ಏಳಿ ಎದ್ದೇಳಿ ಗುರಿ ತಲುಪುವ ತನಕ ವಿರಮಿಸದಿರಿ.. ಹಿಂದೂ ಧರ್ಮದ ಪುನರುತ್ಥಾನಗೈದ ಸ್ವಾಮಿ ವಿವೇಕಾನಂದ..

ಪ್ರತಿವರ್ಷ ಜನವರಿ 12, ಭಾರತೀಯರೆಲ್ಲರೂ ಮಹಾಸನ್ಯಾಸಿ ವಿವೇಕಾನಂದರನ್ನ ನೆನೆಯುವ ದಿನ! ಇವರ ಜನ್ಮದಿನವಾದ ಇಂದು, ನರೇಂದ್ರನಾಥ ದತ್ತನು ಸ್ವಾಮಿ ವಿವೇಕಾನಂದ ರಾಗಿ ಬೆಳೆದದ್ದು ಬೆಳಗಿದ್ದು ಸುವರ್ಣಇತಿಹಾಸ. ಈ ಮಹಾತ್ಯಾಗಿ ಕಥೆಯನ್ನು ಕುಮಾರಕವಿ ಬಿ.ಎನ್.ನಟರಾಜ್ ಓದುಗರ ಮುಂದೆ ತೆರೆದಿಟ್ಟಿದ್ದಾರೆ..! ಒಮ್ಮೆ ಓದಿ ಬಿಡಿ..
ಭಾರತದಲ್ಲಿ ಸನಾತನ ಧರ್ಮವು ಎರಡುಬಾರಿ ಅವಸಾನದ ಅಂಚಿನಲ್ಲಿತ್ತು! ಮೊದಲಬಾರಿ ಕ್ರಿ.ಪೂ.230 ರಿಂದ ಕ್ರಿ.ಶ. 720ವರೆಗೆ ಬೌದ್ಧ ಧಮ್ಮವು ಬೃಹದಾಕಾರವಾಗಿ ಬೆಳೆದು ದೇಶದಾದ್ಯಂತ ಆವರಿಸಿಕೊಂಡ ಆಪತ್ಕಾಲದಲ್ಲಿ ಕಾಲಾಡಿಯಲ್ಲಿ ಜನಿಸಿ ಅಲ್ಪಾವಧಿ ಬದುಕಿದ್ದ 48 ವರ್ಷದ ಪೈಕಿ 24ವರ್ಷ ಅವಧಿಯಲ್ಲಿ 2400 ವರ್ಷಕ್ಕೆ ಆಗುವಷ್ಟು ಹಿಂದೂಧರ್ಮ ಪುನರುತ್ಥಾನ ಸಾಧನೆಗೈದ ಆದಿಗುರು ಶಂಕರಾಚಾರ್ಯ! ಎರಡನೆ ಬಾರಿಗೆ ಕ್ರಿ.ಶ.1450 ರಿಂದ 1880 ರವರೆಗೆ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳು ಅಷ್ಟ ದಿಕ್ಕುಗಳಲ್ಲಿ ಚಾಚಿಕೊಂಡಿದ್ದ ಆಪತ್ಕಾಲದಲ್ಲಿ ಅವತರಿಸಿ ಹಿಂದೂ ಧರ್ಮ ಪುನರುದ್ಧಾರ, ಪುನರುತ್ಥಾನಗೈದ ಪುಣ್ಯಪುರುಷ ವಿವೇಕಾನಂದ ಸ್ವಾಮಿ!

12.1.1863ರಂದು ಕಲ್ಕತ್ತಾದಲ್ಲಿ ಜನಿಸಿದ ನರೇಂದ್ರನಾಥ ಕೇವಲ ೩೯ವರ್ಷ ಮಾತ್ರ ಜೀವಿಸಿದ್ದರು. 1.5.1897ರಂದು ರಾಮಕೃಷ್ಣ ಮಿಶನ್ ಸ್ಥಾಪಿಸಿ 1898ರಲ್ಲಿ ಫ಼್ಲೇಗ್ ಸೋಂಕಿತರ ಸೇವೆಗೈದು ಕಲ್ಕತ್ತಾದಲ್ಲೆ 4.7.1902ರಂದು ಸಂಸ್ಥಾಪಿಸಿದ್ದ ಬೇಲೂರು ಮಠದಲ್ಲಿ ದೇಹದಿಂದ ಆತ್ಮವನ್ನು ಲೋಕಾರ್ಪಣೆ ಮಾಡಿಕೊಂಡರು. ದ್ವಾಪರ ಯುಗದ ಭೀಷ್ಮನಂತೆ ಇಚ್ಛಾಮರಣ ಹೊಂದಿದ ಕಲಿಯುಗದ ಏಕೈಕ ಜೀವಾತ್ಮ!
