LatestMysore

ಮೈಸೂರಿನಲ್ಲಿ ಅಗಲಿದ ಗಾನಕೋಗಿಲೆಗೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸಂತಾಪ ಸಲ್ಲಿಕೆ

ಮೈಸೂರು: ಚಾಮುಂಡಿಪುರಂ ವೃತ್ತದಲ್ಲಿ ಕೆಎಮ್‌ಪಿಕೆ ಚಾರಿಟೇಬಲ್ ಟ್ರಸ್ಟ್, ಪಾತಿ ಫೌಂಡೇಶನ್, ಪ್ರಜ್ಞಾವಂತ ನಾಗರಿಕ ವೇದಿಕೆ, ಅಪೂರ್ವ ಸ್ನೇಹ ಬಳಗ ವತಿಯಿಂದ ಗಾನ ಕೋಗಿಲೆ ಎಸ್ ಜಾನಕಿ ರವರಿಗೆ ಅವರ ಭಾವಚಿತ್ರ ಹಿಡಿದು ಮೇಣದಬತ್ತಿ ಹಚ್ಚಿ ಸಂತಾಪ ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ಅವರು, ಭಾರತೀಯ ಚಿತ್ರಾಂಗ ಶ್ರೇಷ್ಠ ಹಿನ್ನೆಲೆ ಗಾಯಕಿ ಎಸ್ ಜಾನಕಿ ಅವರ ನಿಧನ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ, ಭಾರತೀಯ ಚಿತ್ರಾಂಗದ 20ಕ್ಕೂ ಹೆಚ್ಚು ಭಾಷೆ ಅಲ್ಲದೆ ವಿದೇಶಿ ಭಾಷೆಗಳಲ್ಲಿ ಆಡುವ ಮೂಲಕ ಕೋಟ್ಯಾಂತರ ಸಂಗೀತದ ಅಭಿಮಾನಿಗಳನ್ನು ರಂಜಿಸಿದ್ದಾರೆ, ಅವರ ನಿಧನದಿಂದ ಸಂಗೀತ ಲೋಕ ಬಡವಾಗಿದೆ ಎಂದು ಅವರು ಶೋಕ ವ್ಯಕ್ತಪಡಿಸಿದರು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ನೆರೆಯ ಆಂಧ್ರಪ್ರದೇಶದಲ್ಲಿ ಜನಿಸಿದರು ಕನ್ನಡದವರೇ ಆಗಿ ಕೋಟ್ಯಾಂತರ ಸಂಗೀತ ಪ್ರೇಮಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದರು, ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರು ವಿವಿಧ ಭಾಷೆಗಳಲ್ಲಿ ಚಲನಚಿತ್ರಗಳಲ್ಲಿ 48000 ಹೆಚ್ಚು ಹಾಡುಗಳನ್ನು ಹಾಡುವ ಮೂಲಕ ಕೋಟ್ಯಾಂತರ ಕಲಾ ರಸಿಕರ ಹೃದಯದಲ್ಲಿ ನೆಲೆಸಿರುವ ಸಂಗೀತದ ತಾಯಿ ಎಸ್ ಜಾನಕಿ ಅರಮನೆಗಳ ನಗರ ಸಾಂಸ್ಕೃತಿಕ ನಾಡಿನಲ್ಲಿ ಸ್ವರ್ಗಸ್ಥರಾಗಿದ್ದಾರೆ, ಲಕ್ಷಾಂತರ ಗಾಯಕರಿಗೆ ಆದರ್ಶ ಗಾಯಕಿಯರಾಗಿದ್ದಾರೆ ಎಂದು ಹೇಳಿದರು

ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಮ ವಿ ರಾಮಪ್ರಸಾದ್, ಎಂ ಡಿ ಪಾರ್ಥಸಾರಥಿ, ಜಗದೀಶ್, ಜಿ ರಾಘವೇಂದ್ರ, ವಿಕ್ರಮ್ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಅಪೂರ್ವ ಸುರೇಶ್, ಕಡಕೋಳ ಜಗದೀಶ್, ಅರವಿಂದ, ಚಕ್ರಪಾಣಿ, ಸುಚೇಂದ್ರ, ಯಶ್ವಂತ್, ಶಿವಲಿಂಗ ಸ್ವಾಮಿ, ಮಹದೇವ್ , ರಾಮು ಹಾಗೂ ಇನ್ನಿತರರು ಹಾಜರಿದ್ದರು

admin
the authoradmin

Leave a Reply