CrimeLatest

ಎಸ್ ಐಆರ್ ಸಿಬ್ಬಂದಿಗೆ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿ ಮೇಲೆ ಎಫ್ ಐಆರ್

ನಂಜನಗೂಡು: ರಾಜ್ಯದಲ್ಲಿ ಮತದಾರರ ಪರಿಷ್ಕರಣೆ (ಎಸ್ ಐಆರ್) ಸಮಾರೋಪಾದಿಯಲ್ಲಿ ನಡೆಯುತ್ತಿದ್ದು, ಮತದಾರರು ಸಿಬ್ಬಂದಿಯೊಂದಿಗೆ ಸಹಕರಿಸುವುದು ಅಗತ್ಯವಾಗಿದೆ. ಆದರೆ ನಂಜನಗೂಡು ತಾಲೂಕಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಸ್ ಐಆರ್ ಸಿಬ್ಬಂದಿಗೆ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಎಫ್ ಐಆರ್ ದಾಖಲಾದ ಘಟನೆ ನಡೆದಿದೆ.

ನಂಜನಗೂಡು ತಾಲೂಕು ಮುಳ್ಳೂರು ಗ್ರಾಮದ ಮಹೇಂದ್ರ ಕುಮಾರ್ ಎಂಬಾತನ ವಿರುದ್ಧ ಎಸ್ ಐಆರ್ ಸಿಬ್ಬಂದಿಗೆ ಬೆದರಿಕೆ ಹಾಕಿದ ಪ್ರಕರಣ ದಾಖಲಾಗಿದೆ. ಮತದಾರರ ಪರಿಷ್ಕರಣೆ ಕರ್ತವ್ಯದಲ್ಲಿ ನಿರತರಾಗಿದ್ದ  ಅಂಗನವಾಡಿ ಶಿಕ್ಷಕಿ ಲತಾ ಎಂಬುವರು ದೂರು ನೀಡಿದ್ದಾರೆ.

ಜುಲೈ 13 ರಂದು ರಾತ್ರಿ ಅಂಗನವಾಡಿ ಶಿಕ್ಷಕಿ ಲತಾ ಅವರ ಮನೆಗೆ ಕುಡಿದು ತೆರಳಿದ  ಮುಳ್ಳೂರು ಗ್ರಾಮದ ಮಹೇಂದ್ರ ಕುಮಾರ್  ಅವಾಚ್ಯ ಶಬ್ದಗಳಿಂದ ನಿಂದಿಸಿ 300 ಜನರ ಮತ ಹಾಳು ಮಾಡಿರುವುದಾಗಿ ಆರೋಪಿಸಿ ಕೈ ಹಿಡಿದು ಎಳೆದಾಡಿ ಅನುಚಿತವಾಗಿ ವರ್ತಿಸಿದ್ದಾನೆ.

ಇನ್ನು ಮುಂದೆ ನಮ್ಮ ಗ್ರಾಮದಲ್ಲಿ ಹೇಗೆ ಕೆಲಸ ಮಾಡುತ್ತೀಯ ನೋಡುತ್ತೇನೆ, ನಿನ್ನನ್ನ ಕೆಲಸದಿಂದ ತೆಗೆದು ಹಾಕಿಸುತ್ತೇನೆಂದು ಎಂದು ಬೆದರಿಕೆ ಹಾಕಿದ್ದಾನೆ. ಈ ಬೆಳವಣಿಗೆಯಿಂದ ಮಾನಸಿಕವಾಗಿ ನೊಂದ ಲತಾ ಗ್ರಾಮದ ಮುಖಂಡರಿಗೆ ತಿಳಿಸಿದ್ದಾರೆ. ಪಂಚಾಯ್ತಿಯಲ್ಲಿ ನ್ಯಾಯ ಸಿಗದ ಹಿನ್ನಲೆಯಲ್ಲಿ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಮಹೇಂದ್ರ ಕುಮಾರ್ ವಿರುದ್ದ ದೂರು ನೀಡಿದ್ದು, ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

admin
the authoradmin

Leave a Reply