ಅಂತರಾಷ್ಟ್ರೀಯ ಆನ್‌ಲೈನ್ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿಯ ʼಬ್ರೈನೋಬ್ರೈನ್’ ಕೇಂದ್ರಕ್ಕೆ ಗೆಲುವಿನ ಪತಾಕೆ
ಕೊಡಗಿಗೆ ಹೆಮ್ಮೆ ತರುತ್ತಿರುವ ಮಡಿಕೇರಿಯ ʼಬ್ರೈನೋಬ್ರೈನ್” ಕೇಂದ್ರದ ವಿದ್ಯಾರ್ಥಿಗಳು

ಮಡಿಕೇರಿ: ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಸದಾ ಗೆಲುವಿನ ನಾಗಾಲೋಟದೊಂದಿಗೆ ಕೊಡಗಿಗೆ ಹೆಮ್ಮೆ ತರುತ್ತಿರುವ ಮಡಿಕೇರಿಯ ʼಬ್ರೈನೋಬ್ರೈನ್” ಕೇಂದ್ರದ ವಿದ್ಯಾರ್ಥಿಗಳು ಇದುವರೆಗೆ ನಡೆದ ರಾಜ್ಯ, ಅಂತರರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಧನೆಯ ಮೈಲುಗಲ್ಲನ್ನೆಡುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಬ್ರೈನೋಬ್ರೈನ್ ಇಂಟರ್ ನ್ಯಾಷನಲ್ ದುಬೈ ಸಂಸ್ಥೆಯ ವತಿಯಿಂದ ಇತ್ತೀಚೆಗೆ ನಡೆದ “16ನೇ ಅಂತರಾಷ್ಟ್ರೀಯ ಮಟ್ಟದ ಆನ್‌ಲೈನ್ ಬ್ರೈನೋಬ್ರೈನ್ ಸ್ಪರ್ಧೆ-2026” ರಲ್ಲಿ 30 ಚಾಂಪಿಯನ್ ಟ್ರೋಫಿ, 37 ಚಿನ್ನದ ಪದಕ ಮತ್ತು 34 ಬೆಳ್ಳಿಯ ಪದಕಗಳನ್ನು ಪಡೆದು ಸಾಧನೆಯ ಶಿಖರವನ್ನೇರಿದ್ದಾರೆ.

ಹಾಗೆನೋಡಿದರೆ ಅಂತರ್ರಾಷ್ಟ್ರೀಯ ಮಟ್ಟದ ಈ ಸ್ಪರ್ಧೆ ಸುಲಭದ್ದಾಗಿರಲಿಲ್ಲ ಕಠಿಣ ಮತ್ತು ಸವಾಲಿನದ್ದಾಗಿತ್ತು. ಕೊಡಗಿನಂತಹ ಗುಡ್ಡಗಾಡು ಪ್ರದೇಶದಲ್ಲಿ ಇಂಟರ್‌ನೆಟ್ ಕನೆಕ್ಷನ್ ಹಾಗೂ ನೆಟ್‌ವರ್ಕ್ ಸಮಸ್ಯೆ ಇದ್ದರೂ ಇದೆಲ್ಲವನ್ನು ಮೀರಿ ಆನ್‌ಲೈನ್ ಸ್ಪರ್ಧೆಯಲ್ಲಿ 4 ನಿಮಿಷಗಳ ನಿಗದಿತ ಸಮಯದಲ್ಲಿ ಯಾರ ಸಹಾಯವಿಲ್ಲದೆ ಏಕಾಂಗಿಯಾಗಿ ಕಂಪ್ಯೂಟರ್‌ನಲ್ಲಿ ಟೈಪ್ ಮಾಡಲು ಅಭ್ಯಾಸ ಹೊಂದಿರದಿದ್ದರೂ ನಿಗದಿತ ಸಮಯದಲ್ಲಿ ಸ್ಪರ್ಧೆಯನ್ನು ಸವಾಲಾಗಿ ಸ್ವೀಕರಿಸಿ ಗೆಲುವನ್ನು ಸಾಧಿಸಿರುವುದು ಹೆಮ್ಮೆಯ ವಿಚಾರವಾಗಿದೆ.

