ಯಳಂದೂರು(ನಾಗರಾಜು): ಸಮಾಜಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುವ ವಿದ್ಯಾರ್ಥಿ ನಿಲಯಗಳಿಗೆ ಸೂಕ್ತ ವಿದ್ಯಾರ್ಹತೆಯಿರುವ ವ್ಯಕ್ತಿಗಳನ್ನು ನೇಮಿಸಬೇಕು, ಜಾನುವಾರುಗಳು ಸತ್ತಾಗ ಪರಿಹಾರ ನೀಡಬೇಕು, ಅಕ್ರಮ ಮದ್ಯ ಮಾರಾಟ ನಿಲ್ಲಿಸಬೇಕು ಎಂಬಿತ್ಯಾದಿ ಒತ್ತಾಯಗಳನ್ನು ಎಸ್ಸಿ, ಎಸ್ಟಿ ಮುಖಂಡರು ತಹಸೀಲ್ದಾರ್ ಮುಂದಿಟ್ಟಿದ್ದಾರೆ.
ಯಳಂದೂರು ತಹಸಿಲ್ದಾರ್ ನಯನ ರವರ ನೇತೃತ್ವದಲ್ಲಿ ನಡೆದ ಎಸ್ಸಿ ಎಸ್ಟಿ ಸಭೆಯಲ್ಲಿ ಮೇಲಿನ ಪ್ರಮುಖ ವಿಚಾರಗಳನ್ನು ಮುಂದಿಟ್ಟ ಮುಖಂಡರು ಕೂಡಲೇ ಸ್ಪಂದಿಸುವಂತೆ ಮನವಿ ಮಾಡಿದರು.
ಪಶುಸಂಗೋಪನೆ ಇಲಾಖೆಯು ಹಸು ಕುರಿ ಮುಂತಾದ ಪ್ರಾಣಿಗಳು ಸತ್ತಾಗ ಇಲಾಖೆಯಿಂದ ಯಾವುದೆ ಪರಿಹಾರ ಬಂದಿರುವುದಿಲ್ಲ ಹಾಗೂ ಇಲಾಖೆಯ ಅಧಿಕಾರಿಯೂ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುವುದಿಲ್ಲ, ಸಮಾಜಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುವ ವಿದ್ಯಾರ್ಥಿನಿಲಯಗಳಿಗೆ ಸೂಕ್ತ ವಿದ್ಯಾರ್ಹತೆಯಿರುವ ವ್ಯಕ್ತಿಗಳನ್ನು ನೇಮಿಸಬೇಕು .
ಯಳಂದೂರು ತಾಲೂಕಿನ ಗೌಡಹಳ್ಳಿ ಸರ್ವೆ ನಂಬರ್ ನಲ್ಲಿ ಎಸ್ಸಿ ಎಸ್ಟಿ ಸಮುದಾಯದ ಜಮೀನುಗಳು ಕೇತುವಾರು ದಾಖಲೆಗಳಲ್ಲಿರುವ ಹೆಸರನ್ನು ಆರ್ ಟಿ ಸಿ ಗೆ ಪರಿವರ್ತಿಸದೇ ಅನ್ಯರ ಹೆಸರುಗಳನ್ನು ಆರ್ ಟಿ ಸಿ ಯಲ್ಲಿ ಸೇರಿಸಲಾಗಿದ್ದು ಹೋಮಿಯೋಪತಿ ನಿರ್ದೇಶಕರ ಹೆಸರಲ್ಲಿದೆ ಇದನ್ನು ಸರಿಪಡಿಸಬೇಕು, ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒ ಈ ಸ್ವತ್ತು ಗಳು ಸಾರ್ವಜನಿಕರ ಸಮಸ್ಯಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದವು.