ಶಾರದಾದೇವಿಯ ಮಾನಸಪುತ್ರರಾಗಿ ರಾಮಕೃಷ್ಣ ಪರಮಹಂಸರ ಶಿಷ್ಯೋತ್ತಮನಾಗಿ ಸರ್ವಧರ್ಮ ಪಾಂಡಿತ್ಯ ಪಡೆದರು. ಗುರುಗಳ ಆಂತರ್ಯದ ಗಂಭೀರ ಆಶೋತ್ತರಗಳನ್ನು ಈಡೇರಿಸಲು, ಹಿಂದೂಗಳ ಅಸಹಾಯಕ ಅನಿವಾರ್ಯ ಅಸಹನೀಯ ಸ್ಥಿತಿಗತಿಗಳನ್ನು ತೊಲಗಿಸಲು, ಅನ್ಯಧರ್ಮದ ರಕ್ತಕ್ರಾಂತಿ ಸೂಕ್ಷ್ಮತೆಯ ಇಂಗಿತವರಿತು ತಮ್ಮದೇ ಅಪೂರ್ವ ಆಧ್ಯಾತ್ಮಿಕ ಹಾದಿಯಲ್ಲಿ ಮುನ್ನುಗ್ಗಿ ಕಡಿಮೆ ಅವಧಿಯಲ್ಲಿ ಸನಾತನ ಧರ್ಮದ ಜೀರ್ಣೋದ್ಧಾರಗೊಳಿಸಿ ಶಾಶ್ವತ ನೆಲೆ-ಸೆಲೆ ಪುನರ್‌ಸ್ಥಾಪಿಸಿದ ಮಹಾಮಾನವ.

1894-95 ರಲ್ಲಿ ಐರೋಪ್ಯ ರಾಷ್ಟ್ರಗಳಲ್ಲಿ ಧರ್ಮ ಪ್ರಚಾರದಲ್ಲಿದ್ದಾಗ “ದೇಶ ಆಳುವವರು ಕೈ-ಬಾಯಿ-ಕಚ್ಛೆ ಪರಿಶುದ್ಧವಾಗಿ ಇರಿಸಿ ಕೊಳ್ಳುವುದು ಹೇಗೆ?” ಎಂಬ ವಿಷಯದ ಬಗ್ಗೆ 2 ದಿನದ ಅಂತಾರಾಷ್ಟ್ರೀಯ ಕಮ್ಮಟ ಫ಼್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ಏರ್ಪಾಡಾಗಿತ್ತು. ಜಗತ್ತಿನಲ್ಲೆ ಪ್ಯಾಶನ್ ಮತ್ತು ಫ಼್ಯಾಶನ್ ಸೃಷ್ಟಿಯಾಗುವ ಶೃಂಗಾರ ನಗರದ ರೆಡ್ ಲೈಟ್ ಏರಿಯಾದ ನೂರಾರು ವೇಶ್ಯೆಯರ, ದಾಸ್ಯಸ್ತ್ರೀಯರ, ಸಲಿಂಗಪ್ರೇ[ಕಾ]ಮಿಗಳ ತನು- ಮನ ಮಾರ್ಪಡಿಸಿ ಸಮಾಜದ ಮುಖ್ಯವಾಹಿನಿಗೆ ಕರೆತಂದು ಅವರ ಜೀವನ ಪಾವನಗೊಳಿಸಿದ ಅದ್ಭುತಜೀವಿ! ಅಲ್ಲಿಯ ಆಡಳಿತಶಾಹಿ ಬಂಡವಾಳಶಾಹಿ ಸರ್ವಾಧಿಕಾರ ದೊರೆ/ಸರ್ಕಾರದ ಆಡಳಿತ ಶೈಲಿಯನ್ನೆ ಬದಲಾಯಿಸಿದ ಅಮೋಘಮಾಂತ್ರಿಕ.

