LatestMysore

ಮೈಸೂರು ಜಿ.ಕ.ಸಾ.ಪರಿಷತ್ತಿಗೆ ಹೊಸ ನೀರು ಬರಲಿ… ಕವಿ ಜಯಪ್ಪ ಹೊನ್ನಾಳಿಗೇಕೆ ಅವಕಾಶ ಕೊಡಬಾರದು?

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊಸ ನೀರು ಬರಲಿ. ಎಲ್ಲರ ಅಚ್ಚುಮೆಚ್ಚಿನ ಅಧ್ಯಕ್ಷರಾಗಿದ್ದ ಮಡ್ಡಿಕೆರೆ ಗೋಪಾಲ್ ಅವರ ನಿಧನದ ನಂತರ ಕನ್ನಡಾಭಿಮಾನಿಗಳನ್ನು ಶೂನ್ಯವೊಂದು ಇನ್ನಿಲ್ಲದಂತೆ ಖಾಲಿತನವೊಂದು ತೀವ್ರವಾಗಿ ಕಾಡುತ್ತಿದ್ದು, ಖೇದ ತರುತ್ತಿದೆ. ಬದಲಾವಣೆ ಜಗದ ನಿಯಮ. ನಾವಿದನ್ನು ಅನಿವಾರ್ಯವಾಗಿ ಒಪ್ಪಿ, ಹರಿದು ಹೋದ ಹಳೆ ನೀರಿನ ನೀರನ್ನು ಕ.ಸಾ.ಪ. ಸರೋವರಕ್ಕೆ ಬರಮಾಡಿಕೊಳ್ಳಬೇಕಿದೆ.

ಬದಲಾವಣೆಗಳೊಂದಿಗೆ, ಆಲೋಚನೆಯುಳ್ಳ ಹೊಸ ಹೊಸ ಹೊಸ ಹೊಸ ಪೀಳಿಗೆ, ಹೊಸ ಆಶಯಗಳೊಂದಿಗೆ ಈಗಲ್ಲಿಗೆ ಬರಬೇಕಿದೆ. ಹಳಬರು ತಮ್ಮ ಅನುಭವವನ್ನು ಹೊಸಬರಿಗೆ ಧಾರೆ ಎರೆಯಬೇಕು. ಬಹುತೇಕ ಬರುವ ಡಿಸೆಂಬರ್ ಮಾಹೆಯ ಒಳಗೆ ಚುನಾವಣೆ ನಡೆಯಲಿದ್ದು, ಅಂದಿನಿಂದ ಮೈ.ಜಿ.ಕ.ಸಾ. ಪರಿಷತ್ತಿನ ಹೊತ್ತಗೆಯಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಲಿದೆ.

ಹಾಗಾದರೆ ಮುಂದೆ ಅಧ್ಯಕ್ಷರಾಗಬೇಕಾದವರು ಯಾರು?  ಯಾರಾದರೆ ಸೂಕ್ತ?  ಯಾರಿಗಿದೆ ಆ ಸಮತೂಕದ ವ್ಯಕ್ತಿತ್ವ? ಯಾರಲ್ಲುಂಟು ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಎಲ್ಲೂ ನಿಲ್ಲದಂತೆ ಕನ್ನಡ ತೇರೆಳೆಯುವ ಸಾಮರ್ಥ್ಯ?  ಎಂಬ ಇನ್ನೂ ಮುಂತಾದ ಪ್ರಶ್ನೆಗಳು ನಮ್ಮನ್ನು ಕಾಡದಿರವು. ಈ ಮೇಲಿನೆಲ್ಲಾ ಪ್ರಶ್ನೆಗಳಿಗೂ ಸೂಕ್ತ ಉತ್ತರವೆಂಬಂತೆ ನಮಗೆ ಥಟ್ಟನೆ ನೆನಪಾಗುವ ಹೆಸರೆಂದರೆ ಜಯಕವಿ ಮೈಸೂರು.

ಹೌದು ಜಯಕವಿ ಕಾವ್ಯನಾಮದ ಕವಿ ಜಯಪ್ಪ  ಹೊನ್ನಾಳಿ ಅಜಾತಶತ್ರುವಾಗಿದ್ದು, ಅತ್ಯುತ್ತಮ ಕವಿಯೂ, ಸಂಘಟಕರೂ, ಜನಾನುರಾಗಿಯೂ ಅಕ್ಷರಶಃ ಜಾತ್ಯತೀತ ಸ್ವಭಾವದಿಂದ ಬದುಕು, ಬರಹಗಳೆರಡರಲ್ಲೂ ಎಲ್ಲರ ಹೃನ್ಮನ ಗೆದ್ದವರೂ. ನಿಕಟಪೂರ್ವ ಅಧ್ಯಕ್ಷರಾಗಿದ್ದ ಡಾ.ವೈ.ಡಿ.ರಾಜಣ್ಣ ಅವರ ಮೊದಲಾಗಿ ನಮ್ಮನ್ನಗಲಿದ ಶಾಶ್ವತ ಅಧ್ಯಕ್ಷರಾದ ಕೀರ್ತಿಶೇಷ ಮಡ್ಡಿಕೆರೆ ಗೋಪಾಲ್ ಅವರಿಗೂ ಮೈ.ಜಿ.ಕ.ಸಾ. ಪರಿಷತ್ತಿನಲ್ಲಿ ಗೌರವ ಕಾರ್ಯದರ್ಶಿಯಾಗಿ ಸಮರ್ಥವಾಗಿ ಕೆಲಸ ಮಾಡಿ, ಕರುನಾಡೇ ಮೆಚ್ಚುವಂತಹ ಮಾದರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಮ್ಮ ಮೈಸೂರಿನಲ್ಲಿ ಡಾ.ರಾಜಣ್ಣರವರೊಡಗೂಡಿ ಮಾಡಿದ್ದಾರೆ.

ಈಗಿನ ಶರಣ ಸಾಹಿತ್ಯ ಪರಿಷತ್ತು ಮೈಸೂರು ಘಟಕದ ಅಧ್ಯಕ್ಷರೂ, ಸಾತ್ವಿಕ ಸಂಪನ್ನರೂ, ನಯವಿನಯವೇ ಮೈವೆತ್ತಂತಿರುವ ಜಯಕವಿ ಮೈಸೂರು ಇವರು, ಅವರೇ ಇಂತಹ ಇನ್ನೂ ಅನೇಕ ಯೋಗ್ಯ ಕಾರಣಗಳಿಂದಾಗಿ ಅತ್ಯಂತ ಸೂಕ್ತವೆನಿಸುತ್ತಾರೆ. ಅವರಿಗೊಂದಿ ಅವಕಾಶ ಏಕೆ ಮಾಡಿಕೊಡಬಾರದು? ಈ ನಿಟ್ಟಿನಲ್ಲಿ ಏಕೆ ಯೋಚಿಸಬಾರದು..?

-ಜಿ.ಪಿ.ಹರೀಶ್

ವಿ.ವಿ.ಮೊಹಲ್ಲ, ಮೈಸೂರು ವಿಳಾಸ: ನಂ.2715/2ಎ, 2ನೇ ಮುಖ್ಯರಸ್ತೆ,

ವಿ.ವಿ.ಮೊಹಲ್ಲ, ಮೈಸೂರು-570002.  ಮೊಬೈಲ್:  8095795995

admin
the authoradmin

Leave a Reply