LatestMysore

ಶಿವಾನಂದ ಪುರಿ ಸ್ವಾಮೀಜಿಗಳ ಸಮಾಜ ಮುಖಿ ಚಿಂತನೆ, ಜನಸೇವೆ ಸಮಾಜಕ್ಕೆ ಮಾದರಿ: ಜಿ.ಡಿ.ಹರೀಶ್ ಗೌಡ

ಕೆ.ಆರ್.ನಗರ(ಜಿಟೆಕ್ ಶಂಕರ್): ಕಾಗಿನೆಲೆ ಕನಕ ಗುರು ಪೀಠ ಮೈಸೂರು ಶಾಖಾ ಮಠದ ಶಿವಾನಂದ ಪುರಿ ಸ್ವಾಮೀಜಿಗಳ ಸಮಾಜ ಮುಖಿ ಚಿಂತನೆ ಮತ್ತು ಜನಸೇವೆಯ ಪರಿ ಇತರರಿಗೆ ಮಾದರಿ ಎಂದು ಹುಣಸೂರು ಶಾಸಕ‌ ಜಿ.ಡಿ.ಹರೀಶ್ ಗೌಡ ಹೇಳಿದರು

ಪಟ್ಟಣದ ಕನಕ ಗುರು ಪೀಠದ ಶಾಖಾ ಮಠದಲ್ಲಿ‌ ಸೋಮವಾರ ನಡೆದ ಅಹಲ್ಯಾ ಹೋಳ್ಕಲ್ ಮತ್ತು ಮಠದ ಶ್ರೀಗಳ 66ನೇ ವರ್ಷದ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು‌ ತಮ್ಮ ಸನ್ಯಾಸತ್ವದ ಜೀವನದುದ್ದಕ್ಕೂ ಜನಸೇವೆಯನ್ನೇ ಕನಕವನ್ನಾಗಿ ಮಾಡಿಕೊಂಡಿರುವ ನಮ್ಮ ನೆಚ್ಚಿನ ಶ್ರೀಗಳು ನೂರುಕಾಲ ಬಾಳಲಿ ಎಂದರು.

ತಮ್ಮ ಬದುಕನ್ನು ಬಡ ಮಕ್ಕಳು ಮತ್ತು ದೀನ ದಲಿತರ ಉದ್ದಾರಕ್ಕಾಗಿ ಮುಡುಪಾಗಿಟ್ಟಿರುವ ಇಂತಹವರ ಸಂತತಿ ಹೆಚ್ಚಾಗಲಿ ಎಂದು ಪ್ರಾರ್ಥಿಸಿದ ಶಾಸಕರು ಶಿವಾನಂದ ಶ್ರೀಗಳು ನಮ್ಮೆಲ್ಲರಿಗೂ ಆದರ್ಶ ಪ್ರಾಯರು ಎಂದು ಕೊಂಡಾಡಿದರು. ಕಳೆದ ಹಲವು‌ ದಶಕಗಳಿಂದ ಶ್ರೀ ಮಠದ ಬಾಂಧವ್ಯ ಹೊಂದಿರುವ ನಾನು ಸ್ವಾಮೀಜಿಗಳ‌ ಜನ್ಮ ದಿನದ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು ಅವರ ಹರಕೆ ಮತ್ತು ಆರೈಕೆ ಸದಾ ಸಮಾಜ ಮತ್ತು ನನ್ನ ಮೇಲಿರಲಿ ಎಂದು ಕೋರಿ ಕೊಂಡರು.

ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಮಾತನಾಡಿ ಮಠದ ಶ್ರೀಗಳು ತಮ್ಮ‌ ಜೀವನದುದ್ದಕ್ಕು ನೊಂದವರು‌ ಮತ್ತು ದಮನಿತರ ಉಳಿತಿಗಾಗಿ ದುಡಿಯುತ್ತಿದ್ದು ಇಂತಹವರು ಶತಾಯುಷಿಯಾಗಲಿ ಎಂದು ಪ್ರಾರ್ಥಿಸಿದರು. ಶ್ರೀಗಳು ತಮ್ಮ‌ ಜೀವಿತಾವಧಿಯನ್ನು ಬಡ ಮಕ್ಕಳ‌ ಉದ್ದಾರಕ್ಕೆ ಮೀಸಲಿಟ್ಟಿದ್ದು ಶಿವಾನಂದಪುರಿ ಶ್ರೀಗಳು ದೀರ್ಘ ಕಾಲ ಬಾಳಿ ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಲಿ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, ಹರಗು ಮತ್ತು ಬಣ್ಣ ನಿಗಮದ ಅಧ್ಯಕ್ಷ ಹೆಚ್.ಡಿ.ಗಣೇಶ್,  ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್, ಆರ್ ಟಿಒ ರಾಜ್ಯ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಹುಣಸೂರು ನಗರ ಸಭೆ ಮಾಜಿ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ ಮಾತನಾಡಿದರು.

ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜ ಸ್ವಾಮೀಜಿ, ಬೆಟ್ಟದಪುರ ಸಲಿಲಾಕ್ಯ ಮಠದ ಚನ್ನಬಸವ ದೇಶಿಕೇಂದ್ರಸ್ವಾಮೀಜಿ, ಲಾಲನಹಳ್ಳಿ ಮಠದ ಜಯದೇವಿತಾಯಿ , ಸಿದ್ದರೂಢ ಮಠದ ರಮಾನಂದಸ್ವಾಮೀಜಿ, ಮಾಧವಾನಂದ, ಬಸವಾನಂದ, ನಿರ್ಗುಣಾನಂದ, ಮಂಹತೇಶ ಸ್ವಾಮೀಜಿ, ಯಶವಂತಶ್ರೀ,  ರಾಮಲಿಂಗೇಶ್ವರ ಮಠದ ಪ್ರಣವಲಿಂಗಸ್ವಾಮೀಜಿ, ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಂಡು ಶಿವಾನಂದಪುರಿ ಶ್ರೀ ಗಳಿಗೆ ಜನ್ಮ ದಿನದ ಶುಭಾಷಯ ಕೋರಿದರು.

ಶಾಸಕ ಜಿ‌.ಡಿ.ಹರೀಶ್ ಗೌಡ ಅವರ ಪತ್ನಿ ವರ್ಷಹರೀಶ್ ಗೌಡ,  ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳ್ಳಿಸೋಮಶೇಖರ್, ಮಾಜಿ ನಿರ್ದೇಶಕ ಹೆಬ್ಬಾಳುಶೇಖರ್, ತಾಲೂಕು ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಹೆಚ್.ಪಿ.ಪರಶುರಾಮ್,  ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ನಿರ್ದೇಶಕ ದಿಡ್ಡಹಳ್ಳಿಬಸವರಾಜು, ಗಂಧನಹಳ್ಳಿ ಹೇಮಂತ್,  ಮೈಸೂರು ನಗರ ಕಾಂಗ್ರೆಸ್ ಮುಖಂಡರಾದ ಕಮಲ ಅನಂತರಾಮ್,  ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ.ಸೋಮಶೇಖರ್, ದೊಡ್ಡೆಕೊಪ್ಪಲು ಗ್ರಾ.ಪಂ.ಮಾಜಿ ಅಧ್ಯಕ್ಷೆ ಸುನೀತಾರಾಮೇಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.

admin
the authoradmin

Leave a Reply

Translate to any language you want