LatestMysore

ಸಹಕಾರ ಸಂಘಗಳ  ಬೆಳವಣಿಗೆಗೆ ವೈಯಕ್ತಿಕ ಪ್ರತಿಷ್ಠೆ ಸ್ವಾರ್ಥ ಮರೆತು ಶ್ರಮಿಸಿ: ಕಲ್ಮಳ್ಳಿ ನಟರಾಜು ಹಿತನುಡಿ

ನಂಜನಗೂಡು: ಸಹಕಾರ ಸಂಘಗಳಲ್ಲಿ ವೈಯಕ್ತಿಕ ಪ್ರತಿಷ್ಠೆ, ಸ್ವಾರ್ಥ ಮನೋಭಾವ ದೂರವಾದಾಗ ಮಾತ್ರ ಸಹಕಾರ ಸಂಘಗಳ ಬೆಳವಣಿಗೆ ಸಾಧ್ಯ  ಎಂದು ಸಂಘದ ಸಂಸ್ಥಾಪಕ ಕಲ್ಮಳ್ಳಿ ನಟರಾಜು ಅಭಿಪ್ರಾಯಪಟ್ಟರು.

ನಂಜನಗೂಡಿನ ವಿದ್ಯಾನಗರದ ನಂದಾದೀಪ ನಿಲಯದ ಹೊಸದಾಗಿ ಸ್ಥಾಪನೆಯಾಗಿರುವ ವೈರಾಗ್ಯ ನಿಧಿ ಅಕ್ಕಾ ಮಹಾದೇವಿ ಮಹಿಳಾ ಸೌಹಾರ್ದ ಸಹಕಾರ ಸಂಘದ ನೂತನ ಕಚೇರಿ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಕಳೆದ, 20 ವರ್ಷಗಳ ಹಿಂದೆ ಹಠಾತ್ ಕಾಣಿಸಿಕೊಂಡ ಹೃದಯ ರೋಗ ದಿಂದ ಬದುಕುವ ಆಸೆಯನ್ನೇ ಕಳೆದು ಕೊಂಡಿದ್ದ ನನಗೆ ನೂರಾರು ಸಹೃದಯಿಗಳು ನೀಡಿದ ಆರ್ಥಿಕ ನೆರವು ನಾನು ಇಂದು ನಿಮ್ಮೆಲ್ಲರ ಕಣ್ಮುಂದೆ ಜೀವಂತವಾಗಿ ಇರಲು ಕಾರಣವಾಗಿದೆ.

ಅದರ ಋಣ ತೀರಿಸುವ ಸಲುವಾಗಿ ಸೇವಾಸಕ್ತ ಮನಸ್ಸುಗಳ ಸ್ಪಂದನೆಯಿಂದ ತಾಲ್ಲೂಕಿನ ಸಮುದಾಯದ ಸೇವೆಗೆ ಕಿಂಚಿತ್ ಸೇವೆ ನೀಡಬೇಕೆನ್ನುವ ಮಹಾತ್ಮ ರ ಹೆಸರಿನಲ್ಲಿ ಮಹದಾಸೆಯಿಂದ ಕಳೆದ 12 ವರ್ಷಗಳ ಹಿಂದೆ ನಂಜನಗೂಡು ತಾಲೂಕಿನಲ್ಲಿ ಶ್ರೀ ಗುರು ಮಲ್ಲೇಶ್ವರ ಮಹಿಳಾ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘ ಮತ್ತು ಶ್ರೀ ಗುರು ಕಂಬಳಿಶ್ವರ ಸೌಹಾರ್ದ ಸಹಕಾರ ಸಂಘಗಳನ್ನು ಸ್ಥಾಪಿಸಿ ಅವುಗಳು ತಾಲೂಕಿನಲ್ಲಿ ಸಮುದಾಯಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿದ್ದು  ಸಮುದಾಯದ ಸೇವೆಗೆ ನಾನು ಸ್ಥಾಪಿಸುತ್ತಿರುವ ಮೂರನೇ ನೆಯ ಸಹಕಾರ ಸಂಘವಾಗಿದೆ ಎಂದರು.

ಸಹಕಾರ ಮತ್ತು ಅನ್ಯೋನ್ಯತೆಗೆ ಪ್ರಕೃತಿಗಿಂತ ಬೇರೆ ಉದಾಹರಣೆ ಬೇಕಿಲ್ಲ. ತಾವು ಬದುಕಿ ಬೇರೆಯವರನ್ನು ಬದುಕಲು ಬಿಡಿ ಎನ್ನುವುದು ಪ್ರಕೃತಿ ನಮಗೆ ಕಲಿಸಿರುವ ದೊಡ್ಡ ಪಾಠ ಅದೇ ಪಾಠ ನಿಮ್ಮ ಸಂಘಕ್ಕೂ ಅನ್ವಯ ವಾಗಲಿ ನೀವು ಸಂಗ್ರಹಣೆ ಮಾಡಿರುವ ಸಾರ್ವಜನಿಕ ಹಣ ದ ನಿಧಿ ಬಗ್ಗೆ ಅಕ್ಕನ ಲೌಕಿಕ ವೈರಾಗ್ಯ ವ್ಯವಹಾರ ಪ್ರಧಾನವಾಗಿದ್ದಾಗ ನಿಮ್ಮ ಪರಿಶ್ರಮ ಸಾರ್ಥಕವಾಗಲಿದೆ ಎಂದರು

