LatestMysore

ಸೆ.28, ರೈತರ ಸಂಕಷ್ಟಕ್ಕೆ ಸಂಬಂಧಿಸದ ಸರ್ಕಾರಗಳ ವಿರುದ್ಧ ರಾಜ್ಯಾದ್ಯಂತ ರೈತರ ಪ್ರತಿಭಟನೆ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ):  ಭೀಕರ ಬರಗಾಲದ ಸಂಕಷ್ಟಕ್ಕೆ ಸ್ಪಂದಿಸದ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ ನೀತಿಯನ್ನು ಖಂಡಿಸಿ ಶುಕ್ರವಾರ   ಹುಣಸೂರಿನ ಎಪಿಎಂಸಿ ಸಭಾಂಗಣದಲ್ಲಿ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಹಾಗೂ ತಾಲೂಕು ಅಧ್ಯಕ್ಷರ ಬೆಂಕಿಪುರ ಚಿಕ್ಕಣ್ಣ, ಅಧ್ಯಕ್ಷತೆಯಲ್ಲಿ  ಜಿಲ್ಲಾ ಕೇಂದ್ರದಲ್ಲಿ ನಡೆಯಲಿರುವ  ಪ್ರತಿಭಟನಾ ಧರಣಿಯ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್  ಮಾತನಾಡಿ  ರಾಜ್ಯದಲ್ಲಿ ಕಳೆದ 140 ವರ್ಷದ ನಂತರ ಭೀಕರ ಬರಗಾಲ ಉದ್ಭವವಾಗಿದೆ. ಕೆರೆಕಟ್ಟೆ ಜಲ ಮೂಲಗಳು ಬತ್ತಿ ಹೋಗಿದೆ. ರೈತರು ಹಾಕಿದ ಫಸಲುಗಳು ಕರಕಲಾಗಿ ಸಂಪೂರ್ಣ ನಷ್ಟವಾಗಿದೆ. ಅಂತರ್ಜಲ ಬತ್ತಿ ಹೋಗಿ ತೋಟಗಾರಿಕೆ ಫಸಲುಗಳು ಒಣಗಿ ಹೋಗಿವೆ.

ಜಾನುವಾರುಗಳು ಮೇವು ಮತ್ತು ನೀರು ಇಲ್ಲದೆ ಬಡಕಲಾಗಿದೆ. ಜನರು ಜೀವನ ಉಪಾಯಕ್ಕಾಗಿ ಉದ್ಯೋಗ ಅರಸಿ ದೂರದ ಊರುಗಳಿಗೆ ವಲಸೆ ಹೋಗುತ್ತಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ  ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷ ತೋರಿ ಅಮಾನವಿಯವಾಗಿ ನಡೆದುಕೊಳ್ಳುತ್ತಿದೆ.

ಈ ನಿಟ್ಟಿನಲ್ಲಿ   ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ ನೀತಿಯನ್ನು ಖಂಡಿಸಿ ಸಾಲ ಮನ್ನಾ ಮಾಡಲು ಆಗ್ರಹಿಸಿ, ಕೃಷಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ, ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ತುಂಬಲು ಒತ್ತಾಯಿಸಿ, ಕಬ್ಬಿಗೆ ಹೆಚ್ಚುವರಿ ಬೆಳೆ ನಿಗದಿ ಮಾಡುವಂತೆ ಆಗ್ರಹಿಸಿ ಸೆ.28ರ ಸೋಮವಾರ ಬೆಳಿಗ್ಗೆ 11 ಗಂಟೆಗೆ  ರಾಜ್ಯದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನಾ ಮೆರವಣಿಗೆ ಮತ್ತು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ಈ ಪ್ರತಿಭಟನಾ ಮೆರವಣಿಗೆಯಲ್ಲಿ  ತಾಲೂಕಿನಿಂದ 200ಕ್ಕೂ ಮೇಲ್ಪಟ್ಟು ರೈತರು ಜಿಲ್ಲಾ ಕೇಂದ್ರಕ್ಕೆ ತೆರಳಿ  ಈ ಒಂದು ಪ್ರತಿಭಟನೆಯಲ್ಲಿ ಭಾಗವಹಿಸಲಾಗುವುದು ಎಂದು ತಿಳಿಸಿದ್ದಾರೆ.

ಹಕ್ಕೋತಾಯಗಳು ಏನೇನು?

1) ರೈತರ ಕೃಷಿ ಸಾಲ ಮನ್ನಾ ಆಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇಕಡ 50ರ ಅನುಪಾತದಲ್ಲಿ ಸಾಲ ಮನ್ನಾ ಮಾಡಬೇಕು. 2) ಬ್ಯಾಂಕುಗಳು ಸಾಲ ವಸಲಿ ಮಾಡುವುದಕ್ಕೆ ತಡೆಯೊಡ್ಡಬೇಕು. 3) ಕೃಷಿಗೆ ಪ್ರಥಮ ಆದ್ಯತೆ ನೀಡಿ ಸರ್ಕಾರ ಒಪ್ಪಿಕೊಂಡಿರುವಂತೆ ಕನಿಷ್ಠ ಏಳು ಗಂಟೆಗಳ ಕಾಲ ವಿದ್ಯುತ್ತನ್ನು ಕೃಷಿ ಪಂಸೆಟ್ ಗಳಿಗೆ ಸರಬರಾಜು ಮಾಡಬೇಕು.. 4) ಕೆರೆಕಟ್ಟೆಗಳಿಗೆ ನೀರು ತುಂಬಿಸಬೇಕು. 5) ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರವನ್ನು ತುಂಬಿಕೊಡಬೇಕು.

