ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ವಿದ್ಯಾರ್ಥಿ ದೆಸೆಯಲ್ಲಿ ಹೆಚ್ಚು ಮೊಬೈಲ್ ಬಳಕೆ ಮಾಡುವ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವುದು ವಿಷಾದನೀಯ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಸುರೇಶ್ ಕಳವಳ ವ್ಯಕ್ತಪಡಿಸಿದರು.

ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಹಿರೀಕ್ಯಾತನಹಳ್ಳಿ ಗ್ರಾಮದ ಅನುದಾನಿತ ವೇಣುಗೋಪಾಲ ವಿದ್ಯಾಸಂಸ್ಥೆಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಬಿ ಸಿ ಟ್ರಸ್ಟ್ ವತಿಯಿಂದ ಮೊಬೈಲ್ ಬಳಕೆಯ ದುಷ್ಪರಿಣಾಮಗಳ ಶಾಲಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣದಿಂದಲೇ ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮಾಡುತ್ತಿರುವುದು ಮಕ್ಕಳ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತಿದೆ . ಹಿಂದಿನ ಕಾಲದಲ್ಲಿ ಅಜ್ಜಿಯಂದಿರು ತಾಯಂದಿರು ಚಂದಮಾಮ ತೋರಿಸಿ ಊಟ ಮಾಡಿಸುತ್ತಿದ್ದರೆ ಇಂದಿನ ಮಕ್ಕಳು ಮೊಬೈಲ್ ಕೊಟ್ಟರೆ ಊಟ ಮಾಡುವ ಅಭ್ಯಾಸವನ್ನು ಮಾಡಿಕೊಂಡು ಪೋಷಕರು ಕೂಡ ಇದಕ್ಕೆ ಸಹಕಾರ ನೀಡುತ್ತಿರುವುದ್ದರಿಂದ ತಮ್ಮ ಮಕ್ಕಳ ಕಣ್ಣಿನ ದೃಷ್ಟಿಯನ್ನು ಕಿತ್ತುಕೊಂಡು ಪ್ರಪಂಚವನ್ನು ನೋಡಲು ಸಾಧ್ಯವಾಗದಷ್ಟು ಪರಿಣಾಮ ಬೀರುತ್ತದೆ.

ಮಕ್ಕಳು ಮೊಬೈಲ್ ಬಳಸುವಾಗ ಪೋಷಕರು ಗಮನಿಸಿ ಕಣ್ಣನ್ನು ಮಿಟುಕಿಸದೆ ನೋಡುವಷ್ಟು ಏಕಾಗ್ರತೆಯನ್ನು ಮಕ್ಕಳು ಬಳಸಿಕೊಳ್ಳುತ್ತಿದ್ದಾರೆ ಇದ್ದರಿಂದ ಪ್ರಪಂಚವನ್ನು ನೋಡಲು ಆಗದ ರೀತಿ ದೃಷ್ಟಿಯನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ ಪೋಷಕರು ಕೂಡ ಮಕ್ಕಳ ಹಿತ ದೃಷ್ಟಿಯಿಂದ ಮೊಬೈಲ್ ಬಳಕೆ ಮಾಡದಂತೆ ಬೇರೆ ಬೇರೆ ವಿಧಾನ ಅನುಸರಿಸುವುದು ಉತ್ತಮ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ವೇಣುಗೋಪಾಲ್, ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಚಿಕ್ಕಣ್ಣ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವಲಯ ಮೇಲ್ವಿಚಾರಕಿ ನವೀನ ಕುಮಾರಿ, ಸೇವಾ ಪ್ರತಿನಿಧಿಗಳಾದ ಸೌಮ್ಯ, ಭಾರತಿ, ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಯೋಗೇಂದ್ರ, ಸಹ ಶಿಕ್ಷಕರುಗಳಾದ ನಟರಾಜ್, ಮಂಜುಳಾ, ಪೇಪರ್ ಫ್ಲವರ್ ಡಿಸೈನರ್ ಚೈತ್ರ, ಹಾಗೂ ವಿದ್ಯಾರ್ಥಿಗಳು ಇದ್ದರು.








