ArticlesLatest

ಭಾರತ ಕಂಡ ಶ್ರೇಷ್ಠ ಪ್ರಧಾನಮಂತ್ರಿಗಳಲ್ಲಿ ಒಬ್ಬರು ನರೇಂದ್ರ ಮೋದಿಜಿ.. ಭಾರತ ರತ್ನ ನೀಡಲೇಬೇಕು

ಒಂದು ಸಣ್ಣ ಮನವಿ – ಈ ಬರಹವನ್ನು ದಯವಿಟ್ಟು ಪೂರ್ತಿ ಓದಿ ….ಈ ಬರಹ ಯಾರ ಪರವಾಗಿಯೂ ಅಲ್ಲ, ಯಾರ ವಿರುದ್ಧವಾಗಿಯೂ ಅಲ್ಲ. ಇದು ಯಾವುದೇ ಪಕ್ಷದ, ಯಾವುದೇ ಜಾತಿಯ, ಯಾವುದೇ ಧರ್ಮದ ಬರಹವಲ್ಲ. ಇದು ಸಂಪೂರ್ಣವಾಗಿ ಸಾಮಾಜಿಕವಾದ ಬರಹ.

ದೇಶದ ಪ್ರಧಾನಮಂತ್ರಿಗಳನ್ನು ಗೌರವಿಸುವುದು ದೇಶದ ಜನರ ಇಚ್ಛಾಶಕ್ತಿಯಾಗಿರಲಿ ಎಂಬುದೇ ಈ ಬರಹದ ಒಂದೇ ಉದ್ದೇಶ. ದಯವಿಟ್ಟು ಇದನ್ನು ಪಕ್ಷದ ದೃಷ್ಟಿಯಿಂದ ನೋಡಬೇಡಿ, ದೇಶದ ದೃಷ್ಟಿಯಿಂದ ನೋಡಿ.

ಭಾರತಕ್ಕೆ ಇದುವರೆಗೂ ಅನೇಕ ಶ್ರೇಷ್ಠ ಪ್ರಧಾನಮಂತ್ರಿಗಳು ಸಿಕ್ಕಿದ್ದಾರೆ. ಅಟಲ್ ಬಿಹಾರಿ ವಾಜಪೇಯಿಜಿ, ಲಾಲ್ ಬಹದ್ದೂರ್ ಶಾಸ್ತ್ರಿಜಿ ಅವರಂತಹ ಮಹಾನ್ ನಾಯಕರ ಸಾಲಿನಲ್ಲಿ, ದೇಶ ಮೊದಲು ಅನ್ನುವ ಇಚ್ಛಾಶಕ್ತಿಯಿಂದ ದುಡಿಯುತ್ತಿರುವ ಪ್ರಧಾನಮಂತ್ರಿ ಎಂದರೆ ಶ್ರೀ ನರೇಂದ್ರ ಮೋದಿಜಿ.

ಒಬ್ಬ ಸಾಮಾನ್ಯ ಚಾಯ್ ಮಾರುತ್ತಿದ್ದ ಹುಡುಗ, ಇಂದು ವಿಶ್ವದ ಅತ್ಯಂತ ಶಕ್ತಿಶಾಲಿ ನಾಯಕರಲ್ಲಿ ಒಬ್ಬರಾಗಿ ಬೆಳೆದು ನಿಂತಿದ್ದಾನೆ ಎಂದರೆ ಅದು ಅವರ ಇಚ್ಛಾಶಕ್ತಿ, ದೇಶಭಕ್ತಿ, ಮತ್ತು ದೇಶ ಮೊದಲು ಎಂಬ ಮನೋಭಾವದಿಂದ ಮಾತ್ರ ಸಾಧ್ಯ.

ಭಾರತ ರತ್ನ ಎಂದರೆ ಪಕ್ಷದ ಗೌರವವಲ್ಲ, ದೇಶದ ಗೌರವ…

ಇದುವರೆಗೂ ಅನೇಕ ಪ್ರಧಾನಮಂತ್ರಿಗಳಿಗೆ ಭಾರತ ರತ್ನ ಸಿಕ್ಕಿದೆ. ಇದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಲ್ಲ.ಜವಾಹರಲಾಲ್ ನೆಹರುಜೀ, ಲಾಲ್ ಬಹದ್ದೂರ್ ಶಾಸ್ತ್ರಿಜಿ, ಇಂದಿರಾ ಗಾಂಧಿಜಿ, ರಾಜೀವ್ ಗಾಂಧಿಜಿ, ಮೊರಾರ್ಜಿ ದೇಸಾಯಿಜಿ, ಗುಲ್ಜಾರಿಲಾಲ್ ನಂದಾಜಿ ಮತ್ತು ಅಟಲ್ ಬಿಹಾರಿ ವಾಜಪೇಯಿಜಿ – ಇವರೆಲ್ಲರೂ ಭಾರತ ರತ್ನ ಪಡೆದ ಪ್ರಧಾನಮಂತ್ರಿಗಳು.