6) ವಿಮಾ ಕಂಪನಿಗಳು ಸಂಪೂರ್ಣ ಬೆಳೆ ನಷ್ಟ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡಬೇಕು. 7) ಜನಜಾನುವಾರುಗಳಿಗೆ ಕುಡಿಯುವ ನೀರಿನ ಆದ್ಯತೆ ಜಾನುವಾರುಗಳಿಗೆ ಮೇವು ಪೂರೈಸುವುದು ಜನರಿಗೆ ಹೆಚ್ಚಿನ ಪಡಿತರ ಒದಗಿಸುವುದು, ಖರೀದಿ ಕೇಂದ್ರದ ಮೂಲಕ ಖರೀದಿಸಿರುವ ಭತ್ತ ಜೋಳ ರಾಗಿ ಬಾಕಿಯನ್ನು ಕೂಡಲೇ ರೈತರ ಖಾತೆಗೆ ಹಾಕಬೇಕು. 8) ವಾಸ ಸ್ಥಳದ ಹತ್ತಿರದಲ್ಲೇ ಉದ್ಯೋಗ ದೊರಕಿಸಬೇಕು.

9) ಮೈಸೂರು ದಸರವನ್ನು ಸರಳವಾಗಿ ಆಚರಿಸಬೇಕು ಕಂಬಳ ಆಯೋಜನೆಯನ್ನು ನಿಲ್ಲಿಸಬೇಕು. 10) ಶಾಶ್ವತವಾಗಿ ಬರ ಉಚ್ಛಾಟಿಸಲು ದೂರದೃಷ್ಟಿಯ ಕಾರ್ಯಕ್ರಮಗಳನ್ನು ರೂಪಿಸಬೇಕು. 11) ಕೇಂದ್ರ ಸರ್ಕಾರ ನಿಗದಿ ಮಾಡಿರುವ ಕಬ್ಬಿನ ಬೆಲೆಯೂ ಅತ್ಯಂತ ಕಡಿಮೆ ಇದ್ದು ರಾಜ್ಯ ಸರ್ಕಾರ ಎಫ್ ಆರ್ ಪಿ ಬೆಲೆಗೆ ಹೆಚ್ಚಿನ ಬೆಲೆಯನ್ನು ನಿಗದಿ ಮಾಡಿ ಕಬ್ಬು ಬೆಳೆಗಾರರನ್ನು ರಕ್ಷಿಸಬೇಕು. 12) ತಂಬಾಕು ಬೆಳೆಯನ್ನು ಫಸಲು ಭೀಮಾ ಯೋಜನೆಗೆ ರಾಜ್ಯ ಸರ್ಕಾರ ಸೇರ್ಪಡೆಗೊಳಿಸಬೇಕು. 13) ವಿಧವಾ ವೇತನ ಅಂಗವಿಕಲರ ವೇತನ ವೃದ್ಧಾಪ್ಯ ವೇತನ ಆತ್ಮಹತ್ಯೆ ಮಾಡಿಕೊಳ್ಳುವ ರೈತ ಕುಟುಂಬಕ್ಕೆ ಶೀಘ್ರದಲ್ಲೇ ರಾಜ್ಯ ಸರ್ಕಾರ ಪರಿಹಾರ ಜಮಾ ಮಾಡಬೇಕು ಎಂದು ಆಗ್ರಹಿಸಲಾಗುತ್ತಿದೆ.

ಈ ಸಭೆಯಲ್ಲಿ  ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ ತಟ್ಟೆಕೆರೆ ರಾಮಕೃಷ್ಣೇಗೌಡರು, ಕಲ್ಲಹಳ್ಳಿ ಜಯಣ್ಣ, ಗೌರವಾಧ್ಯಕ್ಷರಾದ ವಿಷಕಂಠಪ್ಪ ಕುರುಬೂರು ವೆಂಕಟೇಶ್, ಮುತ್ತುರಾಜ್ ಗಾಗೇನಹಳ್ಳಿ ಘಟಕ ಅಧ್ಯಕ್ಷರು ಮಹಾದೇವ್, ಅಗ್ರಹಾರ ಸತೀಶ್, ತಿಪ್ಪೂರು ಸೋಮಶೇಖರ್, ರಾಮೇನಹಳ್ಳಿ ಸೋಮಣ್ಣ ಧರ್ಮಪುರ ಘಟಕ ಅಧ್ಯಕ್ಷರಾದ  ವೆಂಕಟಚಲಪತಿ, ಧರ್ಮಪುರ ಸೋಮಣ್ಣ ಚೌಡಿಕಟ್ಟೆ ನಾಗಣ್ಣ, ಜಿಲ್ಲಾ ಉಪಾಧ್ಯಕ್ಷರಾದ ಗುರುಪುರ ಆಲಿಜನ್  ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

admin
the authoradmin

Leave a Reply