ಕೇರಳದ ಲಾಟರಿ ಟಿಕೆಟ್ ಗೆ ಕರ್ನಾಟಕದಲ್ಲಿ ಡಿಮ್ಯಾಂಡ್ ಇದೆ ನಂಬುತ್ತೀರಾ? ನಂಬಲೇ ಬೇಕು… ಏಕೆಂದರೆ ಯಾರೇ ಕೇರಳಕ್ಕೆ ಹೋದರೂ ಅವರಿಗೆ ಅವರ ಪರಿಚಿತರು ಹೇಳುವ ಒಂದೇ ಒಂದು ಮಾತು.. ಬರುವಾಗ ನಂಗೊಂದು ಲಾಟರಿ ಟಿಕೆಟ್ ತರೋದನ್ನು ಮರೀಬೇಡ…
ಕರ್ನಾಟಕದಲ್ಲಿ ಲಾಟರಿ ನಿಷೇಧ ಹೇರಿದ ಬಳಿಕ ಕೇರಳದ ಲಾಟರಿ ಟಿಕೆಟ್ ಗಳು ರಾಜ್ಯದಲ್ಲಿ ಹರಿದಾಡುತ್ತಿದೆ. ಆಗೊಮ್ಮೆ ಈಗೊಮ್ಮೆ ಪ್ರಕರಣಗಳು ಬೆಳಕಿಗೆ ಬರುತ್ತಿವೆಯಾದರೂ ಉಳಿದಂತೆ ಎಗ್ಗಿಲ್ಲದೆ ಮಾರಾಟವಾಗುತ್ತಿವೆ. ಕೆಲವರು ಅಲ್ಲಿಂದ ಲಾಟರಿ ಟಿಕೆಟ್ ತಂದು ರಹಸ್ಯವಾಗಿ ಮಾರಾಟ ಮಾಡುತ್ತಿದ್ದಾರೆ. ಉಳಿದಂತೆ ಕೇರಳಕ್ಕೆ ಹೋಗುವ ಕರ್ನಾಟಕದ ಪ್ರಯಾಣಿಕರು ಬರುವಾಗ ಜೊತೆಯಲ್ಲೊಂದು ಟಿಕೆಟ್ ತರುವುದನ್ನು ಮರೆಯುವುದಿಲ್ಲ.
ಇನ್ನು ಕೇರಳ ಲಾಟರಿಗೆ ಶಾಸನ ಬದ್ಧ ಕಾನೂನು ತರಬೇಕಾಗಿದೆ. ಕೇರಳದಲ್ಲಿ ದಿನನಿತ್ಯ ಲಾಟರಿ ಡ್ರಾ ಆಗುವುದು ಸರಿಯಷ್ಟೆ. ಆದರೆ ಓಣಂ ಲಾಟರಿ ಒಂದಕ್ಕೆ ರೂ.500. ಮೊದಲ ಬಹುಮಾನದ ಮೊತ್ತ ರೂ.3 ಕೋಟಿ. ಇದು ಸಾಮಾಜಿಕ ಜೀವನದಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಕರ್ನಾಟಕದಿಂದಲೂ ಅನೇಕ ಜನ ದಿನನಿತ್ಯ ಕೇರಳ ರಾಜ್ಯಕ್ಕೆ ಹೋಗಿ ಲಾಟರಿ ತೆಗೆದುಕೊಳ್ಳುತ್ತಾರೆ. ಟಿಕೆಟ್ ಬೆಲೆ 500ರಿಂದ 100 ರೂ. ಇಳಿಸಿದರೆ ಇದರಿಂದ ಜನರಿಗೆ ಯಾವುದೇ ರೀತಿಯ ಒತ್ತಡ ಇರುವುದಿಲ್ಲ. ಹಾಗೂ ಬಹುಮಾನದ ಮೊತ್ತ ರೂ.3 ಕೋಟಿಯಿಂದ 1 ಕೋಟಿಗೆ ನಿಗದಿ ಪಡಿಸಬೇಕು. ಜನರು ಈ ಲಾಟರಿ ಮೋಹಕ್ಕೆ ಬಲಿಯಾಗಿ ಕೆಲಸಕ್ಕೆ ಹೋಗುವುದನ್ನೇ ನಿಲ್ಲಿಸಿದ್ದಾರೆ.
ಇದರಿಂದ ಸಂಸಾರ ಬೀದಿ ಪಾಲಾಗುತ್ತದೆ. ಮತ್ತೆ ದಿನಕ್ಕೆ ಕೇವಲ ಒಂದು ಡ್ರಾ ಮಾತ್ರ ನಡೆಸಬೇಕು. ಇದಕ್ಕೆ ಕರ್ನಾಟಕ ಸರ್ಕಾರವೂ ಕೈ ಜೋಡಿಸಬೇಕು. ಇದು ಆದಷ್ಟು ಬೇಗ ಜಾರಿಗೆ ಬಂದರೆ ಜನರು ನೆಮ್ಮದಿಯಿಂದ ಜೀವಿಸಲು ಸಾಧ್ಯವಾಗುತ್ತದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಬೇಕಾಗಿದೆ.
ಜಿ.ಪಿ.ಸತೀಶ್
ಸಮಾಜ ಸೇವಕ, ವಿ.ವಿ.ಮೊಹಲ್ಲ ಮೈಸೂರು
ಮೈಸೂರು ದಸರಾ ಕುರಿತ ಲೇಖನಗಳಿಗೆ ಇದರ ಮೇಲೆ ಕ್ಲಿಕ್ ಮಾಡಿ… ಓದಿhttps://janamanakannada.com/category/dasara/








