LatestMysore

ಮೈಸೂರಿನಲ್ಲಿ ಮಕ್ಕಳಿಗೆ ಮಣ್ಣಿನಲ್ಲಿ ಆಡುತ್ತಾ ಮಣ್ಣಿನಿಂದಲೇ ಗಣಪ ತಯಾರಿಸುವ ಕಾರ್ಯಾಗಾರ

ಮೈಸೂರು: ಮಕ್ಕಳಿಗೆ ಮಣ್ಣಿನೊಂದಿಗೆ ಆಟವಾಡುವುದೆಂದರೆ ಎಲ್ಲಿಲ್ಲದ ಸಂಭ್ರಮ! ಹೀಗಾಗಿ ಅವರ ಸುಂದರ ಕಲ್ಪನಾಶಕ್ತಿಯನ್ನು ಪ್ರೋತ್ಸಾಹಿಸಲು ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯು “ಮಣ್ಣಿನೊಂದಿಗೆ ಆಟ” ಎಂಬ 4 ವಾರಾಂತ್ಯಗಳ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.

ಸೆಪ್ಟೆಂಬರ್ 5 ಮತ್ತು 6 ರಂದು ಮಕ್ಕಳು ಮತ್ತು ವಯಸ್ಕರಿಗಾಗಿ, ಕುಂಬಾರಿಕೆ ಚಕ್ರವನ್ನು ಉಪಯೋಗಿಸಿ ಮಣ್ಣಿನ ಮಡಿಕೆ ಮಾಡುವ ಕಾರ್ಯಾಗಾರ ಮಕ್ಕಳನ್ನು ಆಕರ್ಷಿಸಲಿದೆ. ಈ  ಕಾರ್ಯಾಗಾರದಲ್ಲಿ ವೃತ್ತಿಪರ ಕುಂಬಾರಾದ ಶ್ರೀಮತಿ ಭಾಗ್ಯವತಿ  ಹಾಗು ಚೆಲುವರಾಜ್ ರವರು ಮಣ್ಣಿನ ಗಣಪ ಮಾಡುವುದನ್ನು ಮಕ್ಕಳಿಗೆ ಹೇಳಿಕೊಡಲಿದ್ದಾರೆ.

ಕಾರ್ಯಾಗಾರ ಯಾವಾಗ, ಎಲ್ಲಿ ಮತ್ತು ಎಷ್ಟು ಗಂಟೆಯವರೆಗೆ ನಡೆಯಲಿದೆ ಎಂಬುದನ್ನು ನೋಡುವುದಾದರೆ, ಸೆಪ್ಟೆಂಬರ್ 5 ರಂದು 3 ಗಂಟೆಯಿಂದ 5 ಗಂಟೆವರೆಗೆ, ಸೆಪ್ಟೆಂಬರ್ 6 ರಂದು ಬೆಳಿಗ್ಗೆ 10 ರಿಂದ 12 ರ ವರೆಗೆ ನಡೆಯಲಿದ್ದು, ಮಣ್ಣಿನ ಗಣೇಶ ಮಾಡುವ ಕಾರ್ಯಕ್ರಮವು ಸೆಪ್ಟೆಂಬರ್ 12 ರಂದು 3 ಗಂಟೆಯಿಂದ 5 ಗಂಟೆವರೆಗೆ, ಸೆಪ್ಟೆಂಬರ್ 13 ರಂದು ಬೆಳಿಗ್ಗೆ 10 ರಿಂದ 12 ರ ವರೆಗೆ ನಡೆಯಲಿದೆ ನೋಂದಣಿ ಮತ್ತು ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ 9686892255 ನ್ನು ಸಂಪರ್ಕಿಸಿ ಪಡೆಯ ಬಹುದಾಗಿದೆ.

ಕಾರ್ಯಾಗಾರವು ಮೈಸೂರಿನ ಜೆಎಲ್ ಬಿ ರಸ್ತೆಯಲ್ಲಿರುವ ಹಾರ್ಡ್ ವಿಕ್ ಶಾಲಾ ಆವರಣದಲ್ಲಿರುವ  ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ (IIET)ಯಲ್ಲಿ ನಡೆಯಲಿದೆ.

admin
the authoradmin

Leave a Reply