ಮೈಸೂರು: ಕುವೆಂಪು ನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಶ್ರೀ ರಮಣ ಜ್ಞಾನ ಕೇಂದ್ರ ಟ್ರಸ್ಟ್ ಆವರಣದಲ್ಲಿ ಭಗವಾನ್ ರಮಣ ಮಹರ್ಷಿಗಳ 146 ನೇ ಜಯಂತಿ ಅಂಗವಾಗಿ ಅವರ ಪ್ರತಿಮೆಗೆ ಪೂಜೆ ಮತ್ತು ಪುಷ್ಪ ನಮನ ಸಲ್ಲಿಸಿ ನಂತರ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 1 ಲಕ್ಷ ರೂ ವರೆಗೂ ಧನಸಹಾಯ ಮಾಡಿದರು ಹಾಗೂ 100ಕ್ಕೂ ಹೆಚ್ಚು ಮಕ್ಕಳಿಗೆ ಪುಸ್ತಕ ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾನಸ ಗಂಗೋತ್ರಿಯ ತತ್ವ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ. ಎಚ್ ಎಲ್ ಚಂದ್ರಶೇಖರ್ ಭಗವಾನ್ ರಮಣ ಮಹರ್ಷಿಗಳ ಬಗೆ ಉಪನ್ಯಾಸ ನೀಡಿದರು.

ಶಿಕ್ಷಣ ತಜ್ಞ ಕೆ ಜಿ ಸುಧೀಂದ್ರ, ಲಾ ಫರ್ ಆಲ್ ಕನ್ನಡ ಕಾನೂನು ಮಾಸಪತ್ರಿಕೆ ಸಂಪಾದಕರು ಹಾಗೂ ಮಾಜಿ ಜಿಲ್ಲಾ ಸಹಕಾರಿ ವಕೀಲರು ಮತ್ತು ಮಾಜಿ ಕಾರ್ಯದರ್ಶಿ ಮೈಸೂರು ವಕೀಲರ ಸಂಘ, ಮಾನಸ ಗಂಗೋತ್ರಿಯ ತತ್ವ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ. ಎಚ್ ಎಲ್ ಚಂದ್ರಶೇಖರ್, ಮಾಜಿನಗರ ಪಾಲಿಕೆ ಸದಸ್ಯರು ಚಲನಚಿತ್ರ ನಿರ್ಮಾಪಕರಾದ ಎಂ ಡಿ ಪಾರ್ಥಸಾರಥಿ (ಪಾತಿ), ಕೆ ಎಮ್ ಪಿ ಕೆ ಚಾರ್ಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಶ್ರೀ ರಮಣ ಜ್ಞಾನ ಕೇಂದ್ರ ಗೌರವಾಧ್ಯಕ್ಷರು ಎ ಜಿ ಸುವ್ರತೀಂದ್ರ, ಗೌರವ ಕಾರ್ಯದರ್ಶಿ ಗೀತಾ ಚರಣ್, ಗೌರವ ಕಾರ್ಯಂಗ ಅಧ್ಯಕ್ಷರು ಪ್ರಾರ್ಥನಾ ಕುಮಾರಿ, ವ್ಯವಸ್ಥಾಪಕರು ಶಶಿಕುಮಾರ್, ರಾಘವೇಂದ್ರ ಅಭಿಷೇಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು








