ArticlesLatest

ಕೊಡಗಿನಲ್ಲೂ ಅವಿವಾಹಿತರ ಯುಗ ಬರಬಹುದೇ…? ಇದು ಯೋಚಿಸಬೇಕಾದ ಸಮಯ!

ನಮ್ಮ ಕೊಡಗಿನಲ್ಲಿ ಈಗ ಮದುವೆ ವಿಚಾರದಲ್ಲಿ ಎರಡು ರೀತಿಯ ದೊಡ್ಡ ಸಮಸ್ಯೆ ಎದುರಾಗಿದೆ. ಒಂದು ಕಡೆ 25 ರಿಂದ 35ವಯೋಮಾನದವರು, ಮತ್ತೊಂದು ಕಡೆ 35 ರಿಂದ 50ವಯೋಮಾನದವರು ಅವಿವಾಹಿತರಾಗಿ ಉಳಿದಿದ್ದಾರೆ. ಈಗಾಗಲೇ ನಮ್ಮ ಕೊಡಗಿನ ಪ್ರತಿಯೊಂದು ಊರಿನಲ್ಲಿ  ಶೇ.25 ರಿಂದ 30ರಷ್ಟು ಹುಡುಗರು ತಮ್ಮ ಮದುವೆಯ ವಯಸ್ಸನ್ನು ಮೀರಿ ಅವಿವಾಹಿತರಾಗಿದ್ದಾರೆ._

 ಮದುವೆಗೆ ಏಕೆ ಇಷ್ಟೊಂದು ಒತ್ತು? ಮದುವೆ ಏಕೆ ಆಗಬೇಕು?

ಈ ಬರಹವನ್ನು ನೋಡಿ ಮದುವೆಗೆ ಸುಮ್ಮನೆ ಒತ್ತಾಯ ಮಾಡುತ್ತಿದ್ದಾರೆ ಎಂದು ತಪ್ಪಾಗಿ ತಿಳಿಯಬಾರದು. ಮದುವೆ ಎನ್ನುವುದು ಕೇವಲ ಇಬ್ಬರು ಜೊತೆಯಾಗಿ ಇರುವುದಲ್ಲ. ಅದು ಒಂದು ಜವಾಬ್ದಾರಿ, ಒಂದು ಭದ್ರತೆ, ಒಂದು ಸಂಸ್ಕಾರ. ಜೀವನದ ಕಷ್ಟ-ಸುಖದಲ್ಲಿ ಜೊತೆಯಾಗಿ ನಿಲ್ಲಲು, ವೃದ್ಧಾಪ್ಯದಲ್ಲಿ ಆಸರೆಯಾಗಲು ಒಂದು ಸಂಗಾತಿ ಬೇಕು. ಹಣ, ಉದ್ಯೋಗ ಇದ್ದರೂ ಸಂಜೆ ಮನೆಗೆ ಬಂದಾಗ ಮಾತನಾಡಲು ಒಬ್ಬರು ಇಲ್ಲದಿದ್ದರೆ ಆ ಬದುಕಿಗೆ ಅರ್ಥವೇನು? ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಮದುವೆಯನ್ನು ಅತ್ಯಂತ ಪವಿತ್ರ ಸಂಸ್ಕಾರ ಎನ್ನುತ್ತಾರೆ. ಅದು ನಮ್ಮ ಐನ್ ಮನೆ ಪರಂಪರೆ, ನಮ್ಮ ವಂಶವನ್ನು ಉಳಿಸುವ ಅಡಿಪಾಯ.

 ಕೊಡಗಿನ ಹಿಂದೆ ಮತ್ತು ಇಂದಿನ ವ್ಯತ್ಯಾಸ

ನಮ್ಮ ಕೊಡಗಿನ ಪ್ರತಿ ಮನೆತನದಲ್ಲಿ ಒಂದು 10 ವರ್ಷಗಳ ಹಿಂದೆ ನೋಡಿದರೆ ವರ್ಷದಲ್ಲಿ 8 ರಿಂದ 10 ಮದುವೆಗಳು ನಡೆಯುತ್ತಿದ್ದವು. ಆದರೆ ಇತ್ತೀಚೆಗೆ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಈಗ ಬಹುತೇಕ ಕುಟುಂಬಗಳಲ್ಲಿ ವರ್ಷದಲ್ಲಿ ಒಂದು ಮದುವೆಯೂ ಆಗುತ್ತಿಲ್ಲ. ಅಂತಹ ಆತಂಕಕಾರಿ ಸನ್ನಿವೇಶ ನಮ್ಮ ಕೊಡಗಿನಲ್ಲಿ ಬಂದಿದೆ.

ಇದನ್ನೂಓದಿ: ಐನ್ ಮನೆಯ ಬೀಗ ತೆಗೆಯೋಣ…ದೀಪ ಹಚ್ಚೋಣ…ಒಗ್ಗಟ್ಟಿನಿಂದ ಬದುಕೋಣ!