ಇನ್ನು ತಾಲೂಕಿನ ಗ್ರಾಮಗಳಲ್ಲಿ ಅಕ್ರಮ ಮದ್ಯಮಾರಾಟವು ಎಗ್ಗಿಲ್ಲದೆ ನಡೆಯುತ್ತಿದ್ದು ಇದು ಎಸ್ಸಿ ಎಸ್ಟಿ ಸಮುದಾಯದ ಮೇಲೆ ಪರಿಣಾಮ ಬೀರುತ್ತಿದೆ ಹಾಗಾಗಿ ಅಕ್ರಮ ಮದ್ಯ ಮಾರಾಟ ನಿಲ್ಲಿಸಿ ಎಂಬ ಕೂಗು ಸಭೆಯಲ್ಲಿ ಜೋರಾಯಿತು. ಒಳಮೀಸಲಾತಿಯಲ್ಲಿ ವಸತಿ ಹಾಗೂ ಆದರ್ಶ ಶಾಲೆಗಳಲ್ಲಿ ಉಳಿಯುವ ಎ ಮತ್ತು ಸಿ ಗ್ರೂಪಿನ ಸೀಟುಗಳನ್ನು ಬಿ ಗ್ರೂಪಿಗೆ ನೀಡಿ ಎಂದು ಒತ್ತಾಯಿಸಿದರು.
ಮಹನೀಯರ ಭಾವಚಿತ್ರಗಳಿಗೆ ಅಪಮಾನ ಮಾಡುವುದನ್ನು ತಡೆಗಟ್ಟಬೇಕು ಪ್ರತಿಮೆ ಮತ್ತು ಭಾವಚಿತ್ರಗಳಿರುವ ಜಾಗದಲ್ಲಿ ಸಿ ಸಿ ಟಿವಿ ಅಳವಡಿಸಬೇಕು ಎಂದು ಆಗ್ರಹಿಸಲಾಯಿತು. ಇನ್ನು ಶಾಲಾ ಕಾಲೇಜು ಸಮಯದಲ್ಲಿ ಕೆಲವು ಪಂಡರು ವೀಲಿಂಗ್ ಮಾಡುವುದು, ಹೆಣ್ಣುಮಕ್ಕಳಿಗೆ ಕಿರಿಕಿರಿ ಮಾಡುತ್ತಿದ್ದು ಈ ಸಮಯದಲ್ಲಿ ಪೋಲಿಸರನ್ನು ನಿಯೋಜಿಸುವಂತೆ ಮನವಿ ಮಾಡಲಾಯಿತು.
ಪಟ್ಟಣದಲ್ಲಿ ಪುಟ್ ಪಾತ್ ತೆರವುಗೊಳಿಸಿ ಪಾದಾಚಾರಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಕೋರಲಾಯಿತು. ಇದೇ ವೇಳೆ ಸಭೆಗೆ ಗೈರುಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡಲು ಸೂಚಿಸಲಾಯಿತು.
ಸಭೆಯಲ್ಲಿ ಸಮಸ್ಯೆಗಳನ್ನು ಆಲಿಸಿದ ತಹಸೀಲ್ದಾರ್ ನಯನ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಸರ್ಕಲ್ ಇನ್ ಸ್ಪೆಕ್ಟರ್ ಸುಬ್ರಮಣ್ಯ, ಸಮಾಜ ಕಲ್ಯಾಣಾಧಿಕಾರಿ ಕೇಶವಮೂರ್ತಿ, ಕ್ಷೇತ್ರಶಿಕ್ಷಣಾಧಿಕಾರಿ ಮಾರಯ್ಯ, ಇ ಒ ವೇಣು, ಲೋಕೋಪಯೋಗಿ ಇಲಾಖೆ ಅಧಿಕಾರಿ ಕುಮಾರ್ ಪಶುವೈದ್ಯಾಧಿಕಾರಿ ಶಿವರಾಜ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳುಹಾಗೂ ಎಸ್ಸಿ ಎಸ್ಟಿ ಸಮುದಾಯದ ಮುಖಂಡರು ಹಾಜರಿದ್ದರು









I was suggested this web site by way of my cousin. I am now not certain whether or not this publish is written by him as nobody else realize such targeted about my trouble. You are amazing! Thank you!