ತನ್ನ ಆಧ್ಯಾತ್ಮಿಕ ನಡೆ-ನುಡಿಯಿಂದ ಎಂಥವರನ್ನೂ ಪರಿವರ್ತನೆ ಗೊಳಿಸಿದ, ಅವರ ಪ್ರಶ್ನೆಗಳಿಗೆ ಸಮಂಜಸ ಉತ್ತರನೀಡಿದ ಭಾರತಾಂಬೆಯ ವರಪುತ್ರ. ಮಾತಿನಮಲ್ಲರಿಂದ ತುಂಬಿಹೋಗಿದ್ದ ಪ್ರವಚನ ಸ್ಥಳದಿಂದ ಸದ್ದುಗದ್ದಲವಿಲ್ಲದೆ ಬೀದಿಗಿಳಿದ ಭಾರತದರತ್ನ ಕಾರ್ಯತಃ ಸಾಧಿಸಿ Deeds are better than Words ಎಂಬುದನ್ನು ರುಜುವಾತು ಪಡಿಸಿದರು. ಫ಼್ರಾನ್ಸ್ ಪ್ರಧಾನಿ ಅತಿರಥಮಹಾರಥರ ಸಮ್ಮುಖದಲ್ಲಿ Spiritual Stalwart ಬಿರುದು ನೀಡಿ ಸನ್ಮಾನಿಸಿದಾಗ ಹೊಮ್ಮಿದ ಕರತಾಡನ ಸದ್ದು ಆಗಸ ತಲುಪಿ, ಜೈಕಾರ ತರಂಗ ಧ್ರುವಗಳನ್ನು ತಲುಪಿತು. ಭರತಭೂಮಿಯಿಂದ ಹೊಸಲೌಕಿಕಕ್ರಾಂತಿ ಅಗ್ನಿಪರ್ವತವೊಂದು ಸ್ಫೋಟಗೊಂಡು ಈಜಿಪ್ಟ್ ಗ್ರೀಕ್ ರೋಮ್ ಮತಪ್ರಚಾರ ಪ್ರತಿನಿಧಿಗಳ ರೋಮರೋಮದಲ್ಲು ಸಂಚಲನಮೂಡಿಸಿ ದಿಗಿಲುಗೊಳಿಸಿತ್ತು!
ಚೀನಾದಲ್ಲಿ Universal Soldier ಎಂದು ಹೊಗಳಿ ಇವರ ಪಾದಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿದ ಅಲ್ಲಿನ ರಾಜಕುಮಾರ ಈ-ಹುವಾನ್‌ನಿಂದ ಬೀಳ್ಕೊಂಡು ಇಂಗ್ಲೆಂಡ್-ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಿದರು. 11.9.1893ರಂದು ಭಾರತದ ಪ್ರತಿನಿಧಿಯಾಗಿ ಶಿಕಾಗೊ ನಗರದ ವಿಶ್ವ ಸರ್ವಧರ್ಮ ಸಮ್ಮೇಳನ ವೇದಿಕೆಯಲ್ಲಿ ಆಡಿದ ಪ್ರಥಮ ಪದಗಳುಅಮೆರಿಕದ ಸೋದರ ಸೋದರಿಯರೆ ಬೈಬಲ್ ವೇದ ವಾಕ್ಯಗಳಾದವು. ಒಟ್ಟಾರೆ 75 ರಾಷ್ಟ್ರಗಳಿಂದ ಭಾಗವಹಿಸಿದ್ದ ಪ್ರತಿನಿಧಿಗಳು ಮೊದಲ್ಗೊಂಡು ಅಲ್ಲಿ ನೆರೆದಿದ್ದ ಎಲ್ಲರೂ ಇವರ ಅನುಯಾಯಿಗಳಾಗಿ ಹಿಂದೂ ಧರ್ಮ ಜಪಿಸುತ್ತ ಮತಾಂತರ ಹೊಂದಲು ತೀರ್ಮಾನಿಸಿ ಬಿಟ್ಟಿದ್ದರು?!