ಅಂದರೆ ಭಾರತ ರತ್ನ ಎಂದರೆ ಕಾಂಗ್ರೆಸ್ ನವರಿಗೂ ಸಿಕ್ಕಿದೆ, ಬಿಜೆಪಿಯವರಿಗೂ ಸಿಕ್ಕಿದೆ, ಜನತಾ ಪಕ್ಷದವರಿಗೂ ಸಿಕ್ಕಿದೆ. ಇದು ದೇಶಕ್ಕಾಗಿ ದುಡಿದವರಿಗೆ ಸಿಗುವ ಅತ್ಯುನ್ನತ ಗೌರವ. ಅದೇ ರೀತಿ ದೇಶಕ್ಕಾಗಿ ದುಡಿಯುತ್ತಿರುವ ಮೋದಿಜಿಯವರಿಗೂ ಭಾರತ ರತ್ನ ಸಿಗಬೇಕು ಎಂಬುದು ನಮ್ಮೆಲ್ಲರ ಇಚ್ಛೆ.

ವಿಶ್ವದ 29 ದೇಶಗಳ ಅತ್ಯುನ್ನತ ಗೌರವ ಪಡೆದ ನಾಯಕ …

ಮೋದಿಜಿಯವರು ಇದುವರೆಗೆ 29 ದೇಶಗಳ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಸ್ವೀಕಾರ ಮಾಡಿದ್ದಾರೆ. ಇದು ಭಾರತದ ಯಾವ ಪ್ರಧಾನಮಂತ್ರಿಗೂ ಈ ಹಿಂದೆ ಸಿಕ್ಕಿರದಂತಹ ಅಪರೂಪದ ಗೌರವ. ಸೌದಿ ಅರೇಬಿಯಾ, UAE, ರಷ್ಯಾ, ಫ್ರಾನ್ಸ್, ಅಮೆರಿಕ, ಈಜಿಪ್ಟ್, ಭೂತಾನ್, ಶ್ರೀಲಂಕಾ, ಬ್ರೆಜಿಲ್, ಒಮಾನ್ ಹೀಗೆ 29 ರಾಷ್ಟ್ರಗಳು ತಮ್ಮ ದೇಶದ ಅತ್ಯುನ್ನತ ಗೌರವವನ್ನು ಮೋದಿಜಿಗೆ ನೀಡಿವೆ. 2025ರ ಡಿಸೆಂಬರ್ ನಲ್ಲಿ ಸಿಕ್ಕ ಒಮಾನ್ ನ ಆರ್ಡರ್ ಆಫ್ ಒಮಾನ್ ಅವರ 29ನೇ ಗೌರವ. ಇದು ಮೋದಿಜಿಗೆ ಸಿಕ್ಕ ಗೌರವವಲ್ಲ, 140 ಕೋಟಿ ಭಾರತೀಯರಿಗೆ ಸಿಕ್ಕ ಗೌರವ.

500 ವರ್ಷಗಳ ಕನಸನ್ನು ನನಸು ಮಾಡಿದವರು

ರಾಮ ಮಂದಿರ ನಿರ್ಮಾಣ ಮಾಡುವ ಮೂಲಕ ಕೋಟ್ಯಂತರ ಜನರ ಭಾವನೆಗೆ ಗೌರವ ಕೊಟ್ಟರು. 370ನೇ ವಿಧಿ ರದ್ದು ಮಾಡುವ ಮೂಲಕ ಕಾಶ್ಮೀರವನ್ನು ಭಾರತದೊಂದಿಗೆ ಸಂಪೂರ್ಣವಾಗಿ ಬೆಸೆದರು. ದೇಶ ಒಂದೇ, ಸಂವಿಧಾನ ಒಂದೇ ಎಂದು ಸಾಬೀತುಪಡಿಸಿದರು.

ಬಡವರಿಗಾಗಿ ದುಡಿದ ನಾಯಕ..ಸ್ವಚ್ಛ ಭಾರತ ಮೂಲಕ 11 ಕೋಟಿಗೂ ಹೆಚ್ಚು ಶೌಚಾಲಯ ಕಟ್ಟಿಸಿ ಹೆಣ್ಣು ಮಕ್ಕಳಿಗೆ ಗೌರವ ಕೊಟ್ಟರು. ಉಜ್ವಲ ಯೋಜನೆ ಮೂಲಕ 10 ಕೋಟಿ ಬಡ ಕುಟುಂಬಗಳಿಗೆ ಉಚಿತ ಗ್ಯಾಸ್ ಸಂಪರ್ಕ ಕೊಟ್ಟರು. ಆಯುಷ್ಮಾನ್ ಭಾರತ ಮೂಲಕ 50 ಕೋಟಿ ಜನರಿಗೆ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಕೊಟ್ಟರು. ಪ್ರಧಾನಮಂತ್ರಿ ಆವಾಸ್ ಯೋಜನೆ ಮೂಲಕ 4 ಕೋಟಿಗೂ ಹೆಚ್ಚು ಬಡವರಿಗೆ ಸ್ವಂತ ಮನೆ ಕೊಟ್ಟರು.ಜನ್ ಧನ್ ಯೋಜನೆ ಮೂಲಕ 50 ಕೋಟಿ ಜನರಿಗೆ ಬ್ಯಾಂಕ್ ಖಾತೆ ತೆರೆಸಿ ನೇರವಾಗಿ ಹಣ ತಲುಪಿಸಿದರು.

