LatestNews

ತುಮಕೂರಿನಲ್ಲಿ ನಡೆದ ಚೇಂಬರ್ ಸಂಸ್ಥೆಯ ರಾಜ್ಯ ಸಮ್ಮೇಳನದಲ್ಲಿ ಕೊಡಗಿನ “ಶಕ್ತಿ”ಗೆ ಸನ್ಮಾನ

ಮಡಿಕೇರಿ: ತುಮಕೂರಿನಲ್ಲಿ ನಡೆದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ರಾಜ್ಯ ಮಟ್ಟದ ಸಮ್ಮೇಳನದಲ್ಲಿ “ಶಕ್ತಿ” ಪತ್ರಿಕೆಯ ಸೇವೆಯನ್ನು ಪ್ರಶಂಸಿಸಿ  ಸನ್ಮಾನಿಸಲಾಯಿತು.

ಅಲ್ಲಿನ ಗಂಗಾಧರಯ್ಯ ಮೆಮೋರಿಯಲ್ ಹಾಲ್ ನಲ್ಲಿ ನಡೆದ ರಾಜ್ಯ ಸಮ್ಮೇಳನ ಹಾಗೂ ತುಮಕೂರು  ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ   ಬೆಳ್ಳಿ ಮಹೋತ್ಸವ ಆಚರಣೆ ಸಂದರ್ಭ ಶಾಸಕ ಜ್ಯೋತಿ ಗಣೇಶ್ ಅವರು ಸಾಧಕರಿಗೆ ಗೌರವ ಸಲ್ಲಿಸಿದರು.  “ಶಕ್ತಿ”ಯ ಪರವಾಗಿ ಸಂಪಾದಕ ಜಿ ಚಿದ್ವಿಲಾಸ್ ಸಮ್ಮೇಳನದಲ್ಲಿ ಸನ್ಮಾನ ಸ್ವೀಕರಿಸಿದರು.

ಈ ಸಂದರ್ಭ ಎಫ್.ಕೆ.ಸಿ.ಸಿ.ಐ. ನ ಅಧ್ಯಕ್ಷೆ ಉಮಾರೆಡ್ಡಿ, ಹಿರಿಯ ಉಪಾಧ್ಯಕ್ಷ ಸಾಯಿ ರಾಮ್ ಪ್ರಸಾದ್,ಉಪಾಧ್ಯಕ್ಷ ಶಶಿಧರ್, ಮಾಜಿ ಅಧ್ಯಕ್ಷ ಶಿವಕುಮಾರ್, ತುಮಕೂರು ಚೇಂಬರ್ ಅಧ್ಯಕ್ಷ ಪಾಂಡುರಂಗ, ತುಮಕೂರು ಚೇಂಬರ್ ಪದಾಧಿಕಾರಿ ಹಾಗೂ ಎಫ್.ಕೆ.ಸಿ.ಸಿ.ಐ. ನ ಜಿಲ್ಲಾ ಸಮನ್ವಯ ಸಮಿತಿಯ ಅಧ್ಯಕ್ಷ ಸುಬ್ನನ್ ಹಿರೇಮಠ್ ಹಾಗೂ ಇತರರು ವೇದಿಕೆಯಲ್ಲಿದ್ದರು. ಇದೇ ಸಂದರ್ಭ ಎಲ್ಲಾ ಜಿಲ್ಲಾ ಚೇಂಬರ್ ಅಧ್ಯಕ್ಷರನ್ನು ಗೌರವಿಸಲಾಯಿತು.

ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ. ಆರ್. ನಾಗೇಂದ್ರ ಪ್ರಸಾದ್ ಅವರು ಗೌರವವನ್ನು ಸ್ವೀಕರಿಸಿದರು. ಕೊಡಗು ಜಿಲ್ಲೆಯಿಂದ ಚೇಂಬರ್ ಉಪಾಧ್ಯಕ್ಷ ನವೀನ್ ಅಂಬೆಕಲ್, ರಾಜ್ಯ ಚೇಂಬರ್ ನಿರ್ದೇಶಕ ಕೆ.ಬಿ.ಗಿರೀಶ್ ಗಣಪತಿ, ಜಿಲ್ಲಾ ಚೇಂಬರ್ ನಿರ್ದೇಶಕ ದಿನೇಶ್, ಕೊಡ್ಲಿಪೇಟೆ ಚೇಂಬರ್ ಅಧ್ಯಕ್ಷ ಯತೀಶ್, ಮಡಿಕೇರಿ ಚೇಂಬರ್ ಕಾಮರ್ಸ್ ಅಧ್ಯಕ್ಷ ಸಂತೋಷ್ ಅಣ್ವೇಕರ್ ಪಾಲ್ಗೊಂಡಿದ್ದರು

admin
the authoradmin

Leave a Reply

Translate to any language you want