CrimeLatest

ಈ ಮಂಗಳಮುಖಿ ವೇಷಧಾರಿಗೆ ಯುವಕರೇ ಟಾರ್ಗೆಟ್… ನಂಜನಗೂಡು ಮೂಲದ ಈ  ವ್ಯಕ್ತಿ ಮಾಡಿದ್ದೇನು?

ಮೈಸೂರು: ನೀವೇನಾದ್ರೂ ಸೀರೆ, ಚೂಡಿದಾರ್ ಹಾಕಿಕೊಂಡು ಬಂದು ಭಿಕ್ಷೆ ಕೇಳುವ  ಎಲ್ಲರೂ ಮಂಗಳಮುಖಿ ಎಂದುಕೊಂಡರೆ ನಿಮ್ಮ ಊಹೆ ತಪ್ಪಾಗುತ್ತದೆ.. ಏಕೆಂದರೆ ಕೆಲವು ಗಂಡಸರೇ ಮಂಗಳಮುಖಿಗಳ ವೇಷ ಹಾಕಿ ವಂಚನೆ ಮಾಡುತ್ತಿರುವ ಪ್ರಕರಣಗಳು ಅಲ್ಲಲ್ಲಿ ಕೇಳಿ ಬರುತ್ತಿದ್ದು ಇದೀಗ ನಂಜನಗೂಡಿನಲ್ಲಿ ಅಂತಹದ್ದೇ ಘಟನೆ ಬೆಳಕಿಗೆ ಬಂದಿದೆ.

ಮದುವೆಯಾಗಿ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದ ನಂಜನಗೂಡು ತಾಲ್ಲೂಕು ಸೂರಹಳ್ಳಿ ಗ್ರಾಮದ ಮಾದೇವಪ್ಪ ಇದೀಗ ಮಂಗಳಮುಖಿ ವೇಷದಲ್ಲಿ ಹಾಕಿಕೊಂಡು ‘ಪ್ರೇಮ’ ಎಂಬ ಹೆಸರಿಟ್ಟುಕೊಂಡು ಓಡಾಡುತ್ತಾ ಹುಡುಗರನ್ನೇ ಟಾರ್ಗೆಟ್ ಮಾಡಿ ಅವರನ್ನು ಅನೈತಿಕ ಚಟುವಟಿಕೆಗೆ ಕರೆದು ಅವರಿಂದ ಹಣ ಲಪಟಾಯಿಸುತ್ತಿರುವುದು ಬೆಳಕಿಗೆ ಬಂದಿದೆ. ಈತ ಹಗಲಿನಲ್ಲಿ ರಸ್ತೆ ಬದಿಯಲ್ಲಿ ಮಂಗಳಮುಖಿಯಾಗಿ ಭಿಕ್ಷೆ ಬೇಡಿದರೆ,  ರಾತ್ರಿಯಾಗುತ್ತಿದ್ದಂತೆಯೇ ಅನೈತಿಕ ಚಟುವಟಿಕೆಗೆ ಮುಂದಾಗುತ್ತಿದ್ದನು.

ಆತನ ಬಳಿಗೆ ಬರುವವರಿಂದ ಹಣವಸೂಲಿ ಮಾಡಿ ವಂಚಿಸುತ್ತಿದ್ದನು. ಆತನಿಂದ ಮೋಸ ಹೋದವರು ಮರ್ಯಾದೆಗೆ ಅಂಜಿ ಸುಮ್ಮನಾಗಿ ಬಿಡುತ್ತಿದ್ದರು. ಹೀಗೆ ಸಂಪಾದಿಸಿದ ಹಣವನ್ನು ಬಡ್ಡಿಗೆ ಬಿಡುತ್ತಿದ್ದ ಎಂಬ ಆರೋಪವೂ ಇದೆ. ಇದೀಗ ಈತನ ಮೇಲೆ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯಗಳು ಕೇಳಿ ಬಂದಿವೆ… ಗಂಡಸರೇ ಹುಷಾರ್! ಸ್ವಲ್ಪ ಎಚ್ಚರ ತಪ್ಪಿದರೆ ನಿಮ್ಮ ಮಾನ ಮರ್ಯಾದೆ ಜತೆಗೆ ಹಣವೂ ಮಂಗಳಮುಖಿ ವೇಷಧಾರಿಗಳ ಪಾಲಾಗುವುದರಲ್ಲಿ ಎರಡು ಮಾತಿಲ್ಲ.

 

admin
the authoradmin

Leave a Reply