ಇದು ಕೇವಲ ನಗರ ಕೇಂದ್ರೀತ ವಾಗದೆ ಗ್ರಾಮೀಣ ಮಹಿಳೆಯರಿಗೆ ಸಂಘದ ಉದ್ದೇಶಗಳನ್ನು ಮನವರಿಕೆ ಮಾಡಿ  ಸ್ವಾವಲಂಬಿ ಬದುಕು ಕಟ್ಟಿ ಕೊಳ್ಳಲು  ಇದರಿಂದ ನೆರವಾಗಲಿದ್ದು, ಬದುಕು ಕಟ್ಟಿ ಕೊಂಡ ಮಹಿಳೆ ಎಂದಿಗೂ ಮರೆಯದೆ ಕೃತಜ್ಞತಾ ಭಾವದಿಂದ ಸ್ಮರಿಸಿ ಪಡೆದ ಸಾಲವನ್ನು ಪ್ರಾಮಾಣಿಕ ಕಾಳಜಿ ಗೌರವದಿಂದ ಹಿಂದಿರುಗಿಸುವುದರಿಂದ ಇವುಗಳ ತ್ವರಿತ ಬೆಳವಣಿಗೆ ಸಾಧ್ಯವಾಗಲಿದೆ ವಿವಿಧ ಸಂಸ್ಥೆ ಗಳ ತಾಲ್ಲೂಕಿನಲ್ಲಿ ಸ್ಥಾಪಿಸಿರುವ ಸಾವಿರಾರು ಮಹಿಳಾ ಸ್ವ ಸಹಾಯ ಸಂಘಗಳು  ಕಾರ್ಯನಿರ್ವಹಿಸುತ್ತಿದ್ದು ಸುಗಮ ಜೀವನ ನಿರ್ವಹಣೆಗೆ ಕಾರಣ ವಾಗಿವೆ.

ಈ ಸಂಘ ಸ್ಥಾಪನೆ ಉದ್ದೇಶ ಕೇವಲ ಪದವಿಗೆ ಸೀಮಿತವಾಗದೆ ಪ್ರಾಮಾಣಿಕವಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತದೆ ಎನ್ನುವ ನಿರೀಕ್ಷೆಯಲ್ಲಿ  ನೀವುಗಳು ಷೇರು ಸಂಗ್ರಹಣೆ ಗೆ ಪ್ರತಿ ಮನೆಗೆ ಹೋದ ಸಂದರ್ಭದಲ್ಲಿ ಬೇಸರಿಸಿ ಕೊಳ್ಳದೆ ಕೇವಲ ಹಣ ಅಷ್ಟೇ ಅಲ್ಲ ಪ್ರೀತಿ ವಿಶ್ವಾಸದಿಂದ ಏನೇ ಸಂಕಷ್ಟ ಗಳಿದ್ದರೂ ನಿಮ್ಮ ಮೇಲೆ ನಂಬಿಕೆ ವಿಶ್ವಾಸವಿಟ್ಟು ಸದಸ್ಯರಾಗಿರುತ್ತಾರೆ. ಪದಾಧಿಕಾರಿಗಳು ಅವರ ನಿರೀಕ್ಷೆ ಹುಸಿ ಗೊಳಿಸದೇ ಅದನ್ನು ಅರಿತು ಜವಾಬ್ದಾರಿ ನಿರ್ವಹಿಸಿದಾಗ ಸದಸ್ಯರ ನಂಬಿಕೆ ಬಲಗೊಂಡು ಸಂಘದ ಬೆಳವಣಿಗೆಗೆ ಸುಭದ್ರ ಬುನಾದಿ ಆಗುತ್ತದೆ.