ಇನ್ನು ಸ್ಪರ್ಧೆ ಮತ್ತು ಮಕ್ಕಳ ಸಾಧನೆ ಕುರಿತಂತೆ ಮಾಹಿತಿ ನೀಡಿರುವ ಮಡಿಕೇರಿಯ ʼಬ್ರೈನೋಬ್ರೈನ್” ಕೇಂದ್ರದ ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಅವರು ಕೊಡಗು ಜಿಲ್ಲೆಯ ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದಿಂದ 101 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸ್ಪರ್ಧೆಯು ಲ್ಯಾಪ್‌ಟಾಪ್ ಅಥವಾ ಡೆಸ್ಕ್ ಟಾಪ್ ಬಳಸಿ ಕಟ್ಟುನಿಟ್ಟಾದ 4 ನಿಮಿಷಗಳ ಕಾಲಮಿತಿಯೊಳಗೆ ಸಂಕೀರ್ಣವಾದ ಗಣಿತದ ಲೆಕ್ಕಗಳನ್ನು ಬಿಡಿಸುವುದನ್ನು ಒಳಗೊಂಡಿತ್ತು. 79 ರಾಷ್ಟ್ರಗಳ ಬ್ರೈನೋಬ್ರೈನ್ ಕೇಂದ್ರಗಳ ಒಟ್ಟು 23912 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಕರ್ನಾಟಕದಿಂದ ಭಾಗವಹಿಸಿದ “ಬ್ರೈನೋಬ್ರೈನ್” ಕೇಂದ್ರಗಳ ಪೈಕಿ ಮಡಿಕೇರಿ ಕೇಂದ್ರಕ್ಕೆ ಶೇ.100 ರಷ್ಟು ಫಲಿತಾಂಶ ಬಂದಿರುವುದು ಹೆಮ್ಮೆಯ ವಿಚಾರ. ಉತ್ತಮ ಪ್ರದರ್ಶನ ತೋರಿ ಭಾಗವಹಿಸಿದ ಎಲ್ಲಾ 101 ಮಕ್ಕಳು ವಿಜೇತರಾಗಿರುವುದು ಪ್ರಶಂಸನೀಯ… ಇದರ ಸಂಪೂರ್ಣ ಪ್ರಶಂಸೆ ಮತ್ತು ಅಭಿನಂದನೆ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸಲ್ಲಬೇಕು ಎಂದಿದ್ದಾರೆ. ಅಲ್ಲದೆ, ಆನ್‌ಲೈನ್ ಸ್ಪರ್ಧೆಗೆ ಸಹಕಾರ ನೀಡಿದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಉಪನ್ಯಾಸಕರಾದ ಡಾ.ಸೌಮ್ಯ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕೇಂದ್ರದ 101 ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಭಾಗವಹಿಸಿದ್ದು, ಕೇವಲ 4 ನಿಮಿಷಗಳಲ್ಲಿ ವಿವಿಧ ರೀತಿಯ ಲೆಕ್ಕಗಳನ್ನು ಅತೀ ಚುರುಕಾಗಿ ಮಾಡುವ ಮೂಲಕ ಅತ್ಯುತ್ತಮ ಸಾಧನೆ ಮಾಡಿ ಪದಕ ಗೆದ್ದಿದ್ದಾರೆ. ವಿಜೇತರ ವಿವರಗಳನ್ನು ನೋಡುವುದಾದರೆ…

ಚಾಂಪಿಯನ್ ಟ್ರೋಫಿ ಗೆದ್ದು ಬೀಗಿದವರು

ಸೋನ್ಹ್ ಸೋಮಣ್ಣ ಪಿ.ಸಿ, ಅನ್ವಿತ್ ಎಸ್, ಆರುಷಿ ಕೆ.ಸಿ, ದಿಯ ವೈ.ಬಿ, ಶ್ರೀಹಾನ್ ಸಂಜಯ್ ಜಿತ್ತಿ, ತನುಷ್ ಪೂವಣ್ಣ ಸಿ.ಪಿ, ರುಶಾಲಿ ಪಿ.ಜೆ, ತಪಸ್ಯ ಗೌರಿ ಎಂ, ವಿ.ಕೃಷ್ಣ ಸಾಹಿಲ್, ವಂಶಿ ಕೆ.ಎಂ, ಚಿನ್ಮಯಿ ಪಿ, ದೀಕ್ಷ ಭರತ್ ಎನ್, ಧ್ರುವತೇಜ್ ಪಿ, ದಿಗಂತ್ ಸಿ.ಪಿ, ಕನಿಷ್ಕ ಪಿ.ಸಿ, ಲಕ್ಷಿತ ಬಿ.ಆರ್., ನೇಹಲ್ ಡಿ.ವಿ, ನಿಲ್ಹಾ ಜೆ ತಾರಕನ್, ಹರ್ಷಿಣಿ ಎಂ.ಕೆ, ರೋನಿತ್ ಗಣಪತಿ ಎ.ಎಸ್, ಯಾನ್ವಿ ಬೋಜಮ್ಮ ಎಂ.ಪಿ, ಅಭಿನವ್ ಕೃಷ್ ಜಿ, ಆರಾಧ್ಯ ಕೆ.ಸಿ, ಏಡನ್ ಜೆ.ತಾರಕನ್, ದ್ರುಪದ್ ಪಿ ಮಣಿಕೋಥ್, ಮಯಾಂಕ್ ಎಂ, ಶೌರ್ಯ ಎಸ್.ವಿ ಕುಡ್ತೇಕರ್, ನಮನ್ ಎಂ.ಗೌಡ, ರೋನಿತ್ ತಮ್ಮಯ್ಯ ಪಿ.ಕೆ, ಸಮರ್ಥ್ ಆರ್.

ಚಿನ್ನದ ಪದಕ ಮುಡಿಗೇರಿಸಿಕೊಂಡ ಸಾಧಕರು

ಲಿಖಿತ್ ಸೋಮಣ್ಣ ಕೆ.ಎಲ್, ವಿಹಾನ್ಯ ಹೆಚ್.ಎ, ಹರಿಪ್ರಿಯ ವಿ.ಹೆಚ್, ಇಸ್ರಾಯೇಲ್ ಸಾನ್ವಿಕ್ ಎಸ್, ಜೆಶ್ವಿತ ತಂಗಮ್ಮ ಎ.ಪಿ, ವಿ.ಕೃಷ್ಣ ಸಂಜಿತ್, ದಿರಣ್ ಕೆ.ಎಸ್, ಸುಹಾಸ್ ಎಂ.ಎಚ್, ಚಾರ್ವಿ ಬಿ.ಆರ್, ಮೋನಿಷ್ ಬಿ.ಎಸ್, ಹಿತ ಶೆಟ್ಟಿ ಬಿ.ವೈ, ಶ್ರೀ ದರ್ಶನ್ ಎಸ್., ಪ್ರಥಮ್ ಚಿನ್ನಪ್ಪ ಬಿ.ಎಲ್, ರಿಯಾಂಕ ಎಂ, ಭುವನ್ ಹೆಚ್.ಆರ್, ಧನ್ವಿ ಪೂವಮ್ಮ ಬಿ.ಎಂ., ಧನ್ವಿನ್ ಪೂವಣ್ಣ ಬಿ.ಎಂ, ಜೊಹನ್ನಾ ಮಡ್ತಾ, ನಿಧಿ ಆರ್ ಅಣ್ವೇಕರ್, ಪಾವನಿ ಕೆ. ಕುಂದರ್,