ತಮ್ಮ ಪ್ರವಚನಕ್ಕೆ ಮುನ್ನ ಉಚ್ಛರಿಸಿದ Brothers & Sisters of America ವಾಕ್ಯವು ಅಮೆರಿಕನ್ನರನ್ನು ರೋಮಾಂಚನ ಗೊಳಿಸಿದ್ದು ಮಾತ್ರವಲ್ಲ ಪ್ರಪಂಚದಾದ್ಯಂತ ಸಂಚಲನ ಮೂಡಿಸಿ ಹೊಸ ಇತಿಹಾಸವನ್ನೆ ಬರೆಯಿತು! ಸಮ್ಮೇಳನದ ಎಲ್ಲದಿನವೂ ಕೇಂದ್ರ ಬಿಂದುವಾಗಿದ್ದ ನರೇಂದ್ರ ಅಲ್ಲಿದ್ದವರಿಗಷ್ಟೆ ಅಲ್ಲ ರೇಡಿಯೊ- ಟಿವಿ- ಪತ್ರಿಕೆ ಮೂಲಕ ಪ್ರವಚನ ಆಲಿಸುತ್ತಿದ್ದ ಪ್ರಪಂಚದ ಎಲ್ಲರಿಗೂ ಆಪ್ಯಾಯಮಾನರಾದರು. ವಿವೇಕವಾಣಿಯ ವೈಖರಿ ಭಾವಾರ್ಥ ಸಾರಾಂಶ ಅರಿತ ಮನುಕುಲದ ಹರ್ಷೋದ್ಘಾರ ಮುಗಿಲು ಮುಟ್ಟಿ ಗಗನ ತಟ್ಟಿತ್ತು! ಧರ್ಮಾತೀತ, ದೇಶಾತೀತ, ಪ್ರಶ್ನಾತೀತವಾಗಿ ಎಲ್ಲರನ್ನು ಕಾಡಿದ್ದು ಎಲ್ಲರಿಗು ಅನಿಸಿದ್ದು ಎಲ್ಲರು ತೀರ್ಮಾನಿಸಿದ್ದು ‘ಈತ ಸೃಷ್ಟಿಕರ್ತನೇ ಇರಬೇಕು!’ ದುಷ್ಟರ ಶಿಕ್ಷೆಗೆ ಶಿಷ್ಟರ ರಕ್ಷಣೆಗೆ ಬಂದಿದ್ದು ನಮ್ಮನ್ನು ಸರಿದಾರಿಗೆ ಕರೆದೊಯ್ದು ಕಾಪಾಡಬಹುದು ಎಂದು ಮುಂತಾಗಿ ಗಲ್ಲಿಗಲ್ಲಿಯಲ್ಲು ಚರ್ಚೆ ನಡೆದಿತ್ತು,

ವಿಶ್ವದಾದ್ಯಂತ ಪ್ರತಿಯೊಬ್ಬರ ಮನದಾಳ ತಲುಪಿ ಮೌ[ಜಾ]ಢ್ಯರ ಮೆದುಳಿಗೂ ಕಸರತ್ತು ನೀಡಿತ್ತು ಭಾರತ ಭೂಶಿರ ಬಂಡೆಯ ತಾಕತ್ತು! 1892ರಲ್ಲಿ ಕನ್ಯಾಕುಮಾರಿ ಬಂಡೆ ತಲುಪಿದ ಲೋಕಮಾನ್ಯರು ಹಿಮಾಲಯದೆಡೆಗೆ ತಮ್ಮ ಮುಖಮಾಡಿ ಕೈಜೋಡಿಸಿ ಪ್ರಾರ್ಥಿಸುತ್ತ.. ಓ..ನನ್ನ ಹಿಂದೂ ದೇಶದ ಸೋದರ ಸೋದರಿಯರೆ ಏಳಿ ಎದ್ದೇಳಿ ನಿಮ್ಮ ಗುರಿ ತಲುಪಲು ನೀವೆ ಕಾರಣವೂ ಸ್ಫೂರ್ತಿಯೂ ಚೈತನ್ಯವೂ ಆಗಿರುವಿರಿ, ಅನ್ಯರನ್ನು ಅವಲಂಬಿಸದೆ, ಹಿಂದಿರುಗಿ ನೋಡದೆ, ಮುನ್ನುಗ್ಗಿ ನಡೆಯಿರಿ, ಖಂಡಿತ ಗುರಿ ಮುಟ್ಟುವಿರಿ’ ಎಂದು ಕೂಗಿ ಕೂಗಿ ಹೇಳಿ ಹಿಂದೂ ದೇಶದ ಎಲ್ಲರು ಒಗ್ಗೂಡುವಂತೆ ಭಾರತೀಯರನ್ನು ಬಡಿದೆಬ್ಬಿಸುವ ಸಿಂಹ ಘರ್ಜನೆಯ ಕರೆಕೊಟ್ಟ ಪುರುಷೋತ್ತಮ. ಇದಾದ ಒಂದು ಶತಮಾನದ ನಂತರ ಭಾರತ ಸರ್ಕಾರವು ‘ವಿವೇಕಾನಂದ ಸ್ಮಾರಕ’ ನಿರ್ಮಿಸಿ ಶ್ರದ್ಧಾಂಜಲಿ ಗೌರವ ಸಲ್ಲಿಸಿತು!