ಪದಾಧಿಕಾರಿಗಳು ಏನೇ ಸಣ್ಣ ಪುಟ್ಟ ವೈಯಕ್ತಿಕ ಭಿನ್ನಾಭಪ್ರಾಯಗಳಿದ್ದರೂ  ಸಂಘದಿಂದ ಹೊರಗಿಟ್ಟು ಒಗ್ಗಟ್ಟಿನಿಂದ  ಸದಸ್ಯರ ಒಳಿತಿಗಾಗಿ ಕಾರ್ಯ ನಿರ್ವಹಿಸಿ ಸದಸ್ಯರ ಹಣವನ್ನು ದುಂದುವೆಚ್ಚ ಮಾಡದೆ ಜೋಪಾನ ವಾಗಿ ರಕ್ಷಿಸಿ ಬೆಳೆಸಿದರೆ ಶರಣೆ ಅಕ್ಕಾ ಮಹಾದೇವಿ ಹೆಸರಿಗೆ ನೀವು ನೀಡಿದ ನಿಜವಾದ ಗೌರವ ವಾಗುತ್ತದೆ ಇದನ್ನು ಅರಿತು ಕಾರ್ಯೋನ್ಮುಖ ರಾಗಿ ಈ ಪವಿತ್ರ ಕಾರ್ಯಕ್ಕೆ ಬಸವಾದಿ ಶರಣರ ಕೃಪಾ ಶಿರ್ವಾದ ಸದಾ ನಿಮಗಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿಗಳು ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ಮತ್ತು ಸದಸ್ಯರಿಗೆ ಗುರುತಿನ ಚೀಟಿ ಮತ್ತು ಷೇರು ಧನ ನೋಂದಣಿ ಪುಸ್ತಕ ವಿತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀ ಗುರುಮಲ್ಲೇಶ್ವರ ಮಹಿಳಾ ಸಹಕಾರ ಸಂಘದ ಉಪಾಧ್ಯಕ್ಷೇ ಶ್ರೀಮತಿ ರೇಣುಕಾ ಬಸವಣ್ಣ,  ನಿರ್ದೇಶಕಿ ಶ್ರೀಮತಿ ಕೋಮಲ ಮಹಾಲಿಂಗಸ್ವಾಮಿ, ಶ್ರೀ ಗುರು ಕಂಬಳಿಶ್ವರ ಸಹಕಾರ ಸಂಘದ ಉಪಾಧ್ಯಕ್ಷ ಶ್ರೀ ಚೆನ್ನಪ್ಪ, ವೈರಾಗ್ಯ ನಿಧಿ ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಸುಮಾವತಿ ಮಹದೇವಸ್ವಾಮಿ, ಉಪಾಧ್ಯಕ್ಷೆ ಶ್ರೀಮತಿ ಕವಿತಾ ಪರಮೇಶ್, ನಿರ್ದೇಶಕರಾದ ಶ್ರೀಮತಿ ಮೀನಾಕ್ಷಿ ಬಸವಣ್ಣ ಶ್ರೀಮತಿ ಗೀತಾ, ಸೌಮ್ಯ, ಶ್ವೇತಾ ಮಹೇಶ್, ಸುಂದರಮ್ಮ,

ಗುರು ಮಲ್ಲೇಶ್ವರ ಮಹಿಳಾ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ನೇತ್ರಾ ಸೋಮಣ್ಣ, ಜೆ ಎಸ್ ಎಸ್ ಆಸ್ಪತ್ರೆ ಸಹ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿಕ್ಷಕರ ಸಂಘದ ನಿರ್ದೇಶಕರಾದ ಮಹೇಶ್ ಹೊರೆಯಾಲ,  ಕೆ ಜಿ ಸೋಮಣ್ಣ ದೇವನೂರು ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕ ಮಹದೇವಸ್ವಾಮಿ, ಶ್ರೀ ಶಿವಲಿಂಗ ಸ್ವಾಮಿ ಗುರು ಸಿದ್ದಪ್ಪ, ಮೈಸೂರು ಜಿಲ್ಲಾ ವೀರಶೈವ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ನಂಜುಂಡ ಸ್ವಾಮಿ, ಪರಮೇಶ್ ಕಸುವಿನ ಹಳ್ಳಿ ಗುರುಪಾದ ಬಾಂಧವ್ಯ ಗೆಳೆಯರ ಬಳಗದ ಅಧ್ಯಕ್ಷ ಶ್ರೀ ಶಾಂತ ಮಲ್ಲಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು

ಬಿ ಕೆ ರವಿಕುಮಾರ್ ಅವರಿಗೆ ಅಭಿನಂದನೆ ಸಲ್ಲಿಕೆ

ಚಾಮರಾಜನಗರ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ  ಬಿ ಕೆ ರವಿಕುಮಾರ್ ಅವರನ್ನು ಅವರ ನಿವಾಸದಲ್ಲಿ ಮೈಸೂರು ಜಿಲ್ಲಾ ಅಖಿಲ ಭಾರತ ವೀರಶೈವ ಘಟಕದ ನಿರ್ದೇಶಕರಾದ  ಕಲ್ಮಳ್ಳಿ ನಟರಾಜು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ವೀರಶೈವ ಮಹಾ ಸಭಾ ಘಟಕದ ನಿರ್ದೇಶಕರಾದ  ಎನ್.ಆರ್.ಪುರುಷೋತ್ತಮ್, ಚಾಮರಾಜನಗರ ಜಿಲ್ಲಾ ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ   ಸಿದ್ದಮಲ್ಲಪ್ಪ ಇನ್ನಿತರ ಮುಖಂಡರು ಹಾಜರಿದ್ದರು.

admin
the authoradmin

Leave a Reply