ರಿಯಾನ್ ಪೊನ್ನಪ್ಪ ಬಿ.ಡಿ, ವರುಣಿಕ.ಜಿ, ಲಿವ್ಯ ಸುನಿತ್‌ಕುಮಾರ್, ಲಾಂಛನ್ ಕೆ.ಟಿ, ಯಶ್‌ರಾಜ್ ಆರ್ ಅನ್ವೇಕರ್, ಲಾಲಿತ್ಯ ಅಶೋಕ್ ಸಿ, ಜಾರ್ಜ್ ಮ್ಯಾಥೀವ್, ಕೋಸಿಗಿ ಸಾತ್ವಿಕ್ ಸಮರ್ಥ್, ಪ್ರಧಾನ್ ಶತಾಯುಷ್, ಕೋಸಿಗಿ ಸಮರ್ಥ್ ಸಾಮ್ರಾಟ್, ಲಿನಿತ್ ಬಿ.ಎಲ್, ಶಿವಕುಮಾರ್ ಯು.ಆರ್, ಬಿ.ಡಿ.ಕುಶಿ, ಸೃಷ್ಟಿ ಎಂ.ಆರ್, ಯಜತ್ ಗಣಪತಿ ಪಿ.ಕೆ, ಲಲಿತ್ ಆದಿತ್ಯ.ಬಿ, ಆಥಿರಾ ದಿನೇಶ್ ಮೆನನ್.

ಇವರು ಬೆಳ್ಳಿ ಪದಕ ಗೆದ್ದು ಖುಷಿ ಪಟ್ಟವರು

ಭಾರ್ಗವ ಸಿ.ಎನ್, ಕನಿಷ್ಕ ಪಿ, ನಿಂಶಿ ಕೆ.ಎಂ. ಸಂಹಿತ ಶೆಟ್ಟಿ ಬಿ.ವೈ, ದಿವಿತ್ ಕೆ.ಎಸ್, ಕಿಶೋರ್ ಸಿ.ಎನ್, ಪೃಥ್ವಿಶ್ರೀ. ಪಿ, ಇಸ್ರಾಯೇಲ್ ಸಾತ್ವಿಕ್ ಎಸ್, ಪುನಿತ್ ರಾಜ್ ಕೆ.ಆರ್, ಶಾನ್ ಪ್ರಥಮ್ ಬಿ.ಆರ್, ದಿಶಾ ಎಸ್ ಶಿರೂರು, ಕನಿಷ ಸುನಿತ್ ಕುಮಾರ್, ಆರಾಧ್ಯ ಎ ಅನ್ವೇಕರ್ , ಹಂಸಿನಿ ಎಸ್.ಪಿ, ವಿಕಾಸ್ ಎಚ್.ಎಚ್, ಆಧ್ಯ ಜಿ ವರ್ಣೇಕರ್,

ಪೂಜನ್ ಗೌಡ ಎಂ.ಎ, ಭುವನ್ ಕೆ.ಟಿ, ಮಾನ್ವಿ ಜಿ ವರ್ಣೇಕರ್, ತನಿಷ್ಕ ಕೆ.ಎ, ಗಾನವಿ ಗಂಗಮ್ಮ ಸಿ.ವಿ, ಮನ್ವಿತ.ಎಸ್, ನಿಶ್ಚಲ್ ಆರ್, ಅದಿತ್ ಗೌತಮ್ ಕೆ, ಅನೀಸನ್ ಪಿ, ಭುವನ್ ತಿಮ್ಮಯ್ಯ ಎಂ, ಮಿಯಾ ಅರುಣ್, ಯಶಸ್ ಕೆ.ಯು, ಕಿಶಿ ಕಾವೇರಮ್ಮ ಎ.ಎಲ್, ಯಶಿಕ ಎಸ್, ಅಫ್ಫಾನ್ ಅಹ್ಮದ್ ಟಿ.ಬಿ, ಐಶ್ವರ್ಯ ಎಸ್, ದೃತಿ ಎ.ಎಂ, ಪ್ರಣತಿ ಎಸ್.ಪಿ.