ತನ್ನ ಆಧ್ಯಾತ್ಮಿಕ ಆಯಸ್ಕಾಂತದಿಂದ ಹಿಂದೂಸ್ತಾನವನ್ನಷ್ಟೆ ಅಲ್ಲ ಪ್ರಪಂಚವನ್ನೆ ತನ್ನತ್ತ ತಿರುಗಿಸಿಕೊಂಡ ಜಗದೇಕವೀರ ಸನ್ಯಾಸಿ. ಪ್ರವಾಸದ ಅವಧಿಯಲ್ಲಿ ತಮ್ಮನ್ನು ಪ್ರೀತಿಸಿದ ನೂರಾರು ಸುಂದರಿಯರ ಜಾಲಕ್ಕೆ ಸಿಲುಕದೆ, ಅವರಿಗೂ ಸನ್ನಡತೆ ಕಲಿಸಿ “ನ್ಯಾಯಕ್ಕಾಗಿ ಯಾರನ್ನಾದರು ಯಾವುದನ್ನಾದರು ಅಂತ್ಯ ಗೊಳಿಸುವುದು ಧರ್ಮವಾಗುತ್ತದೆ” ಎಂಬ ತಿಳುವಳಿಕೆ ನೀಡಿ ಮನಃ ಪರಿವರ್ತನೆ ಮಾಡಿದ ಲೋಕೋದ್ಧಾರಕ. ಇಂಥ ಅನೇಕ ನಿದರ್ಶನ ಗಳಿದ್ದು ಅವುಗಳಲ್ಲೊಂದು ಉದಾಹರಣೆಗೆ – ಐರಿಶ್ ಲೇಖಕಿ, ಚಿಂತಕಿ, ಶಿಕ್ಷಕಿ, ಪತ್ರಕರ್ತೆ, ಧರ್ಮಪ್ರವರ್ತಕಿ, ಮಾರ್ಗರೆಟ್ ಎಲಿಜ಼ಬೆತ್ ಳನ್ನು ನಿವೇದಿತಾಳನ್ನಾಗಿ ಪರಿವರ್ತಿಸಿದ ಅಖಂಡ ಬ್ರಹ್ಮಚಾರಿ!
