ಧಾರವಾಡ: ಇಲ್ಲಿನ ವಿದ್ಯಾಗಿರಿಯಲ್ಲಿರುವ ಜೆ.ಎಸ್.ಎಸ್ ಕಾಲೇಜಿನ ಆವರಣದಲ್ಲಿ ವಿದ್ಯಾಪೋಷಕ ಸಂಸ್ಥೆಯು ನರ್ಚರ್ ಮೆರಿಟ್ ಯೋಜನೆಯಡಿ ಆರ್ಥಿಕ ಸಂಕಷ್ಟದಲ್ಲಿರುವ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 2026-27ನೇ ಶೈಕ್ಷಣಿಕ ಸಾಲಿನ “ವಿನಮ್ರ ಆರ್ಥಿಕ ನೆರವು” ಕಾರ್ಯಕ್ರಮ ಜರುಗಿತು.
ಅತಿಥಿಗಳಾಗಿ ಆಗಮಿಸಿದ, ಪ್ರೊ.ರಂಗನಾಥ ಆರ್.ಕುಲಕರ್ಣಿ, ವಿಜಯ್ ಬೇದ್ರೆ, ವಾಸುದೇವ್ ಮಯ್ಯ ಮತ್ತು ಡಾ. ಶರತ್ ಐರಾನಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ ಹಲವಾರು ವಿಚಾರಗಳನ್ನು ತಿಳಿಸುತ್ತಾ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ನಂತರದ ಶಿಕ್ಷಣ ಮುಂದುವರಿಕೆಗೆ ಅನೇಕ ಮಕ್ಕಳಿಗೆ ವಿದ್ಯಾಪೋಷಕದಿಂದ ಅತ್ಯಂತ ಉಪಯುಕ್ತವಾಗಿದೆ.
ಆರ್ಥಿಕ ಸಂಕಷ್ಟದಲ್ಲಿರುವವರು ಇದರ ಸದುಪಯೋಗ ಪಡೆದುಕೊಂಡು ಜೀವನದಲ್ಲಿ ಯಶಸ್ಸಿನ ಗುರಿ ಸೇರಬೇಕು. ಮತ್ತು ನಿಮ್ಮಂಥ ಸಾವಿರಾರು ವಿದ್ಯಾರ್ಥಿಗಳಿಗೆ ನೀವೂ ಮುಂದೆ ನೆರವಾಗಬೇಕು ಎಂದರಲ್ಲದೆ ವಿದ್ಯಾಪೋಷಕ ಸಂಸ್ಥೆ ಮಾಡುತ್ತಿರುವ ಕೆಲಸದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ 183 ವಿದ್ಯಾರ್ಥಿಗಳಿಗೆ 34.84 ಲಕ್ಷ ರೂ.ಗಳ ವಿದ್ಯಾಪೋಷಕದಿಂದ ಆರ್ಥಿಕ ಸಂಕಷ್ಟದಲ್ಲಿರುವ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಯಿತು. ಸಂಸ್ಥೆಯಿಂದ ಆರ್ಥಿಕ ನೆರವು ಪಡೆದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿ ಕು. ದಯಾನಂದ ಎಂ. ಮತ್ತು ಜ್ಯೋತಿ ಅಳಗವಾಡಿ. ಅನಿಸಿಕೆ ಹೇಳತ್ತಾ ಗ್ರಾಮೀಣ ಪ್ರದೇಶದಿಂದ ಬಂದ ನಾನು, ಕುಟುಂಬದ ಆರ್ಥಿಕ ಸಮಸ್ಯೆಯಿಂದ ನನ್ನ ಶೈಕ್ಷಣಿಕ ಜೀವನ ಇಲ್ಲಿಗೆ ಮುಕ್ತಾಯವಾಗಿತ್ತು ಎಂದು ತಿಳಿದುಕೊಂಡಿದ್ದೆ ಆದರೆ ಸಂಸ್ಥೆಯಿಂದ ನನ್ನ ಶೈಕ್ಷಣಿಕ ಜೀವನ ಇಂದು ಮುಂದುವರೆಯಲು ಸಾಧ್ಯವಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ವಿದ್ಯಾಪೋಷಕದ ದಾನಿಗಳು, ಸ್ವಯಂ ಸೇವಕರು, ವಿದ್ಯಾಪೋಷಕ ಸಮುದಾಯದ ಸದಸ್ಯರು , ವಿದ್ಯಾಪೋಷಕ ಸಿಬ್ಬಂದಿಗಳು ಭಾಗಿಯಾಗಿದ್ದರು