ರೈತರಿಗೆ ನೇರ ನೆರವು.. PM ಕಿಸಾನ್ ಸಮ್ಮಾನ್ ಮೂಲಕ ವರ್ಷಕ್ಕೆ 6000 ರೂ ನೇರವಾಗಿ ರೈತರ ಖಾತೆಗೆ ಹಾಕಿದರು. ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತನಿಗೆ ನೇರವಾಗಿ ಹಣ ತಲುಪುವ ವ್ಯವಸ್ಥೆ ಮಾಡಿದರು.

ಡಿಜಿಟಲ್ ಇಂಡಿಯಾ – ಜಗತ್ತು ಬೆರಗಾದ ಸಾಧನೆ

ಇಂದು ಇಡೀ ಜಗತ್ತು UPI ನೋಡಿ ಬೆರಗಾಗಿದೆ. ಚಾಯ್ ಅಂಗಡಿಯಲ್ಲೂ ಫೋನ್ ಪೇ ಮಾಡುವ ಮಟ್ಟಕ್ಕೆ ಭಾರತವನ್ನು ಬೆಳೆಸಿದರು. ಭಾರತ ಇಂದು ವಿಶ್ವದ 5ನೇ ಅತಿದೊಡ್ಡ ಆರ್ಥಿಕ ಶಕ್ತಿ.

ಸೈನಿಕರಿಗೆ ಶಕ್ತಿ ತುಂಬಿದವರು.. ಒನ್ ರಾಂಕ್ ಒನ್ ಪೆನ್ಷನ್ ಜಾರಿ ಮಾಡಿದರು. ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಮೂಲಕ ದೇಶದ ಸೈನ್ಯಕ್ಕೆ ಶಕ್ತಿ ತುಂಬಿದರು. ಕೋವಿಡ್ ಸಮಯದಲ್ಲಿ ಭಾರತವೇ ಸ್ವಂತ ಲಸಿಕೆ ತಯಾರಿಸಿ 100ಕ್ಕೂ ಹೆಚ್ಚು ದೇಶಗಳಿಗೆ ಉಚಿತವಾಗಿ ಕೊಟ್ಟಿದ್ದು ಮೋದಿಜಿಯ ನಾಯಕತ್ವದಿಂದಲೇ.

ದೇಶ ಮೊದಲು ಎನ್ನುವ ಇಚ್ಛಾಶಕ್ತಿ… ಮೋದಿಜಿಗೆ ಇರುವುದು ಒಂದೇ ಧ್ಯೇಯ – ದೇಶ ಮೊದಲು. ಬೆಳಗ್ಗೆ 4 ಗಂಟೆಯಿಂದ ರಾತ್ರಿ 12 ಗಂಟೆಯವರೆಗೂ ದೇಶಕ್ಕಾಗಿ ದುಡಿಯುವ ನಾಯಕ. ಅವರಿಗೆ ಇರುವುದು ಒಂದೇ ಕುಟುಂಬ – 140 ಕೋಟಿ ಭಾರತೀಯರು.

ಹಿಂದಿನ ಎಲ್ಲಾ ಪ್ರಧಾನಮಂತ್ರಿಗಳ ಸೇವೆಯನ್ನು ಗೌರವಿಸುತ್ತಲೇ, ಇಂದಿನ ಭಾರತವನ್ನು ವಿಶ್ವದ ಮುಂಚೂಣಿಗೆ ತಂದಿರುವ ಮೋದಿಜಿಯವರ ಸೇವೆಯನ್ನು ಕೂಡ ನಾವು ಗೌರವಿಸಬೇಕು. ಇವರಿಗೆ ಭಾರತ ರತ್ನ ಕೊಡಬೇಕು ಅಂತ ಇಚ್ಛಿಸುವವರು  ಬೆಂಬಲ ಕೊಡಿ.. ನಮ್ಮ ಉದ್ದೇಶ ಒಂದೇ – ದೇಶಕ್ಕಾಗಿ ದುಡಿದವರನ್ನು ಗೌರವಿಸೋಣ. ಪಕ್ಷ ಬೇರೆ ಇರಬಹುದು, ಆದರೆ ದೇಶ ಒಂದೇ…..

 

admin
the authoradmin

Leave a Reply