ಐಶಾರಾಮಿ ಜೀವನದ ಆಸೆ ಆಮಿಷ ಭೋಗಲಾಲಸೆ ಅವಕಾಶಗಳು ದೊರಕಿದರೂ ‘ನಿನ್ನೆಗಳ ನೆರಳು, ನಾಳೆಗಳನ್ನು ಕತ್ತಲು ಮಾಡಬಾರದು’ ತತ್ವಾಧಾರದ ಹರಿಕಾರ ತಮ್ಮ ಅಚಲ ನಿರ್ಧಾರ ಧೃಢ ವಿಶ್ವಾಸ ಬದಲಿಸಲಿಲ್ಲ. ಇಂಥ ಅಸಾಧಾರಣ ಭುವನಜ್ಯೋತಿ ಪುಣ್ಯಾತ್ಮನ ಬದುಕು, ಬರಹ, ಉಪನ್ಯಾಸ, ಹೋರಾಟ, ಸಾಧನೆ ಸಾರ್ಥಕತೆ ಸಮರ್ಥತೆ ಬಲಿದಾನ ತ್ಯಾಗದ ಬಗ್ಗೆ ಬರೆಯಲು ನೂರಾರು ಪುಟಗಳು ಬೇಕು. ಪ್ರತಿಯೊಂದು ಧರ್ಮದ ನಾಡಿಮಿಡಿತ ವಾಗಿ ಉತ್ತಮ ಜೀವನ ನಡೆಸಲು ಬೇಕಾದ ಪ್ರತಿ ಪ್ರಶ್ನೆಗೂ ಉತ್ತರ, ಪ್ರತಿ ಸಮಸ್ಯೆಗೂ ಪರಿಹಾರ ಶಾಶ್ವತವಾಗಿ ಇರುತ್ತದೆ. ಆದರೆ ಇವುಗಳನ್ನು ಪ್ರಾಮಾಣಿಕವಾಗಿ ಅನುಷ್ಟಾನ ಗೊಳಿಸಿದರೆ ಸರ್ವಧರ್ಮವೂ ವಿವೇಕದ ಮಾನವ ಧರ್ಮವಾಗಿ ರೂಪುಗೊಂಡು ವಿಶ್ವದಾದ್ಯಂತ ಶಾಂತಿ ನೆಮ್ಮದಿ ಸೌಹಾರ್ಧತೆ ನೆಲೆಯೂರಿ ಪ್ರತಿಯೊಂದು ರಾಷ್ಟ್ರ/ಧರ್ಮ ಉದ್ಧಾರವಾಗುತ್ತದೆ?!

ಸ್ವಾಮಿ ವಿವೇಕಾನಂದರು ಜಗತ್ತಿಗೆ ಸಾರಿದ ಸಂದೇಶಗಳು.. ಗಣ್ಯರು ಅವರ ಬಗ್ಗೆ ನುಡಿದ ನುಡಿಮುತ್ತುಗಳು ಏನೇನು?








ಅದೆಷ್ಟು ಬಾರಿ ಓದಿದರೂ ಮತ್ತೊಮ್ಮೆ ಮಗದೊಮ್ಮೆ ಓದಲೇಬೇಕಾದಂತಹ ಅತ್ಯುತ್ತಮ ಲೇಖನ. ಇಂಥ ಅಸಾಧಾರಣ ಅಮೋಘ ಲೇಖನ ಬರೆದ ಕುಮಾರಕವಿಯವರಿಗೆ ಸಾಷ್ಟಾಂಗ ನಮಸ್ಕಾರ, ಜನಮನ ಪತ್ರಿಕೆಯ ಎಲ್ಲರಿಗೂ ಅನೇಕಾನೇಕ ಧನ್ಯವಾದಗಳು ಸರ್
ಅದೆಷ್ಟು ಬಾರಿ ಓದಿದರೂ ಮತ್ತೊಮ್ಮೆ ಮಗದೊಮ್ಮೆ ಓದಲೇಬೇಕಾದಂತಹ ಅತ್ಯುತ್ತಮ ಲೇಖನ. ಇಂಥ ಅಸಾಧಾರಣ ಅಮೋಘ ಲೇಖನ ಬರೆದ ಕುಮಾರಕವಿಯವರಿಗೆ ಸಾಷ್ಟಾಂಗ ನಮಸ್ಕಾರ, ಜನಮನ ಪತ್ರಿಕೆಯ ಎಲ್ಲರಿಗೂ ಅನೇಕಾನೇಕ ಧನ್ಯವಾದಗಳು, ಮನಃಪೂರ್ವಕ ಅಭಿನಂದನೆಗಳು ಸರ್.
