ArticlesLatest

ಜ್ಯೋತಿಷ್ಯ ಮತ್ತು ಹಣೆಬರಹದ ನಡುವೆ ಮನುಜ ಬದುಕು…!? ನಿನಗೆ ರಾಜಯೋಗ ಉಂಟು..

ಈ ವರ್ಷ ‘ಮಳೆರಾಯ’  ಬರಗಾಲದ ಎಚ್ಚರಿಕೆ ನೀಡುತ್ತಾ ಮಾಯವಾಗಿದ್ದರೂ, ಕಳೆದ ಸೋಮವಾರ ಮಧ್ಯಾಹ್ನ ವೇಳೆ ಮಾತ್ರ ಒಂದು ಸೊಗಸಾದ ಮಳೆ ಸುರಿದ ಕಾರಣ, ಭೂಮಿ ಮತ್ತು ನನ್ನ ಮನಸ್ಸು ಸಹ ಬಹಳ ತಂಪಾಯಿತ್ತು….!

ಈ ಖುಷಿಗೆ ಸಂಜೆ ವೇಳೆ ನಮ್ಮ ಮನೆಯ ಗೇಟಿನ ಬಳಿಯ ಎಕ್ಕದ ಗಿಡದ ಹತ್ತಿರ ಕುಳಿತುಕೊಂಡಿದ್ದೆ…. ಮನಸ್ಸು ಹೊಸ ಬರಹದ ರಚನೆಯ ಹಿಂದೆ ಮೆಲ್ಲನೆ ಸಾಗುತ್ತಿತ್ತು….! ಆಗ ಒರ್ವ ಜ್ಯೋತಿಷಿ ರಸ್ತೆಯಲ್ಲಿ ಬರುವುದನ್ನು ಕಂಡಾಗ, ನಾನು ಆತನ ಬಾಯಿಗೆ ಆಹಾರವಾಗಬಾರದು ಎಂದು ಭಾವಿಸಿ ಮೆಲ್ಲನೆ ಎದ್ದು, ಜಾಗ ಖಾಲಿ ಮಾಡಲು ಪ್ರಯತ್ನಿಸಿದೆ…! ಆದರೆ ಆ ಜ್ಯೋತಿಷಿಯ ಕಷ್ಟ ಕಾಲಕ್ಕೆ, ನನಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ…!

” ಕಂದಾ…. ನಿನಗೆ ರಾಜಯೋಗ ಉಂಟು…. ನೀನು ………” ಎಂದು ಆ ಜ್ಯೋತಿಷಿ ರಾಗ ಎಳೆಯಲು ಪ್ರಾರಂಭಿಸಿದಾಗ, ನಾನು ಮಾತು ನಿಲ್ಲಿಸುವಂತೆ ಹೇಳಿಯೇ ಬಿಟ್ಟೆ..! ಏಕೆಂದರೆ ನಾನು ಈ ಜ್ಯೋತಿಷ್ಯ – ಮಂತ್ರ-ತಂತ್ರಗಳನ್ನು ನಂಬುವಂತಹ ಪಾಳು ಜನ್ಮವಲ್ಲ…!

ಹುಟ್ಟು-ಸಾವುಗಳ ನಡುವಿನ ಅವಧಿಯ ನಮ್ಮ ಜೀವನದಲ್ಲಿ ನಡೆಯುವ ಸುಖ-ಕಷ್ಟಗಳ ಕುರಿತು, ನಮ್ಮ ‘ಹಣೆಬರಹ’ದಲ್ಲಿ ಭಗವಂತ ಬಹಳ ಸೊಗಸಾಗಿ ಬರೆದಿರುತ್ತಾನೆ…! ಅದನ್ನು ತಿದ್ದಿ ಬರೆಯಲು ಯಾವುದೇ ಮಂದಿಗೂ ಸಾಧ್ಯವಿಲ್ಲ….! ಜೀವನದಲ್ಲಿ ಬೆವರು ಸುರಿಸಿ ದುಡಿಯುವ ಒಂದು ‘ಮನಸ್ಸು’ ಮತ್ತು ‘ ಗುರಿ’ ಇದ್ದರೇ, ಯಾವುದೇ ಜ್ಯೋತಿಷಿಗಳ ಪೊಳ್ಳು ಮಾತುಗಳನ್ನು ನಂಬಿ, ಹಗಲು ಕಂಡ ಬಾವಿಯಲ್ಲಿ ರಾತ್ರಿ ಬೀಳುವಂತಹ ದುಸ್ಥಿತಿ ಸೃಷ್ಠಿಯಾಗುವುದಿಲ್ಲ….!

ದೇಶದಲ್ಲಿ ನಡೆಯುವ ‘ಚುನಾವಣೆ’ ವೇಳೆ, ನಾನು ರಾಜಕೀಯ ಪಕ್ಷಗಳು ಮತ್ತು ಅಭ್ಯಥಿ೯ಗಳ ‘ಚುನಾವಣೆ ಭವಿಷ್ಯ’ಗಳನ್ನು ಪತ್ರಿಕೆಗಳಲ್ಲಿ ಬರೆಯುತ್ತಿದ್ದರೂ, ನನಗೆ ಈ ಮೂಢನಂಬಿಕೆಯ ‘ಹಾದಿ’ಯಲ್ಲಿ ಹೆಜ್ಜೆ ಹಾಕಲು ತುಸು ಇಷ್ಟವಿಲ್ಲ…!ಇದು ನನ್ನ ಹುಟ್ಟುಗುಣ ಎಂದು ಹೇಳಿದ್ದರೂ, ತಪ್ಪು ಆಗುವುದಿಲ್ಲ…!

