಮ ನಾಯಕರಾದ ದೊಡ್ಡಸ್ವಾಮೇಗೌಡರ ಹುಟ್ಟುಹಬ್ಬ ಕೇವಲ ಸಂಭ್ರಮಾಚರಣೆಯಲ್ಲ ಬದಲಿಗೆ ಸಾಮಾಜಿಕ ಸೇವಾ ಮಾದರಿ ಕಾರ್ಯಕ್ರಮಗಳಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರೇ ನಿಂತು ಈ ಕೆಲಸ ಮಾಡಿದ್ದು ಕ್ಷೇತ್ರದಲ್ಲಿ ಅವರ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ಕೆಲ ಕಿಡಿಗೇಡಿಗಳು ಇಂತಹ ಅಪಪ್ರಚಾರಕ್ಕೆ ಮುಂದಾಗುತ್ತಿದ್ದು ಇದು ಹೀಗೆ ಮುಂದುವರೆದರೆ ಪಕ್ಷದ ಕಾರ್ಯಕರ್ತರು ಇದಕ್ಕೆಲ್ಲ ತಕ್ಕ ಉತ್ತರ ಕೊಡಬೇಕಾಗುವುದು ಎಂದು ಕಿಡಿಕಾರಿದರು.
ವಕೀಲ ಪಣಿತ್ ಮಾತನಾಡಿ ನಿರ್ದೇಶಕ ಹುಚ್ಚೇಗೌಡ ಅವರು ತಮ್ಮ ಕುಟುಂಬದ ಪೆಟ್ರೋಲ್ ಬಂಕ್ ಆರಂಭಕ್ಕೆ ಯಾರ ಮನೆ ಮುಂದೆ ನಿಂತು ಕೆಲಸ ಮಾಡಿಸಿಕೊಂಡರು ಎಂಬುದನ್ನು ಮೊದಲು ಮನವರಿಕೆ ಮಾಡಿಕೊಳ್ಳಲಿ. ಇವರಿಂದ ಹಣ ಪಡೆದು ಹುಟ್ಟುಹಬ್ಬ ಆಚರಿಸಿಕೊಳ್ಳುವ ಪರಿಸ್ಥಿತಿ ನಮ್ಮ ನಾಯಕರಾದ ದೊಡ್ಡ ಸ್ವಾಮೇಗೌಡರಿಗಿಲ್ಲ. ಇವರಂತಹ ಹತ್ತಾರು ನಾಯಕರನ್ನು ಬೆಳೆಸುವ ಶಕ್ತಿ ಅವರಿಗಿದ್ದು ಈ ರೀತಿ ಅಪಪ್ರಚಾರ ಸುಳ್ಳು ಸುದ್ದಿಗಳನ್ನು ಸುಖಾಸುಮ್ಮನೆ ಮಾಡುವ ಮುನ್ನ ಸತ್ಯಾಂಶ ಅರಿತು ಮಾತನಾಡ ಬೇಕು ಎಂದು ಹೇಳಿದರು.
ಗ್ರಾ. ಪಂ. ಮಾಜಿ ಅಧ್ಯಕ್ಷ ನೂತನ, ಹೊಸೂರು ರಮೇಶ್, ಡೈರಿ ಮಾದು, ಹೋಬಳಿ ಅಧ್ಯಕ್ಷ ಸಚ್ಚಿನ್ ಸೇರಿದಂತೆ ಹಲವರು ಇದ್ದರು.
ಮೈಸೂರು ದಸರಾ ಕುರಿತ ಲೇಖನಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ…
ಸಿನಿಮಾ ಕುರಿತ ಮಾಹಿತಿ ಮತ್ತು ಸ್ಟೋರಿಗಳನ್ನು ಓದಲು ಈ ಲಿಂಕ್ ನ್ನು ಕ್ಲಿಕ್ ಮಾಡಿ
ರಾಜ್ಯದ ರಾಜಕೀಯ ಇತಿಹಾಸ ಬದಲಾಯಿಸುತ್ತಾರಾ ಡಿಕೆಶಿ? ಏನಿದು ಹೊಸ ತಂತ್ರ?