 ಕೊಡಗಿನ ಇಂದಿನ ಕಹಿ ಸತ್ಯ

ದುರದೃಷ್ಟವಶಾತ್ ಕೊಡಗಿನಲ್ಲಿ ಇತ್ತೀಚೆಗೆ ಪ್ರತಿಯೊಬ್ಬರು ಒಂದೊಂದು ರಾಜಕಾರಣಿಗಳ ತರ ಪರಿವರ್ತನೆಯಾಗಿದ್ದಾರೆ. ನಮ್ಮಲ್ಲಿ ಎಲ್ಲರೂ ರಾಜಕೀಯ, ಪಕ್ಷ, ಕುರ್ಚಿಯ ಬಗ್ಗೆಯೇ ಮಾತನಾಡುತ್ತಿದ್ದೇವೆ. ಇಂತಹ ಸೂಕ್ಷ್ಮ ಮತ್ತು ಗಂಭೀರ ವಿಷಯಗಳ ಬಗ್ಗೆ ಯೋಚಿಸಲು ಯಾರಿಗೂ ಸಮಯ ಇಲ್ಲದ ರೀತಿಯಲ್ಲಿ ಆಗಿದೆ. ಇಂತಹ ಗಂಭೀರ ವಿಷಯವನ್ನು ನಾವು ಗಂಭೀರವಾಗಿ ಪರಿಗಣಿಸಲೇಬೇಕು. ಇದು ವೈಯಕ್ತಿಕ ವಿಷಯವಲ್ಲ, ಇದು ನಮ್ಮ ಇಡೀ ಕೊಡಗು ಸಮಾಜದ ಉಳಿವಿನ ಪ್ರಶ್ನೆ.

ಈಗಾಗಲೇ ಕೊಡಗಿನ ಮದುವೆ ಮತ್ತು ವಿಚ್ಛೇದನದ ವಿಚಾರವಾಗಿ ಮೂರು ಲೇಖನಗಳು ನಮ್ಮ ‘ಕೊಡಗಿನ ನೈಜ ಧ್ವನಿ’ ಮೂಲಕ ಪ್ರಕಟವಾಗಿವೆ. ಆದರೂ ಇನ್ನೂ ನಮ್ಮ ಸಮಾಜ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಒಂದೊಂದು ದಿನವೂ ದಾಟುತ್ತಾ ಹೋದಂತೆ, ನಮ್ಮ ಕುಟುಂಬ ವ್ಯವಸ್ಥೆ ನಾಶವಾಗುವ ಒಂದೊಂದು ದಿನವನ್ನು ನಾವು ಎಣಿಕೆ ಮಾಡಿದಂತೆ ಆಗುತ್ತಿದೆ.

ಇದನ್ನೂಓದಿ: ಕೊಡಗಿನಲ್ಲಿ ಮಾದಕ ಜಾಲ… ಗಾಂಜಾಮುಕ್ತ ಜಿಲ್ಲೆಯನ್ನಾಗಿಸಲು ಕೈ ಜೋಡಿಸೋಣ
 ನಮ್ಮ ಕೊಡಗಿನ ಸಂಘ ಸಂಸ್ಥೆಗಳು ಏನು ಮಾಡಬೇಕು?

ಹಾಗಾಗಿ ಇನ್ನು ಮುಂದೆ ಕೊಡಗಿನ ಪ್ರಮುಖ ಸಮಾಜಗಳು, ಕೊಡವ ಸಮಾಜಗಳು, ಸಂಘಗಳು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿದೆ. ಅವಿವಾಹಿತ ಹುಡುಗ-ಹುಡುಗಿಯರಿಗೆ ಒಂದು ವೇದಿಕೆ ಕಲ್ಪಿಸುವ ಕೆಲಸ ಮಾಡಬೇಕು. ಪ್ರತೀ ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ನಮ್ಮ ಸಮಾಜದ ವತಿಯಿಂದಲೇ ಪರಿಚಯ ವೇದಿಕೆ, ವಿವಾಹ ಮೇಳಗಳನ್ನು ಆಯೋಜಿಸಬೇಕು. ಮದುವೆಯ ವಯಸ್ಸು ಮೀರಿದ ನಮ್ಮ 35-50ರ ವಯೋಮಾನದ ಹುಡುಗರ ಬಗ್ಗೆಯೂ ವಿಶೇಷ ಗಮನ ಹರಿಸಬೇಕು.

ಸರಿಯಾದ ಮದುವೆ ವಯಸ್ಸು  ನಮ್ಮ ಹುಡುಗರಿಗೆ 25 ರಿಂದ 28 ವರ್ಷದೊಳಗೆ.. ನಮ್ಮ ಹುಡುಗಿಯರಿಗೆ 21 ರಿಂದ 25 ವರ್ಷದೊಳಗೆ ಈ ಸಮಸ್ಯೆ ನಮ್ಮ ಮನೆ ಬಾಗಿಲಿಗೆ ಬಂದಿದೆ.

ಇದನ್ನೂಓದಿ: ಕೊಡಗಿನ ‘ನಾಳೆ’ನಮ್ಮಕೈಯಲ್ಲಿದೆ…. ಈಗ ಎಚ್ಚೆತ್ತುಕೊಳ್ಳುವ ಸಮಯಬಂದಿದೆ

ರಾಜಕೀಯವನ್ನು ಸ್ವಲ್ಪ ಪಕ್ಕಿಟ್ಟು, ನಮ್ಮ ಕುಟುಂಬವನ್ನು ಉಳಿಸುವ ಕೆಲಸಕ್ಕೆ ನಾವೆಲ್ಲರೂ ಕೈಜೋಡಿಸೋಣ. ನಮ್ಮ ಮಕ್ಕಳ ಮದುವೆಯನ್ನು ಸಮಯಕ್ಕೆ ಸರಿಯಾಗಿ ಮಾಡಿಸುವ ಮೂಲಕ ನಮ್ಮ ಕೊಡಗಿನ ಕೂಡು ಕುಟುಂಬ ವ್ಯವಸ್ಥೆಯನ್ನು ಉಳಿಸೋಣ.

ನೆನಪಿರಲಿ… ನಮ್ಮ ಕುಟುಂಬ ಇಲ್ಲದಿದ್ದರೆ ನಮ್ಮ ಕೊಡಗಿನ ಸಮಾಜವೇ ಉಳಿಯುವುದಿಲ್ಲ.

admin
the authoradmin

Leave a Reply