ಈ ಭೂಮಿಯಲ್ಲಿ ಹುಟ್ಟುವ ಯಾವುದೇ ಮನುಜ ಜನ್ಮದ ಹಣೆಬರಹವನ್ನು, ಭಗವಂತ ಅವರ ಲಿಪಿಯಲ್ಲಿ ಬರೆದಿರುವ ಕಾರಣ, ನಮಗೆ ಅದನ್ನು ತಿದ್ದಿ ಬರೆಯಲು ಸಾಧ್ಯವಿಲ್ಲ…!ಒಂದು ಅಕ್ಷರ ಓದಲು ಸಾಧ್ಯವಿಲ್ಲ…!ಆದರಿಂದ ನಮ್ಮ ಹಣೆಬರಹದಂತೆ ಎಲ್ಲಾ ಕಾರ್ಯಗಳು ನಡೆಯುತ್ತದೆ..! ಆದರೆ ಒಳ್ಳೆಯ ಮನಸ್ಸಿನಿಂದ ದುಡಿಯುತ್ತಾ ದೇವರ ಮೇಲೆ ‘ನಂಬಿಕೆ’ ಇಟ್ಟು ಸಾಗಿದ್ದರೇ, ಎಲ್ಲಾವು ಶುಭವಾಗುತ್ತದೆ….! ಇಲ್ಲಾದಿದ್ದರೇ ಕೇರಳ ರಾಜ್ಯದ

ಮೂವತ್ತು ಕೋಟಿಯ ‘ಲಾಟರಿ’ಯಲ್ಲಿ ಬಹುಮಾನ ಬಂದರೂ, ಕೈಯಲ್ಲಿ ಆ ‘ ಟಿಕೆಟ್’ ಇರುವುದಿಲ್ಲ….! ಟಿಕೆಟ್ ಬಿದ್ದು ಹೋಗಿರುತ್ತದೆ….!!      ನನಗೆ ಈ ಜ್ಯೋತಿಷಿ ಮೇಲೆ ನಂಬಿಕೆ ಇಲ್ಲಾದೇ ಇರುವ ವಿಚಾರ ವನ್ನು ಬಿಡಿಸಿ ಹೇಳಿದಾಗ, ಜ್ಯೋತಿಷಿಯ ಮುಖ ತುಸು ಬಾಡಿ ಹೋಯಿತ್ತು…. ಆದರೂ ತನ್ನ ವೃತ್ತಿಯಲ್ಲಿ ನಂಬಿಕೆ ಇಟ್ಟು, ಆತ ಪುನಃ ಭವಿಷ್ಯ ನುಡಿಗಳನ್ನು ಹೇಳಲು ಪ್ರಾರಂಭಿಸಿಯೇ ಬಿಟ್ಟ.

” ಕಂದಾ….., ನಿನಗೆ ಇನ್ನೂ ಎರಡೇ ತಿಂಗಳಿನಲ್ಲಿ ಶುಭವಾಗುತ್ತದೆ…. ಜೀವನವೇ ಬದಲಾಗುತ್ತದೆ…. ಈಗ ನನಗೆ ಐನೂರು ರೂಪಾಯಿ ಕಾಣಿಕೆ ನೀಡಿ, ನಿನ್ನ ಆ ಶುಭ ವಿಚಾರಗಳನ್ನು ತಿಳಿದುಕೊಳ್ಳುವಂತಹ ಮನಸ್ಸು ಮಾಡು……” ಎಂದು ಆ ನಕಲಿ ಜ್ಯೋತಿಷಿ ನುಡಿದಾಗ, ನಾನು ನನ್ನ ಮಹಾತಂತ್ರವನ್ನು ಹೊರತೆಗೆದು ಪ್ರಯೋಗಿಸಿಯೇ ಬಿಟ್ಟೆ….!

” ಅ- ಸ್ವಾಮಿಗಳೇ…., ನಿಮ್ಮ ಬೇಳೆ ಇಲ್ಲಿ ಬೇಯುವುದಿಲ್ಲ….! ನಿಮ್ಮ ಭವಿಷ್ಯವನ್ನು ನಾನು ಹೇಳುವೆ ಕೇಳಿ….!ಈಗ ನಿಮ್ಮ ಜೀವನ ಸಹ ಸೊಗಸಾಗಿಲ್ಲ…! ಜನರು ನಿಮ್ಮ ಮಾತುಗಳನ್ನು ನಂಬುತ್ತಿಲ್ಲ….! ಮನೆಯಲ್ಲಿ ತುಂಬಾ ಕಿರಿ-ಕಿರಿ ನಿಮಗೆ ಉಂಟು….!ಹೆಂಡ್ತಿಯ ಕಾಟ ಈ ಜನ್ಮದಲ್ಲಿ ನಿಮಗೆ ಮುಗಿಯುವುದಿಲ್ಲ……!” ಎಂದು ಹೇಳುತ್ತಿದ್ದಂತೆ, ಆ ಜ್ಯೋತಿಷಿ ಮೆಲ್ಲನೆ ಜಾಗ ಖಾಲಿ ಮಾಡಿಯೇ ಬಿಟ್ಟರು….!

ಒಂದು ಮಾತು ಮಾತ್ರ ಸತ್ಯ….!ಭವಿಷ್ಯವನ್ನು ನಂಬಿ ದಿನ ಕಳೆಯಬೇಡಿ….!ಬದುಕಿನಲ್ಲಿ ಒಳ್ಳೆಯ ದಿನಗಳು ಬರಲು, ನಂಬಿಕೆಯಿಂದ ಬದುಕು ಸಾಗಿಸಿ… ಎಲ್ಲಾವು ‘ಹಣೆಬರಹ’ದ್ದಂತೆ ನಡೆಯುತ್ತದೆ…!!

admin
the authoradmin

Leave a Reply