LatestMysore

ಶಾಸಕ‌ ಡಿ.ರವಿಶಂಕರ್ ಗೆ ಸಚಿವ ಸ್ಥಾನ ನೀಡಲು ಚೀರ್ ನಹಳ್ಳಿ ಶಿವರಾಜು ಒತ್ತಾಯ

ಕೆ.ಆರ್.ನಗರ(ಜಿಟೆಕ್ ಶಂಕರ್): ಕ್ಷೇತ್ರದ ಶಾಸಕ‌ ಡಿ.ರವಿಶಂಕರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ಚೀರ್ ನಹಳ್ಳಿ ಶಿವರಾಜು ಪಕ್ಷದ ವರಿಷ್ಠರನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕಳೆದ ಮೂರು ವರ್ಷಗಳಿಂದ ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕೆಲಸ‌ ಮಾಡುತ್ತಿರುವ ಅವರಿಗೆ ಪಕ್ಷ ಸಚಿವ ಸ್ಥಾನ ನೀಡುವ ಮೂಲಕ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಶಾಸಕರಾಗಿ ಆಯ್ಕೆಯಾದ ನಂತರ ಜನಾನುರಾಗಿ‌ ನಾಯಕರಾಗಿರುವ ರವಿಶಂಕರ್ ಪಕ್ಷ ಮತ್ತು ಜಾತಿ ಬೇಧವಿಲ್ಲದ ಅಭಿವೃದ್ಧಿ ಕೆಲಸಗಳ‌ ಮೂಲಕ ಜನ ಸೇವೆ ಮಾಡುತ್ತಿದ್ದು ಇಂತಹವರ ಸೇವೆ ರಾಜ್ಯಕ್ಕೆ ಅಗತ್ಯವಿದೆ ಎಂದು ಹೇಳಿಕೆಯಲ್ಲಿ‌ ತಿಳಿಸಿದ್ದಾರೆ.

ಅಭಿವೃದ್ಧಿಯನ್ನೇ ಕಾಣದ ಹತ್ತಾರು ಗ್ರಾಮಗಳಿಗೆ ಮೂಲ ಸವಲತ್ತು ಕಲ್ಪಿಸಿ ಆ ಮೂಲಕ ಮತದಾರರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿರುವ ಶಾಸಕರು ಸಚಿವರಾದರೆ ರಾಜ್ಯದ ಜನತೆಗೆ ಸಾಮಾಜಿಕ‌ ನ್ಯಾ ಯ ಕೊಡಿಸಿ ಸರ್ಕಾರದ ಸವಲತ್ತು ತಲುಪಿಸಲು ಇಚ್ಚಾಶಕ್ತಿಯಿಂದ ಕೆಲಸ ಮಾಡಲಿದ್ದು ಪಕ್ಷದ ಹೈ ಕಮಾಂಡ್ ಇದನ್ನು ಪರಿಗಣಿಸಬೇಕು ಎಂದು ಕೋರಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜಗತ್ತಿನಾದ್ಯಂತ ಯುವ ಶಕ್ತಿ‌ ಮತ್ತು ಅವರ ಸೇವೆಗೆ ಹೆಚ್ಚಿನ ಮಾನ್ಯತೆ ದೊರೆಯುತ್ತಿದ್ದು ಇಂತಹ ನಾಯಕರು ಪ್ರಜಾ ಪ್ರಭುತ್ವ ವ್ಯವಸ್ಥೆ ಯಲ್ಲಿ‌ ಉನ್ನತ ಸ್ಥಾನ ಅಲಂಕರಿಸಿದರೆ ನೊಂದವರ ಬಾಳಿನ ಆಶಾ ಕಿರಣವಾಗಲಿದ್ದು ಇಂತಹ ಬದಲಾವಣೆಗಳು ಮತ್ತು ರಾಜಕೀಯ ಪಲ್ಲಟಗಳು ಆಗಬೇಕೆಂದಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ದಲಿತ, ಹಿಂದುಳಿದ ಮತ್ತು ಕುರುಬ ಸಮುದಾಯದವರು ನಿರಂತರವಾಗಿ ಬೆಂಬಲಿಸುತ್ತಿದ್ದು ಅದಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಈ ಭಾಗದ ಯುವ‌ ಶಾಸಕರಾದ ಡಿ.ರವಿಶಂಕರ್, ದರ್ಶನ್ ದ್ರುವನಾರಾಯಣ್ ಮತ್ತು ಅನಿಲ್ ಚಿಕ್ಕಮಾಧುಅವರಿಗೆ ಸಚಿವ ಸ್ಥಾನ‌ನೀಡಲು ಆದ್ಯತೆ ನೀಡಬೇಕೆಂದು ಕೋರಿದ್ದಾರೆ.

ಡಿ.ರವಿಶಂಕರ್ ಅವರಿಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ ಮೈಸೂರು ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಪಕ್ಷದ ಮುಖಂಡರು ವರಿಷ್ಠರಿಗೆ ಮನವಿ ಪತ್ರ ಸಲ್ಲಿಸಲಿದ್ದು ಈ ವಿಚಾರವನ್ನು ಪಕ್ಷವು ಗಂಭೀರವಾಗಿ‌ ಪರಿಗಣಿಸಿ ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡಿಕೊಂಡರು.

ಹಳೇ ಮೈಸೂರು ಭಾಗದಲ್ಲಿ ಕುರುಬ ಸಮಾಜದ  ಅತ್ಯಂತ ಪ್ರಭಾವಿ ಯುವ  ನಾಯಕರಾಗಿರುವ ಡಿ.ರವಿಶಂಕರ್ ಅವರ ಸೇವೆ ಪಕ್ಷಕ್ಕೆ ಅತ್ಯಂತ ಅಗತ್ಯವಾಗಿದ್ದು ನಮ್ಮ ನಾಯಕರಿಗೆ ಸಚಿವ ಸ್ಥಾನ ಕೊಡಿಸಲು ಎಲ್ಲಾ ಕಾಂಗ್ರೆಸ್ ನಾಯಕರು ಬೆಂಬಲ ನೀಡಬೇಕೆಂದು ಕೇಳಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ದಿಡ್ಡಹಳ್ಳಿ ಬಸವರಾಜು, ಚಿಕ್ಕಹನಸೋಗೆ ಪಾಲಾಕ್ಷ ಮತ್ತು ಚಿಬುಕಹಳ್ಳಿಬಸವರಾಜು ಇದ್ದರು.

ಶಾಸಕ‌ ಡಿ.ರವಿಶಂಕರ್ ಅವರಿಗೆ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ಮುಖಂಡರ ಒತ್ತಾಯ

admin
the authoradmin

Leave a Reply

Translate to any language you want