ಧನ್ಯವಾದ ಲವ ಸರ್
Swamy Vivekananda article is the ever best article, narrated in exciting words and excellent sentences. Thanks a million ton to JANAMANA KANNADA e-newsletter and writer KUMARAKAVI B.N NATARAJA THE GREAT AUTHOR 👍 👌
Swamy Vivekananda article is the ever best article, narrated in exciting words and excellent sentences. Thanks a million ton to JANAMANA KANNADA e-newsletter and writer KUMARAKAVI B.N NATARAJA THE GREAT AUTHOR 👍 I have shared this article with my friends group 👌
ಭಾರತದ ಸುಪುತ್ರ ಸ್ವಾಮಿವಿವೇಕಾನಂದ ರವರ ಕುರಿತು ಈದಿನ ಅವರ ಜಯಂತಿ ಪ್ರಯುಕ್ತ ಅತ್ತ್ಯುತ್ತಮ ಲೇಖನ ಬರೆದ ಕುಮಾರಕವಿಯವರಿಗೆ ನಮೋ ನಮಃ, ಧನ್ಯವಾದಗಳು
ಸ್ವಾಮಿ ವಿವೇಕಾನಂದರ ಜೀವನ ಬಗ್ಗೆ ಸಂಕ್ಷಿಪ್ತವಾಗಿ ಆದರೆ ವಿಶೇಷ ಮಾಹಿತಿಯ ವಿಶಿಷ್ಟ ಅಂಕಿ-ಅಂಶ ಸಹಿತ ಬರೆದು ಇಂದಿನ ಯುವ ಪೀಳಿಗೆಗೆ ಉತ್ತಮ ಮಾರ್ಗದರ್ಶನ ನೀಡುವ ಕಾರ್ಯ ನಿರ್ವಹಿಸುತ್ತಿರುವ ನಟರಾಜ ಕವಿಯವರಿಗೆ ಎಷ್ಟು ಧನ್ಯವಾದ ಸಲ್ಲಿಸಿದರೂ ಕಡಿಮೆ. ನಮಸ್ಕಾರ
ಸ್ವಾಮಿ ವಿವೇಕಾನಂದರ ಜೀವನ ಬಗ್ಗೆ ಸಂಕ್ಷಿಪ್ತವಾಗಿ ಆದರೆ ವಿಶೇಷ ಮಾಹಿತಿಯ ವಿಶಿಷ್ಟ ಅಂಕಿ-ಅಂಶ ಸಹಿತ ಬರೆದು ಇಂದಿನ ಯುವ ಪೀಳಿಗೆಗೆ ಉತ್ತಮ ಮಾರ್ಗದರ್ಶನ ನೀಡುವ ಕಾರ್ಯ ನಿರ್ವಹಿಸುತ್ತಿರುವ ನಟರಾಜ ಕವಿಯವರಿಗೆ ಎಷ್ಟು ಧನ್ಯವಾದ ಸಲ್ಲಿಸಿದರೂ ಕಡಿಮೆ, ನಮಸ್ಕಾರ….
ಸ್ವಾಮಿ ವಿವೇಕಾನಂದರ ಜೀವನ ಬಗ್ಗೆ ಸಂಕ್ಷಿಪ್ತವಾಗಿ ಆದರೆ ವಿಶೇಷ ಮಾಹಿತಿಯ ವಿಶಿಷ್ಟ ಅಂಕಿ-ಅಂಶ ಸಹಿತ ಬರೆದು ಇಂದಿನ ಯುವ ಪೀಳಿಗೆಗೆ ಉತ್ತಮ ಮಾರ್ಗದರ್ಶನ ನೀಡುವ ಕಾರ್ಯ ನಿರ್ವಹಿಸುತ್ತಿರುವ ನಟರಾಜ ಕವಿಯವರಿಗೆ ಎಷ್ಟು ಧನ್ಯವಾದ ಸಲ್ಲಿಸಿದರೂ ಕಡಿಮೆ, ನಮಸ್ಕಾರ….
SHOBHA AND FRIENDS, INDIRANAGARA, BENGALURU
ಸ್ವಾಮಿ ವಿವೇಕಾನಂದರ ಜೀವನ ಬಗ್ಗೆ ಸಂಕ್ಷಿಪ್ತವಾಗಿ ಆದರೆ ವಿಶೇಷ ಮಾಹಿತಿಯ ವಿಶಿಷ್ಟ ಅಂಕಿ-ಅಂಶ ಸಹಿತ ಬರೆದು ಇಂದಿನ ಯುವ ಪೀಳಿಗೆಗೆ ಉತ್ತಮ ಮಾರ್ಗದರ್ಶನ ನೀಡುವ ಕಾರ್ಯ ನಿರ್ವಹಿಸುತ್ತಿರುವ ನಟರಾಜ ಕವಿಯವರಿಗೆ ಎಷ್ಟು ಧನ್ಯವಾದ ಸಲ್ಲಿಸಿದರೂ ಕಡಿಮೆ, ನಮಸ್ಕಾರ….
