LatestMysore

ರೈತರಿಗೆ ಪರಿಹಾರ ಹಣ ನೀಡದ ಕೆ.ಆರ್.ನಗರ ಪುರಸಭೆ ಸಾಮಗ್ರಿ ಜಪ್ತಿ

ಕೆ.ಆರ್.ನಗರ(ಜಿಟೆಕ್ ಶಂಕರ್): ಹೈಕೋರ್ಟ್ ಆದೇಶ ಮೇರೆಗೆ ಪಟ್ಟಣ ಪುರಸಭೆಯಲ್ಲಿನ ಸಾಮಗ್ರಿಯನ್ನು ನ್ಯಾಯಾಲಯದ ಸಿಬ್ಬಂದಿ ಜಪ್ತಿ ಮಾಡಿದ ಘಟನೆ ನಡೆದಿದೆ.

ನ್ಯಾಯಾಲಯದ ಆದೇಶದ ಮೇರೆಗೆ‌ ವಕೀಲ ದಯಾನಂದ ಕುಮಾರ್ ಅವರ ನೇತೃತ್ವದಲ್ಲಿ ನ್ಯಾಯಾಲಯದ ಸಿಬ್ಬಂದಿ  ಪುರಸಭೆಗೆ ಭೇಟಿ ನೀಡಿ ಕಚೇರಿಯ ಕುರ್ಚಿ, ಮೇಜು ಸೇರಿದಂತೆ‌ ಹಲವು ವಸ್ತುಗಳನ್ನು ಕಚೇರಿಯಿಂದ ನ್ಯಾಯಾಲಯಕ್ಕೆ ಕೊಂಡೊಯ್ದರು.

ಪಟ್ಟಣ ಪುರಸಭೆಯು 2017 ರಲ್ಲಿ ಮಧುವನಹಳ್ಳಿ, ಕಂಠೇನಹಳ್ಳಿಯ 22 ಮಂದಿ ರೈತರಿಂದ‌ ಯುಜಿಡಿ ನಿರ್ಮಾಣಕ್ಕಾಗಿ ಪ್ರತಿ ಗುಂಟೆಗೆ 9 ಸಾವಿರ ನೀಡುವಂತೆ ಜಮೀನು ಖರೀದಿ ಮಾಡಿ ಪರಿಹಾರದ ಹಣ ಪಾವತಿ ಮಾಡಲಾಗಿತ್ತು. ಆದರೆ ರೈತರು ಆ ಹಣ ಸಾಲದು ಎಂದು ನ್ಯಾಯಾಲಯದ‌ ಮೆಟ್ಟಿಲೇರಿದ್ದರು ಆದ್ದರಿಂದ‌ ಕೋರ್ಟ್ ಪ್ರತಿ ಗುಂಟೆ ತರಿ ಜಮೀನಿಗೆ 3.5 ಲಕ್ಷ ಮತ್ತು ಖುಷ್ಕಿ ಜಮೀನಿಗೆ 8 ಲಕ್ಷ ರೂ ನೀಡುವಂತೆ ಸೂಚಿಸಿತ್ತು.

ನ್ಯಾಯಾಲಯದ ಈ ಆದೇಶದಿಂದ ಒಟ್ಟು  9 ಕೋಟಿ ಹಣದ‌ ಜತೆಗೆ ಬಡ್ಡಿ ಸಮೇತ 12ಕೋಟಿ ಹಣ ನೀಡಬೇಕಿತ್ತು. ಆದರೆ ಪುರಸಭೆಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣ ಇಲ್ಲದ ಕಾರಣ ಪಾವತಿ ತಡವಾದ್ದರಿಂದ ನ್ಯಾಯಾಲಯ ಪುರಸಭೆ ಕಚೇರಿಯನ್ನು ಜಫ್ತಿ ಮಾಡಿ ಆದೇಶ ಹೊರಡಿಸಿದೆ.

ತಿಂಗಳ ಹಿಂದೆ ವಕೀಲ ನೇತೃತ್ವದಲ್ಲಿ ಪುರಸಭೆಯ ಮುಖ್ಯಾಧಿಕಾರಿಗಳ ಜತೆ ಮಾತುಕತೆ ನಡೆಸಿ ಹಣ ನೀಡುವುದಾಗಿ ಭರವಸೆ ನೀಡಿದರಿಂದ ಜಪ್ತಿಯನ್ನು ಮುಂದೂಡಿಕೊಂಡು ಬರಲಾಯಿತಾದರೂ ಹಣ ಭೂ ಮಾಲೀಕರ ಕೈ ಸೇರದ ಹಿನ್ನಲೆಯಲ್ಲಿ ಜಫ್ತಿ ಮಾಡಲಾಯಿತು ಎಂದು ಜಮೀನು ನೀಡಿದ ರೈತರು ತಿಳಿಸಿದ್ದಾರೆ.

admin
the authoradmin

Leave a Reply