LatestMysore

ವಿದ್ಯಾರ್ಥಿಗಳು ಆಡಳಿತಾತ್ಮಕ ಹುದ್ದೆ ಪಡೆಯುವವರೆಗೂ ಪ್ರಯತ್ನ ಬಿಡಬಾರದು:ಎಸ್.ರವಿ

ಬುದ್ದ,ಬಸವ,ಅಂಬೇಡ್ಕರ್ ಸಮನ್ವಯ ಸಮಿತಿಯಿಂದ ಪ್ರತಿಭಾ ಪುರಸ್ಕಾರ

ಕೆ.ಆರ್.ನಗರ(ಸಂಘಟನೆ ಮಂಜುನಾಥ್): ವಿದ್ಯಾರ್ಥಿಗಳು ಎಸ್‌ ಎಸ್‌ ಎಲ್‌ ಸಿ  ಮತ್ತು ಪಿಯುಸಿಯಲ್ಲಿ ಅಂಕಗಳಿಸಿದ ಮಾತ್ರಕ್ಕೆ  ಬಿಗದೇ ಆಡಳಿತ್ಮಾಕ ಹುದ್ದೆ ಪಡೆಯುವವರೆಗೂ ಪ್ರಯತ್ನ ಮಾಡಬೇಕು ಎಂದು ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಎಸ್.ರವಿ ಹೇಳಿದರು.

ಪಟ್ಟಣದಲ್ಲಿ ಬುದ್ದ,ಬಸವ,ಅಂಬೇಡ್ಕರ್ ಸಮನ್ವಯ ಸಮಿತಿ ವತಿಯಿಂದ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ಸರ್ಕಾರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ  ಮಕ್ಕಳಿಗೆ ಆಯೋಜಿಸಲಾಗಿದ್ದ  ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು  ವಿದ್ಯೆ ಎಂಬುವುದು ಹುಲಿ ಹಾಲು ಕುಡಿದಷ್ಟೇ ಕಠಿಣ ಎಂಬುವುದನ್ನು ಮಕ್ಕಳು ಅರಿಯ ಬೇಕು ಎಂದರು.

ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಅವಧಿಯಲ್ಲಿ ಶ್ರಮವಹಿಸಿ ಐಎಎಸ್, ಐಪಿಎಸ್, ಕೆಎಎಸ್ ಅಂತಹ ಉನ್ನತ ಮಟ್ಟದ ಪರೀಕ್ಷೆಗಳನ್ನು ಎದುರಿಸಿ ನೌಕರಿ ಪಡೆಯಬೇಕು ಆಗ  ಸಮಾಜಕ್ಕೆ  ಒಳ್ಳೆಯ ಹೆಸರು ಬರಲಿದೆ ಎಂದು ಮಕ್ಕಳಿಗೆ  ಕಿವಿಮಾತು ಹೇಳಿದ ಎಸ್.ರವಿ  ಹುದ್ದೆ ಪಡೆದ ನಂತರ ನೀವುಗಳು   ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕೆಂದು ಸಲಹೆ ನೀಡಿದರು.

ಬುದ್ದ, ಬಸವ, ಅಂಬೇಡ್ಕರ್‌ರವರ ಆಶಯದಂತೆ ಸಮ ಸಮಾಜ ನಿರ್ಮಾಣ ಮಾಡಲು ಶಿಕ್ಷಣದಿಂದ  ಮಾತ್ರ ಸಾಧ್ಯ ಇದನ್ನು ಎಲ್ಲರೂ  ತಿಳಿದುಕೊಳ್ಳಬೇಕೆಂದರಲ್ಲದೆ  ಉನ್ನತ ಶಿಕ್ಷಣ ಪಡೆಯುವಂತಹ ಮಕ್ಕಳಿಗೆ ವೈಯುಕ್ತಿಕವಾಗಿ ಆರ್ಥಿಕ ಸಹಕಾರ ನೀಡುತ್ತೇನೆ  ಎಂದು ಭರವಸೆ ನೀಡಿದರು.

ದಲಿತ ಮುಖಂಡ ಹನಸೋಗೆ ನಾಗರಾಜು ಮಾತನಾಡಿ ಬಿಜೆಪಿಯವರ ಅಜೆಂಡ ಸಂವಿಧಾನ ನಾಶ ಮಾಡುವುದ್ದಾಗಿದೆ ಇಂದರಿಂದ ಹಿಂದುಳಿದ ಸಮುದಾಯಗಳಿಗೆ ಅನ್ಯಾಯವಾಗಲಿದೆ,  ಸಂವಿಧಾನ  ವಿರೋಧಿಗಳ  ವಿರುದ್ದ ಹೊರಾಟ ಮಾಡುವ ಮನುಭಾವನೆ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕೆಂದರು. ಛಲವಾದಿ ಮಹಾ ಸಂಸ್ಥಾನ ಗುರುಪೀಠ ಚಿತ್ರದುರ್ಗದ ಶ್ರೀಬಸವನಾಗಿ ದೇವ ಸ್ವಾಮಿಜಿ ಅರ್ಶೀವಚನ ನೀಡಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಂ.ತಮ್ಮಣ, ವಕೀಲ ಎ.ಆರ್.ಕಾಂತರಾಜು,ಎಸ್‌ಸಿ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿದ್ದಯ್ಯ, ಅನ್ವೇಷಣಾ ಸಹಕಾರ ಸಂಘದ ಅಧ್ಯಕ್ಷ ಕಾಳಾಜಿ, ಸಂಘದ ಅಧ್ಯಕ್ಷ ಎಂ.ಜೆ.ರಾಜಶೇಖರ್ ಮಾತನಾಡಿದರು.

ಸಂಘದ ಪದಾಧಿಕಾರಿಗಳಾದ  ಈ.ರಾಮಯ್ಯ, ಮಹಾಲಿಂಗಯ್ಯ, ಮಹದೇವ, ವೆಂಕಟೇಶ್, ಕೃಷ್ಣಯ್ಯ,ಅಮರನಾಥ್, ದೇವಯ್ಯ, ಟೌನ ಅಧ್ಯಕ್ಷ ವಿಜಯ್, ಅಶೋಕ, ಚಂದ್ರಪ್ಪ, ಸೀತರಾಮ, ಶ್ರೀನಿವಾಸ್, ಹೊನ್ನಪ್ಪ ಇನ್ನಿತರರು ಹಾಜರಿದ್ದರು.

admin
the authoradmin

Leave a Reply

Translate to any language you want