ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಕಳೆದ ಸಾಲಿನ ಮೌಲ್ಯಾಂಕನ ಶಿಬಿರದಲ್ಲಿ ಆಯ್ಕೆ ಯಾದ 59 ವಿಕಲಚೇತನ ಮಕ್ಕಳಿಗೆ ಶಾಲಾ ಶಿಕ್ಷಣ ಇಲಾಖೆ ಮತ್ತು ಅಲಿಂಕೋ ಸಂಸ್ಥೆ ಸಹಯೋಗದಲ್ಲಿ ಸಾಧನ-ಸಲಕರಣೆಗಳನ್ನು ವಿತರಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾ ರಂಭದಲ್ಲಿ ವಿಕಲಚೇತನ ಮಕ್ಕಳಿಗೆ ಶಾಸಕ ಜಿ.ಡಿ. ಹರೀಶ್‌ಗೌಡ ಸಾಧನ-ಸಲಕರಣೆಗಳನ್ನು ವಿತರಿಸಿ ಮಾತನಾಡಿ, ವಿಕಲಚೇತನ ಮಕ್ಕಳಿಗೆ ಸಾಧನ-ಸಲಕರಣೆಗಳನ್ನು ನೀಡುವುದರೊಂದಿಗೆ ಅವರ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯ ಆಗಬೇಕಿದೆ. ಸ್ವಾವಲಂಬಿಗಳಾಗಿ ಬದುಕ ಬೇಕೆನ್ನುವ ಅವರ ಆಸೆಯನ್ನು ಅರ್ಥ ಮಾಡಿಕೊಂಡು ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರು ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕಾಳನಾಯಕ ಮಾತನಾಡಿ, ಕಳೆದ ಸಾಲಿನ ಮೌಲ್ಯಾಂಕನ ಶಿಬಿರದಲ್ಲಿ ಒಟ್ಟು 172 ಮಕ್ಕಳು ಭಾಗವಹಿ ಸಿದ್ದರು. ಈ ಪೈಕಿ ಸಾಧನ ಸಲಕರಣಗಳಿಗೆ ಒಟ್ಟು 82 ಮಕ್ಕಳು ಆಯ್ಕೆಯಾಗಿದ್ದು, ಈ ಪೈಕಿ ಮೊದಲ ಹಂತವಾಗಿ 59 ಮಕ್ಕಳಿಗೆ ಅಗತ್ಯ ಸಲಕರಣೆಗಳನ್ನು ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
బిఐఆరా ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ತಹಸೀಲ್ದಾರ್ ಜೆ.ಮಂಜುನಾಥ್, ಟಿಇಗಳಾದ ತ್ರಿನೇಶ್, ಪ್ರಭಾಕರ್, ಸೋಮಶೇಖರ್, ಯೋಗೇಶ್ವರಿ ಇತರರಿದ್ದರು