SHOBHA AND FRIENDS, INDIRANAGARA, BENGALURU city
ಶ್ರೇಷ್ಠ ಭಾರತೀಸುತನ ಬಗ್ಗೆ ಬರೆದ ಒಂದು ಅತ್ತ್ಯುತ್ತಮ ಲೇಖನ, ಲೇಖಕ ಕುಮಾರಕವಿಯವರಿಗೂ ಪ್ರಕಾಶನದ ಜನಮನ ಕನ್ನಡ ಪತ್ರಿಕೆಯವರಿಗೂ ತುಂಬು ಹೃದಯದ ಧನ್ಯವಾದಗಳು.
ಎಂದಿನಂತೆ ಮತ್ತೊಂದು ಅಮೋಘ ಮತ್ತು ಸಂಗ್ರಹಯೋಗ್ಯ ಲೇಖನ ಬರೆದ
ಕವಿ ನಟರಾಜಣ್ಣ ಅವರಿಗೂ, ಪ್ರಕಟಿಸಿದ ಜನಮನ ಪತ್ರಿಕೆಯವರಿಗೂ ನನ್ನ ಹಾಗೂ ನನ್ನ ಮಿತ್ರರ ಕಡೆಯಿಂದ ಅನೇಕ ಧನ್ಯವಾದಗಳು.
Very useful and informative article on Swami Vivekananda, thanks for KUMARA KAVI NATARAJA sir
ಸ್ವಾಮಿ ವಿವೇಕಾನಂದರ ಜನ್ಮ ದಿನದ ಲೇಖನ ಸೂಪರ್….ಸರ್ ಇದಕ್ಕೆ ಕಾರಣರಾದ ಎಲ್ಲರಿಗೂ ನನ್ನ ಮತ್ತು ನಮ್ಮ ಊರಿನ ರೈತಮಿತ್ರರ ನಮಸ್ಕಾರ, ಧನ್ಯವಾದ, ಮಂಡಕಳ್ಳಿ ಶಾಂತಕುಮಾರ್, ಮಾದರಿ ರೈತ
The best way of writing on the ever best Indian cultural, social and spiritual human being Swamy Vivekananda.
Manohar bhandarkar, thane mumbai
The best way of writing by best author BN NATARAJ sir on an ever best Indian cultural, social and spiritual human being Swamy Vivekananda. Thank you very much sir.
Manohar bhandarkar, thane mumbai
Swamy Vivekananda article is very useful, unique and universal. Thanks sir
Swamy Vivekananda article is very useful, unique and universal. Thanks to the author BN NATARAJ sir.
ಭಾರತ ದೇಶದ ಭವ್ಯ ಪ್ರತೀಕ ಮತ್ತು ಭಾರತೀಯ ಸಂಸ್ಕೃತಿ ಪರ್ವತ ಸ್ವಾಮಿ ವಿವೇಕಾನಂದರ ಕುರಿತು ನಟರಾಜರವರು ಬರದಿರುವ ಲೇಖನ First class
ಸ್ವಾಮಿ ವಿವೇಕಾನಂದ ಎಂಬ ನಿತ್ಯಸತ್ಯ ಅತುತ್ತಮ ವ್ಯಕ್ತಿಯ ಬಗ್ಗೆ ಕುಮಾರಕವಿ ಯವರ ಉತ್ತಮ ಲೇಖನ ನನಗೆ ತುಂಬ ಇಷ್ಟವಾಯಿತು ಸರ್, ನಮಸ್ಕಾರ
ಸ್ವಾಮಿ ವಿವೇಕಾನಂದ ಎಂಬ ನಿತ್ಯಸತ್ಯ ಅತುತ್ತಮ ವ್ಯಕ್ತಿಯ ಬಗ್ಗೆ ಕುಮಾರಕವಿ ಯವರ ಉತ್ತಮ ಲೇಖನ ನನಗೆ ತುಂಬ ಇಷ್ಟವಾಯಿತು ಸರ್, ನಮಸ್ಕಾರ ಧನ್ಯವಾದ
Nimma inthaha olleya baravanige munduvareyali Sir
Thumba chennagi barediddare ellaru odi